Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ಅರಿಶಿಣ ಹಾಕಿದ ತುಪ್ಪ ತಿಂದರೆ ತೂಕ ಇಳಿಕೆಯ ಜೊತೆಗೆ ಈ 7 ಪ್ರಯೋಜನಗಳಿವೆ
ನವೆಂಬರ್‌ನಿಂದ ಫೆಬ್ರವರಿವರೆಗೆ ಚಳಿಗಾಲ, ಚಳಿಗಾಲದಲ್ಲಿ ಕಾಯಿಲೆ ಬೀಳುವುದು ಅಧಿಕ. ಸೀತ, ಕೆಮ್ಮು, ಜ್ವರ ಈ ಬಗೆಯ ಕಾಯಿಲೆಗಳು ಬರುವುದು ಹೆಚ್ಚು. ಮಕ್ಕಳಿಗೂ ಕೂಡ ಚಳಿಗಾದಲ್ಲಿ ಕೆಮ್ಮು-ಶೀತದಂಥ ಸಮಸ್ಯೆ ತಪ್ಪುವುದೇ ಇಲ್ಲ. ಆದರೆ ಚಳಿಗಾಲದ ಆರೋಗ್ಯ ಸಮಸ್ಯೆ ತಡೆಗಟ್ಟಲು ಕೆಲವೊಂದು ಮನೆಮದ್ದುಗಳು ಪರಿಣಾಮಕಾರಿ, ಅದರಲ್ಲೂ ತುಪ್ಪ, ಅರಿಶಿಣ ತುಂಬಾನೇ ಒಳ್ಳೆಯದು. ಇದನ್ನು ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಒಂದು ಚಮಚಕ್ಕೆ ಸ್ವಲ್ಪ ಅರಿಶಿಣ ಮಿಕ್ಸ್ ಮಾಡಿ ಸೇವಿಸಿ. ನೀವು ಊಟದ ಜೊತೆಯೂ ಸೇವಿಸಬಹುದು. ಇಲ್ಲದಿದ್ದರೆ ತುಪ್ಪಕ್ಕೆ ಅರಿಶಿಣ ಹಾಕಿ ಕಾಯಿಸಿ ಇಟ್ಟರೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ನೀವು ಇದನ್ನು ಸೇವಿಸುವುದರಿಂದ ಈ ಪ್ರಯೋಜನಗಳಿವೆ

ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು: ಚಳಿಗಾಲದಲ್ಲಿ ಜೀರ್ಣಕ್ರಿಯೆ ಕೆಲವರಿಗೆ ಅಷ್ಟು ಚೆನ್ನಾಗಿ ನಡೆಯುವುದಿಲ್ಲ, ಅಧಿಕ ಕೊಬ್ಬಿನಂಶದ ಆಹಾರಗಳನ್ನು ಸೇವಿಸಿದಾಗ ಜೀರ್ಣಕ್ರಿಯೆಗೆ ತೊಂದರೆಯಾಗುವುದು. ಅರಿಶಿಣ ಹಾಕಿ ತುಪ್ಪ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅರಿಶಿಣ ಆಹಾರವನ್ನು ಚಿಕ್ಕ-ಚಿಕ್ಕ ಕಣಗಳಾಗಿ ವಿಭಿಜಿಸಲು ಸಹಕಾರಿ. ಇದರಿಂದ ಜೀರ್ಣಕ್ರಿಯೆಗೆ ಸಹಕಾರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಅರಿಶಿಣ ಹಾಕಿದ ಒಂದು ಚಮಚ ತುಪ್ಪ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ತುಪ್ಪದಲ್ಲಿ ವಿಟಮಿನ್ ಎ ಇರುವುದರಿಂದ ಕಫ ಸಮಸ್ಯೆ ತಡೆಗಟ್ಟಲು ಸಹಕಾರಿ. . ಅರಿಶಿಣದಲ್ಲಿ ಬ್ಯಾಕ್ಟಿರಿಯಾ, ಸೋಂಕಾನುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ. ಇದರಿಂದ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ
ಚಳಿಗಾಲದಲ್ಲಿ ಮೂಳೆ ಸಂಬಂಧಿ ಸಮಸ್ಯೆ ಹೆಚ್ಚಾಗುವುದು, ಅದರಲ್ಲೂ ಸಂಧಿವಾತ ಇದ್ದರೆ ಉರಿಯೂತದ ಸಮಸ್ಯೆ ಕಂಡು ಬರುವುದು. ತುಪ್ಪದಲ್ಲಿ ಇರುವ ಕೊಬ್ಬಿನಂಶ ಉರಿಯೂತಕ್ಕೆ ಕಾರಣವಾಗುವ ಸೈಟೋಕಿನ್ಸ್ ಉತ್ಪತ್ತಿ ಕಡಿಮೆ ಮಾಡುತ್ತದೆ. ಅಲ್ಲದೆ ಅರಿಶಿಣ ಕೂಡ ಮೂಳೆಗಳ ಆರೋಗ್ಯಕ್ಕೆ, ಉರಿಯೂತ ಕಡಿಮೆ ಮಾಡಲು ಸಹಕಾರಿ.
ನಿದ್ದೆ ಚೆನ್ನಾಗಿ ಬರುತ್ತದೆ
ಅರಿಶಿಣ ಹಾಕಿದ ತುಪ್ಪ ತಿನ್ನುವುದರಿಂದ ನರಗಳಿಗೆ ವಿಶ್ರಾಂತಿ ನೀಡಿ, ಕಣ್ತುಂಬ ನಿದ್ದೆ ಬರಲು ಸಹಾಯ ಮಾಡುತ್ತದೆ. ಯಾರಿಗೆ ನಿದ್ರಾಹೀನತೆ ಸಮಸ್ಯೆಯಿದ್ದರೆ ಅರಿಶಿಣ ಹಾಕಿದ ತುಪ್ಪವನ್ನು ಮಲಗುವ ಮುಂಚೆ ಸೇವಿಸಿ, ನಿದ್ದೆ ಚೆನ್ನಾಗಿ ಬರುತ್ತದೆ.
ದೇಹವನ್ನು ಬೆಚ್ಚಗೆ ಇಡುತ್ತದೆ
ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿಡಲು ತುಪ್ಪ ತುಂಬಾನೇ ಸಹಕಾರಿ. ತುಪ್ಪವನ್ನು ದಿನಾ ಬಳಸುವುದರಿಂದ ಮೈ ಬೆಚ್ಚಗೆ ಇರುತ್ತದೆ. ನೀವು ಅನ್ನ ಅಥವಾ ಚಪಾತಿ, ರೊಟ್ಟಿ ಇವುಗಳ ಜೊತೆ ಒಂದು ಚಮಚ ತುಪ್ಪ ಹಾಕಿ ತಿನ್ನಿ.
ತ್ವಚೆಗೆ ಒಳ್ಳೆಯದು
ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದು, ತುಟಿ ಒಡೆಯುವುದು, ಪಾದಗಳಲ್ಲಿ ಬಿರುಕು ಈ ಬಗೆಯ ತ್ವಚೆ ಸಮಸ್ಯೆ ಕಂಡು ಬರುವುದು. ಚಳಿಗಾಲದಲ್ಲಿ ಮಾಯಿಶ್ಚರೈಸರ್ ಹಚ್ಚಿ ತ್ವಚೆಯನ್ನು ಬಾಹ್ಯವಾಗಿ ಆರೈಕೆ ಮಾಡುತ್ತೇವೆ, ನೀವು ಒಂದು ಚಮಚ ತುಪ್ಪ ಹಾಕಿ ತಿನ್ನುವುದರಿಂದ ತುಪ್ಪ ತ್ವಚೆಯನ್ನು ಆತಂರಿಕವಾಗಿ ಆರೈಕೆ ಮಾಡಲು ಸಹಕಾರಿ.
ತೂಕ ನಿಯಂತ್ರಣಕ್ಕೆ ಸಹಕಾರಿ: ಕೆಲವರಿಗೆ ತುಪ್ಪ ತಿಂದರೆ ಮೈ ತೂಕ ಹೆಚ್ಚಾಗುತ್ತದೆ ಎಂಬ ಕಲ್ಪನೆ ಇದೆ, ಅದು ತಪ್ಪು ಕಲ್ಪನೆ. ತುಪ್ಪವನ್ನು ತಿನ್ನುವುದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು
ಮಲಬದ್ಧತೆ ತಡೆಗಟ್ಟಲು ಸಹಕಾರಿ
ಮಲಬದ್ಧತೆ ಸಮಸ್ಯೆ ಇರುವವರು ತುಪ್ಪ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ರಾತ್ರಿ ಮಲಗುವಾಗ 1 ಚಮಚ ತುಪ್ಪ ತಿಂದರೆ ಬೆಳಗ್ಗೆ ಮಲವಿಸರ್ಜನೆಗೆ ಸಮಸ್ಯೆಯಾಗಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications