Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
ನಟ ಅಕ್ಷಯ್ ಕುಮಾರ್‌ಗೆ ಕೋವಿಡ್ ದೃಢ..! ಭಾರತದಲ್ಲಿ ಹೊಸ ರೂಪಾಂತರ ಆರಂಭವಾಗಿದ್ಯಾ?
ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿರದ ಕೊರೊನಾ ವೈರಸ್ ಈಗ ಮತ್ತೆ ಸುದ್ದಿಯಾಗುತ್ತಿದೆ. ಅದ್ರಲ್ಲೂ ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೆಲವ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದ ಅವರು ಪರೀಕ್ಷೆಗೆ ಒಳಪಟ್ಟಾಗ ಅವರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ಅಕ್ಷಯ್ ಕುಮಾರ್ ಎರಡು ಬಾರಿ ಕೊರೊನಾಗೆ ಒಳಗಾಗಿದ್ದರು. ಅಕ್ಷಯ್ ಕುಮಾರ್ 2021 ರಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ಗೆ ಒಳಗಾಗಿದ್ದರು. ಬಳಿಕ 2022 ರಲ್ಲೂ ಈ ಅಪಾಯಕಾರಿ ವೈರಸ್‌ಗೆ ಒಳಗಾಗಿದ್ದರು. ಈಗ ಅವರು ತಮ್ಮ ಸಿನಿಮಾ ಸರ್ಫಿರಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಹೀಗಿರುವಾಗ ಅವರಿಗೆ ಕೊರೊನಾ ದೃಢವಾಗಿದ್ದು, ಇಡೀ ಚಿತ್ರತಂಡ ಈಗ ಪರೀಕ್ಷೆಗೆ ಒಳಗಾಗಿದೆ.

ಇದರ ಜೊತೆ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹಕ್ಕೆ ಆಹ್ವಾನಿಸಲಾಗಿತ್ತು. ಆದರೆ ಅನಾರೋಗ್ಯ ಹಿನ್ನೆಲೆ ಅವರು ತೆರಳಿರಲಿಲ್ಲ. ಆದರೆ ಈಗ ಕೋವಿಡ್ ದೃಢವಾಗಿದೆ. ಅಲ್ಲದೆ ಅವರೀಗ ಮನೆಯಲ್ಲೇ ಕ್ವಾರಂಟೀನ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಹೊಸ ಕೋವಿಡ್ ರೂಪಾಂತರ ಹರಡುತ್ತಿದೆಯೇ?
ಕಳೆದ ಕೆಲವು ವರ್ಷದಿಂದ ಕೋವಿಡ್ ಸೋಂಕಿನ ರೂಪಾಂತರವಾಗುತ್ತಲೇ ಇದೆ. ಈಗ FLiRT ಎಂಬ ರೂಪಾಂತರವು ಹರಡುತ್ತಿದೆ. ಜೊತೆಗೆ KP.2, JN.1.7 ಸೇರಿದಂತೆ FLiRT ಕೋವಿಡ್ ರೂಪಾಂತರಗಳು ಮತ್ತು KP ಅಥವಾ JN ನೊಂದಿಗೆ ಪ್ರಾರಂಭವಾಗುವ ರೂಪಾಂತರಗಳು ಈಗ ಹರಡುತ್ತಿವೆ.
FLiRT ರೂಪಾಂತರವು ಈ ಹಿಂದೆ ಹರಡಿ ಭೀತಿಗೆ ಕಾರಣವಾಗಿದ್ದ ಒಮಿಕ್ರಾನ್ ವಂಶಾವಳಿಯದ್ದು ಎಂದು ತಿಳಿದುಬಂದಿದೆ. ಇದನ್ನು JN.1 ಅಂತಲೂ ಹೆಸರಿಸಲಾಗಿದೆ. ಆಗಸ್ಟ್ 2023ರಲ್ಲಿ ಈ ರೂಪಾಂತರ ಮೊದಲ ಬಾರಿಗೆ ಪತ್ತೆಯಾಗಿತ್ತು. ಬಳಿಕ ಆಸ್ಟ್ರೇಲಿಯಾದಲ್ಲಿ ಈ ರೂಪಾಂತರದಿಂದಾಗಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಉಳಿದಂತೆ ಏಷ್ಯಾದ ಮೇಲೆ ಈ ರೂಪಾಂತರ ಅಷ್ಟೇನು ಸಮಸ್ಯಾತ್ಮಕವಾಗಿ ಕಾಣಲಿಲ್ಲ.
FLiRT ಎಂಬ ಹೆಸರು ಏಕೆ ಇಡಲಾಗಿದೆ ಎಂಬುದು ಸಹ ಕುತೂಹಲಕಾರಿ ಸಂಗತಿಯ ಹೊಂದಿದೆ. ಈ ಉಪವ್ಯತ್ಯಯಗಳ ಅನುಕ್ರಮವು F456L, V1104L ಮತ್ತು R346T ಸೇರಿದಂತೆ ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಿ ಹಲವಾರು ಹೊಸ ರೂಪಾಂತರಗಳನ್ನು ಒಳಗೊಂಡಿದೆ. ಈ ರೂಪಾಂತರಗಳಲ್ಲಿನ ಅಕ್ಷರಗಳನ್ನು ಒಟ್ಟುಗೂಡಿಸಿ FLiRT ಎಂಬ ಹೆಸರನ್ನು ಈ ರೂಪಾಂತರಕ್ಕೆ ಇಡಲಾಗಿದೆ.
ಕೋವಿಡ್ ಹರಡದಂತೆ ತಡೆಯುವುದು ಹೇಗೆ?
ಕೋವಿಡ್ ಹರಡದಂತೆ ತಡೆಯಲು ಹೆಚ್ಚು ಸಾಹಸ ಮಾಡುವ ಅಗತ್ಯವಿಲ್ಲ. ನಮ್ಮ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚಿನ ಕಾಳಜಿ ಮಾಡಿದರೆ ಸಾಕು. ಮಾನ್ಸೂನ್ ಸಮಯದಲ್ಲಿ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ತಿಳಿಸಿತ್ತು. ಅಲ್ಲದೆ ವಾರದಲ್ಲಿ 1 ಸಾವಿರಕ್ಕೂ ಅಧಿಕ ಸಾವು ಈ ಕೋವಿಡ್‌ನಿಂದ ಸಂಭವಿಸುತ್ತಿದೆ ಎಂದಿತ್ತು.
ನಿಮ್ಮ ಸುತ್ತ ಮುತ್ತ ಈ ಸೋಂಕು ಇಲ್ಲದಿದ್ದರೂ ಇದ್ದರೂ ಹೊರ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಅಲ್ಲದೆ ಆರೋಗ್ಯಕರ ಆಹಾರ ಅಂದರೆ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಆಹಾರ ಕ್ರಮದತ್ತ ಹೆಚ್ಚು ಗಮನ ಹರಿಸಬೇಕು. ಬೇಳೆ ಕಾಳುಗಳು, ಹಣ್ಣು, ಜ್ಯೂಸ್ ಹೀಗೆ ರೋಗ ನಿರೋಧಕ ಶಕ್ತಿ ಹಾಗು ಪೋಷಕಾಂಶ ಭರಿತ ಆಹಾರ ಸೇವಿಸುವ ಕುರಿತು ನೀವು ಗಮನ ಹರಿಸಬೇಕು.
ಕೋವಿಡ್ ಇದ್ದಾಗ ಮಾತ್ರವೇ ಮಾವು ಸ್ಯಾನಿಟೈಸರ್ ಬಳಸುತ್ತಿದ್ದವು. ಆದ್ರೆ ನಾವು ಹೊರಹೋದಾಗ ಇಲ್ಲವೆ ಯಾವುದಾದರು ವಸ್ತುಗಳ ಸಂಪರ್ಕಕ್ಕೆ ಬಂದ ಬಳಿಕ ಕೈಗಳಿಗೆ ಸ್ಯಾನಿಟೈಸರ್ ಬಳಸಿ. ಇಲ್ಲವೆ ಮನೆಗೆ ಬಂದಾಗ ಸೋಪುಗಳಿಂದ ಕೈಯನ್ನು ಚೆನ್ನಾಗಿ ತೊಳೆಯುವ ಅಭ್ಯಾಸ ಇಟ್ಟುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












