Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ವಸ್ತು ಜೊತೆ ಜೇನುತುಪ್ಪ ಸವಿಯಬಾರದು..? ಅಪಾಯಕ್ಕೆ ದಾರಿ!!
ಜೇನು ತುಪ್ಪ ಎಲ್ಲಾ ಔಷಧಿಗಳಲ್ಲೂ ಬಳಸಲಾಗುವ ಒಂದು ಜೀವಾಮೃತ. ಆಯುರ್ವೇದದಲ್ಲಿ ಜೇನು ತುಪ್ಪಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹೀಗಾಗಿ ಎಲ್ಲಾ ಗಿಡಮೂಲಿಕೆ ಔಷಧಿ ಸೇರಿ ಆಯುರ್ವೇದದ ಔಷಧಿಗಳಲ್ಲಿ ಇದು ಬಳಕೆಯಾಗುತ್ತದೆ. ಹತ್ತಾರು ಮಕ್ಕಳ ಔಷಧಿಗಳಲ್ಲಿ ಜೇನು ತುಪ್ಪವೇ ಪ್ರಮುಖ ಧಾತುವಾಗಿರುತ್ತದೆ.
ನಾವು ಸಹ ಜೇನು ತುಪ್ಪವನ್ನು ಆಹಾರವಾಗಿಯೂ ಬಳಸಿರುತ್ತೇವೆ. ದೈನಂದಿನ ಆಹಾರದಲ್ಲಿ ಜೇನು ತುಪ್ಪ ಬಳಸುವುದು ಸಾಮಾನ್ಯ. ಆದರೆ ನಾವು ಎಲ್ಲಾ ಆಹಾರ ವಸ್ತುಗಳಿಗೂ ಜೇನು ತುಪ್ಪ ಬಳಸುವುದು ಅಪಾಯಕಾರಿ. ಜೇನು ತುಪ್ಪ ಕೂಡ ಒಂದು ಹಂತದವರೆಗೆ ಮಾತ್ರವೇ ಪ್ರಯೋಜನಕಾರಿ ಇಲ್ಲಿದ್ದರೆ ಅದು ಸಹ ವಿಷಕಾರಿಯಾಗಿ ಬದಲಾಗುತ್ತದೆ.

ಜೇನು ತುಪ್ಪವನ್ನು ಒಂದೇ ದಿನ ನೀವು ಲೀಟರ್ ಲೆಕ್ಕದಲ್ಲಿ ಸೇವಿಸಿದರೆ ನೀವು ಅನಾರೊಗ್ಯಕ್ಕೆ ಒಳಗಾಗುವುದು ಖಚಿತ. ಹಾಗೆ ಕೆಲವೊಂದು ಆಹಾರದ ಜೊತೆಯೂ ಇದನ್ನು ಬೆರೆಸಿ ತೆಗೆದುಕೊಳ್ಳಬಾರದು. ಹಾಗಾದ್ರೆ ಯಾವ 5 ಆಹಾರದೊಂದಿಗೆ ಜೇನು ತುಪ್ಪ ಬೆರೆಸಿ ತೆಗೆದುಕೊಳ್ಳಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೇನುತುಪ್ಪವು ಹೂವುಗಳ ಮಕರಂದದಿಂದ ಜೇನುನೊಣಗಳಿಂದ ಉತ್ಪತ್ತಿಯಾಗುವ ನೈಸರ್ಗಿಕ ಸಿಹಿಕಾರಕವಾಗಿದೆ. ಹಲವರು ಸಕ್ಕರೆ ಬದಲಾಗಿ ಜೇನು ತುಪ್ಪ ಬಳಸುವುದು ನೋಡಬಹುದು. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ವಿಶೇಷವಾಗಿ ಮನುಕಾ ಜೇನುತುಪ್ಪದಂತಹ ವಿಧಗಳಲ್ಲಿ, ಗಾಯವನ್ನು ಗುಣಪಡಿಸಲು ಮತ್ತು ಸೋಂಕು ತಡೆಗಟ್ಟಲು ಇದು ಉಪಯುಕ್ತವಾಗಿದೆ.
ಜೇನುತುಪ್ಪವು ಗಂಟಲು ನೋವು ಮತ್ತು ಕೆಮ್ಮುಗಳಿಗೆ ಜನಪ್ರಿಯ ಪರಿಹಾರವಾಗಿದೆ ಮತ್ತು ಗಾಯಗಳು ಮತ್ತು ಸುಟ್ಟಗಾಯಗಳಿಗೆ ಸ್ಥಳೀಯ ಚಿಕಿತ್ಸೆಯಾಗಿದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇದು ಬಹಳ ಮುಖ್ಯ. ಆದ್ರೆ ಕೆಲವೊಂದು ಆಹಾರದ ಜೊತೆಗೆ ಇದನ್ನು ಬೆರೆಸಿ ಸೇವಿಸಬಾರದಂತೆ. ಹಾಗಾದ್ರೆ ಯಾವೆಲ್ಲಾ ಆಹಾರ ಅನ್ನೋದನ್ನು ನೋಡಿ.
ಬಿಸಿ ನೀರು ಮತ್ತು ಹಾಲು
ಜೇನು ತುಪ್ಪವನ್ನು ಬಿಸಿ ನೀರು ಅಥವಾ ಬಿಸಿ ಹಾಲಿನೊಂದಿಗೆ ಬೆರೆಸಬಾರದು. ಏಕೆಂದರೆ ಜೇನು ತುಪ್ಪದಲ್ಲಿರುವ ಕಿಣ್ವಗಳು, ಪೋಷಕಾಂಶಗಳು ಬಿಸಿಯ ಪದಾರ್ಥದಲ್ಲಿ ಬೆರೆತಾಗ ನಷ್ಟವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವು ದೇಹಕ್ಕೆ ಲಭಿಸುವುದಿಲ್ಲ. ಹೀಗಾಗಿ ಯಾವುದೇ ಬಿಸಿ ಪದಾರ್ಥದೊಂದಿಗೆ ಜೇನು ತುಪ್ಪ ಸವಿಯುವುದು ಅಪ್ರಯೋಜನಕಾರಿಯಾಗಿದೆ. ಆದರೆ ಎಲ್ಲಾ ತಣ್ಣಗಿರುವ ವಸ್ತುಗಳೊಂದಿಗೆ ಜೇನು ತುಪ್ಪ ಬೆರೆಸಬಹುದು.
ಬೆಳ್ಳುಳ್ಳಿ ಕೆಲವು ಚೈನೀಸ್ ಆಹಾರಗಳು
ಜೇನುತುಪ್ಪ ಮತ್ತು ಬೆಳ್ಳುಳ್ಳಿ ಒಟ್ಟಿಗೆ ಸೇವಿಸುವುದು ಅಪಾಯಕಾರಿಯಂತೆ. ಬೆಳ್ಳುಳ್ಳಿಯು ಬಲವಾದ ಸುವಾಸನೆಯನ್ನು ಹೊಂದಿರುತ್ತದೆ ಮತ್ತು ಅದನ್ನು ಜೇನುತುಪ್ಪದೊಂದಿಗೆ ಬೆರೆಸುವುದು ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಲಿದೆ. ಹಾಗೆ ಬೆಳ್ಳುಳ್ಳಿಯ ರಾಸಾಯನಿಕ ಸಂಯೋಜಕವು ಜೇನು ತುಪ್ಪದೊಂದಿಗೆ ಬೆರೆತಾಗ ವಿಚಿತ್ರ ರುಚಿ ಉಂಟಾಗುತ್ತದೆ.
ಸೌತೆಕಾಯಿ ಮತ್ತು ಜೇನು ತುಪ್ಪ
ಸೌತೆಕಾಯಿಯನ್ನು ಸಲಾಡ್‌ನಲ್ಲಿ ಬಳಸಿದ್ದರೆ ಅದಕ್ಕೆ ಜೇಣು ತುಪ್ಪ ಬೆರೆಸಬೇಡಿ. ಏಕೆಂದರೆ ಜೇನು ತುಪ್ಪ ಹಾಗೂ ಸೌತೆಕಾಯಿಯ ಮಿಶ್ರಣವು ಮತ್ತೊಂದು ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತದೆ. ಆಯುರ್ವೇದದ ಪ್ರಕಾರ, ವಿರುದ್ಧ ಗುಣಲಕ್ಷಣಗಳ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸೌತೆಕಾಯಿಯು ಅದರ ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ, ಆದರೆ ಜೇನುತುಪ್ಪವು ನಿಮ್ಮನ್ನು ಬೆಚ್ಚಗಿಡುವ ಒಂದು ವಸ್ತು.
ಡೈರಿ ಉತ್ಪನ್ನಗಳು
ನೀವು ಐಸ್‌ಕ್ರೀಮ್ ಹೊರತುಪಡಿಸಿ ಉಳಿದಂತೆ ಹಾಲು, ಮೊಸರು, ಹಾಲಿನ ಉತ್ಪನ್ನಗಳ ಜೊತೆಗೆ ಜೇನು ತುಪ್ಪ ಬೆರೆಸಿ ಸವಿಯುವುದು ಉತ್ತಮ ಫಲಿತಾಂಶ ನೀಡುವುದಿಲ್ಲ.
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಆಮ್ಲ ಹೊಂದಿರುವ ಹಣ್ಣುಗಳೊಂದಿಗೆ ಎಂದಿಗೂ ಈ ಜೇನುತುಪ್ಪ ಬೆರೆಸಬಾರದಂತೆ. ಅದರಲ್ಲಿ ಮುಖ್ಯವಾಗಿ ನಿಂಬೆ ಹಣ್ಣು, ಕಿತ್ತಲೆ, ಮೂಸಂಬಿ, ಚಕ್ಕೋತ ಹೀಗೆ ಒಂದಿಷ್ಟು ಹಣ್ಣಗಳೊಂದಿಗೆ ಜೇನು ತುಪ್ಪ ಬೆರೆಸಿ ಸವಿಯುವುದು ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications