Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಸುಸ್ತು, ತುರಿಕೆ ಸೇರಿ ಈ ಬಗೆಯ ಲಕ್ಷಣಗಳಿದ್ದರೆ ಅವು ರಕ್ತ ಕ್ಯಾನ್ಸರ್‌ನ ಲಕ್ಷಣವಾಗಿದೆ
ಕ್ಯಾನ್ಸರ್ ಮಾರಕ ರೋಗ ಹೌದು ಆದರೆ ಇದರ ಲಕ್ಷಣಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಬೇಗನೆ ಚಿಕಿತ್ಸೆ ಪ್ರಾರಂಭಿಸಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚು.
ಇಲ್ಲಿ ರಕ್ತ ಕ್ಯಾನ್ಸರ್ ಎಂದರೇನು, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಇದ್ದಕ್ಕಿದ್ದಂತೆ ತೂಕ ಇಳಿಕೆ
ಇದ್ದಕ್ಕಿದ್ದಂತೆ ರಕ್ತಸ್ರಾವವಾಗುವುದು
ಗಂಟು, ಊತ
ಉಸಿರಾಟದಲ್ಲಿ ತೊಂದರೆ
ಮೈ ಮೇಲೆ ಗುಳ್ಳೆಗಳು ಏಳುವುದು
ಮೂಳೆಯಲ್ಲಿ ನೋವು, ಕಿಬ್ಬೊಟ್ಟೆ ನೋವು
ಸುತ್ತು
ಮುಖ ಬಿಳುಚಿಕೊಂಡಂತೆ ಇರುವುದು.
ರಕ್ತ ಕ್ಯಾನ್ಸರ್ ಎಲ್ಲರಿಗೂ ಒಂದೇ ರೀತಿ ಇರಬೇಕೆಂದು ಏನಿಲ್ಲ, ಕೆಲವೊಂದು ಲಕ್ಷಣ ಭಿನ್ನವಾಗಿರುತ್ತದೆ:
- ತ್ವಚೆಯಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬರುವುದು
- ಗುಳ್ಳೆಗಳು ಏಳುವುದು
- ತ್ವಚೆಯಲ್ಲಿ ಕೆಂಪು ಗುಳ್ಳೆಗಳು ಕಂಡು ಬರುವುದು ಕ್ರಮೇಣ ಅದು ಕಪ್ಪು ಬಣ್ಣಕ್ಕೆ ತಿರುಗುವುದು ಗಮನಕ್ಕೆ ಬರಬಹುದು.
- ಕೆಲವರಿಗೆ ಕೆಂಪು ಗುಳ್ಳೆಗಳು ಕಂಡು ಬರುವುದು, ಕಪ್ಪು ಅಥವಾ ಗೋಧಿ ಬಣ್ಣದ ತ್ವಚೆಯವರಿಗೆ ಆ ಗುಳ್ಳೆ ಕಪ್ಪು ಅಥವಾ ನೀಲಿ ಬಣ್ಣದಲ್ಲಿ ಕಂಡು ಬರುವುದು.
- ಕೈಗಳು ಬಿಳುಚಿಕೊಂಡಂತೆ ಕಂಡು ಬರುವುದು: ಅಂಗೈ ನೋಡಿದಾಗ ಡಾರ್ಕ್ ಪಿಂಕ್ ಅಥವಾ ಕೆಂಪು ಬಣ್ಣದಲ್ಲಿ ಇರುತ್ತದೆ. ಅಂಗೈ ಬಿಳುಚಿಕೊಂಡಿರುತ್ತದೆ.
ರಕ್ತ ಕ್ಯಾನ್ಸರ್ ಎಂದರೇನು?
ರಕ್ತಕ್ಯಾನ್ಸರ್ ಎಂದರೆ ರಕ್ತಕಣಗಳು ಸರಿಯಾಗಿಲ್ಲ ಎಂದರ್ಥ. ದೇಹದಲ್ಲಿನ ರಕ್ತ ಕಣಗಳ ಅಸಮತೋಲನದಿಂದಾಗಿ ರಕ್ತ ಕ್ಯಾನ್ಸರ್ ಉಂಟಾಗುವುದು.
ರಕ್ತ ಕ್ಯಾನ್ಸರ್ ಇದ್ದಾಗ ತುಂಬಾನೇ ಸುಸ್ತು ಉಂಟಾಗುವುದು
ರಕ್ತಕಣಗಳು ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುತ್ತದೆ, ರಕ್ತಕಣಗಳಲ್ಲಿ ವ್ಯತ್ಯಾಸ ಉಂಟಾದಾಗ ಆಮ್ಲಜನಕ ಪೂರೈಕೆ ಕಡಿಮೆಯಾಗುವುದು, ಇದರಿಂದ ತುಂಬಾನೇ ಸುಸ್ತು ಕಂಡು ಬರುವುದು, ಅಂಗೈ ಬಿಳುಚಿಕೊಂಡಂತೆ ಕಂಡು ಬರುವುದು.
ಇತರ ಲಕ್ಷಣಗಳು
ಪ್ಲೇಟ್‌ಲೆಟ್ ಕಡಿಮೆಯಾಗುವುದು, ರಕ್ತ ಹೆಪ್ಪುಗಟ್ಟುವುದು, ಅವುಗಳನ್ನು ಮುಟ್ಟಿದಾಗ ನೋವುಂಟಾಗುವುದು. ಮೂಗಿನಲ್ಲಿ ರಕ್ತಸ್ರಾವ ಉಂಟಾಗುವುದು, ಮೂತ್ರದಲ್ಲಿ ರಕ್ತಕಲೆಗಳು ಕಂಡು ಬರುವುದು. ಅಪರೂಪದ ಘಟನೆಯಲ್ಲಿ ಮೆದುಳಿನಲ್ಲಿಯೂ ರಕ್ತಸ್ರಾವ ಉಂಟಾಗುವುದು.
ಆಗಾಗ ಜ್ವರ ಬರುವುದು
ಬಿಳಿ ರಕ್ತ ಕಣಗಳು ಕಡಿಮೆಯಾದಾಗ ಆಗಾಗ ಜ್ವರ ಬರುವುದು, ಕೆಮ್ಮು, ಗಂಟಲು ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ರೀತಿ ಆಗಾಗ ಜ್ವರ ಉಂಟಾಗುವುದು.
ಬಿಳಿ ರಕ್ತಕಣಗಳಿಂದ ಗಂಟು ಉಂಟಾಗುವುದು
ಈ ಬಗೆಯ ಗಂಟು, ಮಣಿಗಂಟು ಈ ಭಾಗಗಳಲ್ಲಿ ಕಂಡು ಬರುವುದು. ನಂತರ ಶ್ವಾಸ ಕೋಶ ದೇಶದ ಇತರ ಭಾಗಗಳಲ್ಲಿ ಊತ ಕಂಡು ಬರುವುದು. ಇದರಿಂದ ನೋವು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
ಮೂಳೆಗಳಲ್ಲಿ ನೋವು ಕಂಡು ಬರುವುದು
ಬೆನ್ನು, ಹಿಂಬದಿ, ಸೊಂಟ ಈ ಭಾಗಗಳಲ್ಲಿ ವಿಪರೀತ ನೋವು ಕಂಡು ಬರುವುದು.
ರಾತ್ರಿ ಮೈ ಬೆವರುವುದು
ಲಿಂಪೋಮಾ ಸಮಸ್ಯೆ ಇರುವವರೆಗೆ ರಾತ್ರಿ ಹೊತ್ತಿನಲ್ಲಿ ತುಂಬಾ ಮೈ ಬೆವರುವುದು.
ತ್ವಚೆ ತುರಿಕೆ
ಕೆಲವರಿಗೆ ಮೈ ತುರಿಕೆ ಕಂಡು ಬರುವುದು, ಆದರೆ ಹೆಚ್ಚಿನವರು ಆರಂಭದಲ್ಲಿ ಇದರ ಬಗ್ಗೆ ಗಮನಹರಿಸುವುದೇ ಇಲ್ಲ.
ಇದ್ದಕ್ಕಿದ್ದಂತೆ ಮೈ ತೂಕ ತುಂಬಾ ಕಡಿಮೆಯಾಗುವುದು
ಕ್ಯಾನ್ಸರ್ ಉಂಟಾದಾಗ ದೇಹದಲ್ಲಿ ತುಂಬಾನೇ ಬದಲಾವಣೆ ಉಂಟಾಗುವುದು. ಇದರಿಂದ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಮೈ ತೂಕ ತುಂಬಾ ಕಡಿಮೆಯಾಗುವುದು.
ಹೊಟ್ಟೆ ನೋವು
ಸ್ವಲ್ಪ ಆಹಾರ ಸೇವಿಸಿದರೂ ಹೊಟ್ಟೆ ನೋವು ಉಂಟಾಗುವುದು, ಹೊಟ್ಟೆ ಉಬ್ಬದಂತಾಗುವುದು, ಆಗಾಗ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು.
ರಕ್ತ ಕ್ಯಾನ್ಸರ್‌ನ ಲಕ್ಷಣಗಳು
ಕೆಲವೊಂದು ರಕ್ತ ಕ್ಯಾನ್ಸರ್ ಬೇಗನೆ ಹೆಚ್ಚಾಗುವುದು, ಲುಕೆಮಿಯಾ ಬಗೆಯ ಸಮಸ್ಯೆಯಲ್ಲಿ ಬೇಗನೆ ಲಕ್ಷಣಗಳು ಕಂಡು ಬರುವುದು. ಕಣ್ಣುಗಳು ಮಂಜಾಗುವುದು, ಗೊಂದಲ, ವಾಂತಿ, ಸ್ನಾಯುಗಳು ಬಲಹೀನವಾಗುವುದು ಈಬಗೆಯ ಲಕ್ಷಣಗಳು ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications