Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮತ್ತೆ ಹರಡುತ್ತಿದೆ ಹಕ್ಕಿ ಜ್ವರ..! ಬರ್ಡ್ ಫ್ಲೂ ಲಕ್ಷಣವೇನು? ಹರಡೋದು ಹೇಗೆ?
ಕೆಲ ವರ್ಷಗಳ ಹಿಂದೆ ನಾವು ಹೆಚ್1ಎನ್1 ಹಾಗೆ ಹೆಚ್5ಎನ್1 ಹಕ್ಕಿ ಜ್ವರದ ಭೀತಿ ಎದುರಾಗಿದ್ದು ನಾವು ನೋಡಿದ್ದೇವೆ. ಹಕ್ಕಿ ಜ್ವರ ಹಿಂದೊಮ್ಮೆ ದೇಶದಾದ್ಯಂತ ಭಯಾನಕ ದುರಂತವನ್ನೇ ಸೃಷ್ಟಿಸಿತ್ತು. ಪ್ರಾಣಿಗಳಾದ ಹಂದಿ, ಕುದುರೆ, ಕೋಳಿ, ಬೆಕ್ಕು, ನಾಯಿ ಹೀಗೆ ಎಲ್ಲಾ ಪ್ರಾಣಿಗಳಿಂದ ವಿವಿಧ ರೀತಿಯ ವೈರಸ್ ಹರಡುತ್ತಿತ್ತು. ಮಾನವರಿಗೂ ಈ ವೈರಸ್ ಕಂಟಕವಾಗಿ ಕಾಡಿತ್ತು.
ಏವಿಯನ್ ಇನ್ಫ್ಲುಯೆನ್‌ಸಾ ಅಥವಾ ಹಕ್ಕಿ ಜ್ವರದ ಹೆಚ್ಚು ರೋಗಕಾರಕ H5N1 ವೈರಸ್ ಈಗ ಮತ್ತೆ ಹರಡಲು ಆರಂಭಗೊಂಡಿದೆ. ದೇಶದ ಹಲವು ಭಾಗದಲ್ಲಿ ಮತ್ತೆ ಹಕ್ಕಿ ಜ್ವರ ಭೀತಿ ಹುಟ್ಟಿಸಿದೆ. ಅದರಲ್ಲೂ ಒಡಿಶಾದಲ್ಲಿ ಸಾವಿರಕ್ಕೂ ಹೆಚ್ಚು ಕೋಳಿಗಳ ಸಾವಿಗೆ ಕಾರಣವಾಗಿದೆ. ಭುವನೇಶ್ವರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಪುರಿಯಲ್ಲಿ ಏಕಾಏಕಿ ಹಕ್ಕಿ ಜ್ವರ ಹರಡಿದ್ದು, 1800 ಕೋಳಿಗಳ ಹತ್ಯೆ ಮಾಡಲಾಗಿದೆ.

ವೈರಸ್ ತಗುಲಿರುವ ಸುಮಾರು 20 ಸಾವಿರ ಕೋಳಿಯನ್ನು ಕೊಲ್ಲಲು ಮುಂದಾಗಲಾಗಿದೆ ಎಂದು ವರದಿಗಳಾಗಿವೆ. ತಜ್ಞರ ಪ್ರಕಾರ, ಇನ್ಫ್ಲುಯೆನ್ಸ ಎ ವೈರಸ್ ಉಪವಿಭಾಗ H5N1 - ಅಥವಾ ಹಕ್ಕಿ ಜ್ವರವು ಹೆಚ್ಚು ರೋಗಕಾರಕ ವೈರಸ್ ಆಗಿದ್ದು ಅದು ಮನುಷ್ಯರು, ಹಂದಿಗಳು ಮತ್ತು ಇತರ ಪ್ರಾಣಿಗಳಿಗೆ ಸೋಂಕು ತರುತ್ತದೆ. ಈ ಸೋಂಕಿನಲ್ಲಿ ಹಲವು ವಿಧಗಳಿವೆ. ಎಲ್ಲವೂ ಮಾರಣಾಂತಿಕವಾಗಿದೆ.
ಹಕ್ಕಿ ಜ್ವರ ಹರಡುವುದು ಹೇಗೆ?
ತಜ್ಞರ ಪ್ರಕಾರ, H5N1 ತಳಿಯು ಹೆಚ್ಚು ರೋಗಕಾರಕವಾಗಿದೆ ಮತ್ತು ಹಂದಿಗಳು, ಕುದುರೆಗಳು, ದೊಡ್ಡ ಬೆಕ್ಕುಗಳು, ನಾಯಿಗಳು ಮತ್ತು ಸಾಂದರ್ಭಿಕವಾಗಿ ಮನುಷ್ಯರಂತಹ ಪ್ರಾಣಿಗಳಿಗೆ ಸಹ ಹರಡಬಹುದು. ಈ ವೈರಸ್‌ಗೆ ಒಳಗಾದ ಪಕ್ಷಿ ಅಥವಾ ಕೋಳಿಯ ಮಾಂಸ ಅಥವಾ ಪ್ರಾಣಿಯ ಸಂಪರ್ಕಕ್ಕೆ ಮಾನವ ಬಂಗಾದ ಹರಡುತ್ತದೆ.
ಹಕ್ಕಿ ಜ್ವರದ ಲಕ್ಷಣವೇನು?
ಹಕ್ಕಿ ಜ್ವರ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಅತೀಯಾದ ಜ್ವರ, ಆಯಾಸ, ಕೆಮ್ಮು, ಸ್ನಾಯು ನೋವು, ಗಂಟಲು ನೋವು, ಅತಿಸಾರ, ಮೂಗಿನಲ್ಲಿ ನೀರು ಬರುವುದು, ಉಸಿರಾಟದ ತೊಂದರೆ, ಕಣ್ಣುಗಳು ಕೆಂಪಾಗುವುದು ಸೇರಿ ತಲೆ ನೋವು ಸಹ ಕಾಣಿಸಿಕೊಳ್ಳುತ್ತದೆ.
ಹಕ್ಕಿ ಜ್ವರಕ್ಕೆ ಕಾಣಿಸಿಕೊಳ್ಳಲು ಕಾರಣವೇನು?
ಇನ್ಫ್ಲುಯೆನ್‌ಸಾ ಎ ವೈರಸ್ ಸಾಮಾನ್ಯವಾಗಿ ಮಾನವರಲ್ಲಿ H5N1 ಅಥವಾ ಹಕ್ಕಿ ಜ್ವರವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಶ್ವಾಸಕೋಶಕ್ಕೆ ಹಾನಿಮಾಡುತ್ತದೆ. ನಂತರದಲ್ಲಿ ದೇಹದ ವಿವಿಧ ಭಾಗಗಳಿಗೆ ಹರಡುತ್ತದೆ. ಈ ವೈರಸ್ ಇರುವ ಪಕ್ಷಿಗಳ ಉಗುಳು, ಉಸಿರಾಟದ ಹನಿಗಳು ಅಥವಾ ಮಲದಂತಹ ವಸ್ತುವಿನಿಂದ ಮತ್ತೊಬ್ಬರಿಗೆ ಹರಡುತ್ತದೆ. ಹೀಗಾಗಿ ಹಕ್ಕಿ ಜ್ವರ ಹರಡುವ ಸಮಯದಲ್ಲಿ ಪಕ್ಷಿಗಳಿಂದ, ಸಾಕು ಪ್ರಾಣಿಗಳಿಂದ ದೂರವಿರಬೇಕು.
ಇನ್ನು ಪೌಲ್ಟ್ರಿ ಫಾರ್ಮ್‌ನಲ್ಲಿ ಬೆಳೆಯುವ ಕೋಳಿಗಳಿಂದ ಹೆಚ್ಚು ವೈರಸ್ ಹರಡುತ್ತದೆ. ಮಾಂಸ ಸೇವನೆ ಅವುಗಳ ಸಂಪರ್ಕಕ್ಕೆ ಬರುವುದು ಸಹ ಇದಕ್ಕೆ ಕಾರಣವಾಗುತ್ತದೆ. ಸರಿಯಾಗಿ ಬೇಯಿಸಿದ ಕೋಳಿ ಅಥವಾ ಮೊಟ್ಟೆಗಳನ್ನು ತಿನ್ನುವುದರಿಂದ ನೀವು ಸೋಂಕಿಗೆ ಒಳಗಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಮಾಂಸವನ್ನು ಸರಿಯಾಗಿ ಬೇಯಿಸದೆ ಅಥವಾ ವೈರಸ್ ಬಂದಿರುವ ಕೋಳಿಯ ಸಂಪರ್ಕಕ್ಕೆ ಬಂದಾಗ ಈ ವೈರಸ್ ಹರುಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಕ್ಕಿ ಜ್ವರ ಸಾಮಾನ್ಯವಾಗಿ ನ್ಯುಮೋನಿಯಾ, ತೀವ್ರವಾದ ಉಸಿರಾಟದ ತೊಂದರೆ, ಬ್ಯಾಕ್ಟೀರಿಯಾದ ಸೋಂಕುಗಳು, ಸೆಪ್ಸಿಸ್, ಮೆನಿಂಗೊಎನ್ಸೆಫಾಲಿಟಿಸ್ನಂತಹ ಮೆದುಳಿನ ಊತ, ಮತ್ತು ಉಸಿರಾಟದ ವೈಫಲ್ಯ ಸೇರಿದಂತೆ ತೀವ್ರವಾದ ಕಾಯಿಲೆಗಳು ಮತ್ತು ತೊಡಕುಗಳಿಗೆ ಕಾರಣವಾಗುತ್ತದೆ.
ಈ ಮೊದಲು ಕೇರಳದಲ್ಲಿ ಹಕ್ಕಿ ಜ್ವರ ಭಾರೀ ಆತಂಕ ಹುಟ್ಟಿಸಿತ್ತು. ಸುಮಾರು 21 ಸಾವಿರ ಬಾತುಕೋಳಿಗಳನ್ನು ಕೊಲ್ಲುವ ಮೂಲಕ ವೈರಸ್ ಹರಡುವುದನ್ನು ತಡೆಯಲು ಮುಂದಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications