Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಕೇರಳದಲ್ಲಿ ಮತ್ತೊಂದು ಶಂಕಿತ ಮಂಕಿಪಾಕ್ಸ್ ಪತ್ತೆ.! ಆರಂಭಿಕ ಲಕ್ಷಣವೇನು ಗೊತ್ತಾ?
ಕೇರಳದ ಉತ್ತರ ಮಲಪ್ಪುರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 38 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿ ಪಾಕ್ಸ್ ಸೋಂಕು ದೃಢಪಟ್ಟಿತ್ತು. ಆತ ಯುಎಇಯಿಂದ ಕೇರಳಕ್ಕೆ ಆಗಮಿಸಿದ್ದ ಎಂದು ತಿಳಿದುಬಂದಿತ್ತು. ಈ ಕೇಸ್ ದೃಢವಾಗುತ್ತಿದ್ದಂತೆಯೇ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು. ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂದ ಸೇರಿ ಹೊಸ ಮಾರ್ಗಸೂಚಿ ಹೊರತರಲಾಗಿತ್ತು.
ಈಗ ಕೇರಳದಲ್ಲಿ ಮತ್ತೊಂದು ಎಂಪಾಕ್ಸ್ ಶಂಕಿತ ಪ್ರಕರಣ ಕೇಳಿಬಂದಿದೆ. ಆಲಪ್ಪುಳದ ತ್ರಿಕುನ್ನಪ್ಪುಳದ ವ್ಯಕ್ತಿಯನ್ನು ಅಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (MCH) ದಾಖಲಿಸಲಾಗಿದೆ. ಸುಮಾರು ಎರಡು ವಾರಗಳ ಹಿಂದೆ ಬಹ್ರೇನ್‌ನಿಂದ ಹಿಂದಿರುಗಿದ ವ್ಯಕ್ತಿಯು ಜ್ವರ ಮತ್ತು ದದ್ದುಗಳಂತಹ ರೋಗ ಲಕ್ಷಣ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ವ್ಯಕ್ತಿ ಆರಂಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಆದಾಗ್ಯೂ, ರೋಗಲಕ್ಷಣಗಳು ಮತ್ತು ಅವರ ಇತ್ತೀಚಿನ ಪ್ರಯಾಣದ ಹಿಸ್ಟರಿ ಆಸ್ಪತ್ರೆ ಸಿಬ್ಬಂದಿಗೆ ಇದು ಎಂಪಾಕ್ಸ್ ಇರಬಹುದು ಎಂಬ ಶಂಕೆಗೆ ಕಾರಣವಾಗಿದೆ. ತಕ್ಷಣ ರೊಗಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಐಸೋಲೇಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ವೈರಸ್‌ನ ಸಂಭಾವ್ಯ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಯನ್ನು ಪ್ರತ್ಯೇಕ ವಾರ್ಡ್‌ನಲ್ಲಿಡಲಾಗಿದೆ. ಪರೀಕ್ಷೆಯ ಫಲಿತಾಂಶಗಳು ಲಭ್ಯವಾದ ನಂತರ, ನಾವು ರೋಗನಿರ್ಣಯವನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಂಪಾಕ್ಸ್‌ನ ಆರಂಭಿಕ ರೋಗಲಕ್ಷಣಗಳೇನು?
Mpox ಒಂದು ವೈರಲ್ ಕಾಯಿಲೆಯಾಗಿದ್ದು ಅದು ಸಿಡುಬಿನ ಲಕ್ಷಣಗಳನ್ನು ಹೋಲುತ್ತದೆ. ಆದರೆ ಅಷ್ಟೊಂದು ತೀವ್ರತೆ ಇರುವುದಿಲ್ಲ. ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರಮುಖ ಏಕಾಏಕಿ ಕಾರಣ ಇದನ್ನು ಜಾಗತಿಕ ಆರೋಗ್ಯ ಕಾಳಜಿ ಎಂದು ಘೋಷಿಸಲಾಗಿದೆ. ಈ ರೋಗವು ಒಂದು ಕಾಲದಲ್ಲಿ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾಕ್ಕೆ ಸೀಮಿತವಾಗಿತ್ತು. ಆದರೆ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ.
ಎಂಪಾಕ್ಸ್‌ನ ಲಕ್ಷಣ
ಜ್ವರ: ಮೊದಲ ರೋಗಲಕ್ಷಣಗಳಲ್ಲಿ ಒಂದಾದ ಹೆಚ್ಚಿನ ಜ್ವರ, ತೀವ್ರವಾಗಿ ಜ್ವರ ಕಾಣಿಸಿಕೊಳ್ಳುವುದರಿಂದ ಓಡಾಡುವುದು ಸಹ ಕಷ್ಟವಾಗುತ್ತದೆ.
ದದ್ದುಗಳು: ಚರ್ಮದ ದದ್ದುಗಳು ಎಂಪಾಕ್ಸ್‌ನ ವಿಶಿಷ್ಟ ಲಕ್ಷಣವಾಗಿದೆ, ಇದು ಫ್ಲಾಟ್ ಕೆಂಪು ಚುಕ್ಕೆಗಳಂತೆ ಪ್ರಾರಂಭವಾಗುತ್ತದೆ, ಅದು ದ್ರವದಿಂದ ತುಂಬಿದ ಗುಳ್ಳೆಗಳು ಮತ್ತು ಪಸ್ಟಲ್‌ಗಳಾಗಿ ಬೆಳೆಯುತ್ತದೆ. ಕೆಲೊಮ್ಮೆ ಇದರಿಂದ ರಕ್ತಬರುವ ಸಾಧ್ಯತೆಯೂ ಇರುತ್ತದೆ.
ತಲೆನೋವು: ಆರಂಭಿಕ ರೋಗಲಕ್ಷಣಗಳ ಭಾಗವಾಗಿ ಅನೇಕ ರೋಗಿಗಳು ತೀವ್ರ ತಲೆನೋವು ಅನುಭವಿಸುತ್ತಾರೆ.
ಸ್ನಾಯು ನೋವು ಮತ್ತು ಆಯಾಸ: ಸಾಮಾನ್ಯ ದೇಹದ ನೋವು, ಸ್ನಾಯು ನೋವು ಮತ್ತು ತೀವ್ರ ಆಯಾಸ ಅನಾರೋಗ್ಯದ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿದೆ.
ಮಂಕಿಪಾಕ್ಸ್ ಹೇಗೆ ಹರಡುತ್ತದೆ?
ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ವಸ್ತುಗಳಿಗೆ ಒಡ್ಡಿಕೊಳ್ಳುವುದರ ಮೂಲಕ Mpox ಅನ್ನು ಹರಡುತ್ತದೆ ಎಂದು ತಿಳಿದುಬಂದಿದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ಈ ಕಾಯಲೆ ಮಾರಣಾಂತಿಕವಾಗಿ ಪರಿಣಮಿಸಲಿದೆ.
ಆಗಸ್ಟ್ 14 ರಂದು, ವಿಶ್ವ ಆರೋಗ್ಯ ಸಂಸ್ಥೆ (WHO) Mpox ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಈಗ ಈ ಮಂಕಿಪಾಕ್ಸ್ ವಿಶ್ವದ ಹಲವು ದೇಶಗಳಲ್ಲಿ ವ್ಯಾಪಿಸಿದೆ. ಇತ್ತೀಚಿಗೆ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂಪಾಕ್ಸ್ ಶಂಕಿತ ಪ್ರಕರಣ ವರದಿಯಾಗಿತ್ತು.
ಮಂಕಿಪಾಕ್ಸ್ ತಡೆಗಟ್ಟಲು ಕೈಗಳನ್ನು ಅಗಾಗ ಸೋಪು ಹಚ್ಚಿ ತೊಳೆಯಿರಿ. ಸೋಂಕು ತಗುಲಿರುವ ವ್ಯಕ್ತಿಯನ್ನು ಮುಟ್ಟಬೇಡಿ. ಮಾಂಸವನ್ನು ಚೆನ್ನಾಗಿ ಬೇಯಸಿ ತಿನ್ನಬೇಕು ಅವುಗಳ ಮಲ, ಮೂತ್ರ, ದ್ರವಾಂಶ ತಾಗದಂತೆ ಜಾಗ್ರತೆವಹಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications