Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯೋಗ ನಿದ್ರೆ ಮಾಡಿದರೆ ನಿದ್ರಾಹೀನತೆ, ಮಾನಸಿಕ ಸಮಸ್ಯೆ ಇರಲ್ಲ, ಆದ್ರೆ ಈ ನಿಯಮ ಅನುಸರಿಸಬೇಕು?
ಯೋಗ ನಿದ್ರೆ ಮನಸ್ಸಿಗೆ-ದೇಹಕ್ಕೆ ವಿಶ್ರಾಂತಿ ನೀಡುವ ಅತ್ಯುತ್ತಮ ಪರಿಹಾರ. ಯೋಗ ನಿದ್ರೆ ಮಾಡಿ ಎದ್ದಾಗ ನಮ್ಮೆಲ್ಲಾ ಮಾನಸಿಕ ಒತ್ತಡ ಕಡಿಮೆಯಾಗಿರುವುದು ನಮ್ಮ ಅನುಭವಕ್ಕೆ ಬರುತ್ತದೆ, ಮನಸ್ಸಿಗೆ, ದೇಹಕ್ಕೆ ಹೊಸ ಹುಮ್ಮಸ್ಸು ಮರಳುತ್ತದೆ.
ಈ ಯೋಗ ನಿದ್ರೆಯನ್ನು ಎಲ್ಲರೂ ಮಾಡಬಹುದೇ, ಈ ಯೋಗ ನಿದ್ರೆ ಮಾಡಲು ಕೆಲವೊಂದು ನಿಯಮಗಳನ್ನು ಅನುಸರಿಸಬೇಕೇ? ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ:

ಯೋಗ ನಿದ್ರೆ ಯಾರು ಬೇಕಾದರೂ ಮಾಡಬಹುದು. ಯೋಗದಲ್ಲಿ ಹಲವಾರು ಆಸನಗಳಿವೆ, ಎಲ್ಲಾ ಆಸನಗಳನ್ನು ಎಲ್ಲರಿಗೆ ಮಾಡಲು ಸಾಧ್ಯವಿಲ್ಲ, ಆದರೆ ಯೋಗ ನಿದ್ರೆ ಆ ರೀತಿಯಲ್ಲ, ಯಾರು ಬೇಕಾದರೂ ಯೋಗ ನಿದ್ರೆಯನ್ನು ಅಭ್ಯಾಸ ಮಾಡಿ ವಿಶ್ರಾಂತಿಯನ್ನು ಪಡೆಯಬಹುದು.
ಯೋಗ ನಿದ್ರೆಯನ್ನು ನೀವು ಮಾಡುವುದಾದರೆ ಸರಿಯಾದ ರೀತಿಯಲ್ಲಿ ಮಾಡಬೇಕು. ಯೋಗ ನಿದ್ರೆಗೆ ಜಾರುವ ಮುನ್ನ ಸ್ವಲ್ಪ ವ್ಯಾಯಾಮ ಮಾಡಬೇಕು, ಕಠಿಣ ಯೋಗಾಸನಗಳನ್ನು ಮಾಡಲು ಸಾಧ್ಯವಾಗದಿದ್ದರೆ ಸರಳ ಯೋಗಾಸನ ಮಾಡಿ, ಇಲ್ಲದಿದ್ದರೆ ವಾಕ್ ಮಾಡಿ ಬಂದ ಮೇಲೆ ಕೂಡ ನೀವು ಯೋಗ ನಿದ್ರೆ ಅಭ್ಯಾಸ ಮಾಡಬಹುದು. ಯೋಗ ನಿದ್ರೆ ಎಂದರೆ ನಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ಗಮನಹರಿಸಬೇಕು, ವಿಶ್ರಾಂತಿಗೆ ಜಾರಬೇಕು, ಆದರೆ ನಿದ್ದೆ ಮಾಡಬಾರದು.
ಹೀಗೆ ಯೋಗ ನಿದ್ರೆಗೆ ಸಂಪೂರ್ಣ ಜಾರುವಾಗ ನಮಗೆ ಹೊರಗಿನ ಯಾವ ಶಬ್ದವೂ ಕಿವಿ ಮೇಲೆ ಬೀಳುವುದಿಲ್ಲ, ಮನಸ್ಸು ಒಂದು ಕಡೆ ಕೇಂದ್ರೀಕೃತವಾಗಿರುತ್ತದೆ, ಈ ರೀತಿ ಯೋಗ ನಿದ್ರೆ ಮಾಡುವಾಗ ಒಬ್ಬರು ಅದರ ಬಗ್ಗೆ ಹೇಳುವಂತಿರಬೇಕು. ಇಲ್ಲದಿದ್ದರೆ ಆಧುನಿಕ ಟೆಕ್ನಾಲಜಿ ಮೂಲಕ ಕೂಡ ಇನ್‌ಸ್ಟ್ರಕ್ಷನ್ ಪಡೆಯಬಹುದು.
ಹೀಗೆ ವಿಶ್ರಾಂತಿಯ ಭಾವಕ್ಕೆ ಜಾರಿದ ಮೇಲೆ ನಂತರ ನಿಧಾನಕ್ಕೆ ನಮ್ಮ ದೇಹದ ಒಂದೊಂದೇ ಭಾಗದ ಮೇಲೆ ಗಮನ ಹರಿಸಬೇಕು, ಕಾಲಿನ ಬೆರಳುಗಳು ಎಂದಾಗ ಕಾಲಿನ ಬೆರಳು ಅಲ್ಲಾಡಿಸಬೇಕು, ಕೈ ಬೆರಳು ಎಂದಾಗ ಕೈ ಬೆರಳನ್ನು ಅಲ್ಲಾಡಿಸಬೇಕು, ಹೀಗೆ ಸಂಪೂರ್ಣವಾಗಿ ಎಚ್ಚರವಾಗಬೇಕು, ಆದರೆ ಕಣ್ಣುಗಳನ್ನು ತೆಗೆಯಬಾರದು, ನಿಧಾನಕ್ಕೆ ಎದ್ದು ಕೂತು ಪ್ರಾರ್ಥನೆ ಮಾಡಿ ಕೈಗಳನ್ನು ಉಜ್ಜಿ ಆ ಬಿಸಿಯನ್ನು ಕಣ್ಣಿಗೆ ಒತ್ತಿ ನಂತರ ಅಂಗೈಯನ್ನು ಕಣ್ತೆರೆದು ನೋಡಬೇಕು. ಈ ಯೋಗ ನಿದ್ರೆ 15 ನಿಮಿಷ ಮಾಡಿದರೆ ತುಂಬಾನೇ ವಿಶ್ರಾಂತಿ ಅನಿಸುವುದು, ನಿದ್ದೆ ಕಡಿಮೆ ಮಾಡುವವರು ಇದನ್ನು ಅಭ್ಯಾಸ ಮಾಡಿದರೆ ದೇಹಕ್ಕೆ ತುಂಬಾನೇ ವಿಶ್ರಾಂತಿ ಸಿಗುವುದು.
ಮಾನಸಿಕ ಒತ್ತಡ ಕಡಿಮೆ ಮಾಡಲು ಅತ್ಯುತ್ತಮವಾದ ಪರಿಹಾರ
ತುಂಬಾ ಜನರು ಅತಿಯಾದ ಮಾನಸಿಕ ಒತ್ತಡದಿಂದಾಗಿ ನಿದ್ದೆ ಮಾತ್ರೆಯ ಮೊರೆ ಹೋಗುತ್ತಾರೆ, ಅಲ್ಲದೆ ಅತಿಯಾದ ಮಾನಸಿಕ ಒತ್ತಡದಿಂದಾಗಿ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗುವುದು, ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಅವಶ್ಯಕ . ಅದಕ್ಕೆ ಈ ಯೋಗ ನಿದ್ರೆ ಸಹಾಯ ಮಾಡುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಆ ಸಮಸ್ಯೆಯಿಂದ ಹೊರ ಬರಲು ಇದು ತುಂಬಾನೇ ಪ್ರಯೊಜನಕಾರಿ.
ಮಾನಸಿಕ ಆರೋಗ್ಯ ಚೆನ್ನಾಗಿದೆ
ಯೋಗ ನಿದ್ರೆ ಮನಸ್ಸಿನಲ್ಲಿದ್ದ ಭಯ, ಬೇಡ ಚಿಂತೆ ಎಲ್ಲವನ್ನೂ ಹೊರ ಹಾಕುತ್ತದೆ, ಹೀಗಾಗಿ ಮನಸ್ಸಿಗೆ ವಿಶ್ರಾಂತಿಯ ಅನುಭವ ಉಂಟಾಗುವುದು, ಇದರಿಂದಾಗಿ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ, ಏಕಾಗ್ರತೆ ಹೆಚ್ಚಾಗುವುದು, ಯೋಚನಾ ಸಾಮರ್ಥ್ಯ ಹೆಚ್ಚಿಸುವುದು.
ಈ ಯೋಗ ನಿದ್ರೆ ಅಭ್ಯಾಸ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿನ ಗೊಂದಲ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
