Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಮೂಗಿನಲ್ಲಿ ಆಗಾಗ ರಕ್ತಸ್ರಾವವಾಗುತ್ತಿದ್ದರೆ ಈ ಕಾರಣಗಳಿರಬಹುದು
ಸೀನಿದಾಗ ಅಥವಾ ಶೀತವಾದಾಗ ಮೂಗಿನಿಂದ ರಕ್ತ ಬಂದರೆ ಒಂದು ಕ್ಷಣ ಗಾಬರಿ ಬೀಳುತ್ತೇವೆ. ಏಕೆ ಮೂಗಿನಿಂದ ರಕ್ತ ಬರುತ್ತಿದೆ ಎಂದು ಗೊತ್ತಾಗುವುದಿಲ್ಲ, ಏನಾದರೂ ಭೀಕರವಾದ ಆರೋಗ್ಯ ಸಮಸ್ಯೆ ಇರಬಹುದೇ ಎಂದು ಆತಂಕ ಪಡುತ್ತೇವೆ.

ಆದರೆ ಎಲ್ಲಾ ಬಾರಿ ಆತಂಕ ಪಡಬೇಕಾಗಿಲ್ಲ, ಕೆಲವೊಂದು ಬಾರಿ ನಿರ್ಲಕ್ಷ್ಯ ಮಾಡುವಂತಿಯೂ ಇಲ್ಲ. ಮೂಗಿನಿಂದ ರಕ್ತ ಬರಲು ಕಾರಣವೇನು ಎಂದು ನೋಡೋಣ ಬನ್ನಿ:
ಮೂಗಿನಿಂದ ರಕ್ತ ಬರಲು ಕಾರಣವೇನು?
ಹಲವು ಕಾರಣಗಳಿಂದ ಮೂಗಿನಿಂದ ರಕ್ತಬರಬಹುದು. ಕೆಲವೊಮ್ಮೆ ಆಗಾಗ ಮೂಗಿನಿಂದ ರಕ್ತ ಸೋರುವುದು. ಮೂಗಿನಲ್ಲಿ ಏನಾದರೂ ಸಮಸ್ಯೆ ಉಂಟಾಗಿದ್ದರೆ, ಮೂಗಿನ ನರಗಳಿಗೆ ಹಾನಿಯಾಗಿದ್ದರೆ ರಕ್ತ ಸೋರಬಹುದು. ಹಲವಾರು ಕಾರಣಗಳಿಂದ ಮೂಗಿನಿಂದ ರಕ್ತ ಬರಬಹುದು. ಸಾಮಾನ್ಯವಾಗಿ ಈ ಕೆಳಗಿನ ಕಾರಣಗಳಿಂದಾಗಿ ಮೂಗಿನಲ್ಲಿ ರಕ್ತ ಬರಬಹುದು:
ತಂಪಾದ ಹಾಗೂ ಶುಷ್ಕ ವಾತಾವರಣ
ಚಳಿಗಾಲದಲ್ಲಿ ಈ ರೀತಿಯಾಗುವುದು ಸಾಮಾನ್ಯ. ಚಳಿ ಹಾಗೂ ಶುಷ್ಕ ಗಾಳಿ ನಿಮ್ಮ ಮೂಗಿನ ಹೊಳ್ಳೆಯ ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ.
ಅಲ್ಲದೆ ತುಂಬಾ ಚಳಿಯಲ್ಲಿ ಚಳಿಕಾಯಲು ಬೆಂಕಿ ಹಾಕಿ ಕೂರುವುದು ಅಥವಾ ಹೀಟರ್ ಬಳಸುವುದು ಮಾಡುತ್ತಾರೆ. ಆಗ ಶುಷ್ಕತೆಯಿಂದಾಗಿ ಮೂಗಿನ ಹೊಳ್ಳೆಯ ರಕ್ತ ನಾಳಗಳಿಗೆ ಹಾನಿಯುಂಟಾಗಿ ರಕ್ತ ಸೋರುವುದು.
ತುಂಬಾ ಚಳಿಯಿದ್ದಾಗ ಮೂಗು ಕವರ್ ಆಗುವಂತೆ ಮಫ್ಲರ್ ಸುತ್ತುವುದು ಅಥವಾ ಮಾಸ್ಕ್ ಧರಿಸುವುದರಿಂದ ಮೂಗನ್ನು ಬೆಚ್ಚಗಿಡಬಹುದು.
ಆಗಾಗ ಮೂಗಿಗೆ ಕೈ ಹಾಕುವುದು
ಮೂಗಿನೊಳಗಡೆ ಕೈ ಹಾಕಿ ಗಟ್ಟಿಯಾದ ಗೊಣ್ಣೆ ತೆಗೆಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಈ ರೀತಿ ಮಾಡುವುದರಿಂದ ಕೂಡ ಮೂಗಿನ ನರಗಳಿಗೆ ಹಾನಿಯಾಗಿ ರಕ್ತ ಬರುವುದು.
ಮೂಗಿಗೆ ಏನಾದರೂ ಹಾಕಿದರೆ
ಮಕ್ಕಳಲ್ಲಿ ಮೂಗಿನಲ್ಲಿ ರಕ್ತ ಬಂದಾಗ ಗಾಬರಿಯಾಗಬೇಡಿ, ಅವರು ಮೂಗಿನೊಳಗಡೆ ಏನಾದರೂ ಹಾಕಿದ್ದಾರೆಯೇ ಎಂದು ಪರೀಕ್ಷಿಸಿ. ಮೂಗಿನೊಳಗಡೆ ಏನಾದರೂ ವಸ್ತು ಹಾಕಿದರೆ ಮೂಗಿನಿಂದ ರಕ್ತ ಬರಬಹುದು.
ಮೂಗು ಕಟ್ಟುವುದು ಹಾಗೂ ಉಸಿರಾಟದ ಸೋಂಕು
ತುಂಬಾ ಶೀತ ಇದ್ದಾಗ ಆ ಶೀತ ಒಂದು ವಾರವಾದರೂ ಕಡಿಮೆಯಾಗದಿದ್ದಾಗ ಮೂಗಿನಲ್ಲಿ ರಕ್ತ ಬರಬಹುದು.
ಏನಾದರೂ ಗಾಯ ಅಥವಾ ಸರ್ಜರಿ
ಮೂಗು ಅಥವಾ ಮುಖಕ್ಕೆ ಏನಾದರೂ ಗಾಯ ಅಥವಾ ಸರ್ಜರಿ ಆದಗಲೂ ಮೂಗಿನಿಂದ ರಕ್ತಬರುವುದು.
ಡ್ರಗ್ಸ್ ತೆಗೆದುಕೊಳ್ಳುವವರಿಗೆ
ತುಂಬಾ ಡ್ರಗ್ಸ್ ಸೇವನೆ ಚಟ ಇರುವವರಿಗೆ ಮೂಗಿನ ನರಗಳಿಗೆ ಹಾನಿಯಾಗಿ ರಕ್ತ ಬರಬಹುದು.
ಔಷಧಗಳು
ಆಸ್ಪ್ರಿನ್, warfarin ಮುಂತಾದ ಔಷಧಿಗಳು ಕೂಡ ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವ ಉಂಟು ಮಾಡುತ್ತದೆ.
ಅತ್ಯಧಿಕ ರಕ್ತದೊತ್ತಡ
ಅತ್ಯಧಿಕ ರಕ್ತದೊತ್ತಡ ಉಂಟಾದಾಗಲೂ ಮೂಗಿನಿಂದ ರಕ್ತ ಬರುವುದು.
ಮೂಗಿನಲ್ಲಿ ಗಡ್ಡೆಯಿದ್ದರೆ
ಮೂಗಿಲ್ಲಿ ಗಡ್ಡೆಯಿದ್ದರೆ ನಿಮ್ಮ ಕಣ್ಣುಗಳ ಸಮೀಪ ನೋವು ಇರುತ್ತದೆ
* ಮೂಗು ಕಟ್ಟಿದಂತಾಗುವುದು
* ವಾಸನೆ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುವುದು.
ಮೂಗಿನಲ್ಲಿ ರಕ್ತಸ್ರಾವ ಹೇಗೆ ತಡೆಗಟ್ಟಬಹುದು?
ಮೂಗಿನಲ್ಲಿ ರಕ್ತಸ್ರಾವವಾಗುವಾಗ ಒಂದು ಕಡೆ ಕುಳಿತುಕೊಂಡು ತಲೆಯನ್ನು ಮೇಲಕ್ಕೆ ಎತ್ತಿ
* ನಿಮ್ಮ ಬಾಯಿಯ ಮೂಲಕ ಉಸಿರಾಡಿ
* ಮೂಗನ್ನು ಆಗಾಗ ಮುಚ್ಚಿ ತೆರೆಯಿರಿ.
* ಚಳಿಯಲ್ಲಿ ಮೂಗಿನ ಮಾಯಿಶ್ಚರೈಸರ್ ಕಾಪಾಡಿ, ಪೆಟ್ರೋಲಿಯಂ ಜೆಲ್ಲಿ ಒಳಭಾಗದಲ್ಲಿಯೂ ಹಚ್ಚಿ.
* ಮೂಗಿನೊಳಗಡೆ ಕೈಹಾಕಿ ಕೀಳುವ ಅಭ್ಯಾಸ ಬಿಡಿ
ವೈದ್ಯರಿಗೆ ತೋರಿಸಿ
ಪದೇ ಪದೇ ರಕ್ತಸ್ರಾವವಾಗುತ್ತಿದ್ದರೆ ವೈದ್ಯರಿಗೆ ತೋರಿಸಿ ಸೂಕ್ತ ಸಲಹೆ ಸೂಚನೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

