Latest Updates
-
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್!
60 ದಿನದಲ್ಲಿ 15 ಕೆಜಿ ತೂಕ ಇಳಿಸಿದ ನವೀನ್ ಶಂಕರ್‌ಗೆ ಲಘು ಹೃದಯಾಘಾತ: ಅಲ್ಪ ಅವಧಿಯಲ್ಲಿ ತೂಕ ಕಡಿಮೆಯಾದರೆ ಈ ರಿಸ್ಕ್‌ಗಳಿವೆ!
ಒಂದೇ ತಿಂಗಳಿನಲ್ಲಿ ತೂಕ ಕಡಿಮೆ ಮಾಡಬೇಕು, 15 ದಿನದಲ್ಲಿ ತೂಕ ಕಡಿಮೆಯಾಗಬೇಕು ಎಂಬ ಸಾಹಸಕ್ಕೆ ಕೈ ಹಾಕಲೇಬೇಡಿ, ಇದು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು ಹುಷಾರ್. ಹೀಗೆ 60 ದಿನಗಳಲ್ಲಿ 15 ಕೆಜಿ ತೂಕ ಕಳೆದುಕೊಂಡಿದ್ದ ಕನ್ನಡದ ನಟ ನವೀನ್ ಶಂಕರ್‌ಗೆ ಹೃದಯಾಘಾತವಾಗಿದೆ.

ನವೀನ್ ಶಂಕರ್‌ಗೆ ಲಘು ಹೃದಯಾಘಾತ ಉಂಟಾಗಿ ಕೂಡಲೇ ಚಿಕಿತ್ಸೆ ಸಿಕ್ಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರೇ ಹೇಳಿರುವಂತೆ 65ಕೆಜಿ ತೂಕವಿದ್ದ ಅವರು ಪಾತ್ರಕ್ಕಾಗಿ 50 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇವರು ಒಂದು ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದರು, ಅಲ್ಲದೆ 24 ಗಂಟೆ ಒಂದು ತೊಟ್ಟು ನೀರು ಕುಡಿಯದೆ ಇದ್ದರು, ಅವರು ಬಿಡದಿಯ ರೂಮ್‌ನಲ್ಲಿದ್ದರು, ಫೋನ್ ಕೂಡ ಆಫ್ ಮಾಡಿದ್ದರು, ಅವರು ಬಾತ್‌ರೂಂಗೆ ಹೋದಾಗ ಬೈ ಬೆವರಲಾರಂಭಿಸಿತು, ಎದೆಯಲ್ಲಿ ವಿಪರೀತ ನೋವು, ಅವರು ತನ್ನ ಪ್ರಾಣ ಹೋಯ್ತು ಎಂದೇ ಭಾವಿಸಿದರಂತೆ, ಆದರೆ ಅವರಿಗೆ ಇಂಥ ಸಂದರ್ಭದಲ್ಲಿ ಈ ಹಿಂದೆ ಓದಿದ್ದ ಜ್ಞಾನ ಸಹಾಯ ಮಾಡಿತು. ಕೂಡಲೇ ಸ್ವಲ್ಪ ಚಾಕೋಲೇಟ್, ನೀರು, ಉಪ್ಪು ಸೇರಿಸುತ್ತಾರೆ, ನಂತರ ಕೂಡಲೇ ಆಸ್ಪತ್ರೆಗೆ ಧಾವಿಸುತ್ತಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು, ವೈದ್ಯರು ಕೂಡ ಪರಿಶೀಲಿಸಿದರು. ನಂತರ ನಾನು ಡಯಟ್ ಮಾಡಿದ್ದಕ್ಕೆ ಡಾಕ್ಟರ್ ಬೈದು ಡಯಟ್‌ಗೆ ಬ್ರೇಕ್ ಹಾಕುವಂತೆ ಹೇಳಿದರು ಎಂದು ಹೇಳಿದ್ದಾರೆ.
ನಾನು ಪರಿಣಿತರ ಸಲಹೆ ಪಡೆಯದೆ ಮಾಡಿದ ಕೆಲಸದಿಂದಗಿ ಈ ರೀತಿಯಾಯ್ತು ಎಂದಿದ್ದಾರೆ
ಸಾಮನ್ಯವಾಗಿ ಕಲಾವಿದರು ಈ ರೀತಿ ತಮ್ಮ ದೇಹದಲ್ಲಿ ಬದಲಾವಣೆ ಮಾಡುವಾಗ ಡಯಟಿಷಿಯನ್, ಜಿಮ್ ಟ್ರೈನರ್, ವೈದ್ಯರ ಸಂಪರ್ಕದಲ್ಲಿರುತ್ತಾರೆ, ನಾನೂ ಕೂಡ ಇದ್ದೆ ಆದರೆ ಮೂರು ದಿನಗಳಕಾಲ ಯಾರಸಂಪರ್ಕದಲ್ಲಿಯೂ ಇರಲಿಲ್ಲ, ಇದು ನಾನು ಮಾಡಿದ ತಪ್ಪು ಎಂಬುವುದಾಗಿ ಹೇಳಿದ್ದಾರೆ. ನಮ್ಮ ದೇಹವನ್ನು ದಂಡಿಸುವಾಗ ನಾವು ಪರಿಣಿತರ ಸಲಹೆ ಪಡೆಯಬೇಕು ಅಲ್ಲದೆ ಅವರು ನಿಯಮಿತವಾಗಿ ನಮ್ಮನ್ನು ತಪಾಸಣೆ ಮಾಡ್ತಾ ಇರಬೇಕು, ಇಲ್ಲದಿದ್ದರೆ ಪ್ರಾಣಕ್ಕೆ ಕುತ್ತು ಬರಬಹುದು. ಹಾಗಾಗಿ ಯಾರಾದರು ವಾರದಲ್ಲಿ ತೆಳ್ಳಗಾದೆ, 2 ತಿಂಗಳಿನಲ್ಲಿ 15 ಕೆಜಿ ಕಡಿಮೆಯಾದೆ ಅಂದರೆ ಡಯಟಿಷಿಯನ್ ಹಾಗೂ ವೈದ್ಯರ ಸಲಹೆ ಪಡೆಯದೆ ಪ್ರಯತ್ನ ಮಾಡಲು ಹೋಗಲೇಬೇಡಿ.
ಅಲ್ಪ ಅವಧಿಯಲ್ಲಿ ಮೈ ತೂಕ ಕಡಿಮೆ ಮಾಡಿಕೊಳ್ಳುವುದು ಆರೋಗ್ಯಕರವಲ್ಲ ಏಕೆ?
ಸ್ನಾಯುಗಳು ದುರ್ಬಲವಾಗುವುದು
ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾದರೆ ಸ್ನಾಯುಗಳು ದುರ್ಬಲವಾಗುವುದು. ಅದೇ ನಿಧಾನಕ್ಕೆ ಮೈ ತೂಕ ಕಡಿಮೆಯಾದರೆ ಆರೋಗ್ಯಕರವಾಗಿ ಮೈ ತೂಕ ಕಡಿಮೆ ಮಾಡಿಕೊಳ್ಳಬಹುದು. ಒಂದು ಅಧ್ಯಯನದಲ್ಲಿ 1200 ಜನರಿಗೆ ದಿನಕ್ಕೆ 500 ಕ್ಯಾಲೋರಿ ಮಾತ್ರ ನೀಡಲಾಯ್ತು, ಈ ರೀತಿ 5 ವಾರ ಮಾಡಲಾಯ್ತು, ಮತ್ತೊಂದು ಗುಂಪಿನ ಜನರಿಗೆ ದಿನಕ್ಕೆ 1250 ಕ್ಯಾಲೋರಿ ಆಹಾರದಂತೆ 12 ವಾರ ನೀಡಲಾಯ್ತು. ಬೇಗ ತೂಕ ಕಡಿಮೆಯಾದ ಜನರ ಸ್ನಾಯುಗಳು ದುರ್ಬಲವಾಗಿತ್ತು.
ಪೋಷಕಾಂಶದ ಕೊರತೆ ಉಂಟಾಗುವುದು
ಅತಿ ಬೇಗನೆ ತೂಕ ಕಡಿಮೆಯಾದರೆ ಪೋಷಕಾಂಶದ ಸಮಸ್ಯೆ ಉಂಟಾಗುವುದು. ಇದರಿಂದ ಸುಸ್ತು, ಕೂದಲು ಉದುರುವುದು, ಪೋಷಕಾಂಶಗಳ ಕೊರತೆ, ಮೂಳೆಗಳಲ್ಲಿ ನೀವು ಈ ಬಗೆಯ ಸಮಸ್ಯೆ ಕಂಡು ಬರುವುದು.
ಗಾಲಾಸ್ಟೋನ್ ಉಂಟಾಗುವುದು
ಗಾಲಾಸ್ಟೋನ್ ಉಂಟಾದರೆ ತುಂಬಾನೇ ನೋವು ಉಂಟಾಗುವುದು. ಸಾಮಾನ್ಯವಾಗಿ ನಮ್ಮ ಜೀರ್ಣಕ್ರಿಯೆಯ ವ್ಯವಸ್ಥೆಯು ಆಹಾರ ಕರಗಿಸಲು ದ್ರವವನ್ನು ಬಿಡುಗಡೆ ಮಾಡುತ್ತದೆ, ಆದರೆ ನಾವು ಕಡಿಮೆ ಆಹಾರ ಸೇವಿಸಿದರೆ ಗಾಲ್‌ಬ್ಲೇಡರ್ ಹೆಚ್ಚು ದ್ರವವನ್ನು ಬಿಡುಗಡೆ ಮಾಡಬೇಕಾಗಿಲ್ಲ, ಇದು ಜೀರ್ಣವವ್ಯವಸ್ಥೆಯಲ್ಲಿಯೇ ಕೂತು ಗಾಲಾಸ್ಟೋನ್ ಉಂಟಾಗುವುದು.
ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾದರೆ ಈ ಬಗೆಯ ಸಮಸ್ಯೆಯೂ ಉಂಟಾಗುವುದು
ತುಂಬಾನೇ ಹಸಿವು
ತಲೆಸುತ್ತು
ಸ್ನಾಯುಗಳ ಸೆಳೆತ
ಮಲಬದ್ಧತೆ ಅಥವಾ ಬೇಧಿ
ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು
ಹಾಗಾಗಿ ಮೈ ತೂಕ ಕಡಿಮೆ ಮಾಡಲು ನೀವು ಯಾವತ್ತೂ ಆರೋಗ್ಯ ವಿಧಾನವನ್ನು ಅನುಸರಿಸಬೇಕು. ತುಂಬಾನೇ ಊಟ ಕಡಿಮೆ ಮಾಡುವುದು, ಕೆಲ ಹೊತ್ತು ಆಹಾರ ಸೇವಿಸದೆ ಇರುವುದು ಈ ರೀತಿಯಲ್ಲಾ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಜಾಗ್ರತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications