Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅಧಿಕ ರಕ್ತದೊತ್ತಡವಿದ್ದವರು ಕಾಫಿ ಕುಡಿದರೆ ತುಂಬಾನೇ ಡೇಂಜರ್!
ಊಟ ಬಿಟ್ಟು ಇರುತ್ತೇನೆ, ಆದರೆ ಕಾಫಿ ಬಿಟ್ಟು ಮಾತ್ರ ಇರಲ್ಲ ಎಂದು ಹೇಳುವವರು ನೀವಾದರೆ ನಿಮಗೆ ರಕ್ತದೊತ್ತಡ ಸಮಸ್ಯೆಯಿದ್ದರೆ ಹುಷಾರ್ ಕಣ್ರೀ!
ಕೆಲವರಿಗೆ ಪ್ರತಿನಿತ್ಯ ಕಾಫಿ ನಿಷ್ಠ ಅಂದ್ರೆ ಮೂರರಿಂದ ನಾಲ್ಕು ಲೋಟ ಬೇಕೆ ಬೇಕು, ಇನ್ನು ಕೆಲವರು ಗಂಟೆಗೊಮ್ಮೆ ಕಾಫಿ ಹೀರುತ್ತಾರೆ.

ಕಾಫಿ ಕುಡಿದರೆ ಅವರಿಗೆ ಲವಲವಿಕೆ ಬರುವುದು, ಇಲ್ಲದಿದ್ದರೆ ತಲೆನೋವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಕಾಫಿ ಕುಡಿಯುವುದರಿಂದ ರಕ್ತದೊತ್ತಡ ಅಧಿಕವಾಗುವುದು ಎಂದು ಅಧ್ಯಯನ ವರದಿ ಹೇಳಿದೆ.
ಕಾಫಿ ಕುಡಿದ ತಕ್ಷಣ ತಾತ್ಕಾಲಿಕವಾಗಿ ರಕ್ತದೊತ್ತಡ ಹೆಚ್ಚಿಸುವುದು
ಕಾಫಿ ಕುಡಿದಾಗ ತಾತ್ಕಾಲಿಕವಾಗಿ ರಕ್ತದೊತ್ತಡ ಹೆಚ್ಚಾಗುವುದು. ನಂತರ ಸರಿಯಾಗುವುದು, ಆದರೆ ಆಗಾಗ ಕಾಫಿ ಕುಡಿಯುವ ಅಭ್ಯಾಸಯಿದ್ದರೆ ದೇಹದಲ್ಲಿ ರಕ್ತದೊತ್ತಡ ತುಂಬಾ ಸಲ ಏರುಪೇರಾಗುವುದು. ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.
ರಕ್ತದೊತ್ತಡ ಅಧಿಕವಿರುವವರು ಕಾಫಿ ಕುಡಿದರೆ ಅಪಾಯ ಉಂಟಾಗುವುದೇ?
ಅತಿಯಾದ ಕಾಫಿ ಕುಡಿಯುವುದು ಅಧಿಕ ರಕ್ತದೊತ್ತಡ ಇರುವವರಿಗೆ ಒಳ್ಳೆಯದಲ್ಲ. ಇದರಿಂದ ರಕ್ತದೊತ್ತಡ ಅಧಿಕವಾಗುವುದು. ರಕ್ತದೊತ್ತಡ ಅಧಿಕವಿರುವವರಿಗೆ ರಕ್ತದೊತ್ತಡ ಮತ್ತಷ್ಟು ಹೆಚ್ಚಾಗಿ ಹೃದಯಾಘಾತ ಉಂಟಾಗುವುದು.
ಆದ್ದರಿಂದ ಅತ್ಯಧಿಕ ರಕ್ತದೊತ್ತಡವಿದ್ದರೆ ನೀವು ವೈದ್ಯರ ಬಳಿ ಕಾಫಿ ಕುಡಿಯಬಹುದೇ ಅಥವಾ ಕಾಫಿ ಕುಡಿಯುವ ಅಭ್ಯಾಸ ಬಿಡಬೇಕೆ? ಎಂಬುವುದರ ಬಗ್ಗೆ ಕೇಳಿ ತಿಳಿದುಕೊಳ್ಳಿ.
ಅಧಿಕ ರಕ್ತದೊತ್ತಡ ಇರುವವರು ಈ ಸಮಯದಲ್ಲಿ ಕಾಫಿಯನ್ನು ಕುಡಿಯಬೇಡಿ
ವ್ಯಾಯಾಮ, ವೇಯ್ಟ್ ಲಿಫ್ಟಿಂಗ್ ಅಥವಾ ಇತರ ದೈಹಿಕ ವ್ಯಾಯಾಮ ಮಾಡುವ ಮುನ್ನ ನೀವು ಕಾಫಿ ಕುಡಿಯಬೇಡಿ. ಏಕೆಂದರೆ ವ್ಯಾಯಾಮ ಮಾಡುವಾಗ ರಕ್ತದೊತ್ತಡ ಅಧಿಕವಾಗುವುದು, ಅದರ ಜೊತೆಗೆ ಕಾಫಿ ಕುಡಿದಾಗ ಈಗಾಗಲೇ ರಕ್ತದೊತ್ತಡವಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
ಆದ್ದರಿಂದ ರಕ್ತದೊತ್ತಡ ಸಮಸ್ಯೆ ಇರುವವರು ಕಾಫಿ ಕುಡಿಯುವುದು ಕಡಿಮೆ ಮಾಡುವುದು ಒಳ್ಳೆಯದು. ನಿಮಗೆ ತುಂಬಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ನಿಧಾನಕ್ಕೆ ಕಡಿಮೆ ಮಾಡುತ್ತಾ ಬನ್ನಿ, ನಿಮ್ಮ ಹೃದಯ ಬಡಿತ ಸರಿಯಾಗಿಡಲು ಈ ರೀತಿಯಿಡುವುದು ಅವಶ್ಯಕವಾಗಿದೆ.
ಅಧಿಕ ರಕ್ತದೊತ್ತಡವಿರುವವರು ಈ ಪಾನೀಯ ಕುಡಿಯಿರಿ:
1. ಹಾಲು
ಇದರಲ್ಲಿ ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ ಇರುವುದರಿಂದ ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ. ಕಾಫಿ ಬದಲಿಗೆ ಹಾಲು ಕುಡಿಯಲು ಆರಂಭಿಸಿ.
2. ಟೊಮೆಟೊ ಜ್ಯೂಸ್
ಅತ್ಯಧಿಕ ರಕ್ತದೊತ್ತಡವಿದ್ದಾಗ ಟೊಮೆಟೊ ಜ್ಯೂಸ್ ಕುಡಿದಾಗ ಅತ್ಯಧಿಕ ರಕ್ತದೊತ್ತಡ ಕಡಿಮೆಯಾಗುವುದು.
3. ಬೀಟ್‌ರೂಟ್ ಜ್ಯೂಸ್
ಬೀಟ್‌ರೂಟ್ ಜ್ಯೂಸ್ ಕುಡಿದಾಗ ಅತ್ಯಧಿಕ ರಕ್ತದೊತ್ತಡವಿದ್ದರೆ ಅದು ನಿಯಂತ್ರಣಕ್ಕೆ ಬರುತ್ತದೆ. ನೀವು ಬೀಟ್‌ರೂಟ್ ಜ್ಯೂಸ್ ಕುಡಿದ 30 ನಿಮಿಷದಲ್ಲಿ ರಕ್ತದೊತ್ತಡ ಕಡಿಮೆಯಾಗುವುದು.
ವಯಸ್ಸು 45 ದಾಟಿದ ಮೇಲೆ ರಕ್ತದೊತ್ತಡ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುವುದು. ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿಡಲು ದಿನಾ ಒಂದು ಲೋಟ ಬೀಟ್‌ರೂಟ್ ಜ್ಯೂಸ್ ಕುಡಿಯಿರಿ. ಈ ಜ್ಯೂಸ್ ರಕ್ತದೊತ್ತಡ ನಿಯಂತ್ರಣದಲ್ಲಿಡುವುದು ಮಾತ್ರವಲ್ಲ ಹಿಮೋಗ್ಲೋಬಿನ್ ಕೂಡ ಹೆಚ್ಚಿಸುತ್ತದೆ.
4. ದಾಸವಾಳದ ಟೀ
ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ದಿನಾ ಎರಡು ಲೋಟ ದಾಸವಾಳದ ಟೀಯನ್ನು ಎರಡು ವಾರಗಳವರೆಗೆ ಕುಡಿಯುತ್ತಾ ಬನ್ನಿ, ನಂತರ ರಕ್ತದೊತ್ತಡ ಪರೀಕ್ಷೆ ಮಾಡಿದರೆ ನೀವೇ ಆಶ್ಚರ್ಯ ಪಡುವಷ್ಟು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.
5. ದಾಳಿಂಬೆ ಜ್ಯೂಸ್
ದಾಳಿಂಬೆ ಜ್ಯೂಸ್ ಕೂಡ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

