Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಮದ್ಯ ಸೇವನೆಯೇ ಈ 6 ಕ್ಯಾನ್ಸರ್‌ಗೆ ಕಾರಣ: ಹೊಸ ಅಧ್ಯಯನ ವರದಿ ಬಹಿರಂಗ
ಮದ್ಯಪಾನ ಸೇವನೆ ಎಷ್ಟೊಂದು ಅಪಾಯಗಳಿಗೆ ಕಾರಣವಾಗಲಿದೆ ಎಂಬುದು ನಮಗೆಲ್ಲಾ ತಿಳಿದಿರುವ ಮಾಹಿತಿ. ಅದರಲ್ಲೂ ಮದ್ಯ ಸೇವನೆ ನಮ್ಮ ಲಿವರ್ ಹಾನಿಗೆ ಪ್ರಮುಖ ಕಾರಣ. ಮದ್ಯಪಾನದಿಂದಾಗಿ ದೇಹದ ಪ್ರತಿಯೊಂದು ಅಂಗವೂ ಹಾನಿಗೊಳಗಾಗುವುದನ್ನು ನಾವು ನೋಡಬಹುದು. ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಅಪಾಯ ತಂದೊಡ್ಡುವುದು ಮದ್ಯಪಾನ ಎಂಬ ಕೆಟ್ಟ ಚಟವಾಗಿದೆ.
ಹಾಗೆ ಇಂದು ಭಾರತವು ಸೇರಿ ವಿಶ್ವದ ಮೂಲೆ ಮೂಲೆಯಲ್ಲಿ ವರದಿಯಾಗುವ ಹಲವು ವಿಧವಾದ ಕ್ಯಾನ್ಸರ್‌ಗೆ ಈ ಮದ್ಯ ಸೇವನೆಯೂ ಕೂಡ ಒಂದು ಕಾರಣವಾಗಿದೆ. ಆದ್ರೆ ಈಗ ಮಾನವರಲ್ಲಿ ಉಂಟಾಗುತ್ತಿರುವ ಬರೋಬ್ಬರಿ 6 ರೀತಿಯ ಕ್ಯಾನ್ಸರ್‌ಗಳಿಗೆ ಮದ್ಯ ಸೇವನೆ ಕಾರನವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಎಲ್ಲಾ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 5ಕ್ಕಿಂತ ಹೆಚ್ಚು ಪ್ರಕರಣಗಳು ಮದ್ಯ ಸೇವನೆಯಿಂದ ಉಂಟಾಗುತ್ತಿದೆ ಎಂದು ವರದಿಯಾಗಿದೆ.

ಎಲ್ಲಾ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 40ರಷ್ಟು ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳೊಂದಿಗೆ ಸಂಬಂಧಿಸಿವೆ ಎಂದು ಅಧ್ಯಯನ ತಿಳಿಸಿದೆ. ಈ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆಯಾಗಲಿದೆ. ಹಾಗಾದ್ರೆ ಮದ್ಯ ಸೇವನೆಯಿಂದ ಯಾವೆಲ್ಲಾ ರೀತಿಯ ಕ್ಯಾನ್ಸರ್‌ಗೆ ಒಳಗಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
- ತಲೆ ಮತ್ತು ಕತ್ತಿನ ಕ್ಯಾನ್ಸರ್
- ಅನ್ನನಾಳದ ಕ್ಯಾನ್ಸರ್
- ಯಕೃತ್ತಿನ ಕ್ಯಾನ್ಸರ್
- ಸ್ತನ ಕ್ಯಾನ್ಸರ್
- ಕೊಲೊರೆಕ್ಟಲ್ / ಕೊಲೊನ್ ಕ್ಯಾನ್ಸರ್
- ಹೊಟ್ಟೆಯ/ ಉದರ ಕ್ಯಾನ್ಸರ್
ಈ ಕ್ಯಾನ್ಸರ್‌ಗಳು ಮತ್ತಷ್ಟು ತೀವ್ರತೆ ಪಡೆಯುವಲ್ಲಿ ಮದ್ಯಪಾನ ಪ್ರಮುಖ ಪಾತ್ರವಹಿಸುತ್ತಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಅಲ್ಲದೆ ಆಲ್ಕೋಹಾಲ್, ಸಂಸ್ಕರಿದ ಆಹಾರ, ತಂಬಾಕು, ಜಡ ಜೀವನ ಶೈಲಿ, ಸ್ಥೂಲಕಾಯತೆಯು ಕೂಡ ಕ್ಯಾನ್ಸರ್‌ಗೆ ಕಾರಣವಾಗಬಹುದು. ಯುಎಸ್ ಕ್ಯಾನ್ಸರ್ ರೋಗನಿರ್ಣಯದ ಸುಮಾರು 20% ಹೆಚ್ಚುವರಿ ದೇಹದ ತೂಕ, ಅನಾರೋಗ್ಯಕರ ಆಹಾರದ ಮಾದರಿಗಳು, ಆಲ್ಕೋಹಾಲ್ ಸೇವನೆ ಮತ್ತು ದೈಹಿಕ ನಿಷ್ಕ್ರಿಯತೆಗೆ ಸಂಬಂಧಿಸಿದೆ ಎಂದು ವರದಿಯು ತಿಳಿಸಿದೆ.
ಅತಿಯಾದ ಮದ್ಯಪಾನಕ್ಕೆ ಸಂಬಂಧಿಸಿದ ದೈಹಿಕ ಚಟುವಟಿಕೆ ಮತ್ತು ಸ್ಥೂಲಕಾಯತೆಯು ಪ್ರತ್ಯೇಕವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಕೂಡ ಈ ಅಧ್ಯಯನದಲ್ಲಿ ತಿಳಿದುಬಂದಿದೆ. ಆದರೆ ಕೆಲವರು ಬಿಯರ್ ಸೇರಿ ದುಬಾರಿ ಆಲ್ಕೋಹಾಲ್‌ಗಳು ಕ್ಯಾನ್ಸರ್ ಸೇರಿ ಹಲವು ರೋಗಗಳಿಗೆ ಕಡಿವಾಣ ಹಾಕಲಿದೆ ಎಂಬ ತಪ್ಪು ಕಲ್ಪನೆ ಇದೆ ಎಂದು ಅಧ್ಯಯನ ವರಿಯಲ್ಲಿ ಹೇಳಲಾಗಿದೆ.
ಇನ್ನು ಕ್ಯಾನ್ಸರ್ ತಗುಲಿದ ಬಳಿಕ ಆಲ್ಕೋಹಾಲ್ ಸೇವನೆ ಕಡಿಮೆ ಮಾಡುವುದು ಅಥವಾ ಮದ್ಯ ಸೇವನೆಯನ್ನು ನಿಲ್ಲಿಸುವುದು ಕ್ಯಾನ್ಸರ್ ಕೋಶಗಳು ಹರಡುವ ಅಪಾಯವನ್ನು ಶೇ.8ರಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ. ಹಾಗೆ ಮದ್ಯ ಸೇವಿಸುವವರಿಗೆ ಹೋಲಿಸಿದರೆ ಎಲ್ಲಾ ವಿಧವಾದ ಕ್ಯಾನ್ಸರ್ ಅಪಾಯಗಳು ಶೇ4ರಷ್ಟು ಕಡಿಮೆ ಮಾಡುವ ಸಾಧ್ಯತೆಯೂ ಇದೆ ಎಂದು ಅಧ್ಯಯನ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಆಲ್ಕೋಹಾಲ್ ಕನಿಷ್ಠ ಏಳು ವಿಧದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ತಿಳಿಸಿತ್ತು.
ಆದ್ರೆ ಮದ್ಯ ಸೇವನೆಯನ್ನು ತಕ್ಷಣ ನಿಲ್ಲಿಸಿದಾಗಲೂ ಸಮಸ್ಯೆ ಕಂಡುಬರುವುದು ನೋಡಬಹುದು.ಮದ್ಯಪಾನ ಮಾಡುವುದನ್ನು ಬಿಟ್ಟ ತಕ್ಷಣ ಹೃದಯದ ಆರೋಗ್ಯ ಎಂದಿನಂತಾಗುತ್ತದೆ. ಹೃದಯದ ಮೇಲಿನ ಒತ್ತಡ ನಿಧಾನವಾಗಿ ಕಡಿಮೆಯಾಗುತ್ತದೆ. ಇದು ಒಂದು ಬಗೆಯ ಸಮಾಧಾನ ನೀಡಿದರೂ ಹಲವು ರೀತಿಯ ಸಮಸ್ಯೆಗೂ ಇದು ಕಾರಣವಾಗುತ್ತದೆ. ಮೆದುಳಿನಲ್ಲಿ ಕೆಮಿಕಲ್ ರಿಯಾಕ್ಷನ್‌ಗೆ ಕಾರಣವಾಗುತ್ತದೆ. ಆದ್ರೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಆಲ್ಕೋಹಾಲ್ ಅತೀ ಹೆಚ್ಚು ಕೊಡುಗೆ ನೀಡುತ್ತದೆ. ಹೀಗಾಗಿ ಕ್ಯಾನ್ಸರ್‌ನ 6 ವಿಧಗಳಿಗೂ ಮದ್ಯಪಾನಕ್ಕೂ ನೇರಾನೇರ ಸಂಬಂಧವಿದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications