Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೌಂದರ್ಯ ವೃದ್ಧಿಗೆ ಮೈಕ್ರೋಬ್ಲೇಡಿಂಗ್ ಮಾಡಿಸಿದ ಇಬ್ಬರು ಮಹಿಳೆಯರಿಗೆ ಬಂತು ತುಂಬಾನೇ ಅಪಾಯಕಾರಿಯಾದ ಶ್ವಾಸಕೋಶದ ಸಮಸ್ಯೆ
ಎಷ್ಟೋ ಸಲ ಈ ಸೌಂದರ್ಯ ವೃದ್ಧಿಗೆ ಮಾಡುವ ಬ್ಯೂಟಿ ಟ್ರೀಟ್ಮೆಂಟ್‌ನಿಂದ ಜೀವಕ್ಕೆ ಅಪಾಯ ಉಂಟಾಗಿರುವ ಅನೇಕ ಪ್ರಕರಣಗಳನ್ನು ಕೇಳುತ್ತಿರುತ್ತೇವೆ.
ಫೇಶಿಯಲ್ ಮಾಡಿ ಮದುಮಗಳ ಮುಖ ಹಾಳಾಗಿ ಮದುವೆ ನಿಂತು ಹೋಗಿರುವುದು, ಅಂದ ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಲು ಹೋಗಿ ಇರುವ ಅಂದ ಕೆಡಿಸಿಕೊಂಡು ವಿಕಾರವಾಗಿದ್ದು, ವ್ಯಾಂಪೈರ್ ಫೇಶಿಯಲ್ ಮಾಡಿಸಿ 3 ಮಹಿಳೆಯರಿಗೆ ಹೆಚ್‌ಐವಿ ಬಂದಿದ್ದು ಹೀಗೆ ಅನೇಕ ಪ್ರಕರಣಗಳು ವರದಿಯಾಗಿವೆ.

ಈಗ ಮೈಕ್ರೋಬ್ಲೇಡಿಂಗ್ ಮಾಡಿ ಶ್ವಾಸಕೋಶದ ಆರೋಗ್ಯಕ್ಕೆ ಹಾನಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರಿಗೆ ಮೈಕ್ರೋ ಬ್ಲೇಡಿಂಗ್ ಮಾಡಿ ಶ್ವಾಸಕೋಶದ ಕಾಯಿಲೆ ಬಂದಿದೆ.
ಈ ಮೈಕ್ರೋಬ್ಲೇಡಿಂಗ್ ಎಂದರೇನು?
ಇದನ್ನು ತುಂಬಾ ಜನರು ಮಾಡಿಸುತ್ತಾರೆ, ಈಗಂತೂ ಟ್ರೆಂಡ್ ಆಗಿದೆ. ಹುಬ್ಬುಗಳನ್ನು ಫಿಲ್ಲಿಂಗ್ ಮಾಡುವ ಬ್ಯೂಟಿ ಟ್ರೀಟ್ಮೆಂಟ್ ಇದಾಗಿದೆ. ಇದನ್ನು ಮಾಡಿಸಿದರೆ 12 ತಿಂಗಳವರೆಗೆ ಐಬ್ರೋ ಶೇಪ್ ಅಷ್ಟೇ ಆಕರ್ಷಕವಾಗಿರುತ್ತದೆ. ನಂತರ ಮತ್ತೆ ಮಾಡಿಸಬೇಕು.
ಇದನ್ನು ಮಾಡಿಸಿದರೆ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಐಬ್ರೋ ಶೇಪಿಂಗ್ ಮಾಡುವಂತೆಯೂ ಇಲ್ಲ , ಒಂದು ವರ್ಷದವರೆಗೆ ಐಬ್ರೋ ತುಂಬಾ ಚೆನ್ನಾಗಿ ಕಾಣುತ್ತದೆ, ಹಾಗಾಗಿ ಸೆಲೆಬ್ರಿಟಿಗಳಿಂದ ಹಿಡಿದು ತುಂಬಾ ಜನರು ಈ ಮೈಕ್ರೋಬ್ಲೇಡಿಂಗ್ ಮಾಡಿಸುತ್ತಾರೆ.
ಇದು ಒಂದು ರೀತಿ ಟ್ಯಾಟೂ ಮಾಡುವ ರೀತಿ, ನೋಡಿದರೆ ಶೇಪ್ ನೈಸರ್ಗಿಕವಾಗಿ ಕಾಣುತ್ತದೆ, ಇದನ್ನು ಮಾಡುವ ಮುನ್ನ ಹುಬ್ಬು ಮರಗಟ್ಟುವ ಕ್ರೀಮ್ ಹಚ್ಚಿ ನಂತರ ಟ್ಯಾಟೂ ರೀತಿ ಮಾಡಲಾಗುವುದು, ಇದನ್ನು ಮಾಡಿಸಲು 2 ಗಂಟೆ ಬೇಕಾಗುತ್ತದೆ. ಒಮ್ಮೆ ಮಾಡಿಸಿದರೆ 12 ತಿಂಗಳು ಹುಬ್ಬು ಹಾಗೆಯೇ ಇರುತ್ತದೆ.
ಮೈಕ್ರೋಬ್ಲೇಡಿಂಗ್ ಮಾಡಿಸಿದಾಗ ಮುಖದ ಅಂದ ಹೆಚ್ಚಿಸುತ್ತದೆ
ಈ ಮೈಕ್ರೋಬ್ಲೇಡಿಂಗ್ ಮಾಡಿಸಿದಾಗ ಮುಖದ ಸೌಂದರ್ಯ ಹೆಚ್ಚಾಗುವುದು. ಏಕೆಂದರೆ ಹುಬ್ಬಿನ ಶೇಪ್ ತುಂಬಾ ಚೆನ್ನಾಗಿ ಕಾಣುವುದು, ಹುಬ್ಬು ಆಕರ್ಷಕವಾಗಿದ್ದರೆ ಮುಖದ ಅಂದ ಹೆಚ್ಚಾಗುವುದು, ಅದರಲ್ಲೂ ತೆಳು ಹುಬ್ಬು ಇದ್ದರೆ ಹುಬ್ಬು ಮಂದವಾಗಿ ಕಾಣಲು ಇದು ತುಂಬಾನೇ ಆಕರ್ಷಕ. ಕಪ್ಪಾದ ಹುಬ್ಬು ನಮ್ಮ ಮುಖದಲ್ಲಿ ಹೈಲೈಟ್ಸ್ ಆಗುವುದು.
ಮೈಕ್ರೋಬ್ಲೇಡಿಂಗ್‌ನಿಂದ ಇಬ್ಬರು ಮಹಿಳೆಯರಿಗೆ ಬಂದಿದೆ ಗಂಭೀರ ಶ್ವಾಸಕೋಶದ ಸಮಸ್ಯೆ
ದಿ ಸನ್ ರಿಪೋರ್ಟ್ ಪ್ರಕಾರ ಇಬ್ಬರು ಮಹಿಳೆಯರಿಗೆ ಸಿಸ್ಟೇಮಿಕ್ ಸಾರ್ಕೊಯಿಡೋಸಿಸ್ ಎಂಬ ಕಾಯಿಲೆ ಬಂದಿದೆ. ಇದರಿಂದ ಶ್ವಾಸಕೋಶ ಮಂದವಾಗುವುದು. ಇದರಿಂದ ಉಸಿರಾಟಕ್ಕೆ ತುಂಬಾನೇ ತೊಂದರೆಯಾಗುವುದು.
ಆ ಮಹಿಳೆಯರಿಗೆ ಮೈಕ್ರೋಬ್ಲೇಡಿಂಗ್ ಮಾಡಿಸಿದ ನಂತರ ಆರೇಂಜ್ ರೆಡ್ ಮಾರ್ಕ್ಸ್ ಬಂತು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅವರಲ್ಲಿ ಒಬ್ಬರು ಒಂದು ವರ್ಷದ ಹಿಂದೆ ಕೂಡ ಮೈಕ್ರೋಬ್ಲೇಡಿಂಗ್ ಮಾಡಿಸಿದ್ದರು, ಮತ್ತೊಬ್ಬರು 6 ವರ್ಷದ ಹಿಂದೆ ಮಾಡಿಸಿದ್ದರು.
ಇವರಿಗೆ ಉಸಿರಾಟದ ಸಮಸ್ಯೆ ಉಂಟಾದಾಗ ಎಕ್ಸ್‌ರೇ ತೆಗೆದು ನೋಡಿದರೆ ಅವರ ಶ್ವಾಸಕೋಶ ಮಂದವಾಗಿ ಉಸಿರಾಟದ ಸಮಸ್ಯೆ ಉಂಟಾಗಿತ್ತು ಇದನ್ನು ವೈದ್ಯಕೀಯ ಭಾಷೆಯಲ್ಲಿ 'systemic sarcoidosis ಎಂದು ಕರೆಯಲಾಗುವುದು. ಇದು ಶ್ವಾಸಕೋಶದ ಉರಿಯೂತದ ಸಮಸ್ಯೆಯಾಗಿದೆ, ಇದರಿಂದ ಉಸಿರಾಡಲು ತುಂಬಾನೇ ಕಷ್ಟವಾಗುವುದು.
ಇದೊಂದು ಅಟೊಇಮ್ಯೂನೆ ಸಮಸ್ಯೆ
ಇದೊಂದು ಅಟೊಇಮ್ಯೂನೆ ಸಮಸ್ಯೆಯಾಗಿದ್ದು ಶ್ವಾಸಕೋಶದಲ್ಲಿ ಕಂಡು ಬರುತ್ತದೆ, ಈ ಕಾಯಿಲೆ ಕಣ್ಣು, ತ್ವಚೆ, ಹೃದಯ, ಇತರ ಅಂಗಾಂಗಗಳಿಗೆ ಹಾನಿಯುಂಟು ಮಾಡುತ್ತದೆ.
ಸೌಂದರ್ಯ ಹೆಚ್ಚಿಸಬೇಕೆಂದು ನಾವೆಲ್ಲರೂ ಬಯಸುತ್ತೇವೆ, ಆದರೆ ನಮ್ಮ ಆರೋಗ್ಯಕ್ಕೆ, ಸೌಂದರ್ಯಕ್ಕೆ ಹಾನಿಯುಂಟು ಮಾಡುವ ಸೌಂದರ್ಯವರ್ಧಕ, ಬ್ಯೂಟಿ ಟ್ರೀಟ್ಮೆಂಟ್ ಇವುಗಳ ಬಗ್ಗೆ ಜಾಗ್ರತೆ. ನೀವು ಯಾವುದೇ ಸೌಂದರ್ಯವರ್ಧಕ ಚಿಕಿತ್ಸೆ ಮಾಡಿಸುವುದಾದರೆ ನೀವು ಅದರ ಅಡ್ಡಪರಿಣಾಮವಿದೆಯೇ ಎಂದು ನೋಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
