Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಆರೋಗ್ಯದ ದೃಷ್ಟಿಯಿಂದ ಮೊಸರಿಗಿಂತ ಮಜ್ಜಿಗೆ ಬೆಸ್ಟ್ ಯಾಕೆ?
ಎಷ್ಟೇ ಸುಸ್ತಾಗಿದ್ದರೂ ಕೂಡ ಒಂದು ಲೋಟ ಮಜ್ಜಿಗೆ ಕುಡಿದ್ರೆ ಸಾಕು ಸಸ್ತು ಮಾಯವಾಗಿ ಹೋಗುತ್ತೆ. ಬೇಸಿಗೆ ಸಮಯದಲ್ಲಂತೂ ಎಷ್ಟು ಮಜ್ಜಿಗೆ ಕುಡಿದ್ರೂ ಕೂಡ ಸಾಕು ಅಂತ ಅನ್ನಿಸೋದೇ ಇಲ್ಲ. ಇನ್ನೂ ಊಟ ಆದ್ಮೇಲೆ ಅನೇಕರಿಗೆ ಮಜ್ಜಿಗೆ ಕುಡಿಯುವ ಅಭ್ಯಾಸ ಇದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಕೂಡ. ನಿಮಗೆಲ್ಲಾ ಗೊತ್ತಿರೋ ಹಾಗೆ ಮೊಸರಿನಿಂದಲೇ ಮಜ್ಜಿಗೆ ಸೃಷ್ಟಿಯಾಗಿರೋದು. ಆದ್ರೂ ಕೂಡ ಆರೋಗ್ಯದ ದೃಷ್ಟಿಯಿಂದ ಗಮನಿಸಿದ್ರೆ ಮಜ್ಜಿಗೆ ತುಂಬಾನೇ ಒಳ್ಳೆಯದು ಯಾಕೆ ಗೊತ್ತಾ?
ಮಜ್ಜಿಗೆಗಿಂತ ಮೊಸರು ಒಳ್ಳೆಯದು ಯಾಕೆ ಗೊತ್ತಾ?
ಮೊಸರನ್ನು ಕಡೆದು ಮಜ್ಜಿಗೆಯನ್ನು ತಯಾರು ಮಾಡಲಾಗುತ್ತದೆ. ಮಜ್ಜಿಗೆಗೆ ಉಪ್ಪು, ಮೆಣಸು ಹಾಕಿದ್ರೆ ಮತ್ತಷ್ಟು ಖಾರವಾಗಿ ರುಚಿಕರವಾಗಿರುತ್ತೆ. ಮಜ್ಜಿಗೆ ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯ ದೃಷ್ಟಿಯಿಂದಲೂ ಮೊಸರಿಗಿಂತ ತುಂಬಾನೇ ಒಳ್ಳೆಯದಂತೆ. ಮಜ್ಜಿಗೆ ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ. ಮಜ್ಜಿಗೆಗೆ ಹೋಲಿಕೆ ಮಾಡಿದ್ರೆ ಮೊಸರು ಹೈಡ್ರೇಷನ್ ಗೂ ತುಂಬಾನೇ ಒಳ್ಳೆಯದು.

ಮಜ್ಜಿಗೆಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳೇನು?
ಮಜ್ಜಿಗೆ ಡಿಹೈಡ್ರೇಷನ್ ದೂರ ಮಾಡೋದು ಮಾತ್ರವಲ್ಲದೇ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು. ಇದರ ಹೊರತಾಗಿ ಬೇರೇನೆಲ್ಲಾ ಉಪಯೋಗಗಳು ಇದೆ ಅಂತ ನೋಡೋದಾದ್ರೆ :
* ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡಿದ ನಂತರ ಹೊಟ್ಟೆಯ ಒಳಭಾಗದ ಕಿರಿ ಕಿರಿಯನ್ನು ಶಮನಗೊಳಿಸಲು ನೆರವಾಗುತ್ತದೆ.
* ನಾವು ಅತಿಯಾಗಿ ಆಹಾರ ಸೇವಿಸಿದ ನಂತರ ಮಜ್ಜಿಗೆ ಸೇವಿಸಿದ್ರೆ ಕೊಬ್ಬು ಕಡಿಮೆ ಮಾಡೋದಕ್ಕೆ ಸಹಾಯವಾಗುತ್ತದೆ.
* ಹಾಲಿನ ನಂತರ ಅತಿ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ ದ್ರವ ಮಜ್ಜಿಗೆ
* ಮಜ್ಜಿಗೆಯಲ್ಲಿ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿ ಇರೋದ್ರಿಂದ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಇತರ ಉಪಯೋಗಗಳು
* ಮಜ್ಜಿಗೆಯಲ್ಲಿ ಕಂಡುಬರುವ ಹಾಲಿನ ಕೊಬ್ಬಿನ ಗ್ಲೋಬ್ಯುಲ್ ಪೊರೆಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ ಎಂದು ಅಧ್ಯಯನವೊಂದು ಸಾಬೀತುಪಡಿಸಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಜೈವಿಕ ಸಕ್ರಿಯ ಪ್ರೋಟೀನ್ ಆಗಿದೆ.
* ಕೊಬ್ಬಿನ ಗ್ಲೋಬ್ಯುಲ್ ಪೊರೆಗಳು ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಕ್ಯಾನ್ಸರ್ ಕೂಡ.
* ಇದು ಆಸಿಡಿಟಿಯಿಂದಾಗಿ ಕಿರಿಕಿರಿಗೊಂಡ ಹೊಟ್ಟೆಯ ಒಳಪದರವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆಮ್ಲೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಮಜ್ಜಿಗೆಗೆ ಬದಲಾಗಿ ಮೊಸರು ಯಾವಾಗ ಸೇವನೆ ಮಾಡಬೇಕು?
* ಕೆಲವೊಂದು ಸಮಯದಲ್ಲಿ ನಾವು ಮಜ್ಜಿಗೆ ಕುಡಿಯೋದನ್ನು ತಡೆಯುತ್ತೇವೆ. ಇಂತಹ ಸಂದರ್ಭದಲ್ಲಿ ಮೊಸರು ಸೇವಿಸಿದರೆ ಉತ್ತಮ.
* ಹೆಚ್ಚಿನ ಜನರು ತೂಕ ಹೆಚ್ಚಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ಇಂತವರಿಗೆ ಮೊಸರು ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ ಇದ್ರಲ್ಲಿ ಪೋಷಕಾಂಶ ಅಭಿಕಾವಾಗಿರುತ್ತದೆ.
* ಮೂತ್ರ ಪಿಂಡದ ಸಮಸ್ಯೆ ಅಥವಾ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ದ್ರವ ನಿರ್ಬಂಧಿತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಅವರು ಹೆಚ್ಚಿನ ಪೋಷಕಾಂಶ ಸೇವಿಸುವುದು ಮುಖ್ಯವಾಗುತ್ತದೆ. ಅಂತವರು ಮೊಸರು ಸೇವನೆ ಮಾಡಬಹುದು.
ಆರೋಗ್ಯ ದೃಷ್ಟಿಯಿಂದ ಮೊಸರು ಹಾಗೂ ಮಜ್ಜಿಗೆ ಎರಡು ಕೂಡ ಉತ್ತಮ. ಆದರೆ ಮೊಸರು ಹಾಗೂ ಮಜ್ಜಿಗೆಗೆ ಹೋಲಿಕೆ ಮಾಡಿದ್ರೆ ಮಜ್ಜಿಗೆ ಯಾವಾಗಲೂ ಒಂದು ಕೈ ಮೇಲಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
