Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗ್ಯಾಸ್ ಸ್ಟೌವ್ ಪಕ್ಕದಲ್ಲಿ ಅಡುಗೆ ಎಣ್ಣೆ ಇಡುತ್ತೀರಾ..? ಈ ತಪ್ಪು ಎಂದಿಗೂ ಮಾಡಬೇಡಿ!
ಅಡುಗೆ ಮನೆಯಲ್ಲಿ ಯಾವವಸ್ತು ಎಲ್ಲಿಡಬೇಕು ಅನ್ನೋದನ್ನು ನಾವೇ ನಿರ್ಧರಿಸುತ್ತೇವೆ. ಒಮ್ಮೆ ಆ ವಸ್ತು ಇಟ್ಟ ಮೇಲೆ ಯಾವುದೇ ಕಾರಣಕ್ಕೂ ನಾವು ಆ ಸ್ಥಳ ಬದಲಾಯಿಸುವುದಿಲ್ಲ. ನಿತ್ಯ ಒಂದೇ ಜಾಗದಲ್ಲಿ ನಾವು ಆ ವಸ್ತು ಇಡಲು ಆರಂಭಿಸುತ್ತೇವೆ. ಇದರಿಂದ ಸಮಯ ಉಳಿಯಲಿದೆ, ಜೊತೆಗೆ ಅಗತ್ಯವಿದ್ದಾಗ ಹುಡುಕಬೇಕಾದ ಅನಿವಾರ್ಯತೆಯು ಇರುವುದಿಲ್ಲ.
ಆದರೆ ನೀವೇನಾದರು ಅಡುಗೆ ಎಣ್ಣೆಯನ್ನು ಗ್ಯಾಸ್ ಸ್ಟೌವ್ ಬಳಿ ಇಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಇಂದೇ ಅಭ್ಯಾಸ ಬಿಟ್ಟು ಆ ಜಾಗ ಬದಲಿಸಿ. ಏಕೆಂದರೆ ಅಡುಗೆ ಎಣ್ಣೆಯನ್ನು ಗ್ಯಾಸ್ ಸ್ಟೌವ್ ಬಳಿ ಇಡುವುದು ಕ್ಯಾನ್ಸರ್ ಸೇರಿ ಹಲವು ಅಪಾಯಗಳಿಗೆ ಕಾರಣವಾಗಬಹುದಂತೆ. ಹಾಗಾದ್ರೆ ಏನಿದು ಸಮಸ್ಯೆ? ಏನಿದು ತಜ್ಞರ ಆಘಾತಕಾರಿ ವಿಚಾರ ಎಂಬುದನ್ನು ನೋಡಿ.

ಎಣ್ಣೆ ಬಾಟಲಿಗಳನ್ನು ಗ್ಯಾಸ್ ಸ್ಟೌವ್ ಬಳಿ ಇಡುವುದರಿಂದಾಗಿ ಆಕ್ಸಿಡೀಕರಣದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ, ಇದು ಎಣ್ಣೆಯನ್ನು ರಾನ್ಸಿಡ್ ಆಗಿ ಮಾಡುತ್ತದೆ, ಈ ಅಂಶ ಕ್ಯಾನ್ಸರ್ ಜೀವಕೋಶಗಳ ಹುಟ್ಟಿಗೆ ಕಾರಣವಾಗಲಿದೆ.
ಎಣ್ಣೆ ಇಷ್ಟೊಂದು ವಿಷವಾಗೋದು ಹೇಗೆ?
ಅಡುಗೆ ಎಣ್ಣೆಗಳು ಹೆಚ್ಚಿನ ಕೊಬ್ಬಿನಂಶದಿಂದ ತುಂಬಿರುತ್ತವೆ, ಇದು ನೀವು ಬಾಟಲಿ ಅಥವಾ ಪ್ಯಾಕೆಟ್ ಅನ್ನು ತೆರೆದ ತಕ್ಷಣ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತವೆ. ಹೆಚ್ಚಿನ ಆಕ್ಸಿಡೀಕರಣದಿಂದಾಗಿ ವಾತಾವರಣದ ಆಮ್ಲಜನಕವು ಟ್ರೈಗ್ಲಿಸರೈಡ್ ಅಣುಗಳ ಕೊಬ್ಬಿನಾಮ್ಲ ಸರಪಳಿಯನ್ನು ಆಕ್ರಮಿಸುತ್ತದೆ. ರಾನ್ಸಿಡ್ ಎಣ್ಣೆಯು ನಿಮ್ಮ ದೇಹ ಸೇರುವುದರಿಂದಾಗಿ ಬಹುಬೇಗ ವಯಸ್ಸಾಗುವುದು, ಕೊಲೆಸ್ಟ್ರಾಲ್ ಹೆಚ್ಚಳವಾಗುವುದು, ಸ್ಥೂಲಕಾಯತೆ ಮತ್ತು ಅಗಾಧವಾದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಸ್ಟೌವ್ ಪಕ್ಕದಲ್ಲಿಡುವ ಎಣ್ಣೆಯು ಟೈಪ್-2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಜೊತೆಗೆ ಆಲ್ಜೈಮರ್ ಕಾಯಿಲೆಯ ಅಪಾಯ ಹೆಚ್ಚಾಗಲಿದೆ.
ಹಾಗಾದ್ರೆ ಅಡುಗೆ ಎಣ್ಣೆಯನ್ನು ಹೇಗೆ ಶೇಖರಿಸಿಡಬೇಕು
ಅಡುಗೆಗೆ ಬಳಸುವ ಎಣ್ಣೆಯನ್ನು ಎಲ್ಲರೂ ಕೈಗೆ ಸಿಗುವಂತಹ ಸ್ಥಳದಲ್ಲಿಯೇ ಇಡಲು ಬಯಸುತ್ತಾರೆ. ಏಕೆಂದರೆ ಎಲ್ಲಾ ಖಾದ್ಯಗಳ ಮಾಡಲು ಎಣ್ಣೆ ಅತ್ಯಗತ್ಯ ಆದರೆ ಎಲ್ಲಿ ಶೇಖರಿಸಿ ಇಡಬೇಕು.? ಹೇಗೆ ಇಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಣ್ಣೆಯನ್ನು ಒಮ್ಮೆ ಓಪನ್ ಮಾಡಿದ ಬಳಿಕ ಅದು ಗಾಳಿಯಾಡದಂತೆ ಸರಿಯಾಗಿ ಮುಚ್ಚಿಡಬೇಕು. ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಈ ಎಣ್ಣೆಯನ್ನು ಶಾಖದ ಮೂಲಗಳಿಂದ ದೂರವಿರುವ ಪ್ಯಾಂಟ್ರಿ ಅಥವಾ ಕ್ಯಾಬಿನ್‌ನಂತಹ ತಂಪಾದ ಸ್ಥಳದಲ್ಲಿ ಸಂಗ್ರಹಿಸಿ. ಗಾಳಿ ಮತ್ತು ಬೆಳಕಿನಿಂದ ರಕ್ಷಿಸಲು ಬಿಗಿಯಾಗಿ ಮುಚ್ಚಿಟ್ಟು ಅವುಗಳ ರಾಸಾಯನಿಕ ಕ್ರಿಯೆಗಳಿಗೆ ಒಳಗಾಗುವುದನ್ನು ತಪ್ಪಿಸಿ.
ಅದರಲ್ಲೂ ಆಲಿವ್ ಎಣ್ಣೆಯನ್ನು ಗಾಳಿ ಹಾಗೂ ಬೆಳಕಿಗೆ ಇಡುವುದನ್ನು ತಪ್ಪಿಸಬೇಕು. ಆಲಿವ್ ಆಯಿಲ್ ಅನ್ನು ಬೆಳಕು ಬೀಳದ ಸ್ಥಳದಲ್ಲಿ, ಶಾಖ ಇರುವ ಜಾಗದಿಂದ ದೂರ ಇಡಬೇಕು. ಹೀಗೆ ಮಾಡುವುದರಿಂದ 3 ತಿಂಗಳವರೆಗೆ ಈ ಎಣ್ಣೆ ಇಟ್ಟು ಬಳಸಬಹುದು.
ಇತ್ತ ಎಣ್ಣೆಗಳಲ್ಲಿ ಇತ್ತೀಚಿಗೆ ಕಲಬೆರಕೆ, ನಕಲಿ ಎಣ್ಣೆಯ ಕಾಟ ಹೆಚ್ಚಾಗಿದೆ. ಅದರಲ್ಲೂ ಎಲ್ಲಾ ಬ್ರಾಂಡೆಡ್ ಎಣ್ಣೆಗಳನ್ನೇ ನಕಲಿ ಮಾಡಿ ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ಎಣ್ಣೆಗಳು ಕಲಬೆರಕೆಯಿಂದ ಕೂಡಿರುವುದು ಜನರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇದರಿಂದ ಕ್ಯಾನ್ಸರ್, ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಾಗುವಿಕೆಯಂತಹ ಗಂಭೀರ ಸಮಸ್ಯೆಗಳ ಜೊತೆಗೆ ನಿತ್ಯವೂ ಕಾಡುವಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೂ ಇದು ಕಾರಣವಾಗುತ್ತಿದೆ.
ಆದ್ರೆ ಈ ಕಲಬೆರಕೆ ಎಣ್ಣೆಯನ್ನು ಪತ್ತೆ ಮಾಡುವುದು ಬಹಳ ಸುಲಭ. ಕೆಲವೇ ಕೆಲವು ಅಂಶದಿಂದ ನಾವು ಈ ಅಡುಗೆ ಎಣ್ಣೆ ಕಲಬೆರಕೆ ಆಗಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications