Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಫ್ರಿಡ್ಜ್‌ನಲ್ಲಿ 5 ದಿನಗಳ ಕಾಲ ಬದುಕಲಿದೆ ಹಕ್ಕಿ ಜ್ವರದ ವೈರಸ್..! ಹೊಸ ಅಧ್ಯಯನ ವರದಿ
ಅಮೆರಿಕನ್ನರಿಗೆ ಮತ್ತೆ ಈಗ ಹಕ್ಕಿ ಜ್ವರದ ಭೀತಿ ಕಾಡುತ್ತಿದೆ. ಕ್ರಿಸ್‌ಮಸ್ ಹಾಗೂ ಚಳಿಗಾಲದ ನಡುವೆ ಅಲ್ಲಿ ಹಕ್ಕಿ ಜ್ವರ ವಿಪರೀತವಾಗಿ ಹರಡಲು ಆರಂಭಿಸಿದೆ. ಹಾಗೆ ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಕೂಡ ಘೋಷಿಸಲಾಗಿದೆ. ಏಕಾಏಕಿ ಈ ಹಕ್ಕಿ ಜ್ವರದ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿರುವ ಹಿನ್ನೆಲೆ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸ್ಥಳೀಯಾಡಳಿತ ಈ ರೀತಿ ಕ್ರಮಕ್ಕೆ ಮುಂದಾಗಿದೆ.
ಆದ್ರೆ ಈ ಹಕ್ಕಿ ಜ್ವರ ಸಾಕು ಪ್ರಾಣಿಗಳ ಸಂಪರ್ಕದ ಮೂಲಕ ಹರಡುತ್ತಿರುವುದು ದೃಢವಾಗಿದೆ. ಅದರಲ್ಲೂ ಡೈರಿ ಪ್ರಾಣಿಗಳ ಮೂಲಕ ಹರಡುತ್ತಿದೆ. ಹಸುಗಳಿಂದ ಮಾನವರಿಗೆ ಹರಡುವಿಕೆ ಕೂಡ ವರದಿಯಾಗಿದೆ. ಇನ್ನು ಹಸುವಿನ ಹಾಲಿನ ಮೂಲಕವೂ ಕೂಡ ಈ ವೈರಸ್ ಹರಡುತ್ತಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಈಗ ಹೊಸದೊಂದು ಅಧ್ಯಯನದಲ್ಲಿ ನಿಮ್ಮ ಮನೆಯ ರೆಫ್ರಿಜರೇಟರ್‌ನಲ್ಲಿ ಸುಮಾರು 5 ದಿನಗಳ ಕಾಲ ಈ ಹಕ್ಕಿ ಜ್ವರದ ವೈರಸ್ ಬದುಕುಳಿಯಲಿದೆ ಎಂದು ತಿಳಿಸಿದೆ. ಈ ಹೊಸ ಅಧ್ಯಯನ ಈಗ ಆತಂಕ ಹೆಚ್ಚಾಗಲು ಕಾರಣವಾಗಿದೆ. ರೆಫ್ರಿಜರೇಟರ್‌ನಲ್ಲಿ ಇಟ್ಟಿರುವ ಹಾಲಿನಲ್ಲಿ ಸುಮಾರು 5 ದಿನಗಳ ಕಾಲ ಬದುಕಲಿದೆಯಂತೆ. ಹೀಗಾಗಿ ಹಸಿ ಹಾಲು ಸೇವನೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.
ಹಸಿ ಹಾಲು ಕುಡಿಯುವುದು ಮೂರ್ಖತನ ಏಕೆಂದರೆ ಅದರಲ್ಲಿ ಹಲವಾರು ಬ್ಯಾಕ್ಟೀರಿಯಾಗಳು ಇರಬಹುದು, ಅವುಗಳಲ್ಲಿ ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಕೇರಳದ ಕೊಚ್ಚಿಯಲ್ಲಿರುವ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ವೈಜ್ಞಾನಿಕ ಸಮುದಾಯದ ಸಂಚಾಲಕ ಡಾ.ರಾಜೀವ್ ಜಯದೇವನ್ ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಸ್ಟ್ಯಾನ್‌ಫೋರ್ಡ್ ಅಧ್ಯಯನದ ಪ್ರಕಾರ, ಇನ್ಫ್ಲುಯೆನ್ಸ ಅಥವಾ ಫ್ಲೂ ವೈರಸ್ ಐದು ದಿನಗಳವರೆಗೆ ಫ್ರಿಡ್ಜ್‌ನಲ್ಲಿಟ್ಟ ಹಾಲಿನಲ್ಲಿ 5 ದಿನಗಳ ಕಾಲ ಬದುಕುಳಿಯಲಿದೆ. ಜಾನುವಾರುಗಳಲ್ಲಿ ಇನ್ಫ್ಲುಯೆನ್ಸ ವೈರಸ್ ವಿಭಿನ್ನ ರೂಪಾಂತರವಾಗಿದ್ದು, ಅದು ಸಂಭಾವ್ಯ ಹರಡುವಿಕೆ ಹಾಗೂ ಸಾಂಕ್ರಾಮಿಕದ ಕಳವಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಹಸಿ ಹಾಲಿನಲ್ಲಿ ಇ.ಕೋಲಿ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್‌ನಂತಹ ಹಾನಿಕಾರಕ ಬ್ಯಾಕ್ಟೀರಿಯಾ ಸುಲಭವಾಗಿ ಬದುಕಬಹುದು. ಹಾಗೆ ಈ ಹಸಿ ಹಾಲಿನ ಸೇವನೆಯ ಬದಲು ಹಾಲನ್ನು ಬಿಸಿ ಮಾಡುವುದರಿಂದ ಈ ಎಲ್ಲಾ ವೈರಸ್‌ಗಳನ್ನು ಕೊಲ್ಲಬಹುದಾಗಿದೆ. ಕುದಿಸಿ ಕುಡಿಯುವ ಹಾಲು ಹಾನಿಕಾರಕ ವೈರಸ್ ಮುಕ್ತವಾಗಿರಲಿದೆ.
ಭಾರತದಲ್ಲಿ ಇದರ ಅಪಾಯ ಎಷ್ಟು?
ಭಾರತ ಜಾಗತಿಕವಾಗಿ ಹಾಲಿನ ಉತ್ಪನ್ನ ಹಾಗೂ ಡೈರಿ ಉತ್ಪನ್ನ ತಯಾರಿಕಾ ದೇಶಗಳಲ್ಲಿ ಪ್ರಮುಖವಾಗಿದೆ. ಭಾರತದಲ್ಲಿ ನಿತ್ಯ ಬೆಳಗ್ಗೆ ಹಾಲು, ಟೀ,ಕಾಫಿಯೊಂದಿಗೆ ದಿನ ಆರಂಭವಾಗಲಿದೆ. ಗ್ರಾಮೀಣ ಭಾಗದಲ್ಲಿ ಪಾಶ್ಚರೀಕರಿಸಿದ ಹಾಲಿನ ಬದಲಾಗಿ ಕಚ್ಚಾ ಹಾಲು ಬಳಕೆಯಲ್ಲಿದೆ. ಇದು ಕೂಡ ಅಪಾಯ ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿದೆ.
ಭಾರತದಲ್ಲಿ ಕಚ್ಚಾ ಹಾಲು ಸೇವನೆಯ ಪ್ರಮಾಣ ಕೂಡ ಅಧಿಕವಾಗಿದೆ. ಪಾಶ್ಚರೀಕರಿಸಿದ ಹಾಲಿನಲ್ಲಿ ಹಾಲಿನ ಆರೋಗ್ಯಕರ ಅಂಶಗಳು ನಾಶವಾಗಲಿವೆ, ಪ್ರಯೋಜನಕಾರಿ ಕಿಣ್ವಗಳ ಕೊರತೆ, ಪ್ರೋಬಯಾಟಿಕ್ಗಳು ಮತ್ತು ವಿಟಮಿನ್ ನಾಶವಾಗುತ್ತೆ ಎಂಬ ನಂಬಿಕೆ ಇದೆ, ಹೀಗಾಗಿ ಕಚ್ಚಾ ಹಾಲಿನ ಸೇವನೆ ಕೂಡ ಹೆಚ್ಚಾಗುತ್ತಿದೆ. ಹಾಗೆ ಇತ್ತೀಚಿಗೆ ಹಸಿ ಹಾಲು ಸೇವನೆಯ ಟ್ರೆಂಡ್ ಹೆಚ್ಚಾಗಿದೆ.
ಹಕ್ಕಿ ಜ್ವರ ಎಂದು ಕರೆಯಲ್ಪಡುವ ಏವಿಯನ್ ಇನ್ಫ್ಲುಯೆನ್ಸವು ವೈರಸ್ ಸೋಂಕು ಪ್ರಾಥಮಿಕವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ಕೆಲವು ಪರಿಸ್ಥಿತಿಗಳಲ್ಲಿ ಮಾನವರು ಮತ್ತು ಇತರ ಪ್ರಾಣಿಗಳಿಗೆ ಸೋಂಕು ತಗುಲುವ ಸಾಮರ್ಥ್ಯವನ್ನು ಹೊಂದಿದೆ. H5N1 ತಳಿಯು ಮಾನವರಲ್ಲಿ ಹೆಚ್ಚಿನ ಮರಣ ಪ್ರಮಾಣ ಹರಡುವಿಕೆಯ ಕಾರಣದಿಂದಾಗಿ ಹೆಚ್ಚು ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
