Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಬೆಂಗಳೂರಿಗೆ ಕಾಲಿಟ್ಟ ಚೀನಾದ HMPV ವೈರಸ್..! 8 ತಿಂಗಳ ಮಗುವಿಗೆ ಸೋಂಕು..!
ಇಡೀ ವಿಶ್ವಕ್ಕೆ ಕೋವಿಡ್ ಎಂಬ ಮಹಾಮಾರಿಯ ಕೊಡುಗೆ ನೀಡಿದ್ದ ಚೀನಾದಲ್ಲಿ ಹೊಸದೊಂದು ಅಪಾಯಕಾರಿ ವೈರಸ್ ಹರಡಿದೆ ಎಂಬ ಸುದ್ದಿ ಹರಿದಾಡುತ್ತಿದೆ, ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತಂತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಚೀನಾದಲ್ಲಿ ಏನಾಗುತ್ತಿದೆ.? ಅಲ್ಲಿ ನಿಜವಾಗಿಯೂ ವೈರಸ್ ಹಡುತ್ತಿದೆಯೇ ಎಂಬುದು ದೊಡ್ಡ ರಹಸ್ಯವಾಗಿ ಉಳಿದಿದೆ.
ಇನ್‌ಫ್ಲುಯಂಜಾ ಎ, HMPV, ವೈರಸ್ ಚೀನಾದಲ್ಲಿ ದಾಳಿ ಇಡುತ್ತಿದೆ ಎಂಬ ಆತಂಕ ವಿಶ್ವದೆಲ್ಲೆಡೆ ಈಗ ಸುದ್ದಿಯಾಗಿದೆ, ಆದ್ರೆ ಈ ನಡುವೆ ಈ ಚೀನಾ ವೈರಸ್ ಈಗ ಕರ್ನಾಟಕದಲ್ಲೂ ವರದಿಯಾಗಿದೆ. ಬೆಂಗಳೂರಿನಲ್ಲಿ ಮಗುವಿನಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ವರದಿಗಳಾಗಿವೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಹೆಚ್‌ಎಂಪಿವಿ ವೈರಸ್ ಇರುವುದು ಪತ್ತೆಯಾಗಿದೆ. ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಆದ್ರೆ ಈ ವೈರಸ್ ಮೂಲ ಪತ್ತೆಯಾಗಿಲ್ಲ. ಹಾಗೆ ಸರ್ಕಾರಿ ಪ್ರಯೋಗಾಲಯದಲ್ಲಿ ಮಾದರಿಯ ಪರೀಕ್ಷೆ ನಡೆದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಖಾಸಗಿ ಆಸ್ಪತ್ರೆಯಿಂದ ವರದಿಗಳು ಬಂದಿವೆ ಮತ್ತು ಖಾಸಗಿ ಆಸ್ಪತ್ರೆಯ ಪರೀಕ್ಷೆಗಳನ್ನು ನಾವು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
HMPV ಅಥವಾ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಸಾಮಾನ್ಯವಾಗಿ ಮಕ್ಕಳಲ್ಲಿ ಪತ್ತೆಯಾಗುತ್ತದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೀವ್ರ ಜ್ವರ ಕಾರಣಕ್ಕೆ ದಾಖಲಾಗಿದ್ದ ಈ ಮಗುವಿನ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಗುವಿನ ರಕ್ತದಲ್ಲಿ ಹೆಚ್‌ಎಂಪಿವಿ ವೈರಸ್ ಪತ್ತೆ ಆಗಿದೆ ಎನ್ನಲಾಗಿದೆ. ಹಾಗೆ ಚೀನಾದಲ್ಲಿರುವ ವೈರಸ್ ಹಾಗೂ ಭಾರತದಲ್ಲಿ ಪತ್ತೆಯಾಗಿರುವ ವೈರಸ್ ಒಂದೇ ಆಗಿದೆಯೇ ಅಥವಾ ರೂಪಾಂತರವಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ವೈರಸ್ ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಪ್ರವಾಸದ ಹಿನ್ನೆಲೆ ಇಲ್ಲ. ಹೀಗಿದ್ದರೂ ಸೋಂಕು ತಗುಲಿರುವುದು ಹೇಗೆ ಎಂಬ ಕೂತೂಹಲ ಮೂಡಿದೆ. ಈ ಕುರಿತು ಪರಿಶೀಲನೆ ಕೂಡ ನಡೆಯುತ್ತಿದೆ.
ಮಲೇಷ್ಯಾದಲ್ಲೂ ಸೋಂಕು ಪತ್ತೆ
ಮಲೇಷ್ಯಾದಲ್ಲಿ ಏಕಾಏಕಿ ಈ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಪ್ರಕರಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.45ರಷ್ಟು ಏರಿಕೆ ಕಂಡಿದೆ ಎಂದು ಅಲ್ಲಿನ ವರದಿ ಹೇಳಿದೆ. ಮಲೇಷ್ಯಾದಲ್ಲಿ 2023ರಲ್ಲಿ 225 HMPV ಪ್ರಕರಣ ವರದಿಯಾಗಿತ್ತು, ಇದು 2024ರಲ್ಲಿ 327ಕ್ಕೆ ತಲುಪಿತ್ತು ಆದ್ರೆ 2025ರ ಜನವರಿಯಲ್ಲೇ ಈ ಪ್ರಕರಣಗಳ ಸಂಖ್ಯೆ ಶೇ.45ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಮಲೇಷ್ಯಾದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಏನಿದು HMPV ವೈರಸ್?
ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿರುವ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಥವಾ HMPV ಹೊಸದಾಗಿ ಕಂಡುಬಂದಿರುವ ವೈರಸ್ ಅಲ್ಲ. ಇದು 2001ರಲ್ಲಿ ಪತ್ತೆ ಮಾಡಲಾಗಿರುವ ವೈರಸ್ ಆಗಿದೆ. ಇದು ಹಲವು ರೀತಿಯ ಉಸಿರಾಟ ಸಂಬಂಧಿ ಸಮಸ್ಯೆಯಾಗಿ ಕಾಡುವ ವೈರಸ್ ಆಗಿದೆ.
ಹ್ಯೂಮನ್ ಮೈಕ್ರೋಪ್ಲಾಸ್ಮಾ ನ್ಯುನೋನಿಯಾ ಸೋಂಕು ಚೀನಾದ್ಯಂತ ಹರಡುತ್ತಿರುವ ನಡುವೆಯೇ ಸೋಂಕು ತಡೆಗೆ ಮಾಸ್ಕ್ ಧರಿಸುವುದು ಕೈಗಳನ್ನು ಸಾಬೂನು ಹಾಕಿ ತೊಳೆಯುವುದು ಕಡ್ಡಯಾವಾಗಿ ಅನುಸರಿಸುವಂತೆ ಚೀನಾ ಸರ್ಕಾರ ಸೂಚಿಸಿದೆ ಎಂದು ವರದಿಗಳಿವೆ. ಈ HMPV ವೈರಸ್ ತಗುಲಿದರೆ ಅಂತವರಲ್ಲಿ ಶೀತ, ಕೆಮ್ಮು, ಜ್ವರ, ಮೂಗು ಕಟ್ಟುವುದು, ತಲೆ ನೋವು, ಉಸಿರಾಟದ ಸಮಸ್ಯೆ ಹೊಂದಿರುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಪ್ರಾಣಕ್ಕೆ ಹಾನಿಯಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications