Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
21 ದಿನದಲ್ಲಿ ತೂಕ ಇಳಿಸಿಕೊಂಡಿದ್ದ ನಟ ಮಾಧವನ್: ಯಾವ ಟ್ರಿಕ್ಸ್ ಬಳಸಿದ್ರು ಗೊತ್ತಾ?
ಬಹುಭಾಷಾ ನಟ ಆರ್ ಮಾಧವನ್ ಎಲ್ಲರಿಗೂ ಚಿರಪರಿಚಿತ. ಅವರ ನಟನೆಗೆ ಮನಸೋಲದವರಿಲ್ಲ. ಎಂತಹ ಪಾತ್ರವಾದರು ಲೀಲಾಜಾಲವಾಗಿ ನಟಿಸುವಂತಹ ಅದ್ಭುತ ನಟ ಅವರು, 20ರ ದಶಕದಲ್ಲಿ ಬಹುತೇಕ ಹಿಟ್ ಸಿನಿಮಾಗಳ ನೀಡಿದ್ದ ಅವರು ಈಗ ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆದ್ರೆ ಅವರ ಸಿನಿಮಾಗಳಿಂದ ಮಾತ್ರವಲ್ಲ ಈಗ ಅವರ ತೂಕ ಇಳಿಸಿಕೊಂಡ ವಿಧಾನದ ಮೂಲಕವು ಬಹಳ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ತೂಕ ಇಳಿಸಿಕೊಳ್ಳಬೇಕು ಎಂದು ಹಲವರು ಹರಸಾಹಸ ಪಡುತ್ತಾರೆ, ಅದ್ರಲ್ಲೂ ಯುವ ಜನತೆ ಇಂದು ಅಧಿಕ ತೂಕದ ಕಾರಣದಿಂದ ಪಾರಾಗಲು ಜಿಮ್, ವ್ಯಾಯಾಮ, ದುಬಾರಿ ಚಿಕಿತ್ಸೆಗಳು ಸೇರಿ ಹತ್ತು ಹಲವು ರೀತಿಯ ವಿಧಾನದ ಮೂಲಕ ತೂಕ ಇಳಿಸಲು ಮುಂದಾಗುವುದು ನೋಡಬಹುದು.

ಆದ್ರೆ ಹಲವು ಬಾರಿ ಈ ಪ್ರಯತ್ನದಲ್ಲಿ ಫಲ ಸಿಗುವುಸು ಬಹಳ ಕಷ್ಟ. ಹಾಗೆ ನೀವು ತೂಕ ಇಳಿಸಲು ನಿತ್ಯವೂ ಪ್ರಯತ್ನಪಟ್ಟರೂ ಕೂಡ ಸಾಧ್ಯವಾಗದೇ ಇರಬಹುದು. ಕೆಲವರಂತು ವರ್ಷಗಳ ಕಾಲ ತೂಕ ಇಳಿಸಿದರೂ ಒಂದೆರಡು ಕೆ.ಜಿ ಇಳಿಸುವುದು ಕೂಡ ಕಷ್ಟವಾಗಿರುತ್ತೆ. ಆದ್ರೆ ನಟ ಮಾಧವನ್ ಈಗ ಕೇವಲ 21 ದಿನದಲ್ಲಿ ತೂಕ ಇಳಿಸಿಕೊಂಡಿರುವ ಕುರಿತಾಗಿ ಹೇಳಿಕೊಂಡಿದ್ದಾರೆ.
ಅವರು 21 ದಿನಗಳ ಅಂತರದಲ್ಲಿ ಹಲವು ಕೆ.ಜಿಗಳಷ್ಟು ತೂಕ ಇಳಿಸಿಕೊಂಡಿರುವ ಅವರು ಹೊಸ ರೀತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ ತೂಕ ಕಳೆದುಕೊಂಡಿದ್ದರು. 2024ಲ್ಲಿ ಅವರು ಕೇವಲ 21ದಿನದಲ್ಲಿ ತೂಕ ಇಳಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಆದ್ರೆ ವರ್ಷದ ಹಿಂದೆ ಅವರು ತೂಕ ಇಳಿಸಿಕೊಂಡಿದ್ದ ಹೇಗೆ ಎಂಬ ಕುರಿತು ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ತೂಕ ಇಳಿಸಲು ಅವರು ಎಲ್ಲರಂತೆ ವ್ಯಾಯಾಮ, ಜಿಮ್, ಕಠಿಣ ಡಯೆಟ್ ಮಾಡಿಲ್ಲವಂತೆ ಬದಲಿದೆ. 45-60 ಬಾರಿ ಆಹಾರವನ್ನು ಅಗಿಯುವುದು, ಆಹಾರವನ್ನು ಚೆನ್ನಾಗಿ ಅಗಿಯುವುದು, ಕೊನೆಯ ಊಟ ಸಂಜೆ 6.45 ಕ್ಕೆ (ಬೇಯಿಸಿದ ಆಹಾರ ಮಾತ್ರ - ಮಧ್ಯಾಹ್ನ 3 ಗಂಟೆಯ ನಂತರ ಏನೂ ಇಲ್ಲ)... ಮುಂಜಾನೆ ದೀರ್ಘ ನಡಿಗೆ ಮತ್ತು ಮುಂಜಾನೆ ಆಳವಾದ ನಿದ್ರೆ. ದ್ರವ ರೂಪದ ಆಹಾರ, ಹಸಿರು ತರಕಾರಿ, ಸಂಸ್ಕರಿಸಿದ ಆಹಾರ ತ್ಯಜಿಸಿರುವುದು ಎದು ಅವರು ಹೇಳಿದ್ದಾರೆ.
ಹಾಗಾದ್ರೆ ಅವರು ತೂಕ ಇಳಿಸಲು ಸಹಕಾರವಾದ ಅಂಶಗಳಿವು
ಮಧ್ಯಂತರ ಉಪವಾಸ
ಮಾಧವನ್ ರಾತ್ರಿ ಊಟವನ್ನು 7 ಗಂಟೆಯೊಳಗೆ ಮಾಡಿ ಮುಗಿಸುವುದಾಗಿ ಹೇಳಿದ್ದಾರೆ. ಅಂದರೆ ಅದರ ನಡುವೆ ಅವರು ಏನನ್ನೂ ಸೇವಿಸುವುದಿಲ್ಲವಂತೆ. ಅದ್ರಲ್ಲೂ ಮಧ್ಯಾಹ್ನ 3 ಗಂಟೆಯ ಬಳಿಕ ಅವರು ಊಟದ ವರೆಗೂ ಏನನ್ನೂ ಸೇವಿಸುವುದಿಲ್ಲ ಎಂದಿದ್ದಾರೆ. ಈ ಸಮಯದಲ್ಲಿ ಉತ್ತಮ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ. ಇದು ನಿಮ್ಮ ಜೀರ್ಣಕ್ರಿಯೆ ಸುಧಾರಿಸಲು ಬಹಳ ಸಹಕಾರಿಯಾಗಲಿದೆ. ಹೀಗಾಗಿ ತೂಕ ಇಳಿಸಲು ಬಹಳ ಸಮಯ ಅವರು ತೆಗೆದುಕೊಂಡಿಲ್ಲ.
ಪ್ರತಿ ತುತ್ತನ್ನೂ ಅಗಿಯುವುದು
ಮಾಧವನ್ ಅವರ ಪ್ರಕಾರ ಪ್ರತಿಯೊಂದು ತುತ್ತನ್ನೂ ಕೂಡ ನಿಧಾನವಾಗಿ ಹೆಚ್ಚು ಅಗಿಯಬೇಕು ಎಂದಿದ್ದಾರೆ. ಇದು ನಿಮ್ಮ ಹಸಿವನ್ನು ನಿಯಂತ್ರಿಸಲು ಹಾಗೂ ತೂಕ ನಿರ್ವಹಣೆಗೆ ಸಹಕಾರಿಯಾಗಲಿದೆ. ಇದು ಜೀರ್ಣಕ್ರಿಯೆ ಸುಧಾರಿಸಲು ನಿಮ್ಮ ದೇಹವು ಪೂರ್ಣತೆಯನ್ನು ಸೂಚಿಸಲು ಹೆಚ್ಚಿನ ಸಮಯವನ್ನು ನೀಡುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
ಜಿಮ್‌ಗಿಂತ ವಾಕಿಂಗ್
ಹೆಚ್ಚು ಅವಧಿ ಜಿಮ್‌ನಲ್ಲಿ ಕಳೆಯುವುದಕ್ಕಿಂತ ದೀರ್ಘಕಾಲದ ನಡಿಗೆ ಉತ್ತಮವಂತೆ. ಇದು ಹೆಚ್ಚಿನ ಕ್ಯಾಲೋರಿ ಕಡಿಮೆ ಮಾಡುವ ಜೊತೆಗೆ ಒತ್ತಡ ನಿವಾರಣೆಗೂ ಸಹಕಾರಿಯಾಗಿದೆ.



Click it and Unblock the Notifications
