Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಖೆಲೀಫ್ ಮಹಿಳೆಯಾಗಿದ್ರು ಪುರುಷರಂತೆ ಕಾಣೋದೇಕೆ..? ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾದ್ರೆ ಹೀಗಾಗುತ್ತಾ?
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್ ವಿರುದ್ಧ ಹೊಸ ವಿವಾದವೇ ಹುಟ್ಟುಕೊಂಡಿದೆ. ಬಾಕ್ಸಿಂಗ್ ಪಂದ್ಯದಲ್ಲಿ ಇಟಲಿಯ ಏಂಜೆಲಾ ಕ್ಯಾರಿನಿ ವಿರುದ್ಧ ಕಣಕ್ಕಿಳಿದಿದ್ದ ಖೇಲಿಫ್ ಒಂದೇ ಪಂಚ್ ನೀಡಿದ್ದರಿಂದ ಕ್ಯಾರಿನಿ ಮೂಗಿನಿಂದ ರಕ್ತ ಸೋರಿತ್ತು, ಈ ಕಾರಣದಿಂದಲೇ ಆಕೆ ಪಂದ್ಯದಿಂದ ಹೊರಗುಳಿದಿರುವುದಾಗಿ ಆಕೆ ಹೇಳಿದ್ದಾಳೆ. ಆದರೆ ಖೇಲಿಫ್ ಲಿಂಗದ ಆಧಾರದಲ್ಲಿ ಚರ್ಚೆ ಆರಂಭವಾಗಿದೆ.
ಬಾಕ್ಸಿಂಗ್ ಜಗತ್ತಿನಲ್ಲಿ ಲಿಂಗ ಅರ್ಹತೆಯ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಕಳೆದ ವರ್ಷ ಅಲ್ಜೀರಿಯನ್ ಪಟು ಖೇಲಿಫ್ ಲಿಂಗ ಅರ್ಹತಾ ಪರೀಕ್ಷೆಗಳಲ್ಲಿ ವಿಫಲವಾದ ನಂತರ ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ 2023 ರ ವಿಶ್ವ ಚಾಂಪಿಯನ್‌ಶಿಪ್‌ನಿಂದಲೂ ಅವರನ್ನ ಅನರ್ಹಗೊಳಿಸಲಾಗಿತ್ತು. ಆದರೆ ಒಲಿಂಪಿಕ್‌ನಲ್ಲಿ ಅರ್ಹತೆ ಗಿಟ್ಟಿಸಿರುವುದು ಚರ್ಚೆ ಹುಟ್ಟುಹಾಕಿದೆ.

ಆದರೆ ಖೇಲಿಫ್ ಅಪರೂಪದ ವೈದ್ಯಕೀಯ ಸ್ಥಿತಿ ಹೊಂದಿದ್ದಾಳೆ ಎಂದು ಹಲವರು ಅವರ ಪರವಾಗಿಯೂ ನಿಂತಿದ್ದಾರೆ. ಹೈಪರಾಂಡ್ರೊಜೆನಿಸಂ - ಈ ಸ್ಥಿತಿಯು ಆಕೆಯ ರಕ್ತದಲ್ಲಿ ಅಸಹಜವಾಗಿ ಹೆಚ್ಚಿನ ಆಂಡ್ರೊಜೆನ್ ಮಟ್ಟಕ್ಕೆ ಹೆಚ್ಚಳಕ್ಕೆ ಕಾರಣವಾಗಿದ್ದು, ಇದು ಹೆಚ್ಚಿನ ಟೆಸ್ಟೋಸ್ಟೆರಾನ್ ಮತ್ತು XY ಕ್ರೋಮೋಸೋಮ್‌ಗಳ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಸರಳವಾಗಿ ಹೇಳುವುದಾದರೆ ಈ ಹಾರ್ಮೋನ್‌ಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ಎಂದರೆ ಏನು?
ಈ ವಿವಾದವು ಕ್ರೀಡಾ ವಲಯದಲ್ಲಿ ಟೆಸ್ಟೋಸ್ಟೆರಾನ್ ಪಾತ್ರದ ಬಗ್ಗೆ ವಿಶಾಲವಾದ ಚರ್ಚೆಯನ್ನು ಎತ್ತಿ ತೋರಿಸಿದೆ. ಟೆಸ್ಟೋಸ್ಟೆರಾನ್ ಪುರುಷರು ಮತ್ತು ಮಹಿಳೆಯರಲ್ಲಿ ಉತ್ಪತ್ತಿಯಾಗುವ ಲೈಂಗಿಕ ಹಾರ್ಮೋನ್ ಆಗಿದೆ. ಆದಾಗ್ಯೂ, ಪುರುಷರಲ್ಲಿ, ಈ ಹಾರ್ಮೋನ್ ಮಟ್ಟವು ಶೇ. 20ರಷ್ಟು ಹೆಚ್ಚು ಉತ್ಪಾದನೆಯಾಗಲಿದೆ. ಅದ್ರಲ್ಲೂ ಪುರುಷರಲ್ಲಿ ಲೈಂಗಿಕಾಸಕ್ತಿಗೆ ಇದು ಕಾರಣವಾದರೆ ವೃಷಣಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ಮಹಿಳೆಯರಲ್ಲಿ ಅಂಡಾಶಯಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ.
ವೈದ್ಯರ ಪ್ರಕಾರ, ಪುರುಷರಿಗೆ ಸಾಮಾನ್ಯ ಮಟ್ಟದ ಟೆಸ್ಟೋಸ್ಟೆರಾನ್ ರಕ್ತದಲ್ಲಿ ಪ್ರತಿ ಲೀಟರ್‌ಗೆ 10-35 ನ್ಯಾನೊಮೋಲ್‌ಗಳು ಎಂದು ಅಂದಾಜಿಸಲಾಗಿದೆ. ಮಹಿಳೆಯರಿಗೆ, ಇದು ಪ್ರತಿ ಲೀಟರ್‌ಗೆ 0.5-2.4 ನ್ಯಾನೊಮೋಲ್‌ಗಳಷ್ಟು ಇರುತ್ತದೆ. ಟೆಸ್ಟೋಸ್ಟೆರಾನ್ ಮಟ್ಟವು ವಯಸ್ಸಿನಿಮದ ವಯಸ್ಸಿಗೆ ಸೇರಿ ಎಲ್ಲರಲ್ಲೂ ಬದಲಾಗಬಹುದು.
ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಧಿಕವಾದರೆ ಏನಾಗುತ್ತದೆ?
ಮಹಿಳೆಯರಲ್ಲಿ ಈ ಹಾರ್ಮೋನ್ ಹೆಚ್ಚಳವಾದರೆ ಪುರುಷರ ಲಕ್ಷಣಗಳು ಗೋಚರವಾಗುತ್ತದೆ. ದೈಹಿಕವಾಗಿ ಮಾನಸಿಕವಾಗಿಯೂ ಇದು ಪರಿಣಾಮ ಬೀರಲಿದೆ. ಮುಖದ ಮೇಲೆ ಕೂದಲು ಬರುವುದು, ಕೂದಲು ಉದುರುವುದು, ಧ್ವನಿ ಗಢಸಾಗುವುದು, ಅನಿಯಂತ್ರಿತ ಋತುಚಕ್ರ, ಕಡಿಮೆ ಕಾಮಾಸಕ್ತಿ ಸೇರಿ ಹಲವು ರೀತಿಯಲ್ಲು ಪುರುಷರ ಲಕ್ಷಣಗಳನ್ನು ಅವರು ಹೋಲುತ್ತಾರೆ.
ಮಹಿಳೆಯರಲ್ಲಿ ಈ ಪುರುಷರ ಹಾರ್ಮೋನ್ ಬರಲು ಕಾರಣವೇನು?
ಇದು ಹಾರ್ಮೋನಿನ ಅಸಾಮಾನ್ಯ ಸ್ಥಿತಿಯಲ್ಲಿ ಒಂದಾಗಿದ್ದು, ಬೆನ್ನು, ಮುಖ ಮತ್ತು ಎದೆಯ ಮೇಲೆ ಪುರುಷರಂತೆ ಕೂದಲು ಕಾಣಿಸಿಕೊಳ್ಳುತ್ತದೆ. ದೇಹದ ಕೂದಲಿನ ಬೆಳವಣಿಗೆಯ ಪ್ರಮಾಣವು ವಂಶಾವಳಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ, ಆದರೆ ಈ ಸ್ಥಿತಿಯು ಪ್ರಾಥಮಿಕವಾಗಿ ಆಂಡ್ರೊಜೆನ್ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ.
ಒಲಿಂಪಿಕ್‌ನ ಅಲ್ಜಿರಿಯನ್ ಕ್ರೀಡಾಪಟು ಖೆಲೀಫ್ ಪ್ರಕರಣದಲ್ಲೂ ಅವರು ಹೆಚ್ಚಿನ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೊಂದಿರುವುದು ಅವರ ಈ ಸ್ಥಿತಿಗೆ ಕಾರಣವಾಗಿದೆ ಎಂಬುದು ಕೆಲವರ ವಾದವಾಗಿದೆ. ಆದರೆ ಖೇಲಿಫ್ ಪ್ರಕರಣದಲ್ಲಿ ಅಕೆಯನ್ನು ಮಹಿಳೆ ಅಂತಲೇ ಪರಿಗಣಿಸಲಾಗಿದೆ. ಆದರೆ ಹಾರ್ಮೋನ್‌ಗಳ ಈ ಪರಿಸ್ಥಿತಿಯಲ್ಲಿ ಆಕೆ ಬಯೋಲಾಜಿಕಲ್ ಪುರುಷ ಅಂತಲೂ ಹೇಳಲಾಗುತ್ತಿದೆ. ಸದ್ಯ ಈ ಪ್ರಕರಣದಲ್ಲಿ ಮುಂದೊಂದು ದಿನ ಒಲಿಂಪಿಕ್‌ಗೆ ಹೊಸ ನಿಯಮ ಬಂದರೂ ಬರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









