Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಕಾಯಿಲೆ..! ಏನದು ಗೊತ್ತಾ?
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಈಗ ಪಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ, ಬಾಹುಬಲಿ ಸಿನಿಮಾದಲ್ಲಿನ ಅವರ ನಟನೆ ಅವರನ್ನು ಆಲ್ ಇಂಡಿಯಾ ಸ್ಟಾರ್ ಎಂಬ ಬಿರುದು ತಂದು ಕೊಟ್ಟಿತ್ತು. ಆದ್ರೆ ಅವರು ಯಾವಾಗಲು ಮದುವೆಯ ವಿಚಾರವಾಗಿಯೇ ಹೆಚ್ಚು ಸುದ್ದಿಯಾಗುತ್ತಿದ್ದರು. ಆದರೆ ಈಗ ಆರೋಗ್ಯದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.
ಬಾಹುಬಲಿಯ ನಟಿಗೆ ಅಪರೂಪದ ಕಾಯಿಲೆಯೊಂದು ಕಾಡಿತ್ತಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು ಈ ಕುರಿತು ಹೇಳಿಕೊಂಡಿದ್ದರು . ಅವರಿಗೆ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ನಗುವಿನ ಕಾಯಿಲೆ ಇತ್ತಂತೆ. ಅಂದರೆ ಅವರಿಗೆ ಒಮ್ಮೆ ನಗು ಆರಂಭಗೊಂಡರೆ ನಿಲ್ಲಿಸುವುದು ಕಷ್ಟವಾಗುತ್ತಿತ್ತಂತೆ.

ನನಗೆ ನಗುವ ಕಾಯಿಲೆ ಇದೆ. ನಿಮಗೆ ಆಶ್ಚರ್ಯವಾಗಬಹುದು, 'ನಗುವುದು ಒಂದು ಸಮಸ್ಯೆಯೇ?' ನಾನು ನಗಲು ಪ್ರಾರಂಭಿಸಿದರೆ, 15 ರಿಂದ 20 ನಿಮಿಷಗಳ ಕಾಲ ನಿಲ್ಲಿಸಲು ಸಾಧ್ಯವಿಲ್ಲ. ಹಾಸ್ಯ ದೃಶ್ಯಗಳನ್ನು ನೋಡುವಾಗ ಅಥವಾ ಚಿತ್ರೀಕರಿಸುವಾಗ, ನಾನು ಅಕ್ಷರಶಃ ನಗುತ್ತಾ ನೆಲದ ಮೇಲೆ ಕುಸಿದು ಬೀಳುತ್ತಿದ್ದೆ. ಇದೇ ಕಾರಣಕ್ಕೆ ಚಿತ್ರೀಕರಣ ಮುಂದೂಡಿದ ಘಟನೆಗಳು ಸಹ ನಡೆದಿತ್ತು. ಆದರೆ ನೋಡುಗರಿಗೆ ಇದು ಕಾಯಿಲೆಯಂತೆ ಕಾಣಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ನಗುವ ಕಾಯಿಲೆಯನ್ನು ವೈದ್ಯಕೀಯ ಲೋಕದಲ್ಲಿ ಸ್ಯೂಡೋಬುಲ್ಬರ್ ಪರಿಣಾಮ ಎಂದು ಕರೆಯಲಾಗುತ್ತದೆ ಇದು ಸಾಮಾನ್ಯವಾಗಿ ಲಕ್ಷದಲ್ಲಿ ಒಬ್ಬರಲ್ಲಿ ಕಂಡುಬರುತ್ತದೆಯಂತೆ. ಇದರಲ್ಲಿ ನಗು ಮಾತ್ರವಲ್ಲ ಅಳು ಸಹ ಅದೇ ರೀತಿಯಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಒಮ್ಮೆ ನಗು ಬಂದರೆ ನಿಲ್ಲಿಸಲಾಗುವುದಿಲ್ಲ. ಜೊತೆಗೆ ಅಳು ಬಂದರೆ ಸಹ ನಿಲ್ಲಿಸುವುದು ತುಂಬಾ ಕಷ್ಟವಾಗುತ್ತದೆ.
ಆಗಾಗ್ಗೆ, ನಗುವಿಕೆಯನ್ನು ಪ್ರಚೋದಿಸುವ ಅಂಶವು ಚಿಕ್ಕದಾಗಿರಬಹುದು, ಅಂದರೆ ಭಾವನಾತ್ಮಕ ಪ್ರತಿಕ್ರಿಯೆಗಳು ಪ್ರಚೋದಿಸುವ ಘಟನೆಗೆ ಅನುಪಾತದಲ್ಲಿರುತ್ತವೆ. ಅಲ್ಲಿ ಇರುವ ಇತರ ಜನರು ಅದನ್ನು ತಮಾಷೆಯಾಗಿ ಕಾಣದಿರಬಹುದು ಮತ್ತು ಆದ್ದರಿಂದ, ನಗುವ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಅವನ / ಅವಳ ಪ್ರತಿಕ್ರಿಯೆಯ ಬಗ್ಗೆ ಮುಜುಗರ ಅನುಭವಿಸಬಹುದು. ಇದೇ ಕಾಯಿಲೆ ನಟಿಗೂ ಕಾಡುತ್ತಿತ್ತಂತೆ.
ನಗುವ ಕಾಯಿಲೆಗೆ ಮೂಲ ಕಾರಣವೇನು?
ಮೋಟಾರ್ ನ್ಯೂರಾನ್ ಕಾಯಿಲೆ (MND)/ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ALS), ಮಲ್ಟಿಪಲ್ ಸ್ಕ್ಲೆರೋಸಿಸ್ (MS), ಬ್ರೈನ್ ಸ್ಟ್ರೋಕ್, ಬ್ರೈನ್ ಟ್ಯೂಮರ್ ಅಥವಾ ಆಘಾತಕಾರಿ ಮಿದುಳಿನ ಗಾಯದಂತಹ ಹಲವಾರು ನರವೈಜ್ಞಾನಿಕ ಅಸ್ವಸ್ಥತೆಗಳು ಸೂಡೊಬುಲ್ಬಾರ್ ಪರಿಣಾಮವನ್ನು ಉಂಟುಮಾಡಬಹುದು.
ಅಚ್ಚರಿ ಎಂದರೆ ಈ ಕಾಯಿಲೆಗೆ ನಿಖರವಾದ ಲಕ್ಷಣಗಳಲ್ಲವಂತೆ, ಹೀಗಾಗಿ ಗುರುತಿಸುವುದು ಸಹ ಕಷ್ಟವಾಗಲಿದೆ. ಆದರೆ ಕೆಲವರು ಇದನ್ನು ಮಾನಸಿಕ ಕಾಯಿಲೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಇದಕ್ಕೆ ಮನೋವೈದ್ಯರಿಂದ ಪರಿಹಾರದ ಅಗತ್ಯವೂ ಇರುವುದಿಲ್ಲ. ಬದಲಿಗೆ ಸಣ್ಣ ಪುಟ್ಟ ದಿನಚರಿಗಳು, ಯೋಗದಿಂದಲೇ ಕಡಿಮೆ ಮಾಡಬಹುದಂತೆ. ಹೀಗಾಗಿ ಇದನ್ನು ನರರೋಗ ಮನೋವೈದ್ಯಕೀಯ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.
ಇದಕ್ಕೆ ಚಿಕಿತ್ಸೆ ಏನು?
ವಿಶ್ರಾಂತಿ ಮತ್ತು ನಿಧಾನವಾದ ಉಸಿರಾಟ ಪ್ರಕ್ರಿಯೆ, ಯೋಗ ಸೇರಿದಂತೆ ಮನಸ್ಸಿಗೆ ಮುದ ನೀಡುವ ಕೆಲಸ ಮಾಡುವುದು ಈ ಕಾಯಿಲೆಯ ಚಿಕಿತ್ಸೆಯಾಗಿದೆ. ಆದರೆ ವೈದ್ಯರ ಸಲಹೆ ಮೇರೆಗೆ ಇದಕ್ಕೂ ಸಹ ಔಷಧಿಗಳಿವೆ.
ಸದ್ಯ ನಟಿ ಅನುಷ್ಕಾ ಶೆಟ್ಟಿ ಈ ಕಾಯಿಲೆಯಿಂದ ಗುಣಮುಖರಾಗಿದ್ದಾರಂತೆ, ಈಗ ಇವರಿಗೆ ಈ ನಗುವಿನ ಕಾಯಿಲೆ ಇಲ್ಲವಂತೆ, ಇದಕ್ಕೂ ಮೊದಲು ಹಲವು ಬಾರಿ ನಗುವುದನ್ನು ನಿಯಂತ್ರಿಸಲಾಗದೆ ಅವರು ಸಿನಿಮಾ ಸೆಟ್‌ನಿಂದಲೇ ಹೊರಹೋಗಿದ್ದರಂತೆ. ಜೊತೆಗೆ ಮಾಸ್ಕ್ ಧರಿಸಿರುತ್ತಿದ್ದಂತೆ.
ಆದರೆ ಈ ವಿಚಿತ್ರ ಕಾಯಿಲೆ ಕುರಿತು ಅವರ ಸಂದರ್ಶನ ವೀಕ್ಷಿಸಿದ ಮಂದಿ ಮಾತ್ರ ಈ ರೀತಿಯ ಕಾಯಿಲೆಯೂ ಇದೆಯೇ ಎಂದು ಅಚ್ಚರಿ ಹೊರಹಾಕುತ್ತಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications