Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರಾತ್ರಿಯಲ್ಲಿ ಕೃತಕ ಬೆಳಕು ಮೈಗೆ ಬೀಳುವುದರಿಂದಲೂ ಹೆಚ್ಚಾಗುತ್ತಿದೆ ಮಧುಮೇಹದ ಸಮಸ್ಯೆ!
ನಮ್ಮೆಲ್ಲರ ಬದುಕಿನಲ್ಲಿ ಕೃತಕ ಬೆಳಕು ತುಂಬಾನೇ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಧುಮೇಹದ ಸಮಸ್ಯೆ ಹೆಚ್ಚಾಗುವುದು. ಅದರಲ್ಲಿಯೂ ರಾತ್ರಿ ಹೊತ್ತಿನಲ್ಲಿ ಈ ಬೆಳಕು ಮೈಗೆ ಬೀಳುವುದರಿಂದ ಮಧುಮೇಹದ ಸಮಸ್ಯೆ ಹೆಚ್ಚಾಗುವುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

85,000 ಜನರನ್ನು ಈ ಪರೀಕ್ಷೆಗೆ ಒಳಪಡಿಸಲಾಯ್ತು
40-69 ವಯಸ್ಸಿನವರನ್ನು ಈ ಪರೀಕ್ಷೆಗೆ ಒಳಪಡಿಸಲಾಯ್ತು. ಅವರ ಕೈಗೆ ಡಿವೈಸ್ ಕಟ್ಟಲಾಯ್ತು, ನಂತರ ಹಗಲು-ರಾತ್ರಿ ಟ್ರ್ಯಾಕ್ ಮಾಡಲಾಯ್ತು. UK Biobank ಈ ಪರೀಕ್ಷೆ ಮಾಡಲಾಯ್ತು. ಇವರನ್ನು 9 ವರ್ಷ ಟ್ರ್ಯಾಕ್ ಮಾಡಲಾಯ್ತು. ಯಾರು ಮಧ್ಯರಾತ್ರಿ 12:30ರಿಂದ ಬೆಳಗ್ಗೆ 7ರವರೆಗೆ ಕೆಲಸ ಮಾಡುತ್ತಿದ್ದಾರೋ ಅವರ ಅವರಿಗೆ ಮಧುಮೇಹದ ಅಪಾಯ ಹೆಚ್ಚಾಗುವುದು.
ಕೃತಕ ಬೆಳಕು ಮೈಗೆ ಬೀಳುವುದರಿಂದ ಮಧುಮೇಹದ ಸಾಧ್ಯತೆ ಶೇ. 67ರಷ್ಟು ಅಪಾಯವಿದೆ. ಹಳದಿ ಬೆಳಕು/ ನೀಲಿ ಬೆಳಕು ಮೈಗೆ ಬೀಳುವುದರಿಂದ ಮಧುಮೇಹದ ಸಮಸ್ಯೆ ಹೆಚ್ಚಾಗುವುದು. ಸ್ಮಾರ್ಟ್‌ಫೋನ್, ಟಿವಿ, ಲ್ಯಾಪ್‌ಟಾಪ್ ಬೆಳಕು ಬೀಳುವುದರಿಂದ ಮಧುಮೇಹದ ಅಪಾಯ ಹೆಚ್ಚು.
ಕೃತಕ ಬೆಳಕು ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ
ಮಧುಮೇಹ , ಆಹಾರಕ್ರಮ, ಜೀವನಕ್ರಮ, ಧೂಮಪಾನ, ಮದ್ಯಪಾನ ಇವೆಲ್ಲದರ ಪರಿಣಾಮದಿಂದಾಗಿ ಆರೋಗ್ಯದ ಸ್ಥಿತಿ ಮತ್ತಷ್ಟು ಗಂಭೀರವಾಗುವುದು. ಇದರಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದು.
ನೈಟ್ ಶಿಫ್ಟ್, ಡೇ ಶಿಫ್ಟ್ ಎರಡರಲ್ಲಿಯೂ ಕೃತಕ ಬೆಳಕು ನಮ್ಮ ಮೇಲೆ ಬೀಳುತ್ತದೆ
ಆಫೀಸ್‌ನೊಳಗಡೆ ಹೋದಾಗ ರಾತ್ರಿ-ಹಗಲು ಗೊತ್ತಾಗುವುದಿಲ್ಲ, ಸದಾ ವಿದ್ಯುತ್ ಬಲ್ಬ್ ಉರಿಯುತ್ತಿರುತ್ತದೆ. ಸೂರ್ಯನ ಬೆಳಕಿಗಿಂತ ಈ ಬೆಳಕೇ ನಮ್ಮ ಮೇಲೆ ಬೀಳುತ್ತಿದೆ, ರಾತ್ರಿಯೂ ಅಷ್ಟೇ ತಡರಾತ್ರಿಯಾದರೂ ಮೊಬೈಲ್ ಹಿಡಿದು ಕೂರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಅಲ್ಲದೆ ನೈಟ್ ಶಿಫ್ಟ್ ವರ್ಕ್ ಇದ್ದರೆ ನಿದ್ದೆ ಮೇಲೆ ಪರಿಣಾಮ ಬೀರುವುದು. ಇದರ ಜೊತೆಗೆ ನಮ್ಮ ಆಹಾರಕ್ರಮ, ಜೀವನಶೈಲಿ ಇವೆಲ್ಲವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ
ಹಿಂದೆಯೆಲ್ಲಾ ವರ್ಷ 50 ದಾಟಿದವರಲ್ಲಿ ಮಧುಮೇಹದ ಸಮಸ್ಯೆ ಕಂಡು ಬರುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ವಯಸ್ಸು 30 ದಾಟುತ್ತಿದ್ದಂತೆ ಮಧುಮೇಹ ಸಮಸ್ಯೆ ಕಂಡು ಬರುತ್ತಿದೆ, ಇದಕ್ಕೆ ಪ್ರಮುಖ ಕಾರಣ ಜೀವನಶೈಲಿ. ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದು, ದೈಹಿಕ ವ್ಯಾಯಾಮ ಇಲ್ಲದಿರುವುದು, ಅತಿಯಾದ ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರ ಇವೆಲ್ಲಾ ನಮ್ಮಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತಿದೆ.
ಆರೋಗ್ಯಕರ ಜೀವನಶೈಲಿಯತ್ತ ಗಮನಹರಿಸಿ
ಕೆಲಸ, ಕೆಲಸದಲ್ಲಿ ಅತಿಯಾದ ಒತ್ತಡ, ಒಂದೇ ಕಡೆ ಕೂತು ಕೆಲಸ ಮಾಡುವುದು ಇವೆಲ್ಲಾ ತಪ್ಪಿಸಲು ಸಾಧ್ಯವಿಲ್ಲ, ಆದರೆ ದಿನದಲ್ಲಿ 30 ನಿಮಿಷ ದೈಹಿಕ ವ್ಯಾಯಾಮ ಕಡ್ಡಾಯವಾಗಿ ಮಾಡಬೇಕು, ಆಹಾರಕ್ರಮದತ್ತ ಗಮನಹರಿಸಬೇಕು, ಹೀಗೆ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
