Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
6 ತಿಂಗಳಲ್ಲಿ 30 ಕೆ.ಜಿ ತೂಕ ಇಳಿಸಿದ ಯುವತಿ..! ಆಕೆ ಹಂಚಿಕೊಂಡ ಸುಲಭದ ಟಿಪ್ಸ್ ಇಲ್ಲಿದೆ.!!
ತೂಕ ಇಳಿಸಿಕೊಂಡು ತೆಳ್ಳಗೆ ಕಾಣಿಸಬೇಕು ಎಂಬ ಆಸೆ ಎಲ್ಲರಲ್ಲು ಇರುವುದು ಸಹಜ. ಅದರಲ್ಲೂ ಇತ್ತೀಚಿನ ಜೀವನ ಶೈಲಿ, ಆಹಾರ ಕ್ರಮದ ಕಾರಣದಿಂದಾಗಿ ಚಿಕ್ಕ ಮಕ್ಕಳಲ್ಲೂ ಕೂಡ ತೂಕ ಹೆಚ್ಚಳದಂತಹ ಸಮಸ್ಯೆ ನೋಡಬಹುದು. ಹಾಗೆ ವಯಸ್ಕರಲ್ಲೂ ಬೊಜ್ಜು ಹೆಚ್ಚಾಗುವುದು ಈಗ ಅನಾರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಇನ್ನು ಮಹಿಳೆಯರ ವಿಚಾರದಲ್ಲೂ ಕೂಡ ಇದೇ ರೀತಿಯ ಸಮಸ್ಯೆ ನೋಡಬಹುದು. ಏಕಾಏಕಿ ತೂಕ ಹೆಚ್ಚಳವಾಗುವುದು, ವಿಪರಿತ ತೂಕ ಹೆಚ್ಚಳ ನೋಡಬಹುದು. ಆದ್ರೆ ಈ ತೂಕ ಇಳಿಸಿಕೊಳ್ಳಲು ಹಲವು ರೀತಿಯ ಹರಸಾಹಸ ಮಾಡುತ್ತಾರೆ. ಜಿಮ್, ವ್ಯಾಯಾಮ, ಉಪವಾಸ, ಡಯೆಟ್ ಹೀಗೆ ಒಂದಲ್ಲಾ ಒಂದು ಸಾಹಸದ ಮೂಲಕ ತೂಕ ಇಳಿಸಲು ಮುಂದಾಗುತ್ತಾರೆ.

ಆದ್ರೆ ತೂಕ ಇಳಿಸೋದು ಅಂದ್ರೆ ಸುಲಭದ ಮಾತಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ ತೂಕ ನೀವುಂದುಕೊಂಡಂತೆ ಇಳಿಸಲು ಆಗಿರುವುದಿಲ್ಲ. ಆದ್ರೆ ಕೆಲವರು ಮಾತ್ರ ಬಹುಬೇಗವಾಗಿ ತೂಕ ಈಳಿಸಿರುತ್ತಾರೆ. ಹಾಗೆ ಇಲ್ಲೊಬ್ಬ ಮಹಿಳೆ ಕೂಡ ಕೇವಲ 6 ತಿಂಗಳಿನಲ್ಲಿ 30 ಕೆ.ಜಿ ತೂಕ ಇಳಿಸಿ ಎಲ್ಲರು ಹುಬ್ಬೇರುವಂತೆ ಮಾಡಿದ್ದಾಳೆ.
24 ವರ್ಷದ ಸೋನಿಯಾ ಎಂಬಾಕೆ ಕೇವಲ 6 ತಿಂಗಳಿನಲ್ಲಿ ಬರೋಬ್ಬರಿ 30 ಕೆ.ಜಿ ತೂಕ ಇಳಿಸಿರುವುದು ಎಲ್ಲರಲ್ಲು ಅಚ್ಚರಿ ಮೂಡಿಸಿದ್ದಾಳೆ. ಸೋನಿಯಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತಂತೆ ಹಲವು ವಿಡಿಯೋಗಳ ಹಂಚಿಕೊಂಡಿದ್ದು, ನಿಯಮಿತ ಆಹಾರ ಸೇವಿಸುತ್ತಲೇ ತಿಂಗಳಿಗೆ 5 ಕೆ.ಜಿ ಇಳಿಸಿದ್ದಾಳೆ. ಇದು ಎಂತಹ ಡಯೆಟ್ ಮಾಡುವವರಿಗೂ ಹುಬ್ಬೇರುವಂತೆ ಮಾಡಿದೆ.
ಆಕೆ ತನ್ನ ಇನ್ಸ್‌ಸ್ಟಾಗ್ರಾಮ್ ಮೂಲಕ ತೂಕ ಇಳಿಸಲು ಏನು ಮಾಡಬೇಕು ಎಂಬುದನ್ನು ತಿಳಿಸುವುದು, ಹಾಗೆ ಯಾವೆಲ್ಲಾ ಡಯೆಟ್ ಮಾಡಬೇಕು ಎಂಬ ಕುರಿತು ವಿವರಣೆ ನೀಡುತ್ತಾಳೆ. ಈ ಕ್ರಮವನ್ನು ಹಲವರು ಅನುಸರಿಸುವುದಾಗಿಯೂ ಹೇಳಿದ್ದಾರೆ.
ತೂಕ ಇಳಿಸಲು ಆಕೆಯ ಡಯೆಟ್ ಏನು?
ಇನ್ಸ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಸೋನಿಯಾ ಊಟ ಮಾಡುವ ಮೊದಲು ಏನು ಮಾಡಬೇಕು ಎಂಬುದನ್ನು ವಿವರಿಸಿದ್ದಾಳೆ. ಊಟಕ್ಕೂ ಮೊದಲು ಎರಡು ಗ್ಲಾಸ್ ನೀರು ಕುಡಿಯಬೇಕಂತೆ ಹಾಗೆ ಊಟದ ಮೇಲಿನ ಹತೋಟಿಗೆ ಯಾವಾಗಲು ಸಣ್ಣ ತಟ್ಟೆಯನ್ನು ಬಳಸಬೇಕಂತೆ. ಹಾಗೆ ನಿತ್ಯ ಬೇಳೆ, ಸೋಯಾಬಿನ್ ಸೇರಿ ಪ್ರೋಟಿನ್ ತುಂಬಿರುವ ಆಹಾರ ಸೇವಿಸಬೇಕಂತೆ. ತುಪ್ಪ, ರೊಟ್ಟಿ, ಅನ್ನ ಕೂಡ ತೂಕ ಇಳಿಸಲು ಸಹಕಾರಿಯಾಗಲಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಸೋನಿಯಾ ದೈನಂದಿನ ಚಟುವಟಿಕೆ ಏನು?
ಬೆಳಗ್ಗೆ ಬೇಗ ಏಳುವುದು. ಬೆಳಗ್ಗೆ 5 ಗಂಟೆಗೂ ಮುನ್ನವೇ ಏಳುವುದು, ನಂತರ ಓಟ, ಸುಮಾರು 2ರಿಂದ 3 ಕಿ.ಮೀ ಓಟ. ಓಟದ ನಂತರ ವ್ಯಾಯಾಮ ಮಾಡುವುದು. ವ್ಯಾಯಾಮದ ನಂತರ ಸ್ನಾನ, ಹಾಗೆ ಹೊಟ್ಟೆ ತುಂಬುವಷ್ಟ ತಿಂಡಿ ಸವಿಯುವುದು. ಹಾಗೆ ದಿನವಿಡಿ 3ರಿಂದ 4 ಲೀಟರ್ ನೀರು ಕುಡಿಯುವುದು. ಸಂಜೆ ಮತ್ತೊಂದು ಸುತ್ತಿನ ವ್ಯಾಯಾಮ ಮಾಡುವುದು. ಹಾಗೆ ರಾತ್ರಿಯ ಊಟಕ್ಕೆ ಸೂಪ್‌ಗಳು, ಮೊಟ್ಟೆ, ಚಪಾತಿ, ಸಲಾಡ್ ಸವಿಯುವುದು ಆಕೆಯ ನಿತ್ಯದ ದಿನಚರಿಯಂತೆ.
ನಿತ್ಯ 6 ತಿಂಗಳ ಕಾಲ ಇದೇ ರೀತಿ ಮಾಡಿದ್ದರ ಪರಿಣಾಮವಾಗಿ ಆಕೆ ಬರೋಬ್ಬರಿ 30 ಕೆ.ಜಿ ತೂಕ ಇಳಿಸಿಕೊಂಡಿದ್ದಾಳೆ. ಆಕೆಯ ಆಕೆಯ ಇನ್ಸ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ಕರಿದ ತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸಿರುವುದಾಗಿ, ಪ್ಯಾಕ್ ಮಾಡಲಾದ ಆಹಾರ, ಸಕ್ಕರೆ ಅಂಶದ ಆಹಾರ ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಾಳೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
