Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಡಿಯೋಡರೆಂಟ್‌ನಿಂದ ಬಾಲಕನಿಗೆ ಹೃದಯಾಘಾತ..! ಏನಿದು ಕ್ರೋಮಿಂಗ್ ವೈರಲ್ ಟ್ರೆಂಡ್..?
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಎಷ್ಟೊಂದು ವಿಚಿತ್ರ ಟ್ರೆಂಡ್‌ಗಳು ನಡೆಯುತ್ತವೆ ಅಂದ್ರೆ ಕೆಲವೊಂದು ಪ್ರಾಣಕ್ಕೆ ಸಂಚಕಾರ ತಂದುಬಿಡುತ್ತವೆ. ಇಂತಹ ಹಲವು ಟ್ರೆಂಡ್‌ಗಳನ್ನು ನಾವು ನೋಡಿದ್ದೇವೆ. ಅದ್ರಲ್ಲೂ ಟೀನೇಜ್ ಹುಡುಗ ಹುಡಗಿಯರ ಜೀವನವನ್ನೇ ಹಾಳು ಮಾಡುವಂತಹ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳಂತು ಹುಟ್ಟಿಕೊಳ್ಳುತ್ತಲೇ ಇರುತ್ತವೆ.
ಹಾಗೆ ಇಲ್ಲೊಂದು ಟ್ರೆಂಡ್ ಸಹ ಈಗ ಯುವ ಜನತೆಗೆ ಜೀವನ ಜೊತೆಗೆ ಆಟವಾಡುತ್ತಿದೆ. ಅಲ್ಲದೆ 12 ವರ್ಷದ ಬಾಲಕನೊಬ್ಬ ಆಸ್ಪತ್ರೆ ಸೇರುವಂತೆ ಮಾಡಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಡಿಯೋಡರೆಂಟ್ ಟ್ರೆಂಡ್ ಆತನ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ತಜ್ಞರ ಪ್ರಕಾರ, ಸೀಸರ್ ವ್ಯಾಟ್ಸನ್-ಕಿಂಗ್ - ಡಾನ್‌ಕಾಸ್ಟರ್‌ನ ನಿವಾಸಿ, ಕ್ರೋಮಿಂಗ್ ಕ್ರೇಜ್‌ನಲ್ಲಿ ಭಾಗವಹಿಸಿದ ನಂತರ ಆಂಟಿಪೆರ್ಸ್ಪಿರಂಟ್ ಕ್ಯಾನ್ ಎಂಬ ಡಿಯೋಡರೆಂಟ್ ಉಸಿರಾಡಿ ಈ ಸ್ಥಿತಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕ್ರೋಮಿಂಗ್ ಎನ್ನುವ ಒಂದು ಟ್ರೆಂಡ್ ಆತನ ಉಸಿರಾಟ ಸಮಸ್ಯೆಗೆ ಕಾರಣವಾಗಿದೆ. ಆತ ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಾಗ ಆತನ ತಾಯಿ ತಕ್ಷಣ ಸಿಪಿಆರ್ ನಿರ್ವಹಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಆತನನ್ನು ಐಸಿಯುನಲ್ಲಿ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ಬರುವ ಮುನ್ನ ಆತನಿಗೆ ಹೃದಯಾಘಾತ ಸಂಭವಿಸಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಕ್ರೋಮಿಂಗ್ ಎಂದರೇನು?
ಮೆದುಳು ಹಾನಿ, ಹೃದಯ ಸ್ತಂಭನ ಮತ್ತು ಸಾವಿನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ಹೊಗೆಯನ್ನು ಉಸಿರಾಡುವುದನ್ನು ಕ್ರೋಮಿಂಗ್ ಎನ್ನಲಾಗುತ್ತದೆ. ಈ ರೀತಿಯ ವಿಚಿತ್ರ ಟ್ರೆಂಡ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೊಂದು ಚಾಲೆಂಜ್ ಸ್ವೀಕರಿಸಿ ಅದರ ವಿಡಿಯೋ ಮಾಡಿ ಪೋಸ್ಟ್ ಹಾಕುವ ವಿಚಿತ್ರ ಟ್ರೆಂಡ್ ಆಗಿದೆ.
ಇನ್ನು ಸರಳವಾಗಿ ಹೇಳುವುದಾದರೆ ಯಾವುದಾದರೊಂದು ಮತ್ತೇರಿಸುವ ರಾಸಾಯನಿಕವನ್ನು ಸ್ಮೆಲ್ ಮಾಡುವುದು, ಅದರ ಗಾಳಿ, ಹೊಗೆ, ವಾಸನೆಯನ್ನು ಮೂಗಿನ ಮೂಲಕ ಎಳೆದುಕೊಂಡು ಅದರ ಪೋಸ್ಟ್ ಹಂಚಿಕೊಳ್ಳುವ ಒಂದು ಚಾಲೆಂಜ್ ಇದಾಗಿದೆ. ಇಲ್ಲಿ ಈ 12 ವರ್ಷದ ಬಾಲಕ ಒಂದು ಡಿಯೋಡರೆಂಟ್‌ನ ವಾಸನೆಯನ್ನು ಮೂಡಿನ ಮೂಲಕ ದೀರ್ಘವಾಗಿ ಎಳೆದುಕೊಂಡಿದ್ದ ಎಂದು ತಿಳಿದುಬಂದಿದೆ.
2020 ರಲ್ಲಿ 12-17 ವರ್ಷ ವಯಸ್ಸಿನ 6,84,000 ಕ್ಕೂ ಹೆಚ್ಚು ಯುವಜನತೆ ಈ ಡೆಡ್ಲಿ ಟ್ರೆಂಡ್ ಮಾಡಿದ್ದಾರೆ. ಆದರೆ ಎಲ್ಲಾ ರಾಸಾಯನಿಕವೂ ಹಾನಿ ಮಾಡುತ್ತಿದೆ ಎಂಬರ್ಥವಲ್ಲ. ಕೆಲವೊಂದು ನಮ್ಮ ದೇಹಕ್ಕೆ ವಿಪರೀತ ಹಾನಿ ಮಾಡುವ ರಾಸಾಯನಿಕವಾಗಿರುತ್ತವೆ. ಇನ್ನು ಭಾರತದಲ್ಲೂ ಇಂತಹ ದುಷ್ಚಟಗಳಿಗೆ ಕಡಿಮೆ ಏನಿಲ್ಲ.
ವಾಹನದ ಟೈರ್‌ಗಳ ಪಂಕ್ಚರ್ ಹಾಕಲು ಬಳಸುವ ಗಮ್‌ಗಳು, ಪೆಟ್ರೋಲ್ ಹಾಗೂ ವಿಕ್ಸ್, ತಂಬಾಕು ಮತ್ತು ಸಿಗರೇಟ್ ಹೀಗೆ ಹತ್ತಾರು ವಸ್ತುಗಳನ್ನು ಮತ್ತು ಬರುವಂತೆ ಸಂಯೋಜಿಸಿ ಅದರ ಗಾಳಿ ತೆಗೆದುಕೊಳ್ಳುವ ಪ್ರಸಂಗಗಳು ನಡೆದಿರುವುದನ್ನು ಗಮನಿಸಬಹುದು. ಆದರೆ ಇದು ಸಾಮಾಜಿಕ ಜಾಲತಾಣದಲ್ಲಿ ಕ್ರೋಮಿಂಗ್ ಎಂದು ಟ್ರೆಂಡ್ ಆಗಿ ಯುವ ಜನತೆಯ ಬಾಳಿನಲ್ಲಿ ದೊಡ್ಡ ಪಿಡುಗಾಗಿ ಬದಲಾಗಿದೆ.
ಈ ರಾಸಾಯನಿಕ ಗಾಳಿ ತೆಗೆದುಕೊಳ್ಳುವುದರಿಂದಾಗಿ ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಲಿದೆ. ಉಸಿರಾಟದ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಸಹ ಕಂಡುಬರುತ್ತದೆ. ಅಸ್ಪಷ್ಟ ಮಾತು, ತಲೆರುಗುವಿಕೆ, ಇಲ್ಯೂಷನ್, ದಿಗ್ಬ್ರಮೆ ಸೇರಿ ಹಲವು ಸಮಸ್ಯೆ ಕಂಡುಬರುತ್ತದೆ. ಹೀಗಾಗಿ ಈ ರಾಸಾಯನಿಕ ನೇರವಾಗಿ ಶ್ವಾಸಕೋಶ ಸೇರುವುದರಿಂದ ಉಸಿರಾಟಕ್ಕೆ ಸಮಸ್ಯೆಯಾಗಲಿದೆ. ಈಗ ಆಸ್ಪತ್ರೆ ಸೇರಿರುವ ಬಾಲಕ ಕೂಡ ಈ ಟ್ರೆಂಡ್‌ನ ಭಾಗವಾಗಿ ಮೈಗೆ ಹಾಕಿಕೊಳ್ಳುವ ಡಿಯೋಡರೆಂಟ್ ವಾಸನೆಯನ್ನು ಮೂಗಿನಿಂದ ಎಳೆದುಕೊಂಡಿದ್ದಾನೆ.
ಆತನ ತಾಯಿ ಪ್ರಕಾರ ಆಕೆ ರೂಮಿನಲ್ಲಿ ಮಲಗಿದ್ದಾಗ ದಪ್ ಎಂದು ಶಬ್ದ ಬಂದಿದೆ. ಏನೆಂದು ಎದ್ದು ಬಂದಿ ನೋಡಿದಾಗ ಮಗ ನೆಲದ ಮೇಲೆ ಬಿದ್ದಿದ್ದ, ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಡಿಯೋಡರೆಂಟ್ ವಾಸನೆಯಿಂದ ಆತ ಉಸಿರಾಡಲಾಗದೆ ಕುಸಿದು ಬಿದ್ದಿದ್ದ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications