Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ಮಾರ್ಟ್ ಆಗಿ ತಿನ್ನಿರಿ, ಸೇಫ್ ಆಗಿರಿ! ಈ ಆಹಾರ ಸಾಕು ಸ್ತನ ಕ್ಯಾನ್ಸರ್ ಬರಲ್ಲ.. ಪ್ರತಿಯೊಬ್ಬ ಮಹಿಳೆಯು ತಿನ್ನಲೇಬೇಕು
ರೋಗ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ? ಹಾಗಂತ ನಿರ್ಲಕ್ಷ ಮಾಡುವುದು ಸರಿಯಲ್ಲ. ಹೌದು, ಪ್ರಸ್ತುತ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ (Breast Cancer) ಅಪಾಯ ವೇಗವಾಗಿ ಹೆಚ್ಚುತ್ತಿದೆ. ಇದು ಮಹಿಳೆಯರ ಸ್ತನಗಳ ಮೇಲೆ ಪರಿಣಾಮ ಬೀರುವ ಒಂದು ಬಗೆಯ ಕ್ಯಾನ್ಸರ್. ಸ್ತನ ಕ್ಯಾನ್ಸರ್‌ನಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಶುರು ಮಾಡುತ್ತವೆ. ಸ್ತನಗಳಲ್ಲಿ ಯಾವುದೇ ನೋವು ಇರಲ್ಲ. ಇದರಿಂದಾಗಿ ಮಹಿಳೆಯರಿಗೆ ಈ ಬಗ್ಗೆ ತಿಳಿಯಲು ಅಸಾಧ್ಯ. ಆದ್ದರಿಂದಲೇ ಈ ರೋಗ ಮಾರಕ. ಇದರ ಲಕ್ಷಣಗಳ ಬಗ್ಗೆ ತಿಳಿದುಕೊಂಡರೆ ಅಪಾಯದಿಂದ ಪಾರಾಗಬಹುದು.
ಪ್ರಸ್ತುತ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಮಹಿಳೆಯರಲ್ಲಿ ಅನೇಕ ಕಾಯಿಲೆ ಕಂಡುಬರುತ್ತದೆ. ಅವುಗಳನ್ನು ಸಮಯಕ್ಕೆ ಗುರುತಿಸದಿದ್ದರೆ, ಬಹಳಷ್ಟು ಸಮಸ್ಯೆಗಳು ಉಂಟಾಗುತ್ತದೆ. ಆ ಪೈಕಿ ಸ್ತನ ಕ್ಯಾನ್ಸರ್ ಕೂಡ ಒಂದು. ಇದು ಪ್ರತಿ ಎರಡನೇ ಮಹಿಳೆಯ ಮೇಲೆ ಪರಿಣಾಮ ಬೀರುತ್ತದೆ. ಸ್ತನ ಕ್ಯಾನ್ಸರ್‌ನಲ್ಲಿ ಮಹಿಳೆಯ ಸ್ತನದಲ್ಲಿ ಒಂದು ಗಡ್ಡೆ ರೂಪುಗೊಳ್ಳುತ್ತದೆ. ಈ ಪರಿಸ್ಥಿತಿಯಲ್ಲಿ, ಸ್ತನ ಕ್ಯಾನ್ಸರ್ ಗಡ್ಡೆಗಳ ರಚನೆ ತಡೆಯಲು ಹಲವು ಆಹಾರಗಳಿವೆ. ನೀವು ಇವುಗಳನ್ನು ತಪ್ಪದೇ ಸೇವಿಸಬೇಕು. ಹಾಗಿದ್ರೆ, ಮಹಿಳೆಯರನ್ನು ರಕ್ಷಿಸುವ ಆ ಆಹಾರಗಳು (Foods To Prevent Breast Cancer) ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿ ಕ್ಯಾರೊಟಿನಾಯ್ಡ್ ಕಂಡುಬರುತ್ತದೆ. ಇವು ಸೂಕ್ಷ್ಮ ಪೋಷಕಾಂಶಗಳಾಗಿವೆ. ಜೊತೆಗೆ ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಹಿಳೆಯರು ತಮ್ಮ ಆಹಾರದಲ್ಲಿ ಪಾಲಕ್ ಸೊಪ್ಪನ್ನು ಸೇರಿಸಿಕೊಂಡರೆ, ಸ್ತನ ಕ್ಯಾನ್ಸರ್ ಬರುವ ಅಪಾಯವು ಶೇ. 28 ರಷ್ಟು ಕಡಿಮೆ ಆಗುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯ ಸೇವನೆಯು ಸ್ತನ ಕ್ಯಾನ್ಸರ್ ತಡೆಗಟ್ಟುತ್ತದೆ. ಜೊತೆಗೆ ರಕ್ತ, ಪ್ರಾಸ್ಟೇಟ್ ಮತ್ತು ಅಂಡಾಶಯದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಹೇಳಲಾಗಿದೆ. ಒಂದೊಂದು ಬೆಳ್ಳುಳ್ಳಿ ಎಸಳು ಡಿಎನ್‌ಎ ದುರಸ್ತಿ ಮಾಡಲು, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ವಿಳಂಬಗೊಳಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆರಿಹಣ್ಣುಗಳು
ಮಹಿಳೆಯರು ಬೆಳಗ್ಗೆ ಎದ್ದ ನಂತರ ಎರಡು ಹಿಡಿ ಬ್ಲೂಬೆರ್ರಿ (ಬೆರಿಹಣ್ಣು) ತಿನ್ನಬೇಕು. ಇದರಿಂದ, ಸ್ತನ ಕ್ಯಾನ್ಸರ್ ಅನ್ನು ತಪ್ಪಿಸಬಹುದು. ವಾಸ್ತವವಾಗಿ, ಇದು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಫ್ಲೇವನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳನ್ನು ಹೊಂದಿರುತ್ತದೆ.
ಅರಿಶಿನ
ಎಲ್ಲರ ಮನೆಯಲ್ಲಿ ಅಡುಗೆ ಕೋಣೆ ಇರುತ್ತದೆ. ಅರಿಶಿವನ್ನು ಅಡುಗೆಗೆ ಬಳಸುವುದು ಸಾಮಾನ್ಯ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿನವು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಮಹಿಳೆಯರ ಆರೋಗ್ಯಕ್ಕೆ ತುಂಬಾ ಉಪಯುಕ್ತ.
ಸ್ತನ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳು ಯಾವುವು?
ಸ್ತನ ಕ್ಯಾನ್ಸರ್ ಆರಂಭಿಕ ಲಕ್ಷಣಗಳು ಕಾಣಿಸುವುದಿಲ್ಲ. ಬದಲಾಗಿ ನಿಮ್ಮ ಅನುಭವಕ್ಕೆ ಬರುತ್ತದೆ. ಅದು ನಿಯಂತ್ರಣ ತಪ್ಪುವ ಮುನ್ನ ಈ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಬೇಕು. ಈ ಸ್ತನ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳನ್ನು ಹೇಗೆ ಗುರುತಿಸಬೇಕು ಎಂಬುದು ಹಲವರಿಗೆ ಗೊತ್ತಿಲ್ಲ. ಅವುಗಳನ್ನು ಈ ಕೆಳಗಿನಂತೆ ಕಂಡುಕೊಳ್ಳಬಹುದು.
ಸ್ತನ ಗಾತ್ರದಲ್ಲಿ ಬದಲಾವಣೆ: ಸ್ತನದ ಗಾತ್ರದಲ್ಲಿನ ಬದಲಾವಣೆ. ಅಂದರೆ ಸ್ತನದ ಆಕಾರದಲ್ಲಿ (ಸ್ಪರ್ಶ) ಬದಲಾವಣೆ ಕಂಡುಬರುತ್ತದೆ. ಅದುವೇ ಸ್ತನ ಕ್ಯಾನ್ಸರ್‌ನ ಆರಂಭಿಕ ಅಥವಾ ಸಾಮಾನ್ಯ ಲಕ್ಷಣ. ನಿಮಗೆ ಈ ರೀತಿ ಯಾವುದೇ ಸಂದೇಹ ಇದ್ದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
ಸ್ತನ ಸ್ರಾವ: ಸ್ತನಗಳಿಂದ ರಕ್ತ ಸ್ರಾವವಾದರೆ ಅದು ಎಚ್ಚರಿಕೆ ಸಂಕೇತ. ಸ್ತನಗಳಲ್ಲಿ ರಕ್ತದಂತಹ ಸ್ರಾವವು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿಸುತ್ತದೆ. ನೀವು ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿದ್ದರೆ, ಹಾಲಿನ ಸ್ರಾವವನ್ನು ಗಮನಿಸಬಹುದು.
ಸ್ತನದ ಬಳಿ ಊತ: ನಿಮ್ಮ ಸ್ತನದ ಸುತ್ತಲೂ ಊತ ಕಂಡುಬರುತ್ತದೆ. ಚರ್ಮವು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಕಾಣಿಸಿಕೊಂಡರೆ, ಇದು ಸ್ತನ ಕ್ಯಾನ್ಸರ್‌ನ ಲಕ್ಷಣ ಆಗಿರುತ್ತದೆ.
ಸ್ತನ ತಲೆಕೆಳಗಾಗುವುದು, ಕುಗ್ಗುವಿಕೆ: ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಸ್ತನ ತಲೆಕೆಳಗಾಗುವುದು. ಸ್ತನಗಳ ಕುಗ್ಗುವಿಕೆ ಕ್ಯಾನ್ಸರ್‌ನ ಸಂಕೇತ. ಇದರ ಬಗ್ಗೆ ಭಯಪಡಬೇಕಿಲ್ಲ. ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications