Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಕಾಂಟ್ಯಾಕ್ಟ್ ಲೆನ್ಸ್ ಹಾಕಿ ನಟಿ ಕಣ್ಣಿಗೆ ಹಾನಿ ..! ಕಾರ್ನಿಯಲ್ ಹಾನಿ ಆಗೋದು ಏಕೆ?
ಬಾಲಿವುಡ್ ಪಂಜಾಬಿ ಹಾಗೂ ತಮಿಳು ಸಿನಿಮಾದಲ್ಲೂ ನಟಿಸಿ ಯಾವುದೇ ಪಾತ್ರಕ್ಕಾದರೂ ಸೈ ಎನ್ನುವ ನಟಿ ಜಾಸ್ಮಿನ್ ಭಾಸಿನ್ ಈಗ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದಾರೆ. ಆಕೆ ಧರಿಸಿದ ಕಾಂಟ್ಯಾಕ್ಟ್ ಲೆನ್ಸ್ ನಿಂದಾಗಿ ಈ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ಕಾಂಟ್ಯಾಕ್ಟ್ ಲೆನ್ಸ್ ಧರಿಸಿದ್ದರು, ಆದರೆ ಇದಾದ ಕೆಲವೆ ಗಂಟೆಯಲ್ಲಿ ಕಣ್ಣಿನ ನೋವು ಕಾಣಿಸಿಕೊಂಡಿತ್ತು.
ಆದರೆ ಆಕೆ ಕಾಂಟ್ಯಾಕ್ಟ್ ಲೆನ್ಸ್ ತೆಗೆದ ಬಳಿಕವೂ ನೋವು ಕಾಣಿಸಿಕೊಂಡಿರುವುದಲ್ಲದೆ, ದೃಷ್ಟಿ ಮಸುಕಾದ ಅನುಭವವಾಗಿದೆ. ಹೀಗಾಗಿ ಸನ್‌ಗ್ಲಾಸ್ ಧರಿಸಲು ಮುಂದಾದ ಬಳಿಕವೂ ಉರಿ, ನೋವು ಹೆಚ್ಚಾಗಿದೆ. ತಕ್ಷಣ ಆಕೆ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ. ಆಕೆಯ ಕಾರ್ನಿಯಲ್ ಭಾಗಕ್ಕೆ ಹಾನಿಯಾಗಿರುವ ಕಾರಣ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇನ್ನೂ ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ.

ಹಾಗಾದ್ರೆ ಈ ಕಾರ್ನಿಯಲ್ ಹಾನಿ ಉಂಟಾಗಿದ್ದು ಹೇಗೆ? ಕಾರ್ನಿಯಲ್ ಹಾನಿಯಾಗುವುದು ಏಕೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಕಣ್ಣಿನ ದೃಷ್ಟಿಗೆ ನೆರವಾಗಿವ ಹಾಗೂ ಕಣ್ಣಿನ ಪ್ರಮುಖ ಅಂಗ ಅಂದರೆ ಅದು ಕಾರ್ನಿಯಲ್, ಅತ್ಯಂತ ಸೂಕ್ಷ್ಮವಾದ ಅಂಗವೂ ಇದಾಗಿದೆ. ದೃಷ್ಟಿ ಕೇಂದ್ರೀಕರಿಸಲು ಈ ಕಾರ್ನಿಯ ಸಹಾಯ ಮಾಡಲಿದೆ. ಕಾರ್ನಿಯಾಗೆ ಹಾನಿಯಾದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಕಾರ್ನಿಯಲ್ ಹಾನಿಯ ಕಾರಣಗಳೇನು?
ಕಾರ್ನಿಯಲ್ ಹಾನಿಗೆ ಹತ್ತು ಹಲವು ಕಾರಣಗಳಿವೆ. ಮುಖ್ಯವಾಗಿ ಕಣ್ಣಿಗೆ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು ಉಂಟಾಗುವುದು ಕಾರ್ನಿಯಲ್ ಹಾನಿಗೆ ಕಾರಣವಾಗಬಹುದು. ಇದರ ಜೊತೆಗೆ ಗಾಯವಾಗುವುದು ಸಹ, ಅಂದರೆ ಕಣ್ಣಿಗೆ ಗಾಯವಾಗುವುದು, ಗೀರುಗಳು ಮೂಡುವುದು, ಕಾಂಟ್ಯಾಕ್ಟ್ ಲೆನ್ಸ್‌ಗಳಿಂದ ಉಂಟಾಗುವ ಹಾನಿಯೂ ಸಹ ದೃಷ್ಟಿ ಸಮಸ್ಯೆಗೆ ಕಾರಣವಾಗಲಿದೆ. ಇದರ ಜೊತೆಗೆ ಫೋಷಕಾಂಶ ಕೊರತೆಯು ಸಹ ಇರಬಹುದು. ಮಕ್ಕಳಲ್ಲಿ ಕಣ್ಣಿನ ದೃಷ್ಟಿ ಬೆಳವಣಿಗೆಗೆ ಸಹಕಾರಿಯಾಗಬೇಕಾದ ಯಾವುದಾದರು ಪೋಷಕಾಂಶದ ಕೊರತೆಯಾದರೆ ಕಾರ್ನಿಯಲ್ ಹಾನಿಯ ಜೊತೆಗೆ ದೃಷ್ಟಿ ದೋಷವೂ ಉಂಟಾಗಬಹುದು.
ಕಾರ್ನಿಯಲ್ ಹಾನಿಯಾಗಿದೆ ಎಂದು ತಿಳಿಯುವುದು ಹೇಗೆ?
ಒಂದು ವೇಳೆ ಕಾರ್ನಿಯಲ್ ಹಾನಿ ಉಂಟಾದರೆ ಕಣ್ಣು ವಿಪರೀತ ನೋವು ಕಂಡುಬರುತ್ತದೆ. ನೀರು ಬರುವುದು, ಕೆಂಪಾವುದು, ಉರಿ, ದೃಷ್ಟಿ ಮಸುಕಾಗುವುದು ಉಂಟಾಗಬಹುದು.
ಇಲ್ಲಿ ನಟಿಯ ಪ್ರಕರಣದಲ್ಲೂ ಇದೇ ರೀತಿ ಉಂಟಾಗಿದೆ. ಅವರು ಕಾರ್ಯಕ್ರಮಕ್ಕೆ ಬಂದು ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡ ಬಳಿಕ ಸಮಸ್ಯೆ ಉದ್ಭವಿಸಿದೆ. "ಜುಲೈ 17 ರಂದು ನಾನು ಈವೆಂಟ್‌ಗಾಗಿ ದೆಹಲಿಯಲ್ಲಿದ್ದೆ, ಅದಕ್ಕಾಗಿ ನಾನು ತಯಾರಾಗುತ್ತಿದ್ದೆ. ನನ್ನ ಲೆನ್ಸ್‌ಗಳಲ್ಲಿ ಏನು ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ನಾನು ಅವುಗಳನ್ನು ಧರಿಸಿದ ನಂತರ, ನನ್ನ ಕಣ್ಣುಗಳು ನೋಯಿಸಲು ಪ್ರಾರಂಭಿಸಿದವು'' ಎಂದು ಅವರೇ ತಿಳಿಸಿದ್ದಾರೆ.
ನಂತರ ರಾತ್ರಿಯಲ್ಲಿ, ನಾವು ಕಣ್ಣಿನ ತಜ್ಞರ ಬಳಿ ತೆರೆಳಿದೆವು, ಅವರು ನನ್ನ ಕಾರ್ನಿಯಾಗಳು ಹಾನಿಗೊಳಗಾಗಿವೆ ಎಂದು ಕಣ್ಣುಗಳ ಸುತ್ತ ಬ್ಯಾಂಡೇಜ್ ಹಾಕಿದರು. ಮರುದಿನ, ನಾನು ಮುಂಬೈಗೆ ಧಾವಿಸಿ ನನ್ನ ಚಿಕಿತ್ಸೆಯನ್ನು ಮುಂದುವರಿಸಿದೆ. ನಾನು ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ಮುಂದಿನ ನಾಲ್ಕೈದು ದಿನಗಳಲ್ಲಿ ನಾನು ಚೇತರಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಅಲ್ಲಿಯವರೆಗೆ, ನಾನು ನನ್ನ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಏಕೆಂದರೆ ನನಗೆ ನೋಡಲು ಸಾಧ್ಯವಾಗುತ್ತಿಲ್ಲ ಮತ್ತು ನಾನು ನಿದ್ರೆ ಮಾಡಲು ಸಹ ಕಷ್ಟಪಡುತ್ತಿದ್ದೇನೆ ಎಂದು ನಟಿ ಜಾಸ್ಮಿನ್ ಹೇಳಿದ್ದಾರೆ.
ಜಾಸ್ಮಿನ್ ಭಾಸಿನ್ ತಮಿಳು ಚಿತ್ರ ವನಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಅವರು ಬಾಲಿವುಡ್ ಸಿನಿಮಾ, ಹಿಂದಿ ಸೀರಿಯಲ್‌ಗಳು, ಪಂಜಾಬಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
