ಚಳಿಗಾಲದಲ್ಲಿ ಕೀಲು, ಸ್ನಾಯು ಸೆಳೆತ ಹಿಮ್ಮೆಟ್ಟಿಸಲು ಇಲ್ಲಿದೆ 6 ಸಲಹೆ..!

ಚಳಿಗಾಲ ಆರಂಭವಾಗಿದೆ. ಕೆಲವು ಕಡೆ ಚಳಿಯ ಹೊಡೆತ ತುಸು ಜೋರಾಗಿದೆ. ಈ ಚಳಿಗಾಲ ಆರಂಭವಾಯಿತೆಂದರೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತದೆ. ಚಳಿಯಿಂದ ತಪ್ಪಿಸಿಕೊಳ್ಳಲು ನಾವೊಂದು ಮಾಡಿದರೆ ಚಳಿಗೆ ಆರೋಗ್ಯ ಹದಗೆಟ್ಟು ಒಂದಷ್ಟು ದಿನ ಒದ್ದಾಡಬೇಕಾಗುತ್ತದೆ.

ಇನ್ನು ಚಳಿಗಾಲದಲ್ಲಿ ವಯಸ್ಸಾದವರ ಪಾಡು ಹೇಳತೀರದು ಎನ್ನುವಂತಾಗುತ್ತದೆ. ಚಳಿಯಲ್ಲಿ ಅವರ ಸ್ನಾಯು ಸೆಳೆತ ಹೆಚ್ಚಾಗುತ್ತದೆ. ತಾಪಮಾನ ಕುಸಿತವು ರಕ್ತನಾಳಗಳಲ್ಲಿ ಬಿಗಿ ಉಂಟುಮಾಡಲು ಕಾರಣವಾಗಬಹುದು, ಇದು ದೇಹದ ಪೂರ್ಣ ಭಾಗಕ್ಕೆ ರಕ್ತದ ಹರಿವು ಕಡಿಮೆ ಮಾಡಬಹುದು ಮತ್ತು ಕೀಲುಗಳ ಸುತ್ತ ಮೃದು ಅಂಗಾಂಶಗಳಲ್ಲಿ ಬಿಗಿತವನ್ನು ಉಂಟುಮಾಡುತ್ತದೆ.

Joint Pain

ಪರಿಣಾಮವಾಗಿ, ಸಂಧಿವಾತದ ಕೀಲುಗಳು ಹೆಚ್ಚು ನೋವನ್ನು ಅನುಭವಿಸಬಹುದು ಮತ್ತು ಚಳಿಗಾಲದ ತಿಂಗಳುಗಳಲ್ಲಿ ಸ್ನಾಯುಗಳು ಹೆಚ್ಚಾಗಿ ಸೆಳೆತವಾಗಬಹುದು. ಈ ಸ್ನಾಯು ಸೆಳೆತದಿಂದ ತಪ್ಪಿಸಿಕೊಳ್ಳಲು ಹಲವರು ಪಡಬಾರದ ಪ್ರಯತ್ನಗಳನ್ನೇಲ್ಲಾ ಮಾಡಿ ಮುಗಿಸುತ್ತಾರೆ. ಆದರೂ ಅದರಿಂದ ಪ್ರಯೋಜನವಾಗುವುದು ಕಡಿಮೆ.

ಚಳಿಗಾಲದಲ್ಲಿ ಸ್ನಾಯುಸೆಳೆತ ಉಂಟಾಗಬಾರದೆಂದರೆ ಮನೆಯಲ್ಲೇ ನೀವು ಕೆಲ ನಿಯಮ ಪಾಲಿಸಿ ನೋಡಿ. ಹೀಗೆ ಮಾಡುವುದರಿಂದ ಸ್ನಾಯು ಸೆಳೆತದಿಂದ ಸ್ವಲ್ಪ ಮಟ್ಟಿಗಾದರು ಪಾರಾಗಬಹುದು.

ನಿಯಮಿತ ವ್ಯಾಯಾಮವನ್ನು ಪ್ರಾರಂಭಿಸಿ

ನಿತ್ಯ ನಿಯಮೊತವಾಗಿ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಏಕೆಂದರೆ ಒಂದೇ ದಿನ ನೀವು ದೇಹ ಬಳಲುವಷ್ಟು ವ್ಯಾಯಾಮ ಮಾಡಿದರೆ ಎರಡನೇ ದಿನವೇ ಸಮಸ್ಯೆ ಎದುರಾಗಬಹುದು. ನಿಧಾನವಾಗಿ 5 ಸಾವಿರ ಹೆಜ್ಜೆಗಳಷ್ಟು ದೂರ ನಡೆದಾಡುವುದರಿಂದ ವ್ಯಾಯಾಮ ಆರಂಭಿಸಿ. ಹೀಗೆ ದೈಹಿಕ ಚಟುವಟಿಕೆಯು ದೇಹಕ್ಕೆ ಒಳ್ಳೆಯದು. ಇದು ಸೈನೋವಿಯಲ್ ದ್ರವದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಪ್ರತಿದಿನ 30 ನಿಮಿಷಗಳ ಕಾಲ ನಡೆಯುವುದು ಅಥವಾ ಜಾಗಿಂಗ್ ಮಾಡುವುದು (ಅಥವಾ ವಾರಕ್ಕೆ 4-6 ಬಾರಿ) ಫಿಟ್ ಆಗಿರಲು ಅದ್ಭುತ ಮಾರ್ಗವಾಗಿದೆ.

ಹೆಚ್ಚು ನೀರು ಕುಡಿಯುವುದು

ನಿತ್ಯ 2-3 ಲೀಟರ್ ನೀರನ್ನು ಕುಡಿಯುವುದು ಚಳಿಗಾಲದಲ್ಲಿ ಹೈಡ್ರೇಷನ್‌ನಿಂದ ತಪ್ಪಿಸಬಹುದು. ಕೀಲುಗಳಿಗೂ ಇದು ಅನುಕೂಲವಾಗುತ್ತದೆ. ದೇಹದ ಅಗತ್ಯ ಪ್ರಮಾಣದಲ್ಲಿ ನೀರು ಸಿಗದಿದ್ದರೆ ಸ್ನಾಯು ಸೆಳೆತದಂತಹ ಸಮಸ್ಯೆ ಬಹುಬೇಗ ಆವರಿಸಬಹುದು. ಜೊತೆಗೆ ರಾತ್ರಿ ಮಲಗುವಾಗ ಸಾಕಷ್ಟು ಪ್ರಮಾನದಲ್ಲಿ ನೀರು ಕುಡಿಯುವ ಅಭ್ಯಾಸ ಆರಂಭಿಸಿ ಒಂದೇ ವಾರದಲ್ಲಿ ನೀವು ಅದರ ಫಲಿತಾಂಶ ಕಂಡುಕೊಳ್ಳಬಹುದು.

ಉತ್ತಮ ಆಹಾರ ಸೇವಿಸಿ

ಸಾಕಷ್ಟು ಹಸಿರು ತರಕಾರಿಗಳನ್ನು ಒಳಗೊಂಡಿರುವ ಸಮತೋಲನ ಆಹಾರವನ್ನು ಚಳಿಗಾಲದಲ್ಲಿ ಸೇವಿಸಿ. ಕೃತಕವಾಗಿ ಸಿಹಿಯಾದ ಪಾನೀಯಗಳಿಂದ ದೂರವಿರುವುದು ಉತ್ತಮ ಹೆಚ್ಚುವರಿಯಾಗಿ, ಆರೋಗ್ಯಕರ ಜೀವನಶೈಲಿಗಾಗಿ ಅತಿಯಾದ ಎಣ್ಣೆಯುಕ್ತ ಮತ್ತು ಉಪ್ಪು ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ, ಚಳಿಗಾಲದಲ್ಲಿ ಹೆಚ್ಚು ಉಪ್ಪು ಸೇವನೆ ಸ್ನಾಯುಗಳ ಬಲಹೀನತೆಗೆ ಕಾರಣವಾಗುತ್ತದೆ.

ಸ್ಟ್ರೆಚಿಂಗ್ ವ್ಯಾಯಾಮಗಳು

ನಿಮ್ಮ ದೈನಂದಿನ ದಿನಚರಿಯಲ್ಲಿ ನಿಯಮಿತವಾದ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಸೇರಿಸಿಕೊಳ್ಳಿ, ದಿನಕ್ಕೆ ಕನಿಷ್ಠ ಮೂರು ಬಾರಿ ಈ ಕಠಿಣ ವ್ಯಾಯಾಮ ಮಾಡುವುದು ಒಳಿತು. ಈ ರೀತಿ ಮಾಡುವುದರಿಂದ ಸ್ನಾಯುಗಳು ಮತ್ತು ಕೀಲುಗಳಿಗೆ ರಕ್ತ ಪರಿಚಲನೆ ಸರಾಗವಾಗುತ್ತದೆ. ಜೊತೆಗೆ ಕೀಲು ನೋವಿನ ಸಮಸ್ಯೆ ಇದ್ದರೆ ನಿಯಮಿತವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ದೇಹ ಆದಷ್ಟು ಬೆಚ್ಚಗಿರಲಿ

ಚಳಿಗಾಲದಲ್ಲಿ ದೇಹವನ್ನು ಎಷ್ಟು ಸಾಧ್ಯವೋ ಅಷ್ಟು ಬೆಚ್ಚಗಿರಿಸುವತ್ತ ಗಮನಹರಿಸಬೇಕು. ಹೀಗಾಗಿ ಹೊರಗೆ ಹೋಗುವಾಗ ದಪ್ಪನೆಯ ಉಣ್ಣೆಯ ಬಟ್ಟೆ ಧರಿಸುವುದು, ಸಂಪೂರ್ಣ ದೇಹ ಮುಚ್ಚುವಂತಹ ಬಟ್ಟೆ ಧರಿಸುವುದು, ಕಾಲುಗಳಿಗೆ ಸಾಕ್ಸ್ ಧರಿಸಿ ಓಡಾಡುವುದು. ಕೈ ಕಾಲುಗಳನ್ನು ಬಿಸಿ ನೀರಿನಿಂದ ತೊಳೆದುಕೊಳ್ಳುವುದು. ಇದರ ಜೊತೆಗೆ ಒಳಾಂಗಣದಲ್ಲಿದ್ದಾಗಲೂ ಚಪ್ಪಲಿ ಧರಿಸುವುದರಿಂದ ನಿಮ್ಮ ಪಾದಗಳು ನೇರವಾಗಿ ನೆಲಕ್ಕೆ ತಾಕುವುದನ್ನು ತಡೆಯುವುದು.

ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡುವುದು ಕಷ್ಟವೇ. ಆದರೆ ಯಾವುದೇ ಪರಿಸ್ಥಿತಿಯಲ್ಲೂ ತಣ್ಣೀರ ಸ್ನಾನಕ್ಕೆ ಮುಂದಾಗಬಾರದು. ಅದರಲ್ಲೂ ಸ್ನಾಯು ಸೆಳೆತ ಇರುವವರು ತಣ್ಣೀರ ಸ್ನಾನ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಬಿಸಿ ನೀರಿನ ಸ್ನಾನದಿಂದಾಗಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಇದರಿಂದ ಸ್ನಾಯು ಸೆಳೆತದ ಸಮಸ್ಯೆ ದೂರ ಇಡಬಹುದು. ಅಲ್ಲದೆ ಸಂಜೆ ವೇಳೆ ಬಿಸಿ ನೀರ ಸ್ನಾನವು ಉತ್ತಮ ನಿದ್ರೆಗೂ ಸಹಾಯ ಮಾಡುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

6 Tips To Beat Joint Pains And Muscle Spasms In Winter In Kannada

The drop in temperatures during winter can lead to joints pain, and muscles may cramp. Let’s bid farewell to stiff joints and muscle cramps this winter with these tips
Story first published: Tuesday, December 19, 2023, 7:00 [IST]
X
Desktop Bottom Promotion