Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ವಯಸ್ಸಾಗೋದನ್ನೆ ತಡೆಯುತ್ತೆ ಈ ಔಷಧ..! ಮಾರುಕಟ್ಟೆಗೆ ಲಗ್ಗೆ ಇಟ್ಟ 'ಬ್ಲೂಪ್ರಿಂಟ್'..!
ಕೆಲವರು ತಮ್ಮ ಯೌವನವನ್ನು ಕಾಪಾಡಿಕೊಳ್ಳುವ ಸಲುವಾಗಿ ಹಲವು ರೀತಿಯ ಸಾಹಸಗಳ ಮಾಡುತ್ತಾರೆ. ಮುಖದ ಕಾಂತಿ ಹೆಚ್ಚಿಸಲು ಔಷಧಗಳ ತೆಗೆದುಕೊಳ್ಳುವುದು, ಚರ್ಮ ಸುಕ್ಕುಗಟ್ಟದಂತೆ ತಡೆಯಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್‌ಗಳ ಬಳಸುವುದು. ವಯಸ್ಸಾದಂತೆ ಕಾಣದಿರಲು ಹಲವು ರೀತಿಯ ಮೇಕಪ್‌ಗಳ ಮಾಡುತ್ತಾರೆ.
ಆದ್ರೆ ಇದೆಲ್ಲವೂ ಶಾಶ್ವತವಲ್ಲ, ಕೆಲವ ದಿನಗಳು, ಇಲ್ಲವೆ ಕೆಲ ಗಂಟಗಳ ಕಾಲ ಮಾತ್ರ ಇವು ಕೆಲಸ ಮಾಡಬಹುದು. ನಮ್ಮನ್ನು ವಯಸ್ಸಾಗುವಿಕೆಯಿಂದ ತಡೆಯಬಹುದು, ಆದರೆ ಪ್ರಾಕೃತಿಕವಾಗಿ ನಮ್ಮ ವಯಸ್ಸನ್ನು ತಡೆಹಿಡಿಯಲು ಸಾಧ್ಯವೇ ಇಲ್ಲ. ಆದರೆ ಇದೀಗ ನಾವು ವಯಸ್ಸಾದಂತೆ ಕಾಣದಿರಲು, ಯೌವನ ಹೆಚ್ಚಿಸುವ, ಯೌವನ ಕಾಪಾಡಿಕೊಳ್ಳುವ ಔಷಧ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ನಿಮಗೆ ಇದನ್ನು ಕೇಳಿ ಅಚ್ಚರಿ ಎನಿಸಬಹುದು. ನಮ್ಮ ವಯಸ್ಸನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಯೌವನವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಇದು ನಮ್ಮ ಆಹಾರ, ಜೀವನ ಕ್ರಮ, ಕೆಲಸ ಹೀಗೆ ಹತ್ತಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ಆದ್ರೆ ಈಗ ಮಾರುಕಟ್ಟೆಗೆ ಬಂದಿರುವ ಔಷಧಿಯು ಯೌವನವನ್ನು ಕಾಪಾಡಿಕೊಳ್ಳುವ ಜೊತೆಗೆ ಮತ್ತಷ್ಟು ಚಿಕ್ಕ ವಯಸ್ಸಿನವರಂತೆಯೂ ಕಾಣಬಹುದಂತೆ.
ಹೌದು ನಿಮಗೆ ಅಚ್ಚರಿ ಆಗಬಹುದು. ಈ ರೀತಿಯ ನಿಮ್ಮ ಯೌವನ ಕಾಪಾಡಿಕೊಳ್ಳಬಹುದಾದ ಅತ್ಯಂತ ಪ್ರಬಾವಶಾಲಿ ಔಷಧವಂತೆ. ಮಿಲಿಯನೇರ್ ಟೆಕ್ ವಾಣಿಜ್ಯೋದ್ಯಮಿ ಬ್ರಿಯಾನ್ ಜಾನ್ಸನ್, ಈ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಜಾನ್ಸನ್ ಅವರು ಇದಕ್ಕೆ 'ಪ್ರಾಜೆಕ್ಟ್ ಬ್ಲೂಪ್ರಿಂಟ್' ಎಂದು ಕರೆದಿದ್ದು, ಇದು ವಿಶೇಷ ಆಹಾರ ಮತ್ತು 100 ಕ್ಕೂ ಹೆಚ್ಚು ದೈನಂದಿನ ಪೂರಕಗಳನ್ನು ಒಳಗೊಂಡಿದೆ.
"ಬ್ಲೂಪ್ರಿಂಟ್ ಸ್ಟಾಕ್" ಎಂದು ಕರೆಯಲ್ಪಡುವ ಪ್ರಾಜೆಕ್ಟ್ ಬ್ಲೂಪ್ರಿಂಟ್‌ನ ಒಂದು ಘಟಕವು ಪ್ರಸ್ತುತ ಮಾರುಕಟ್ಟೆಯಲ್ಲಿದೆ. ಈ ಸ್ಟಾಕ್ ಮಿಶ್ರಣ, ಪ್ರೋಟೀನ್, 8 ಕ್ಯಾಪ್ಸುಲ್ಗಳು, ಹಾವಿನ ಎಣ್ಣೆ, 67 ಪ್ರಬಲ ಚಿಕಿತ್ಸೆಗಳು ಮತ್ತು 400 ಕ್ಯಾಲೋರಿಗಳನ್ನು ಒಳಗೊಂಡಿದೆ. ಇದು 1,000 ಕ್ಕೂ ಹೆಚ್ಚು ಕ್ಲಿನಿಕಲ್ ಪ್ರಯೋಗಗಳ ಸಂಶೋಧನೆಗಳಿಗೆ ಒಳಪಟ್ಟು ಉತ್ಪನ್ನ ಹೊರಬಂದಿದೆ.
ಜಾನ್ಸನ್ ಸ್ಟಾಕ್ ಅನ್ನು ವ್ಯಾಪಕವಾದ ಸಂಶೋಧನೆಯಿಂದ ಹೊರತರಲಾಗಿದೆ. ಜೊತೆಗೆ ತ್ವರಿತ ಆಹಾರಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಒಂದು ತಿಂಗಳ ಕೋರ್ಸ್‌ಗಾಗಿ $343 ಆಗುತ್ತದೆ. ಅದರೆ ಸುಮಾರು 28,500 ರೂಪಾಯಿಗಳು.
ಇದು ಎರಡನೇ ತಾಯಿ ಹಾಲು ಎಂದು ಜಾನ್ಸನ್
ಈ ಉತ್ಪನ್ನವನ್ನು ಜಾನ್ಸನ್ ತಾಯಿಯ ಎದೆಹಾಲಿಗೆ ಹೋಲಿಸಲಾಗಿದೆ. ತಾಯಿಯ ಹಾಲು ಮಗುವಿಗೆ ಎಷ್ಟು ಮುಖ್ಯ ಎಂದರೆ ಮಗು ಮುಂದಿನ ತನ್ನ ಜೀವಿತಾವಧಿಯಲ್ಲಿ ಈ ತಾಯಿ ಎದೆಹಾಲಿನ ಉಪಯೋಗ ಪಡೆದುಕೊಳ್ಳಲಿದೆ. ಈ ಹಾಲಿಗೆ ನಮ್ಮ ಉತ್ಪನ್ನ ಸಮವಾಗಿದೆ ಎಂದು ಜಾನ್ಸನ್ ಹೇಳಿಕೊಂಡಿದ್ದಾರೆ.
ತಾವು ತಮ್ಮ ವಯಸ್ಸಿಗಿಂತಲೂ ಪ್ರಸ್ತುತ 5 ವರ್ಷ ಹಿಂದೆ ಸರಿದಂತೆ ಕಂಡುಬರುತ್ತೇನೆ ಎಂದು ತಮಗೆ ತಾವೇ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಆರೋಗ್ಯದಲ್ಲಾಗಿರುವ ಪ್ರಯೋಜನಗಳ ವಿವರಿಸಿದ್ದಾರೆ. ಪ್ರಾಜೆಕ್ಟ್ ಬ್ಲೂಪ್ರಿಂಟ್‌ನಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಿದ್ದಾರೆ, ವಿಶೇಷ ಆಹಾರ, ವೈದ್ಯಕೀಯ ಮೇಲ್ವಿಚಾರಣೆ, ಚಿಕಿತ್ಸೆಗಳು ಮತ್ತು ದೈಹಿಕ ಚಟುವಟಿಕೆಯನ್ನು ಒಳಗೊಂಡಿದೆ. ಈ ವರ್ಷದ ಆರಂಭದಲ್ಲಿ, ಜಾನ್ಸನ್ ಮತ್ತೊಂದು ಸ್ವಯಂ-ಕಲ್ಪಿತ ಕಾರ್ಯಕ್ರಮದ ಮೂಲಕ ಕೂದಲು ಉದುರುವಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿರುವುದಾಗಿಯೂ ಘೋಷಿಸಿದ್ದಾರೆ.
ಈ ಉತ್ಪನ್ನ ಪಡೆಯುವುದು ಹೇಗೆ?
ಅಮೆರಿಕ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ, ನ್ಯೂಜಿಲೆಂಡ್, ನೆದರ್ಲ್ಯಾಂಡ್ಸ್, ನಾರ್ವೆ, ಪೋಲೆಂಡ್ ಸೇರಿದಂತೆ 23 ದೇಶಗಳಿಗೆ ತಮ್ಮ ಉತ್ಪನ್ನವನ್ನು ತಲುಪಿಸಬಹುದು ಎಂದು ಜಾನ್ಸನ್ ದೃಢಪಡಿಸಿದ್ದಾರೆ. ಇನ್ನೂ ಹಲವು ದೇಶಗಳಲ್ಲಿ ಈ ಉತ್ಪನ್ನ ಪರೀಕ್ಷೆಗೊಳಪಟ್ಟಿದೆ ಎಂದು ಅವರು ವಿವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಈ ಉತ್ಪನ್ನವನ್ನು ವಿಶ್ವದಾದ್ಯಂತ ತಲುಪಿಸುವ ಗುರಿ ಹೊಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications