Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ದೇಹದಲ್ಲಿ ಈ 7 ಲಕ್ಷಣಗಳು ಕಂಡು ಬಂದರೆ ವಿಟಮಿನ್ ಬಿ 12 ಕೊರತೆಯಾಗಿದೆ ಎಂದರ್ಥ
ವಿಟಮಿನ್ ಬಿ 12 ಕೆಂಪು ರಕ್ತಕಣಗಳ ಉತ್ಪತ್ತಿಗೆ ತುಂಬಾನೇ ಅವಶ್ಯಕ, ಅಲ್ಲದೆ ನರಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ವಿಟಮಿನ್ ಬಿ 12 ತುಂಬಾನೇ ಅವಶ್ಯಕ. ಅದೇ ವಿಟಮಿನ್ ಬಿ 12 ಕೊರತೆ ಉಂಟಾದರೆ ತುಂಬಾನೇ ಸಮಸ್ಯೆ ಉಂಟಾಗುತ್ತದೆ. ವಿಟಮಿನ್ ಬಿ 12 ಸಮಸ್ಯೆ ಚಿಕ್ಕ ಪ್ರಾಯದವರಿಗಿಂತ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವಯಸ್ಸಾಗುತ್ತಿದ್ದಂತೆ ದೇಹವು ಆಹಾರದಿಂದ ವಿಟಮಿನ್ ಬಿ 12ನ್ನು ಹೀರಿಕೊಳ್ಳುವುದು ಕಡಿಮೆಯಾಗುವುದು, ಇದರಿಂದಾಗಿ ವಿಟಮಿನ್ ಬಿ12 ಕೊರತೆ ಉಂಟಾಗುವುದು.
ಅಲ್ಲದೆ ಶುದ್ಧ ಸಸ್ಯಾಹಾರಿಗಳಲ್ಲಿ, ವೇಗನ್ ಡಯಟ್ ಮಾಡುವವರಲ್ಲಿ, ತೂಕ ಇಳಿಕೆಯ ಸರ್ಜರಿ ಮಾಡಿದವರಲ್ಲಿ, ಎದೆಯುರಿಗೆ ಔಷಧ ತೆಗೆದುಕೊಳ್ಳವವರಲ್ಲಿ ಈ ರೀತಿ ವಿಟಮಿನ್ ಬಿ12 ಕೊರತೆ ಕಂಡು ಬರುವುದು.

ವಿಟಮಿನ್ ಬಿ 12 ಕೊರತೆ ಉಂಟಾದರೆ ನಮ್ಮ ದೇಹದಲ್ಲಿ ಕೆಲವು ಲಕ್ಷಣಗಳು ಕಂಡು ಬರುವುದು
* ಬಾಯಲ್ಲಿ ಕಂಡು ಬರುವ ಲಕ್ಷಣಗಳು
ವಿಟಮಿನ್ ಬಿ 12 ಕೊರತೆ ಉಂಟಾದರೆ ಅದರ ಲಕ್ಷಣ ಬಾಯಲ್ಲಿ ಕಂಡು ಬರುವುದು, ಬಾಯಲ್ಲಿ ಹುಣ್ಣು, ಉರಿ, ಬಾಯಲ್ಲಿ ತುರಿಕೆ ಉಂಟಾಗುವುದು. ಅಲ್ಲದ ನಾಲಗೆ ಕೆಂಪಾಗುವುದು, ನಾಲಗೆಯಲ್ಲಿ ಊತ ಕಂಡು ಬರುವುದು.
ಕಾಲು ಹಾಗೂ ಕೈಗಳಿಗೆ ಚುಚ್ಚಿದ ಅನುಭವ ಉಂಟಾಗುವುದು
ವಿಟಮಿನ್ ಬಿ 12 ಕೊರತೆ ಉಂಟಾದರೆ ಕೈ ಹಾಗೂ ಕಾಲುಗಳಲ್ಲಿ ಚುಚ್ಚಿದಂತಾಗುವುದು. ನರಗಳಿಗೆ ಹಾನಿಯುಂಟಾಗುವುದರಿಂದ ಈ ರೀತಿ ಉಂಟಾಗುವುದು. ವಿಟಮಿನ್ ಬಿ12 ಕೊರತೆ ಉಂಟಾದರೆ ನರಗಳು ಸರಿಯಾಗಿ ಕಾರ್ಯನಿರ್ವಹಿಸಲು ಕಷ್ಟವಾಗುವುದು. ಇದರಿಂದಾಗಿ ಈ ಬಗೆಯ ಸಮಸ್ಯೆ ಉಂಟಾಗುವುದು.
ತ್ವಚೆ ಬಿಳುಚಿಕೊಳ್ಳುವುದು
ವಿಟಮಿನ್ 12 ಕೊರತೆ ಉಂಟಾದರೆ ಕೆಂಪು ರಕ್ತಕಣಗಳ ಉತ್ಪತ್ತಿ ಕಡಿಮೆಯಾಗುವುದು, ಇದರಿಂದಾಗಿ ತ್ವಚೆ ಬಿಳುಚಿಕೊಂಡಂತೆ ಕಂಡು ಬರುವುದು. ಕೆಂಪು ರಕ್ತಕಣಗಳು ಕಡಿಮೆಯಾದರೆ ರಕ್ತಹೀನತೆ ಉಂಟಾಗುವುದು.
ಸುಸ್ತು, ತಲೆಸುತ್ತು
ಕೆಂಪು ರಕ್ತಕಣಗಳು ಕಡಿಮೆಯಾದಾಗ ದೇಹದಲ್ಲಿ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದು, ಇದರಿಂದ ಬೇಗನೆ ಸುಸ್ತಾಗುವುದು ಅಲ್ಲದೆ ತಲೆಸುತ್ತು, ಉಸಿರಾಟದಲ್ಲಿ ತೊಂದರೆ, ತಲೆಸುತ್ತು ಈ ಬಗೆಯ ಸಮಸ್ಯೆಗಳು ಕಂಡು ಬರುವುದು.
ಮೂಡ್ ಸ್ವಿಂಗ್
ವಿಟಮಿನ್ ಬಿ 12 ಕೊರತೆ ಉಂಟಾದರೆ ಮೂಡ್ ಸ್ವಿಂಗ್ ಸಮಸ್ಯೆ ಉಂಟಾಗುವುದು, ಇದರಿಂದ ಸಿಟ್ಟು, ಖಿನ್ನತೆ ಈ ಬಗೆಯ ಲ್ಷಣಗಳು ಕಂಡು ಬರುವುದು.
ಆಗಾಗ ತಲೆನೋವು ಕಂಡು ಬರುವುದು
ವಿಟಮಿನ್ ಬಿ 12 ಕೊರತೆ ಉಂಟಾದರೆ ಆಗಾಗ ತಲೆನೋವು ಉಂಟಾಗುವುದು, ಮೇಲಿನ ಲಕ್ಷಣಗಳ ಜೊತೆ ಆಗಾಗ ತಲೆನೋವು ಕೂಡ ಬರುತ್ತಿದ್ದರೆ ನಿಮಗೆ ವಿಟಮಿನ್ ಬಿ 12 ಕೊರತೆಯಾಗಿದೆ ಎಂದರ್ಥ.
ಒಂದು ವಿಷಯದ ಕಡೆ ಗಮನ ಹರಿಸಲು ಕಷ್ಟವಾಗುವುದು
ವಿಟಮಿನ್ 12 ಕೊರತೆ ಉಂಟಾದರೆ ಏಕಾಗ್ರತೆ ಕೊರತೆ ಉಂಟಾಗುವುದು. ನರಗಳಿಗೆ ಹಾನಿಯುಂಟಾಗುವುದರಿಂದ ಏಕಾಗ್ರತೆಯ ಕೊರತೆ ಉಂಟಾಗುವುದು. ಅಲ್ಲದೆ ಕಣ್ಣು ಮಂಜಾಗುವುದು, ಪುರುಷರಲ್ಲಿ ಶೀಘ್ರ ಸ್ಖಲನ, ಸ್ನಾಯುಗಳಲ್ಲಿ ಸೆಳೆತ ಈ ಬಗೆಯ ಸಮಸ್ಯೆ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
