Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ಕಾಲರಾ ಕಾಯಿಲೆಗೆ ಲಸಿಕೆ ಕಂಡು ಹಿಡಿದ ಭಾರತ್ ಬಯೋಟೆಕ್.! ಪರೀಕ್ಷೆಗಳೂ ಪೂರ್ಣ!
ಹಕ್ಕಿ ಜ್ವರ, H1N1, ಡೆಂಗ್ಯೂ ಹೀಗೆ ಹತ್ತಾರು ವೈರಲ್ ಕಾಯಿಲೆಗಳು ಹರಡುತ್ತಿರುವ ಕಾಲದಲ್ಲಿ ಕಾಲಾರ ಎಂಬುದು ಸಹ ಕಾಡಲು ಆರಂಭಿಸುತ್ತದೆ. ಕೆಲವ ವರ್ಷದ ಹಿಂದೆ ಕಾಲಾರ ಇಡೀ ದೇಶದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಅದ್ರಲ್ಲೂ ಕೋವಿಡ್ ವೈರಸ್ ಅಬ್ಬರದ ನಡುವೆ ಕಾಲಾರ ಇನ್ನಿಲ್ಲದಂತೆ ಕಾಟ ಕೊಟ್ಟಿತ್ತು.
ಜನರು ಬೀದಿ ಬದಿಯ ಆಹಾರಗಳನ್ನು ಸೇವಿಸುವುದು, ಆಹಾರ, ನೀರು ಹೀಗೆ ಹಲವು ಮೂಲಗಳಿಂದ ಈ ಕಾಯಿಲೆ ಹರಡುತ್ತದೆ. ಮೊದಲಿಗೆ ವಾಂತಿ-ಭೇದಿ ಶುರುವಾಗುತ್ತದೆ , ಇದನ್ನು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ ಉಂಟಾಗುತ್ತದೆ. ಇದಿಷ್ಟೇ ಅಲ್ಲ ಕಾಲಾರಕ್ಕೆ ಹಲವು ಲಕ್ಷಣಗಳಿದ್ದವು. ಕೆಲವರು ಕಾಲಾರ ಬಂದಿದೆ ಎಂದು ತಿಳಿಯದೆಯೇ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಇದು ಅಭಿವೃದ್ಧಿಯಾಗುತ್ತಿತ್ತು.

ಕಾಲಾರ ನಗರ ಪ್ರದೇಶದ ಕಾಯಿಲೆ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಇದು ಪ್ರತಿ ಹಳ್ಳಿಗೂ ತಲುಪಿದೆ. ಸುಚಿತ್ವ ಇಲ್ಲದ ಕಡೆ ಬಹುಬೇಗ ಇದು ಹರಡುತ್ತಿತ್ತು. ಈವರೆಗೆ ಕಾಲರಾಗೆ ಸೂಕ್ತ ಚಿಕಿತ್ಸೆಯ ಅಗತ್ಯವಂತು ಇತ್ತು. ಆದರೆ ಈಗ ಭಾರತೀಯ ಸಂಶೋದಕರ ತಂಡ ಕಾಲರಾಗೆ ಮೊಟ್ಟ ಮೊದಲ ಲಸಿಕೆ ಹೊರತರಲು ಮುಂದಾಗಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಿಮಿಟೆಡ್ ಕಾಲರಾ ಲಸಿಕೆ (OCV) ಹಿಲ್‌ಚೋಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಲಸಿಕೆಯನ್ನು ಹಿಲ್‌ಮನ್ ಲ್ಯಾಬೋರೇಟರೀಸ್, ಗೋಥೆನ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಗೊಟೊವಾಕ್ಸ್ ಎಬಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
200 ಮಿಲಿಯನ್ ಡೋಸ್‌ಗಳ ಸಂಯೋಜಿತ ಸಾಮರ್ಥ್ಯವನ್ನು ಹೊಂದಿರುವ ಹೈದರಾಬಾದ್ ಮತ್ತು ಭುವನೇಶ್ವರದಲ್ಲಿರುವ ಭಾರತ್ ಬಯೋಟೆಕ್‌ನ ಘಟಕಗಳಲ್ಲಿ ಹಿಲ್‌ಚೋಲ್, ಸಿಂಗಕ್ ಸ್ಟ್ರೈನ್ ಒಸಿವಿ (ಕಾಲರಾ ವ್ಯಾಕ್ಸಿನ್) ಅನ್ನು ತಯಾರಿಸಲಾಗುತ್ತದೆ. ಜಾಗತಿಕ ಬೇಡಿಕೆಯ ಅನುಗುಣವಾಗಿ ವಾರ್ಷಿಕ ಸುಮಾರು 100 ಮಿಲಿಯನ್ ಕಾಲರಾ ಲಸಿಕೆ ಪೂರೈಕೆಯಾಗುತ್ತಿದ್ದು, 40 ಮಿಲಿಯನ್ ಡೋಸ್ ವಾರ್ಷಿಕವಾಗಿ ಕೊರತೆ ಕಂಡುಬಂದಿದೆ ತಿಳಿಸಿದೆ.
ಈ ಕೊರತೆಯನ್ನು ನೀಗಿಸಲು ಹೈದರಾಬಾದ್‌ನ ಈ ಘಟಕ ನೆರವಾಗಲಿದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಶಿಶುಗಳಿಂದ ಹಿಡಿದು ಎಲ್ಲರಿಗೂ ಈ ಲಸಿಕೆ ನೀಡಬಹುದು. ಈಗಾಗಲೇ 3ನೇ ಹಂತದ ಅಧ್ಯಯನ ಹಾಗೂ ಬಹುಹಂತದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹಿಲ್‌ಕೋಲ್ ಲಸಿಕೆಯು ಸುರಕ್ಷಿತ ಇಮ್ಯುನೊಜೆನಿಸಿಟಿಯನ್ನು ದೃಢಪಡಿಸಿದೆ. ಜೊತೆಗೆ ಈಗಾಗಲೇ ಇರುವ ಕಾಲರಾ ಲಸಿಕೆಗಳಿಗೆ ಹೋಲಿಸಿದರೆ ಸಾರ್ವಜನಿಕ ಬಳಕೆಗೆ ಇದು ಅತ್ಯಂತ ಸುರಕ್ಷಿತ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
2021 ರಿಂದ ಕಾಲರಾ ಹೆಚ್ಚಾಗುತ್ತಿದೆ. ಈ ರೋಗವು ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ಹೊಂದಿದ್ದರೂ, ಪ್ರಕರಣಗಳು ಮತ್ತು ಸಾವುಗಳು ನಿರಂತರವಾಗಿ ಹೆಚ್ಚುತ್ತಿವೆ. 2023 ರಿಂದ ಈ ವರ್ಷದ ಮಾರ್ಚ್ ವರೆಗೆ ಜಾಗತಿಕವಾಗಿ 31 ದೇಶಗಳಲ್ಲಿ 8,24,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇದು ಲಸಿಕೆ ಕೊರತೆಯ ಕಾರಣದಿಂದಾಗಿ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿರುವುದು ಸಹ ನೋಡಬಹುದು.
ಕಾಲರಾ ರೋಗ ಲಕ್ಷಣಗಳೇನು?
ಸೋಂಕಿತನ ಮಲದಿಂದ , ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ಬೇಗ ಹರಡುತ್ತದೆ. ಕಾಲಾರ ಬಂದಿರುವ ವ್ಯಕ್ತಿಯ ಜೊತೆಗೆ ಕಾಲ ಕಳೆದರು ಈ ವೈರಸ್ ಹರಡುತ್ತದೆ. ಕೆಲವು ಪ್ರಕರಣದಲ್ಲಿ ವಿಪರೀತ ಜ್ವರ ಕಾಣಿಸಿಕೊಳ್ಳಬಹುದು. ಆದರೆ ಕಾಲಾರ ಪ್ರಮುಖ ಲಕ್ಷಣವೆಂದರೆ ಮೊದಲಿಗೆ ವಾಂತಿ-ಭೇದಿ ಶುರುವಾಗುತ್ತದೆ. ಹೀಗಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು, ನಿಶಕ್ತಿ, ಆಯಾಸ, ಕೈ ಕಾಲು ನೋವು ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷಿಸಿದರೆ ಸಾವು ಸಹ ಬರುವ ಸಾಧ್ಯತೆ ಇರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications