Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
5 ವರ್ಷದ ಬಾಲಕಿಯ ಬಲಿ ಪಡೆದ 'ಮೆದುಳು ತಿನ್ನುವ ಅಮೀಬಾ'..! ನೀರಿನಿಂದ ಬರುತ್ತೆ ಈ ಸೋಂಕು..!
ಇತ್ತೀಚಿಗೆ ಹೊಸ ಹೊಸ ಕಾಯಿಲೆಗಳು, ಹೊಸ ಹೊಸ ಟ್ರೀಟ್‌ಮೆಂಟ್‌ಗಳನ್ನು ಕೇಳಿರುತ್ತೀರಿ. ಯಾರು ಯಾವಾಗ ಯಾವ ಕಾಯಿಲೆಗೆ ತುತ್ತಾಗುತ್ತಾರೆ ಅನ್ನೋದನ್ನ ಊಹಿಸಲು ಈಗ ಸಾಧ್ಯವಿಲ್ಲ. ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳಲ್ಲೂ ಈಗ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಅಂದರೆ ಕ್ಯಾನ್ಸರ್, ಬಿಪಿ, ಶುಗರ್‌ನಂತಹ ಕಾಯಿಲೆ ಜೊತೆಗೆ ಹೃದಯಾಘಾತದಂತಹ ಸಮಸ್ಯೆಯೂ ಸಹ ಮಕ್ಕಳಲ್ಲಿ ಕಾಣಿಸುತ್ತಿದೆ.
ಇಂತಹ ಆತಂಕಗಳ ನಡುವೆ ಈಗ ಕೇರಳದ ಒಂದು ಪ್ರಕರಣ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ. ಅಲ್ಲಿನ 5 ವರ್ಷದ ಬಾಲಕಿ ಅಪರೂಪದ ಕಾಯಿಲೆಗೆ ತುತ್ತಾಗಿ ಈಗ ಮೃತಪಟ್ಟಿದ್ದಾಳೆ. ಆಕೆಯ ಮೆದುಳನ್ನು ಅಮೀಬಾ ತಿಂದು ಆಕೆ ಮೃತಪಟ್ಟಿದ್ದಾಳೆ. ನಿಮಗೆ ಕೇಳಲು ಇದು ವಿಚಿತ್ರ ಎನಿಸಬಹುದು ಆಕೆ ಮೆದುಳು ತಿನ್ನುವ ಅಮೀಬಾದ ಕಾಯಿಲೆಗೆ ಒಳಗಾಗಿದ್ದಳು.

ಕೇರಳದ ಮಲಪ್ಪುರಂ ಜಿಲ್ಲೆಯ 5 ವರ್ಷದ ಬಾಲಕಿ 'ನೇಗ್ಲೇರಿಯಾ ಫೌಲೆರಿ' ಎಂಬ ಅಪರೂಪದ ಕಾಯಿಲೆಗೆ ಒಳಗಾಗಿದ್ದಳು. ಈಗ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇದು ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ. ಜೊತೆಗೆ ಇದನ್ನು "ಮೆದುಳು ತಿನ್ನುವ ಅಮೀಬಾ" ಎಂದೂ ಕರೆಯುತ್ತಾರೆ.
ಆಕೆ ಮೇ 13 ರಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಒಂದು ವಾರದವರೆಗೆ ವೆಂಟಿಲೇಟರ್ ಬೆಂಬಲದಲ್ಲಿ ಬದುಕಿದ್ದಳು. ಆದರೆ ಈಗ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಹಾಗಾದ್ರೆ ಏನಿದು ಕಾಯಿಲೆ ಇದು ಹರಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ನಾಗ್ಲೇರಿಯಾ ಫೌಲೆರಿ ಎಂಬ ಸೋಂಕು ನೀರಿನ ಮೂಲಕ ದೇಹ ಸೇರಲಿದೆ. ಸರೋವರ, ಕೆರೆ, ನಲ್ಲಿ ನೀರಿನಲ್ಲಿ ಈ ಸೊಂಕು ಹರಡಬಹುದಂತೆ. ಮೇ 1 ರಂದು ತನ್ನ ಮನೆಯ ಸಮೀಪದ ನದಿಯಲ್ಲಿ ತನ್ನ ಸಂಬಂಧಿಕರೊಂದಿಗೆ ಬಾಲಕಿಗೆ ಸ್ನಾನ ಮಾಡಿಸಲಾಗಿತ್ತು. ಇದೇ ವೇಳೆ ಈ ಅಮೀಬಾದ ಸೊಂಕು ತಗುಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮೇ 10ರಂದು ಆಕೆಗೆ ತಲೆನೋವು, ವಾಂತಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಹದಗೆಟ್ಟ ನಂತರ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಈ ರೀತಿ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮೃತಪಟ್ಟ ಪ್ರಕರಣ ಇದು ಮೊದಲೇನು ಅಲ್ಲ. ಕಳೆದ ವರ್ಷ ಜುಲೈನಲ್ಲಿ, 15 ವರ್ಷದ ಆಲಪ್ಪುಳದ ಬಾಲಕ ತನ್ನ ಮನೆಯ ಸಮೀಪವಿರುವ ಹೊಳೆಯಲ್ಲಿ ಈಜುತ್ತಿದ್ದಾಗ ಸೋಂಕು ತಗುಲಿತ್ತು ಬಳಿಕ ಆತ ಸಹ ಮೃತಪಟ್ಟಿದ್ದ.
ಏನಿದು ಮೆದುಳನ್ನು ತಿನ್ನುವ ಅಮೀಬಾ ?
ನಾಗ್ಲೇರಿಯಾ ಫೌಲೆರಿ ಅಮೀಬಾ ಇದು ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಆಗಿ ಅಭಿವೃದ್ಧಿ ಹೊಂದುವ ಮೂಲಕ ಮಾರಣಾಂತಿಕ ಮೆದುಳಿನ ಸೋಂಕನ್ನು ಉಂಟುಮಾಡುವುದರಿಂದ ಇದನ್ನು "ಮೆದುಳು ತಿನ್ನುವ ಅಮೀಬಾ" ಎಂದು ಕರೆಯಲಾಗುತ್ತದೆ. ಈ ಸೋಂಕು ತಗುಲಿದ ವ್ಯಕ್ತಿ ವಾರದಲ್ಲಿ ತಲೆನೋವು, ಜ್ವರ, ವಾಂತಿಯಂತಹ ಸಮಸ್ಯೆ ಎದುರಿಸುತ್ತಾನೆ. ಈ ಸೋಂಕು ಮೂಗಿನ ಮೂಲಕ ದೇಹದೊಳಗೆ ಪ್ರದೇಶಿಸುತ್ತದೆ. ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಹೀಗಾಗಿಯೇ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗಿದೆ.
ಇನ್ನೂ ಅಚ್ಚರಿ ಎಂದರೆ ಈ ಸೋಂಕು ಬೆಚ್ಚಗಿನ ನೀರಿನಿಂದಲೂ ಹರಡುತ್ತದೆ. ಈ ಸೋಂಕಿಗೆ ಒಳಗಾದರೆ ತೀವ್ರ ತಲೆನೋವು, ಅಧಿಕ ಜ್ವರ, ಬಿಗಿಯಾದ ಕುತ್ತಿಗೆ, ಸ್ನಾಯು ಸೆಳೆತ ಮತ್ತು ವಾಂತಿ ಇವು ಆರಂಭಿಕ ಲಕ್ಷಣಗಳಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
