Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಆನ್‌ಲೈನ್ ಬ್ಯೂಟಿ ಟಿಪ್ಸ್ ಫಾಲೋ ಮಾಡಬಹುದಾ..? ತಜ್ಞರು ಹೇಳೋದೇನು?
ನಾವೀಗ ಸೋಶಿಯಲ್ ಮೀಡಿಯಾ ಯುಗದಲ್ಲಿದ್ದೇವೇ. ನಿಮಗೆ ಯಾವ ಮಾಹಿತಿ ಬೇಕಿದ್ದರೂ ಬೆರಳ ತುದಿಯಲ್ಲಿ ಒಂದು ಕ್ಲಿಕ್‌ನಲ್ಲಿ ಪಡೆಯುವ ಕಾಲವಿದು. ಎಲ್ಲದಕ್ಕೂ ಆನ್‌ಲೈನ್ ಜಗತ್ತಿನಲ್ಲಿ ಪರಿಹಾರವಿದೆ. ನೀವೀಗ ಹೊರ ಜಗತ್ತಿನೊಂದಿಗೆ ಸಂಪರ್ಕವಿಲ್ಲದೆ ಬದುಕಬಹುದು ಅಷ್ಟೊಂದು ಆಳ ಜೀವನಕ್ಕೆ ಆನ್‌ಲೈನ್ ಜಗತ್ತು ಇಳಿದುಬಿಟ್ಟಿದೆ. ಹಾಗೆ ದೊಡ್ಡ ಸಾಗರದಂತೆ ಎಲ್ಲರಿಗೂ ತೆರೆದುಕೊಂಡು ಬಿಟ್ಟಿದೆ.
ಅದರಲ್ಲೂ ನಾವಿಂದು ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಅದೆಷ್ಟೋ ರೀತಿಯ ವಿಡಿಯೋಗಳ ನೋಡುತ್ತೇವೆ. ಬಹುತೇಕದ ಇನ್‌ಫ್ಲೂಯೆನ್ಸರ್‌ಗಳಾಗಿವೆ ನಮ್ಮ ಮುಂದೆ ಬರುವುದು ಕಾಣಬಹುದು. ಇವರೆಲ್ಲಾ ವಿಡಿಯೋ ಮೂಲಕ ಒಂದಿಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ. ಇವರಲ್ಲಿ ನಾವಿಂದು ಬ್ಯೂಟಿ ಇನ್‌ಫ್ಲೂಯೆನ್ಸರ್‌ಗಳನ್ನು ಸಹ ನೋಡುತ್ತೇವೆ. ನೂರಾರು ಮಂದಿ ಆನ್‌ಲೈನ್ ಮೂಲಕ ಬ್ಯೂಟಿ ಟಿಪ್ಸ್ ಹಂಚಿಕೊಳ್ಳುತ್ತಾರೆ. ಅವರೆಲ್ಲಾ ಹೇಳುವ ಟಿಪ್ಸ್‌ಗಳನ್ನು ಫಾಲೋ ಮಾಡಲೆಂದೇ ಒಂದಿಷ್ಟು ಮಂದಿ ಅವರನ್ನು ಅನುಸರಿಸುತ್ತಾರೆ ಅಥವಾ ಫಾಲೋ ಮಾಡುತ್ತಾರೆ.

ಈ ಬ್ಯೂಟಿ ಟಿಪ್ಸ್‌ಗಳನ್ನು ಫಾಲೋ ಮಾಡುವುದು ನಮ್ಮ ಚರ್ಮದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ತಜ್ಞರ ಮಾತು. ಹಾಗಾದ್ರೆ ನಾವು ಈ ಟಪ್ಸ್ ಫಾಲೋ ಮಾಡೋದ್ರಿಂದ ನಮ್ಮ ಚರ್ಚದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆ ಉಂಟಾಗಬಹುದು? ಯಾವೆಲ್ಲಾ ಬ್ಯೂಟಿ ಟಿಪ್ಸ್‌ಗಳನ್ನು ನಾವು ಅನುಸರಿಸಬಾರದು? ಮಾಡಿದರೆ ಯಾವೆಲ್ಲಾ ಸಮಸ್ಯೆ ಎದುರಾಗಬಹುದು ಎಂಬುದನ್ನು ತಜ್ಞರ ಮೂಲಕ ನಾವಿಂದು ತಿಳಿದುಕೊಳ್ಳೋಣ.
ಈ ಬೂಟಿ ಟಿಪ್ಸ್ ಹಾಗೆ ಆನ್‌ಲೈನ್ ಇನ್‌ಫ್ಲೂಯೆನ್ಸರ್‌ಗಳ ಕುರಿತಂತೆ ನಾವಿಂದು ಶಿವಮೊಗ್ಗದ ಎಲ್.ಕೆ ಫ್ಯಾಮಿಲಿ ಸಲೂನ್ ಮತ್ತು ಸ್ಪಾದಲ್ಲಿ ಬ್ಯೂಟಿಷಿಯನ್ ಅವರಿಂದ ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ಪಡೆಯುವ ಪ್ರಯತ್ನ ಮಾಡೋಣ.
ಆನ್‌ಲೈನ್ ಬ್ಯೂಟಿ ಟಿಪ್ಸ್ ಫಾಲೋ ಮಾಡಬಹುದೇ?
ಆನ್‌ಲೈನ್‌ನಲ್ಲಿ ಬೂಟಿ ಟಿಪ್ಸ್ ನೀಡುವವರು ನಿಮ್ಮ ಸ್ಕಿನ್ ಟೋನ್ ಯಾವುದೆಂದು ತಿಳಿದಿರುವುದಿಲ್ಲ. ಹಾಗೆ ನಿಮ್ಮ ಚರ್ಮಕ್ಕೆ ಸೂಕ್ತ ಆರೈಕೆ ಹೇಗಿರಬೇಕು ಎಂಬುದನ್ನು ಅವರು ಅರಿತುಕೊಂಡಿರುವುದಿಲ್ಲ. ಹೀಗಾಗಿ ಅವರು ನೀಡುವ ಟಿಪ್ಸ್ ಅನ್ನು ನಾವು ಫಾಲೋ ಮಾಡುವುದು ಹೆಚ್ಚಿನ ಸಮಯದಲ್ಲಿ ಅಪಾಯಕ್ಕೆ ದಾರಿಯಾಗಬಹುದು. ಅದರಲ್ಲೂ ಚರ್ಮದ ಆರೋಗ್ಯ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರುವುದೇ ಉತ್ತಮ.
ಇವರು ತಜ್ಞ ಬ್ಯೂಟಿಷಿಯನ್ ಎಂದು ಗುರುತಿಸುವುದು ಹೇಗೆ?
ಆನ್‌ಲೈನ್‌ನಲ್ಲಿ ಬ್ಯೂಟಿ ಟಿಪ್ಸ್ ನೀಡುವವರೆಲ್ಲರೂ ಬ್ಯೂಟಿಷಿಯನ್ಸ್ ಆಗಿರಲು ಸಾಧ್ಯವಿಲ್ಲ. ಹಾಗೆ ಮನೆ ಮದ್ದು (Home Remedies) ಟಿಪ್ಸ್ ಹೇಳುವವರು ಬ್ಯೂಟಿಷಿಯನ್ಸ್ ಆಗಿರುವ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ಬ್ಯೂಟಿಷಿಯನ್ಸ್‌ಗೆ ಮನೆಮದ್ದಿನ ಮೂಲಕ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದಿರುತ್ತೆ. ಹೀಗಾಗಿ ಬ್ಯೂಟಿಷಿಯನ್ಸ್ ಎಂದಿಗೂ ಮನೆಮದ್ದನ್ನು ಶಿಫಾರಸು ಮಾಡುವುದೇ ಇಲ್ಲ.
ಆನ್‌ಲೈನ್ ಬ್ಯೂಟಿ ಟಿಪ್ಸ್‌ಗಳ ಅಪಾಯವೇನು?
ಆನ್‌ಲೈನ್‌ನಲ್ಲಿ ವಿಡಿಯೋ ಮೂಲಕ ಹತ್ತಾರು ಬ್ಯೂಟಿ ಟಿಪ್ಸ್ ನೀಡುವ ಬಹುತೇಕರಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನದ ಕೊರತೆಯಂತು ಇದೆ. ಹೀಗಾಗಿ ಅವರು ಸಹ ಯಾವುದೇ ಟಿಪ್ಸ್ ಅನ್ನು ಪ್ರಯೋಗವಿಲ್ಲದೆ, ಅಧಿಕೃತವಾಗಿ ಬಳಸಿ ಫಲಿತಾಂಶ ಪಡೆದ ದೃಢೀಕರಣವಿಲ್ಲದೆ ವಿವರಿಸುತ್ತಾರೆ. ಆದ್ರೆ ಈ ಬ್ಯೂಟಿ ಟಿಪ್ಸ್ ಒಂದು ದಿನದ ಫಲಿತಾಂಶ ನೀಡಬಹುದಾದರು ಭವಿಷ್ಯದ ದೃಷ್ಟಿಯಿಂದ ಹಾನಿಯೇ ಹೆಚ್ಚು.
ಬ್ಯೂಟಿ ಸ್ಪಾ ಹಾಗೂ ಮನೆಮದ್ದಿಗೂ ವ್ಯತ್ಯಾಸವೇನು?
ಬ್ಯೂಟಿ ಸ್ಪಾದಲ್ಲಿ ಪ್ರತಿಯೊಬ್ಬರು ತಂತ್ರಜ್ಞರು, ಪ್ರತಿ 2 ತಿಂಗಳಿಗೊಮ್ಮೆ ಅವರು ಹಲವು ರೀತಿಯ ತರಬೇತಿಗೆ ಒಳಗಾಗುತ್ತಾರೆ. ಪ್ರತಿಯೊಬ್ಬರ ಸ್ಕಿನ್ ಟೋನ್‌ಗೆ ಸರಿಹೊಂದುವಂತಹ ಆರೈಕೆ ಮಾಡುವ ತರಬೇತಿ, ಜ್ಞಾನ ಅವರಲ್ಲಿದೆ. ಆದ್ರೆ ಈ ಆನ್‌ಲೈನ್ ವಿಡಿಯೋ ಮೂಲಕ ನಾವು ನಂಬಿಕೆ ಗಳಿಸೋದು ದೂರದ ಮಾತು. ಉದಾಹರಣೆಗೆ ಮನೆ ಮದ್ದು ಎಂದು ಹೇಳುವ ಅರಶಿನವು ಮುಖದ ಕಾಂತಿಗೆ ಕಾರಣವಾಲ್ಲ. ಒಂದು ದಿನ ಮಾತ್ರ ನಿಮ್ಮಲ್ಲಿ ಹೊಳಪಿಗೆ ಕಾರಣವಾಗಬಹುದೇ ಹೊರತು ಬಹುಕಾಲದ ಫಲಿತಾಂಶ ನೀಡುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications