Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪಾರ್ಶ್ವವಾಯುವಿನ ಲಕ್ಷಣ ಒಂದು ತಿಂಗಳ ಮುಂಚೆ ತಿಳಿಯುತ್ತಾ? ಅದು ಹೇಗೆ?
ಇತ್ತೀಚಿನ ದಿನಗಳಲ್ಲಿ ಸ್ಟ್ರೋಕ್ ಬಹಳವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಒತ್ತಡದ ಜೀವನ, ಜೀವನಶೈಲಿ, ಆಹಾರ ಪದ್ಧತಿ ಹೀಗೆ ನೂರಾರು ಅಂಶಗಳು ಈ ಪಾರ್ಶ್ವವಾಯುವಿಗೆ ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಯುವ ಸಮುದಾಯದವರಲ್ಲೂ ಕೇಳಿಬರುತ್ತಿರುವುದು ಆತಂಕ ಹೆಚ್ಚಿಸುವಂತೆ ಮಾಡಿದೆ. ಸ್ಟ್ರೋಕ್ ಉಂಟಾಗಲು ಮೆದುಳಿಗೆ ಆಮ್ಲಜನಕದ ಹರಿವು ಕಡಿಮೆಯಾಗುವುದು ಕಾರಣ ಎನ್ನಲಾಗುತ್ತದೆ.
ದೇಹದಲ್ಲಿ ರಕ್ತವು ಆಮ್ಲಜನಕವನ್ನು ಎಲ್ಲಾ ಅಂಗಾಗಳಿಗೂ ಸರಬರಾಜು ಮಾಡುತ್ತದೆ. ಮೆದುಳಿಗೂ ಕೂಡ ಆಮ್ಲಜನಕದ ಹರಿವು ಮುಖ್ಯವಾಗುತ್ತದೆ. ನರದ ಮೂಲಕ ರಕ್ತ ಸಂಚಾರದಲ್ಲಿ ಅಡ್ಡಿಯಾದಾಗ ಸ್ಟ್ರೋಕ್ ಉಂಟಾಗುತ್ತದೆ. ಕೆಲವು ಮುನ್ಸೂಚನೆಗಳನ್ನು ನಾವು ನಿರ್ಲಕ್ಷಿಸುವುದರಿಂದ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತಿದೆ. ನಾವು ಸ್ಟ್ರೋಕ್‌ನ ಹಲವು ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯ ಹೆಚ್ಚಾಗುವಂತೆ ಮಾಡಿದೆ.

ಹಾಗಾದ್ರೆ ಪಾರ್ಶ್ವವಾಯುವಿನ ಲಕ್ಷಣ ದೇಹಕ್ಕೆ ಮೊದಲೇ ತಿಳಿಯುತ್ತದೆಯೇ? ಹೌದು ನಮ್ಮ ದೇಹದಲ್ಲಾಗುವ ಬದಲಾವಣೆ ನಾವು ಅರಿತರೆ ಹಲವು ಸಮಸ್ಯೆಗಳಿಂದ ದೂರಾಗಬಹುದು. ಅದರಲ್ಲಿ ಈ ಸ್ಟ್ರೋಕ್ ಕೂಡ ಒಂದಾಗಿದೆ. ಆದ್ರೆ ನಮ್ಮ ದೇಹಕ್ಕೆ ಸ್ಟ್ರೋಕ್ ಆಗುವ ಒಂದು ತಿಂಗಳ ಮೊದಲೇ ಅದರ ಲಕ್ಷಣಗಳು ಗೋಚರವಾಗಲು ಆರಂಭಿಸುತ್ತದೆ ಎಂದು ತಿಳಿದುಬಂದಿದೆ.
ಹಾಗಾದ್ರೆ ಈ ಸ್ಟ್ರೋಕ್‌ನ ಯಾವ ಲಕ್ಷಣಗಳು ನಮಗೆ ಒಂದು ತಿಂಗಳ ಮೊದಲೇ ತಿಳಿಯುತ್ತೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮುಖ್ಯವಾಗಿ ಮೆದುಳಿನ ಕೋಶಕ್ಕೆ ರಕ್ತ ಸಂಚಾರ ಕಡಿತವಾದಾಗ ಕೋಶಗಳು ಸಾಯುತ್ತವೆ. ಇದರಿಂದ ಸ್ಟ್ರೋಕ್ ಉಂಟಾಗುತ್ತದೆ. ಈ ಸ್ಟ್ರೋಕ್‌ನಲ್ಲೊ 2 ವಿಧಗಳಿವೆ, ಒಂದು ರಕ್ತನಾಳಗಳಲ್ಲಿಯೇ ಬ್ಲಾಕೇಜ್ ಕಂಡುಬರುವುದು ಇನ್ನೊಂದು ಈ ರಕ್ತನಾಳಗಳು ಊದಿಕೊಂಡು ಒಡೆದು ಹೋಗುವುದರಿಂದ ಸ್ಟ್ರೋಕ್ ಉಂಟಾಗುತ್ತದೆ.
ತಲೆನೋವು
ತಲೆಯಲ್ಲಿ ದಿಢೀರ್ ನೋವು ಕಾಣಿಸಿಕೊಳ್ಳುವುದು. ಈ ತಲೆ ನೀವು ಸಾಮಾನ್ಯ ನೋವಾಗಿರುವುದಿಲ್ಲ. ಬದಲಿಗೆ ಯಾವುದೇ ಕಾರಣವಿಲ್ಲದೆ ತಲೆನೋವು ಉಂಟಾಗುವುದು. ಈ ತಲೆನೋವು ನಿರಂತರವಾಗಿ ಕಾಡುತ್ತಿದ್ದರೆ ನರರೋಗ ತಜ್ಞರ ಭೇಟಿಯಾಗುವುದು ಉತ್ತಮ. ರಾತ್ರಿ ನಿದ್ರೆ ಮಾಡಿದಾಗ ತಲೆನೋವು ಉಂಟಾದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮೆದುಳಿಗೆ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾದಾಗ ಈ ರೀತಿ ನೋವು ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗುತ್ತದೆ.
ನೆನಪಿನ ಶಕ್ತಿ ಕುಂದುವುದು
ನಮ್ಮ ನೆನಪಿನ ಶಕ್ತಿ ಏಕಾಏಕಿ ಕಡಿಮೆಯಾದಂತಹ ಅನುಭವವಾಗುವುದು, ಯಾವುದಾದರು ಕೆಲಸವನ್ನು ಮಾಡುವಾಗ ಅದು ಮರೆತು ಹೋಗುವುದು, ಇಲ್ಲವೆ ನಾವೇ ಇಟ್ಟಿರುವ ವಸಗ್ತುಗಳು ನಮಗೆ ಸಿಗದೆ ಇದ್ದರೆ. ಏಕಾಎಕಿ ಮರೆವಿನ ಕಾಯಿಲೆ ಬಂದ ಅನುಭವವಾದರೆ ತಕ್ಷಣ ವೈದ್ಯರ ಸಂಪರ್ಕಿಸುವುದು ಉತ್ತಮ. ಏಕೆಂದತೆ ಮೆದುಳಿನಲ್ಲಿ ಉಂಟಾಗುವ ಸಡನ್ ಬದಲಾವಣೆಗಳು ಈ ರೀತಿಯ ಲಕ್ಷಣಗಳಿಗೆ ಕಾರಣವಾಗಿರಬಹುದು.
ಸುಸ್ತಾಗುವುದು
ಸಾಮಾನ್ಯವಾಗಿ ಕೆಲಸಗಳ ಮಾಡಿದಾಗ, ಮನೆಯಲ್ಲಿ ಸುಮ್ಮನೆ ಇದ್ದಾಗಲು ಸುಸ್ತಾಗುತ್ತದೆ. ಆದ್ರೆ ನೀವು ಏಕಾಏಕಿ ಕುಸಿದು ಬೀಳುವಷ್ಟು ಸುಸ್ತಾದರೆ, ಇಲ್ಲವೆ ತೀವ್ರ ಬೆವರುವುದು, ದೃಷ್ಟಿ ಮಂಜಾಗುವುದು ಉಂಟಾದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ದೇಹದ ಒಂದು ಭಾಗ ಜೋಮು ಹಿಡಿಯುವುದು
ನಿಮ್ಮ ದೇಹದ ಯಾವುದಾದರು ಒಂದು ಭಾಗದಲ್ಲಿ ಜೋಮು ಹಿಡಿಯುವ ಅನುಭವ ನಿರಂತರವಾಗಿ ಆಗುತ್ತಿದ್ದರೆ ಎಚ್ಚರ ವಹಿಸಿ. ಅದರಲ್ಲೂ ಹೆಚ್ಚಾಗಿ ಒಂದು ಬದಿಯ ಕೈ, ಕಾಲು ಮಲಗಿದ್ದಾಗ ಜೋಮು ಹಿಡಿಯುವುದು ಮಾತ್ರವಲ್ಲ ಕುಳಿತಾಗ ಜೋಮು ಹಿಡಿದ ಅನುಭವವಾದರೆ ಎಚ್ಚರಿಕೆ ಇಂದ ಇರಿ. ಈ ರೀತಿಯ ಕ್ರಿಯೆಯನ್ನು ಟ್ರಾನ್ಸಿಯೆಟ್ ಇಸ್ಕೇಮಿಕ್ ಅಟ್ಯಾಕ್ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಲಕ್ಷಣಗಳು ಒಂದು ದಿನದಲ್ಲಿ ಗೋಚರವಾಗುವುದಿಲ್ಲ ಬದಲಿಗೆ ಒಂದಿಷ್ಟು ದಿನಗಳಲ್ಲಿ ನಿರಂತರವಾಗಿ ಕಾಡಬಹುದು, ಹೀಗಾದಾಗ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











