Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಹಂದಿಗಳಲ್ಲಿ ಮೊಟ್ಟ ಮೊದಲ ಬಾರಿಗೆ ಹಕ್ಕಿ ಜ್ವರ ಪತ್ತೆ..! ಹರಡುವುದು ಹೇಗೆ ಗೊತ್ತಾ?
ಕೆಲವು ವರ್ಷಗಳಿಂದ ಹಕ್ಕಿ ಜ್ವರ ಎಷ್ಟೊಂದು ಸಮಸ್ಯೆ ತಂದಿಟ್ಟಿತ್ತು ಎಂಬುದು ನಮಗೆಲ್ಲಾ ತಿಳಿದಿದೆ. ಹಕ್ಕಿ ಜ್ವರ ಜನರನ್ನು ಹೈರಾಣಾಗಿಸಿತ್ತು. ಅಲ್ಲದೆ ಫೌಲ್ಟ್ರಿ ಉದ್ಯಮವನ್ನೇ ತಲೆಕೆಳಗಾಗುವಂತೆ ಮಾಡಿತ್ತು. ಹಕ್ಕಿ ಜ್ವರವೂ ಏವಿಯನ್ ಇನ್‌ಫ್ಲುಂಜಾ ವೈರಸ್‌ನಿಂದ ಬರುತ್ತದೆ. ಈ ವೈರಸ್ ಕಾಡು ಹಕ್ಕಿ ಹಾಗೂ ಸಾಕು ಪ್ರಾಣಿಗಳಾದ ಕೋಳಿ, ಬಾತುಕೋಳಿ, ಟರ್ಕಿ ಇವುಗಳಿಗೂ ಹರಡುತ್ತಿತ್ತು.
ಆದ್ರೆ ಈಗ ಮೊಟ್ಟ ಮೊದಲ ಬಾರಿಗೆ ಹಂದಿಗಳಲ್ಲಿಯೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೌದು ಹಂದಿಗಳಿಂದಲೇ ಹಲವು ರೋಗ ಹರಡುತ್ತಿದ್ದ ಸಮಯದಲ್ಲಿ ಈಗ ಹಕ್ಕಿ ಜ್ವರ ಹಂದಿಗಳಿಗೆ ಹರಡುತ್ತಿರುವುದು ಹೊಸ ಆತಂಕ ತರಲು ಕಾರಣವಾಗಿದೆ. ಮೊದಲಿಗೆ 2011ರಲ್ಲಿ ಹಕ್ಕಿ ಜ್ವರ ಹನ್ನೆರಡಕ್ಕೂ ಅಧಿಕ ದೇಶಗಳಲ್ಲಿ ಕಂಡು ಬಂದಿತ್ತು. ಬಾಂಗ್ಲದೇಶ, ಕಾಂಬೋಡಿಯಾ, ಈಜಿಪ್ಟ್, ಇಂಡೋನೇಷ್ಯಾ ಈ ದೇಶಗಳಲ್ಲಿ ಕಂಡು ಬಂದಿತ್ತು. ಆದ್ರೆ ಈಗ ಅಮೆರಿಕದಲ್ಲಿ ಹಂದಿಗಳಲ್ಲಿ ಈ ಹಕ್ಕಿ ಜ್ವರ ಕಂಡುಬಂದಿದೆ.

ಕೋಳಿ, ಹಸುಗಳ ಹಾಲಿನಲ್ಲಿ ಈ ಮೊದಲು ಹಕ್ಕಿ ಜ್ವರದ ಸೋಂಕು ಪತ್ತೆಯಾಗಿತ್ತು ಆದ್ರೆ ಈಗ ಮೊದಲ ಬಾರಿಗೆ ಹಂದಿಗಳಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹಂದಿಯಲ್ಲಿ ಮೊದಲ ಬಾರಿಗೆ ಹಕ್ಕಿ ಜ್ವರ ಅಥವಾ H5N1 ಪ್ರಕರಣವನ್ನು ಅಮೆರಿಕ ದೃಢಪಡಿಸಿದೆ. ಯುಸ್‌ನ ಒರೆಗಾನ್ ಪ್ರದೇಶದಲ್ಲಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಈ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ.
ಈ ಫಾರ್ಮ್‌ನಲ್ಲಿರುವ ಪ್ರತಿ 5 ಹಂದಿಗಳಲ್ಲಿ ಒಂದು ಹಂದಿ ಹಕ್ಕಿ ಜ್ವರಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಆದ್ರೆ ಸೋಂಕು ಹರಡಿರುವ ಹಂದಿ ಹಾಗೂ ಸಾಮಾನ್ಯ ಹಂದಿಗಳ ನಡುವೆ ಕಣ್ಣೋಟದಿಂದ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ ಹಂದಿಗಳು ಈ ಸೋಂಕಿನ ಲಕ್ಷಣಗಳನ್ನು ತೋರಿಸುವುದೇ ಇಲ್ಲವಂತೆ. ಹೀಗಾಗಿ ಪರೀಕ್ಷಗೆ ಒಳಪಡಿಸಲಾದ 5 ಹಂದಿಗಳನ್ನು ಸಾಯಿಸಲು ಅನುಮತಿ ನೀಡಲಾಗಿದೆ. ಏಕೆಂದರೆ ಒಂದು ಹಂದಿಯಿಂದ ಉಳಿದೆಲ್ಲಾ ಹಂದಿಗಳಿಗೂ ಈ ಸೋಂಕು ಬಹುಬೇಗ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಂದಿ ಜ್ವರ ಹಾಗೂ ಕೋಳಿ ಜ್ವರದಲ್ಲಿ ಸಾಮ್ಯತೆ ಇದ್ದರೂ ಅದರಿಂದ ಉಂಟಾಗುವ ತೀವ್ರತೆ ಮಾತ್ರ ಬೇರೆ ರೀತಿಯಲ್ಲಿದೆ. ಹಂದಿ ಜ್ವರವು ಮಾನವರಿಗೆ ಹರಡುವ ಪ್ರಮಾಣಕ್ಕ ಹೋಲಿಸಿದರೆ ಹಕ್ಕಿ ಜ್ವರದ ಪ್ರಮಾಣ ಕಡಿಮೆಯಾಗಿದೆ, ಹಾಗೆ ಹಂದಿ ಜ್ವರದ ಪರಿಣಾಮ ಕೂಡ ಕಡಿಮೆ.
ಮಾನವರಿಗೆ ಹರಡುವ ಸಾಧ್ಯತೆ ಇದೆಯೇ?
ಹಂದಿಗಳಿಂದ ಈ ಹಕ್ಕಿ ಜ್ವರದ ಸೋಂಕು ಮಾನವರಿಗೆ ಹರಡುವ ಸಾಧ್ಯತೆ ಅಧಿಕವಾಗಿದೆ. ಹಂದಿ ಸಂಪರ್ಕ, ಮಾಂಸ ಸೇವನೆ, ಎಂಜಲು ತಾಕುವುದು, ಉಣ್ಣೆಯ ಕಾರಣದಿಂದ ಹರಡಬಹುದು ಎನ್ನಲಾಗಿದೆ. ಆದ್ರೆ ಮನುಷ್ಯರಿಂದ ಮನುಷ್ಯರಿಗೆ ಹಕ್ಕಿ ಜ್ವ ಹರಡಿರುವ ಯಾವುದೇ ಪ್ರಕರಣಗಳಿಲ್ಲ. ಕ್ಯಾಲಿಫೋರ್ನಿಯಾದಲ್ಲಿ 16 ಮಂದಿಗೆ ಹಕ್ಕಿ ಜ್ವರ ಹರಡಿರುವುದು ವರದಿಯಾಗಿದೆ. ಅದರಲ್ಲಿ ಇಬ್ಬರು ಕೋಳಿ ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ಈ ವರ್ಷ ಒಟ್ಟು 39 ಮಂದಿ ಹಕ್ಕಿ ಜ್ವರಕ್ಕೆ ಒಳಗಾಗಿದ್ದಾರೆ.
ಹಕ್ಕಿ ಜ್ವರ ಹಾಗೂ ಹಂದಿ ಜ್ವರದ ಲಕ್ಷಣಗಳ ನಡುವೆ ಕೆಲವು ಸಾಮ್ಯತೆ ಇದೆ. ಜ್ವರ, ಕೆಮ್ಮು, ಗಂಟಲು ಕೆರೆತ ಹಾಗೂ ಮೈ ಚಳಿಯಾಗುವುದು. ಏವಿಯನ್ ಇನ್‌ಫ್ಲುಂಜಾ ಕಣ್ಣಿನ ತೊಂದರೆ, ಉಸಿರಾಟದ ತೊಂದರೆ, ನ್ಯೂಮೋನಿಯಾ ಉಂಟು ಮಾಡಬಹುದು ಸೇರಿ ಕೆಲವು ಪ್ರಮುಖ ಲಕ್ಷಣಗಳು ಎರಡೂ ಸೋಂಕಿಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಹಕ್ಕಿ ಜ್ವರಕ್ಕೆ oseltamivir (Tamiflu) and zanamivir (Relenza) ಎಂಬ ಚುಚ್ಚು ಮದ್ದು ನೀಡಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications