Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತೋಳದಂತೆ ಮಕ್ಕಳ ಜನನ: ಸ್ಪೈನ್‌ನಲ್ಲಿ 12ನೇ ಪ್ರಕರಣ ದಾಖಲು..! ಏಕೆ ಗೊತ್ತಾ?
ಕೆಲವೊಮ್ಮೆ ನಾವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗುತ್ತೇವೆ. ಮಕ್ಕಳು ಹುಟ್ಟುವಾಗ ಎರಡು ತಲೆ, ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಷೇಶ ಚೇತನ ಮಕ್ಕಳಾಗಿ ಜನಿಸುವುದು ನಾವು ನೋಡಿರುತ್ತೇವೆ. ಹಾಗೆ ವಿಜ್ಞಾನಕ್ಕೆ ಸವಾಲು ಎಸೆಯುವಂತಹ ರೀತಿಯಲ್ಲೂ ಕೆಲವು ಮಕ್ಕಳ ಜನನವಾಗುವುದನ್ನು ಕೂಡ ನಾವು ನೋಡಿರುತ್ತೇವೆ.
ಆದ್ರೆ ಈಗ ಸ್ಪೈನ್‌ನಲ್ಲಿ ತೋಳಗಳಂತೆ ಮಕ್ಕಳು ಜನಿಸುತ್ತಿರುವುದು ಆಘಾತದ ಜೊತೆಗೆ ಅಚ್ಚರಿಗೂ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ 12 ಪ್ರಕರಣಗಳು ವರದಿಯಾಗಿವೆ. ಮಕ್ಕಳು ವಿಚಿತ್ರವಾಗಿ ಕೂದಲುಗಳೊಂದಿಗೆ ಜನಿಸುವ ಒಂದು ಪ್ರಕಾರವಾಗಿದೆ ಮೈ ಮೇಲೆ ಕೂದಲು ತುಂಬಿಕೊಂಡು ಮಕ್ಕಳು ಜನಿಸುತ್ತವೆ. ಮುಖ, ತೋಳು, ಕೈ, ಕಾಲು, ಇಡೀ ದೇಹದಲೆಲ್ಲ ಕೂದಲುಗಳು ಮೂಡಿರುತ್ತದೆ.

ವೈದ್ಯಕೀಯವಾಗಿ ಹೈಪರ್ಟ್ರಿಕೋಸಿಸ್ ಎಂದು ಈ ಸ್ಥಿತಿಯನ್ನು ಕರೆಯಲಾಗುತ್ತದೆ, ಇದರಲ್ಲಿ ದೇಹದ ವಿವಿಧ ಭಾಗಗಳಲ್ಲಿ ಅಸಹಜ ಕೂದಲು ಬೆಳವಣಿಗೆ ಕಂಡುಬರುತ್ತದೆ. ನವರ್ರಾ ಫಾರ್ಮಾಕೋವಿಜಿಲೆನ್ಸ್ ಸೆಂಟರ್ ಸ್ಪೇನ್‌ನ ವಿವಿಧ ಭಾಗಗಳಿಂದ 11 ಪ್ರಕರಣಗಳನ್ನು ಗುರುತಿಸಿದೆ. ಎಲ್ಲಾ ಮಕ್ಕಳ ಈ ಸ್ಥಿತಿಗೆ ಮಿನೊಕ್ಸಿಡಿಲ್ ಎಂಬ ಔಷಧಿ ಕಾರಣ ಎಂದು ಕೂಡ ಕಂಡುಕೊಳ್ಳಲಾಗಿದೆ.
ಮಿನೊಕ್ಸಿಡಿಲ್ ಔಷಧವು ಅಸಹಜ ಕೂದಲು ಬೆಳವಣಿಗೆಯನ್ನು ಉಂಟುಮಾಡುತ್ತದೆ. ಮಿನೊಕ್ಸಿಡಿಲ್ ಎಂಬುದು ಹಿಮ್ಮೆಸ್, ರೋಗೈನ್, ಕೀಪ್ಸ್ ಮತ್ತು ಈಕ್ವೇಟ್‌ನಂತಹ ಅನೇಕ ಜನಪ್ರಿಯ ಕೂದಲು ನಷ್ಟ ಔಷಧಿಗಳಲ್ಲಿ ಬಳಸಲಾಗುವ ಸಾಮಾನ್ಯ ವಸ್ತುವಾಗಿದೆ. ಮಿನೊಕ್ಸಿಡಿಲ್ ಅನ್ನು ಚರ್ಮಕ್ಕೆ ಅನ್ವಯಿಸಲಾಗುತ್ತದೆ, ಇದು ರಕ್ತದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಕಿರುಚೀಲಗಳನ್ನು ಸಕ್ರಿಯಗೊಳಿಸುತ್ತದೆ.
ಮಗುವಿನ ತಾಯಿ ಕೂದಲು ಉದುರುವಿಕೆಯ ತಡೆಗಟ್ಟುವ ಉದ್ದೇಶದಿಂದ ತೆಗೆದುಕೊಂಡುದ್ದ ಔಷಧವು ನೇರವಾಗಿ ಮಕ್ಕಳ ಮೇಲೆ ಪ್ರಭಾವ ಉಂಟು ಮಾಡಿದೆ. ಮಗು ಹೊಟ್ಟೆಯಲ್ಲಿದ್ದಾಗ ಮಾತ್ರವಲ್ಲ ಎದೆ ಹಾಲು ಕುಡಿಸುವ ತಾಯಿ ಈ ಔಷಧಿ ಬಳಸಿದಾಗಲೂ ಮಕ್ಕಳ ಮೇಲೆ ಅದರ ಪರಿಣಾಮ ನೋಡಬಹುದಾಗಿತ್ತು.
ಒಮ್ಮೆ ಈ ಮಿನೊಕ್ಸಿಡಿಲ್ ಔಷಧಿ ಬಳಸುವುದನ್ನು ಬಿಟ್ಟ ಬಳಿಕ ಮಕ್ಕಳಲ್ಲಿ ಈ ಕೂದಲಿನ ಸಮಸ್ಯೆ ದೂರಾಗುತ್ತಿತ್ತು. ಇತ್ತೀಚಿಗೆ ಸ್ಪೈನ್‌ನಲ್ಲಿ ಮಗುವೊಂದರ ಮುಖದಲ್ಲಿ ಕೂದಲು ಬೆಳೆಯುತ್ತಿರುವ ಪ್ರಕರಣ ದಾಖಲಾಗಿತ್ತು, ಇದು 12ನೇ ಪ್ರಕರಣ ಎಂದು ಗುರುತಿಸಲಾಗಿದೆ.
2023 ರಲ್ಲಿ ನವಜಾತ ಶಿಶು ತನ್ನ ದೇಹದಲ್ಲಿ ಅತಿಯಾದ ಕೂದಲು ಬೆಳೆಯಲು ಪ್ರಾರಂಭಿಸಿದಾಗ ತೋಳದ ಸಿಂಡ್ರೋಮ್ ಮೊದಲ ಬಾರಿಗೆ ಪತ್ತೆಯಾಗಿತ್ತು. ಮಗುವಿನ ಮೈಮೇಲೆ ಅಸಹಜ ಕೂದಲು ಬೆಳೆದಿರುವುದು ಕಂಡುಬಂದಿತ್ತು. ಇದು ಹಲವು ರೀತಿಯ ಅಚ್ಚರಿಗೆ ಕಾರಣವಾಗಿತ್ತು. ಈ ಪ್ರಕರಣ ಕುರಿತು ತನಿಖೆ ಆರಂಭಿಸಿದಾಗ ಮಗುವಿನ ತಂದೆ ಆಂಡ್ರೋಜೆನಿಕ್ ಅಲೋಪೆಸಿಯಾ ಎಂಬ ಕೂದಲು ಉದುರುವಿಕೆ ಸಮಸ್ಯೆಗೆ ಮಿನೊಕ್ಸಿಡಿಲ್ ಔಷಧಿ ತೆಗೆದುಕೊಳ್ಳುತ್ತಿರುವುದು ಪತ್ತೆಯಾಗಿತ್ತು.
ಮಿನೊಕ್ಸಿಡಿಲ್ ಔಷಧವನ್ನು ಇಂಗ್ಲೆಂಡ್‌ನಲ್ಲಿ ಹಲವು ರೀತಿ ಮಾರಾಟ ಮಾಡಲಾಗುತ್ತದೆ. ಆದ್ರೆ ಹೆಚ್ಚಾಗಿ ರಿಗೇನ್ ಎಂಬ ಬ್ರಾಂಡ್ ಹೆಸರಿನಲ್ಲಿ ಬಳಕೆಯಲ್ಲಿದೆ. ಇನ್ನು ಈ ಔಷಧಿ ಬಳಕೆ ತಡೆಗಟ್ಟಿದ ಬಳಿಕ ಮಕ್ಕಳಲ್ಲಿದ್ದ ಸಮಸ್ಯೆ ದೂರಾಗುವುದನ್ನು ಕಂಡುಕೊಳ್ಳಲಾಗಿದೆ.
ಆರಂಭದಲ್ಲಿ ಈ ರೀತಿ ವಿಚಿತ್ರವಾಗಿ ಕೂದಲು ಹೊಂದಿರುವ ಮಕ್ಕಳು ಜನಿಸಿದಾಗ ಅಲ್ಲಿ ಆತಂಕ ಹೆಚ್ಚಾಗಿತ್ತು. ಮಕ್ಕಳು ಸಾಮಾನ್ಯ ಚಟುವಟಿಯಿಂದ ಇರುವುದರಿಂದ ಇದೊಂದು ವೈದ್ಯಕೀಯ ಸಮಸ್ಯೆ ಎಂಬುದನ್ನು ಪತ್ತೆ ಮಾಡಲಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
