Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಡವಾಗಿ ಮಲಗುವ ಅಭ್ಯಾಸ ಇದ್ಯಾ? ಟೈಪ್ 2 ಡಯಾಬಿಟಿಸ್‌ಗೆ ಕಾರಣವಾಗುತ್ತೆ ಹುಷಾರ್..!
ಇತ್ತೀಚಿಗೆ ಒತ್ತಡದ ಕೆಲಸಗಳು, ಲೇಟ್ ನೈಟ್ ವರ್ಕ್, ಪಾರ್ಟಿ, ಟ್ರಾಫಿಕ್ ಹೀಗೆ ಒಂದಲ್ಲಾ ಒಂದು ಕಾರಣದಿಂದಾಗಿ ತಡವಾಗಿ ಮಲಗುವುದು ಅಭ್ಯಾಸವಾಗಿರುತ್ತದೆ. ಅದರಲ್ಲೂ ಕೆಲವರು ರಾತ್ರಿ 12 ಅಥವಾ 1 ಗಂಟೆಗೆ ಮಲಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅವರು ಬೇಗ ಊಟ ಮುಗಿಸಿದ್ದರು ಸಹ 1 ಗಂಟೆಯ ಕಡಿಮೆ ಮಲಗುವುದೇ ಇಲ್ಲ.
ಮತ್ತೆ ಕೆಲವರು ಇದೇ ಅಭ್ಯಾಸ ಮುಂದುವರೆಸಿ ತಡವಾಗಿ ಮಲಗಿ ತಡವಾಗಿ ಏಳುತ್ತಾರೆ. ಇದು ಹಲವು ರೀತಿಯ ಸಮಸ್ಯೆಗೆ ಒಳಗಾಗಲು ಕಾರಣವಾಗುತ್ತಿದೆ ಎಂಬುದು ನಮ್ಮ ಅರಿವಿಗೂ ಬಂದಿರುತ್ತದೆ. ಆದ್ರೆ ಈಗೊಂದು ಹೊಸ ವರದಿಯ ಪ್ರಕಾರ ತಡವಾಗಿ ಮಲಗುವುದು ಟೈಪ್ 2 ಡಯಾಬಿಟೀಸ್‌ಗೆ ಕಾರಣವಾಗುತ್ತಿದೆಯಂತೆ.

ಹೌದು ಬೇಗ ಮಲಗುವವರಿಗೂ ಹಾಗೂ ತಡವಾಗಿ ಮಲಗುವವರಿಗೂ ಹೋಲಿಸಿದರೆ ಯಾರು ಕಡಿಮೆ ನಿದ್ರೆ ಮಾಡುತ್ತಾರೋ ಅಂತವರಲ್ಲಿ ಈ ಟೈಪ್ 2 ಮಧುಮೇಹದ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ನೆದರ್‌ಲ್ಯಾಂಡ್ಸ್‌ನ ಲೈಡೆನ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನಿಂದ ಡಾ ಜೆರೋನ್ ವ್ಯಾನ್ ಡೆರ್ ವೆಲ್ಡೆ ನೇತೃತ್ವದಲ್ಲಿ, ಅಧ್ಯಯನವು ನಿದ್ರೆಯ ಸಮಯ, ದೇಹದ ಕೊಬ್ಬಿನ ವಿತರಣೆ ಮತ್ತು ಮಧುಮೇಹದ ಅಪಾಯದ ನಡುವಿನ ಸಂಪರ್ಕದ ಮೇಲೆ ಕೇಂದ್ರೀಕರಿಸಿದ್ದು, ಈ ಅಧ್ಯಯನದಲ್ಲಿ ತಡವಾಗಿ ಮಲಗುವವರಲ್ಲಿ ಶೇ50ರಷ್ಟು ಟೈಪ್ 2 ಡಯಾಬಿಟೀಸ್‌ಗೆ ಒಳಗಾಗುವುದು ದೃಢವಾಗಿದೆ.
ತಡವಾಗಿ ಮಲಗಿರುವವರು ಧೂಮಪಾನ ಅಥವಾ ಕಳಪೆ ಆಹಾರದಂತಹ ಅನಾರೋಗ್ಯಕರ ಜೀವನಶೈಲಿಯನ್ನು ಹೊಂದಿರುತ್ತಾರೆ ಎಂಬುದು ಈ ಅಧ್ಯಯನಕ್ಕೂ ಮೊದಲೇ ತಿಳಿದುಬಂದಿದೆ. ಟೈಪ್ 2 ಡಯಾಬಿಟಿಸ್ ಭಾರತದಲ್ಲಿ ಸಾಮಾನ್ಯವಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ ಒಂದಾಗಿದೆ. ದೇಶದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಹಾಗೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದ್ದು, ಎಲ್ಲರ ಆತಂಕ ಹೆಚ್ಚಾಗಲು ಕಾರಣವಾಗಿದೆ. ಈ ಅಧ್ಯಯನಕ್ಕಾಗಿ ಸುಮಾರು 5 ಸಾವಿರ ಮಂದಿಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಅವರೆಲ್ಲರು ಸರಾಸರಿ 56 ವರ್ಷದವರಾಗಿದ್ದರು. ಹಾಗೆ ಇವರನ್ನು ಎರಡು ಗುಂಪುಗಳಾಗಿಯೂ ವಿಂಗಡಿಸಲಾಗಿತ್ತು.
ಅವರಲ್ಲಿ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸುವುದಿಲ್ಲ, ಇದು ಅಧಿಕ ರಕ್ತದ ಸಕ್ಕರೆ ಮಟ್ಟಕ್ಕೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಬೊಜ್ಜು, ನಿಷ್ಕ್ರಿಯತೆ ಮತ್ತು ಕಳಪೆ ಆಹಾರದೊಂದಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ದೈಹಿಕ ಚಟುವಟಿಕೆ ಮತ್ತು ನಿದ್ರೆಯ ಗುಣಮಟ್ಟ ಮುಂತಾದ ಅಂಶಗಳು ಸರಿಯಾದ ಬಳಿಕವೂ ಮಧುಮೇಹ ಅಭಿವೃದ್ಧಿ ಪಡಿಸುತ್ತಿರುವುದು ಕಂಡುಬಂದಿದೆ.
ಸಾಮಾನ್ಯವಾಗಿ ಟೈಪ್ 2 ಮಧುಮೇಹದಲ್ಲಿ ಎರಡು ಸಮಸ್ಯೆಗಳಿರುತ್ತದೆ. ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಎರಡನೇಯದಾಗಿ ನಿಮ್ಮ ಜೀವಕೋಶಗಳಿಗೆ ಸಕ್ಕರೆಯ ಚಲನೆಯನ್ನು ನಿಯಂತ್ರಿಸುವ ಹಾರ್ಮೋನ್ ಮತ್ತು ಜೀವಕೋಶಗಳು ಇನ್ಸುಲಿನ್‌ಗೆ ಕೆಟ್ಟದಾಗಿ ಪ್ರತಿಕ್ರಿಯಿಸುತ್ತವೆ ಮತ್ತು ಕಡಿಮೆ ಸಕ್ಕರೆಯನ್ನು ತೆಗೆದುಕೊಳ್ಳುತ್ತವೆ.
ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡೂ ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ಪ್ರಾರಂಭವಾಗಬಹುದು. ವಯಸ್ಸಾದ ವಯಸ್ಕರಲ್ಲಿ ಟೈಪ್ 2 ಹೆಚ್ಚು ಸಾಮಾನ್ಯವಾಗಿದೆ, ಆದರೆ ಸ್ಥೂಲಕಾಯತೆ ಹೊಂದಿರುವ ಮಕ್ಕಳ ಸಂಖ್ಯೆಯಲ್ಲಿನ ಹೆಚ್ಚಳವು ಕಿರಿಯ ಜನರಲ್ಲಿ ಟೈಪ್ 2 ಮಧುಮೇಹದ ಸಾಧ್ಯತೆಗಳು ಹೆಚ್ಚು ಎಂದು ತಿಳಿದುಬಂದಿದೆ.
ಟೈಪ್ 2 ಮಧುಮೇಹದ ಲಕ್ಷಣಗಳೇನು ಗೊತ್ತಾ?
ಟೈಪ್ 2 ಮಧುಮೇಹ ಲಕ್ಷಣಗಳು ಸಾಮಾನ್ಯವಾಗಿ ನಿಧಾನವಾಗಿ ಬೆಳೆಯುತ್ತವೆ. ಹಾಗಾದ್ರೆ ಈ ಟೈಪ್ 2 ಡಯಾಬಿಟೀಸ್‌ನ ಲಕ್ಷಣವೇನು ನೋಡಿ.
- ಪದೇ ಪದೇ ಮೂತ್ರ ವಿಸರ್ಜನೆ
- ಅನಿರೀಕ್ಷಿತ ತೂಕ ನಷ್ಟ
- ಆಯಾಸ
- ಮಂದ ದೃಷ್ಟಿ
- ತಲೆಸುತ್ತು
- ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications