Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಕ್ಸರ್ ಇಮಾನೆ ಲಿಂಗ ಪರೀಕ್ಷೆ ವರದಿ ಲೀಕ್..! ಆಕೆಯ ವೈದ್ಯಕೀಯ ಸಮಸ್ಯೆ ಏನು ಗೊತ್ತಾ?
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್ ದೊಡ್ಡ ಸುದ್ದಿಯಾಗಿದ್ದರು. ಅವರು ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಬೀಗಿದ್ದರು, ಆದ್ರೆ ಅವರ ಲಿಂಗ ಆಧಾರಿತ ವಿಚಾರವಾಗಿ ಬಹಳ ಚರ್ಚೆಗೆ ಗುರಿಯಾಗಿದ್ದರು. ಪುರುಷರಂತೆ ಕಾಣುವ ಅವರು ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಅರ್ಹತೆ ಪಡೆದಿದ್ದರಿಂದ ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಹಾಗೆ ಅವರು ಇಟಲಿಯ ಏಂಜೆಲಾ ಕ್ಯಾರಿನಿ ಎಂಬ ಬಾಕ್ಸರ್‌ಗೆ ಒಂದೇ ಒಂದು ಕಿಕ್ ನೀಡುವ ಮೂಲಕ ಸ್ಪರ್ಧೆಯಿಂದಲೇ ಹೊರಹಾಕಿದ್ದರು.
ಆದ್ರೆ ಈಗ ಅವರ ಲಿಂಗತ್ವ ಪರೀಕ್ಷೆಯ ಒಂದು ವರದಿ ಬಹುರಂಗಗೊಂಡಿದೆ. ಫ್ರೆಂಚ್ ಪತ್ರಕರ್ತರೊಬ್ಬರು ಈ ವರದಿಯನ್ನು ಲೀಕ್ ಮಾಡಿದ್ದಾರೆ ಎನ್ನಲಾಗಿದೆ. ಬಯೋಲಾಜಿಕಲ್ ಪುರುಷ ಎಂದು ಕರೆಯಲ್ಪಡುವ ಈ ಹಂತವನ್ನು ವರದಿಯಲ್ಲಿ ಇದೊಂದು ವೈದ್ಯಕೀಯ ಸಮಸ್ಯೆ ಎಂದು ಹೇಳಲಾಗಿದೆ. (5-alpha reductase deficiency) ಖೆಲಿಫ್ 5-ಆಲ್ಫಾ ರಿಡಕ್ಟೇಸ್ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಾಗಾದ್ರೆ ಏನಿದು 5 ಆಲ್ಪಾ ರಿಡಕ್ಟೇಸ್ ಡಿಸಾರ್ಡರ್? ಇದು ಹೇಗೆ ಉಂಟಾಗುತ್ತದೆ? ಇದರಿಂದ ಆಗುವ ಹಾನಿ ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಸಮಸ್ಯೆ ಹೆಚ್ಚಾಗಿ ಗಂಡು ಶಿಶುಗಳಲ್ಲಿ ಕಂಡುಬರುತ್ತದೆ. 'ಬ್ಲೈಂಡ್ ವೆಗಿನಲ್ ಪೌಚ್' ಎಂದು ಕರೆಯಲ್ಪಡುವ ಅಲರೂಪದ ಜನನಾಂಗ ಸಮಸ್ಯೆಗೆ ಇದು ಕಾರಣವಾಗಿರುತ್ತದೆ. ಈ ಸಮಸ್ಯೆಗೆ 5 ಆಲ್ಫಾ ರಿಡಕ್ಟೇಸ್ ಕೊರತೆ ಕಾರಣವಾಗುತ್ತದೆ.
5-ಆಲ್ಫಾ ರಿಡಕ್ಟೇಸ್ ಕೊರತೆ (5-ಎಆರ್‌ಡಿ ಡಿಸಾರ್ಡರ್ ಆಫ್ ಸೆಕ್ಸ್ ಡೆವಲಪ್‌ಮೆಂಟ್ (ಡಿಎಸ್‌ಡಿ)) ಕಿಣ್ವದ (ಪ್ರೋಟೀನ್) ಅನುವಂಶೀಯವಾಗಿ ಕಂಡುಬರಬಹುದು. ಇದು ಗಂಡು ಮಕ್ಕಳ ಭ್ರೂಣದಲ್ಲಿ ಕೊರತೆಯಾದರೆ ಅಥ ಇಲ್ಲದೇ ಇದ್ದರೆ ಈ ದೋಷ ಕಾಣಿಸಲಿದೆ. ಈ ಕಿಣ್ವವು ಗಂಡು ಪುರುಷತನಕ್ಕೆ ಕಾರಣವಾಗುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಡೈ ಹೈದ್ರೊಟೆಸ್ಟೋಸ್ಟೆರಾನ್ ಎಂಬ ಪ್ರಬಲ ರೂಪಕ್ಕೆ ಪರಿವರ್ತಿಸುತ್ತದೆ. ಅಂದರೆ ಭ್ರೂಣದ ಜನನಾಂಗದ ಬೆಳವಣಿಗೆಗೆ ಇದು ಕಾರಣವಾಗಿರುತ್ತದೆ.
ಭ್ರೂಣದಲ್ಲಿರುವಾಗ ಜನನಾಂಗದ ಬೆಳವಣಿಗೆಯು ಹೆಣ್ಣು ಮತ್ತು ಗಂಡು ಭ್ರೂಣಗಳಲ್ಲಿ ಒಂದೇ ಹಂತಕ್ಕೆ ಆರಂಭವಾಗುತ್ತದೆ. ಮೊದಲ ಕೆಲವು ತಿಂಗಳುಗಳಲ್ಲಿ, ಪುರುಷ ಭ್ರೂಣದಲ್ಲಿನ ವೃಷಣಗಳು ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ ಮತ್ತು ಅದರಲ್ಲಿ ಶೇ.10 ರಷ್ಟು ಡೈಹೈಡ್ರೊಟೆಸ್ಟೋಸ್ಟೆರಾನ್ ಆಗಿ ಪರಿವರ್ತನೆಯಾಗುತ್ತದೆ. ಇದು ಜನನಾಂಗದ ಮೇಲಿನ ಅಥವಾ ಅದರ ಸುತ್ತಲಿನ ಚರ್ಮದ ಬೆಳವಣಿಗೆಗೆ ಬಳಕೆಯಾಗುತ್ತದೆ.
ಕಾಲಾನಂತರದಲ್ಲಿ ಡೈಹೈಡ್ರೊಟೆಸ್ಟೊಸ್ಟೆರಾನ್ ಮಟ್ಟವು ಹೆಚ್ಚಾಗುವ ಕಾರಣದಿಂದಾಗಿ ಗಂಡು ಮತ್ತು ಹೆಣ್ಣಿನ ಜನನಾಂಗವು ನಿರ್ಧಿಷ್ಟ ರೂಪ ಪಡೆಯಲು ಆರಂಭಿಸುತ್ತವೆ. ಆಧರೆ ಇಲ್ಲಿ ಇಮಾನೆ ಖೇಲಿಫ್ ಪ್ರಕರಣದಲ್ಲಿ ಈ ಜನನಾಂಗ ಬೆಳವಣಿಗೆಗೆ ಕಾರಣವಾಗಬೇಕಿದ್ದ ಕಿಣ್ವ ಹಾಗೂ 5 ಆಲ್ಫಾ ರಿಡಕ್ಟೇಸ್ ಅಂಶ ಕೊರತೆಯಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಆಕೆ ಬಯೋಲಾಜಿಕಲ್ ಪುರುಷ ಎಂದು ಕರೆಯಲಾಗಿದೆ. ಆಕೆಯನ್ನು ಪುರುಷ ಎಂದು ಪರಿಗಣಿಸಲು ಸಾಧ್ಯವಿಲ್ಲ ಆದ್ರೆ ಆಕೆಯ ವರ್ತನೆ ಪುರುಷರಂತೆ ಇರಬಹುದಷ್ಟೇ. ಆಕೆಯಲ್ಲಿ ಟೆಸ್ಟೋಸ್ಟೆರಾನ್ ಹೆಚ್ಚು ಬಿಡುಗಡೆಯಾಗುವ ಸಾಧ್ಯತೆಗಳಿರುವುದರಿಂದ ಪುರುಷರಂತೆ ಧ್ವನಿ, ಮಾಂಸಖಂಡ ಬೆಳವಣಿಗೆಯಾಗಿರುತ್ತದೆ ಎನ್ನಬಹುದು.
ಟೆಸ್ಟೋಸ್ಟೆರಾನ್ ಪುರುಷರು ಮತ್ತು ಮಹಿಳೆಯರಲ್ಲಿ ಉತ್ಪತ್ತಿಯಾಗುವ ಲೈಂಗಿಕ ಹಾರ್ಮೋನ್ ಆಗಿದೆ. ಆದಾಗ್ಯೂ, ಪುರುಷರಲ್ಲಿ, ಈ ಹಾರ್ಮೋನ್ ಮಟ್ಟವು ಶೇ. 20ರಷ್ಟು ಹೆಚ್ಚು ಉತ್ಪಾದನೆಯಾಗಲಿದೆ. ಅದ್ರಲ್ಲೂ ಪುರುಷರಲ್ಲಿ ಲೈಂಗಿಕಾಸಕ್ತಿಗೆ ಇದು ಕಾರಣವಾದರೆ ವೃಷಣಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ಮಹಿಳೆಯರಲ್ಲಿ ಅಂಡಾಶಯಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ.
ಹೀಗಾಗಿ ಖೇಲಿಫ್ ಅನ್ನು ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ಅರ್ಹತೆ ನೀಡಿದ್ದ ಕುರಿತು ವಿವಾದ ಎಬ್ಬಿಸಿತ್ತು. ಅವರ ನಿರ್ಧಾರ ಕುರಿತು ಮತ್ತೆ ಪರಿಶೀಲನೆಗೂ ಮನವಿ ಮಾಡಲಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications