Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟವಾದ ತಕ್ಷಣವೇ ಟಾಯ್ಲೆಟ್‌ಗೆ ಹೋಗಬೇಕೆನಿಸುವುದೇ? ಈ ಸಮಸ್ಯೆವಿರಬಹುದು
ಕೆಲವರಿಗೆ ತಿಂದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕು. ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಹೋಗುವುದು ಸಹಜ, ಆದರೆ ಆಹಾರ ಸೇವಿಸಿದ ತಕ್ಷಣ ಟಾಯ್ಲೆಟ್‌ಗೆ ಹೋಗುವುದು ಸಹಜವೇ? ಏನಾದರೂ ಆರೋಗ್ಯ ಸಮಸ್ಯೆವಿರಬಹುದೇ? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ:

ಮೆಡಿಕಲ್ ನ್ಯೂಸ್‌ಟುಡೇ ಪ್ರಕಾರ ಊಟ ತಿಂದ ತಕ್ಷಣ ಮಲವಿಸರ್ಜನೆಗೆ ಹೋಗಬೇಕೆಂದು ಅನಿಸಿದರೆ ಆರೋಗ್ಯ ಸಮಸ್ಯೆಗಳಿಂದರಬಹುದು ಎಂದು ಹೇಳಿದೆ. ಈ ಬಗೆಯ ಸಮಸ್ಯೆಗಳಿಂದ ಆ ರೀತಿ ಆಗುತ್ತಿರಬಹುದು
ಫುಡ್ ಅಲರ್ಜಿ
ಒತ್ತಡ
ಗ್ರ್ಯಾಸ್ಟ್ರಿಕ್ ಸಮಸ್ಯೆ
ಹೊಟ್ಟೆಯಲ್ಲಿ ಉರಿಯೂತದ ಸಮಸ್ಯೆ((IBD))
ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಗ್ಯಾಸ್ಟ್ರೋಕೋಲಿಕ್ ರಿಫ್ಲೆಕ್ಸ್‌ನಿಂದಾಗಿ ಈ ರೀತಿ ಉಂಟಾಗುವುದು, ಹೀಗಾದಾಗ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು:
ಗ್ಯಾಸ್ಟ್ರೋಕೋಲಿಕ್ ರಿಫ್ಲೆಕ್ಸ್ ಎಂದರೇನು?
ಇದೊಂದು ನೈಸರ್ಗಿಕ ಪ್ರಕ್ರಿಯೆ, ಆಹಾರ ಹೊಟ್ಟೆಯನ್ನು ತಲುಪಿದ ತಕ್ಷಣ ಕೆರಾಟಿನ್ ಹಾರ್ಮೋನ್ ರಿಲೀಸ್ ಮಾಡುತ್ತದೆ. ಈ ಹಾರ್ಮೋನ್ ಕರುಳನ್ನು ಬಿಗಿದು ಕೊಳ್ಳುವಂತೆ ಮಾಡುತ್ತದೆ. ಆವಾಗ ಕರುಳು ಬೇಡದ ಆಹಾರವನ್ನು ಹೊರ ಹಾಕುವ ಪ್ರಕ್ರಿಯೆ ಮಾಡುತ್ತದೆ. ಕೆಲವರಿಗೆ ಆಗಾಗ ಹೋಗಬೇಕೆನಿಸುವುದು, ಕೆಲವರಿಗೆ ಸ್ವಲ್ಪ ಹೋಗುವುದು, ಕೆಲವರಿಗೆ ದಿನಕ್ಕೊಮ್ಮೆ ಮಾಡುವುದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ಓವರ್‌ಆಕ್ಟಿವ್ ಗ್ಯಾಸ್ಟ್ರೋಕೋಲಿಕ್ ರಿಫ್ಲೆಕ್ಸ್‌ಗೆ ಕಾರಣವೇನು?
ಒತ್ತಡ
ಕೆಲವೊಂದು ಹಾರ್ಮೋನ್ ಸಂಬಂಧಿತ ಸಮಸ್ಯೆ ಉಂಟಾಗುವುದು
ಎಣ್ಣೆಯಂಶವಿರುವ ಆಹಾರ ಸೇವನೆ
ಫುಡ್ ಅಲರ್ಜಿ ಸಮಸ್ಯೆ
ಗ್ಯಾಸ್ಟ್ರಿಕ್ ಸಮಸ್ಯೆ
IBS
ಬೇಧಿಗೆ ಅಥವಾ ಆಗಾಗ ಮಲವಿಸರ್ಜನೆಗೆ ಕಾರಣವೇನು?
ವೈರಸ್
ಬ್ಯಾಕ್ಟಿರಿಯಾ ಸಮಸ್ಯೆ
ಕೆಲವೊಂದು ಔಷಧಗಳು
ಕೃತಕ ಸಿಹಿತಿಂಡಿ
ಗಾಲ್‌ಬ್ಲೇಡರ್ ಸಮಸ್ಯೆ
ಅಜೀರ್ಣ
ಹೊಟ್ಟೆ ಉಬ್ಬಿದಂತೆ ಅನಿಸುವುದು
ಆಗಾಗ ಹೂಸು ಬರುವುದು
ಕಿಬ್ಬೊಟ್ಟೆ ನೋವು
ಬೇಧಿ
ಮಲದಲ್ಲಿ ಕಫ
ಮಲಬದ್ಧತೆ
ಕೆಲವೊಮ್ಮೆ ಬೇಧಿ ಕೆಲವೊಮ್ಮೆ ಮಲಬದ್ಧತೆ ಈ ಬಗೆಯ ಸಮಸ್ಯೆ ಉಂಟಾಗುವುದು.
ಈ ಬಗೆಯ ಸಮಸ್ಯೆ ಕಂಡು ಬಂದಾಗ ಏನು ಮಾಡಬೇಕು
ಊಟವಾದ ತಕ್ಷಣ ಮಲವಿಸರ್ಜನೆಗೆ ಹೋಗುವುದಾದರೆ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡುವುದು ಒಳ್ಳೆಯದು, ಸೂಕ್ತ ಚಿಕಿತ್ಸೆ ಪಡೆದರೆ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.
ಊಟವಾದ ತಕ್ಷಣವ ಟಾಯ್ಲೆಟ್‌ಗೆ ಹೋಗುವ ಸಮಸ್ಯೆ ಇರುವವರು ಈ ಬಗೆಯ ಆಹಾರಸೇವನೆ ಮಾಡದೇ ಇದ್ದರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು
ಕೊಬ್ಬಿನಂಶವಿರುವ ಆಹಾರ
ಹಾಲಿನ ಉತ್ಪನ್ನಗಳು
ಯಾವ ಬಗೆಯ ಆಹಾರ ತಿಂದಾಗ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂಬುವುದನ್ನು ಕೂಡ ಗಮನಿಸುವುದು ಒಳ್ಳೆಯದು. ಅಂಥ ಆಹಾರ ಸೇವೆ ಮಾಡದೆ ಇದ್ದರೆ ಈ ಬಗೆಯ ಸಮಸ್ಯೆ ಕಡಿಮೆ ಮಾಡಬಹುದು.
ಕಡಿಮೆ ಪ್ರಮಾಣದಲ್ಲಿ ಸೇವಿಸಿ
ಕೆಲವರಿಗೆ ಹೊಟ್ಟೆ ತುಂಬಾ ತಿಂದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕೆನಿಸುವುದು. ಹಾಗಾಗಿ ಹೊರಗಡೆ ಹೋದಾಗ ಹೊಟ್ಟೆ ತುಂಬಾ ಸೇವಿಸಬೇಡಿ, ಕಡಿಮೆ ಆಹಾರ ಸೇವಿಸಿ. ಅಲ್ಲದೆ ಊಟದ ಬಳಿಕ ಕಾಫಿ ಕುಡಿದರೆ ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
ಈ ಬಗೆಯ ಸಮಸ್ಯೆ ತಡೆಗಟ್ಟುವುದು ಹೇಗೆ?
ನಿಮ್ಮ ಡಯಟ್‌ನಲ್ಲಿ ಕೆಲ ಬದಲಾವಣೆ ತಂದರೆ ಒಳ್ಳೆಯದು
ಪ್ರತಿನಿತ್ಯ ವ್ಯಾಯಾಮ ಮಾಡುವುದು
ಮಾನಸಿಕ ಒತ್ತಡ ಕೂಡ ಈ ಬಗೆಯ ಸಮಸ್ಯೆ ಉಂಟು ಮಾಡುವುದು, ಈ ಬಗ್ಗೆ ಕೂಡ ಗಮನಹರಿಸಬೇಕು
ಕೆಲವೊಂದು ಆರೋಗ್ಯ ಸಮಸ್ಯೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಕೂಡ ಈ ಬಗೆಯ ಸಮಸ್ಯೆ ಕಂಡು ಬರುವುದು
ಯಾವಾಗ ವೈದ್ಯರನ್ನು ಕಾಣಲೇಬೇಕು
ಮಲದಲ್ಲಿ ರಕ್ತಕಂಡು ಬಂದರೆ
ಮಲವಿಸರ್ಜನೆ ಜೊತೆಗೆ ವಾಂತಿ ಈ ಬಗೆಯ ಸಮಸ್ಯೆ ಕಂಡು ಬಂದರೆ
ಮಲವಿಸರ್ಜನೆ ಅನಿಸಿದಾಗ ಕಂಟ್ರೋಲ್ ಮಾಡಲು ಸಾಧ್ಯವಾಗದೇ ಇದ್ದಾಗ
ಕೊನೆಯದಾಗಿ: ಕೆಲವರಿಗೆ ಊಟವಾದ ತಕ್ಷಣ ಮಲವಿಸರ್ಜನೆಗೆ ಹೋಗುವುದು ಒಂದು ಅಭ್ಯಾಸ ಕೂಡ ಆಗಿರುತ್ತದೆ, ಇಂಥ ಅಭ್ಯಾಸವಿದ್ದರೆ ಇದನ್ನು ಬದಲಾಯಿಸಲು ಪ್ರಯತ್ನಿಸಿ, ಆವಾಗ ಈ ಬಗೆಯ ಸಮಸ್ಯೆ ಇರಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











