Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ?
174 ಕೆ.ಜಿ ಇಳಿಸಿಕೊಂಡಿದ್ದ 37 ವರ್ಷದ ಫಿಟ್‌ನೆಸ್ ಗುರು ಹೃದಯಾಘಾತಕ್ಕೆ ಬಲಿ..!
ತೂಕ ಇಳಿಸಿಕೊಳ್ಳಲು ಜನರು ಈಗ ಎಷ್ಟೆಲ್ಲಾ ಸಾಹಸಗಳಿಗೆ ಕೈ ಹಾಕುತ್ತಾರೆ ಎಂಬುದನ್ನು ನೀವೆಲ್ಲಾ ನೋಡಿರುತ್ತೀರಿ. ತೂಕ ಇಳಿಸಲು ಹಲವು ರೀತಿ ಡಯೆಟ್, ವ್ಯಾಯಾಮ, ಜಿಮ್ ಎಂಬಂತೆ ನಿತ್ಯವೂ ಹರಸಾಹಸ ಮಾಡುವುದು ಇದ್ದೇ ಇರುತ್ತೆ. ಆದ್ರೆ ಕೆಲವೊಮ್ಮೆ ಡಯೆಟ್, ಉಪವಾಸ, ಜಿಮ್ ನಾವು ತೆಗೆದುಕೊಳ್ಳುವ ಕೆಲವು ಪದಾರ್ಥಗಳೇ ನಮ್ಮ ಜೀವಕ್ಕೆ ಅಪಾಯ ತರುವುದು ಕೂಡ ನಾವು ನೋಡಿದ್ದೇವೆ.
ಈಗ ಇದೆ ರೀತಿ ಡಯೆಟ್ ಮಾಡಿ ತೂಕ ಇಳಿಸಿ ಫೇಮಸ್ ಫಿಟ್‌ನೆಸ್ ಸ್ಟಾರ್ ಎಂಬ ಹೆಸರು ಪಡೆದಿದ್ದ ವ್ಯಕ್ತಿ ಮೃತಪಟ್ಟಿದ್ದು ಎಲ್ಲರಿಗೂ ಶಾಕ್ ನೀಡಿದೆ. ಬರೋಬ್ಬರಿ 174 ಕೆ,ಜಿ ಇಳಿಸಿದ್ದ ವ್ಯಕ್ತಿ ತನ್ನ 37ನೇ ವಯಸ್ಸಿನಲ್ಲೇ ಮೃತಪಟ್ಟಿರುವುದು ಆಘಾತ ತಂದಿದೆ. ಬ್ರೆಜಿಲಿಯನ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಹಾಗೆ ಫಿಟ್‌ನೆಸ್ ಸ್ಟಾರ್ ಗೇಬ್ರಿಯಲ್ ಫ್ರೀಟಾಸ್ ಈಗ ಮೃತಪಟ್ಟಿದ್ದಾರೆ.

ಈತನ ಹೆಸರು ನೀವು ಕೂಡ ಕೇಳಿರಬಹುದು. ಚಿಕ್ಕ ವಯಸ್ಸಿನಲ್ಲೇ ಆತ ತನ್ನ ವಯಸ್ಸಿಗಿಂತ ಹೆಚ್ಚು ತೂಕ ಹೊಂದಿದ್ದ. ಆದ್ರೆ ತನ್ನ ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದ ಆತ ಬಳಕ 174 ಕೆ.ಜಿ ಇಳಿಸಿಕೊಂಡಿದ್ದ. ಹೀಗಾಗಿ ತಕ್ಷಣ ಫೇಮಸ್ ಆಗಿದ್ದ ಆತ ರಿಯಾಲಿಟಿ ಶೋ ಸೇರಿ ಫಿಟ್‌ನೆಸ್ ಹೇಳಿಕೊಡುವ ಶಿಕ್ಷಕನಾಗಿ ಸುದ್ದಿಯಾಗಿದ್ದ. ಆದ್ರೆ ಈಗ ತನ್ನ 37ನೇ ವಯಸ್ಸಿನಲ್ಲಿ ಆತ ಮೃತಪಟ್ಟಿದ್ದಾನೆ.
ಆತ ಮಲಗಿದ್ದಲ್ಲೇ ಹೃದಯಾಘಾತಕ್ಕೆ ಒಳಗಾಗಿದ್ದಾನೆ ಎಂದು ಗೇಬ್ರಿಯಲ್ ತಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಅವರು ಫಿಟ್‌ನೆಸ್ ಮೂಲಕ ಹೆಸರಾಗಿದ್ದರು. ಪ್ರತಿಯೊಂದು ವಿಡಿಯೋದಲ್ಲಿಯೂ ಅವರು ಫಿಟ್‌ನೆಸ್ ಮಂತ್ರ ಜಪಿಸಿದ್ದರು, ಹೀಗಾಗಿ ಅವರನ್ನು ಬಹಳ ಜನರು ಅನುಸರಿಸಿದ್ದರು. ಹಾಗೆ ಯಶಸ್ವಿಯಾಗಿ ತೂಕ ಇಳಿಸಿಕೊಂಡಿದ್ದರು.
ಹಾಗೆ ಯೂಟ್ಯೂಬ್ ಮೂಲಕವು ಅವರು ಫಿಟ್‌ನೆಸ್ ವಿಡಿಯೋಗಳ ಹಂಚಿಕೊಳ್ಳುತ್ತಿದ್ದರು. ಆದ್ರೆ ದುರಾದೃಷ್ಟವಶಾತ್ ಹೃದಯಾಘಾತದಿಂದ ಅವರು ಮೃತಪಟ್ಟಿರುವುದು ಎಲ್ಲರಲ್ಲೂ ಆಘಾತಕ್ಕೆ ಕಾರಣವಾಗಿದೆ.
ನಿದ್ರೆಯಲ್ಲಿದ್ದಾಗ ಹೃದಯಾಘಾತ ಆಗೋದೇಕೆ?
ನಿದ್ರೆ ಮಾಡಿದಾಗ ಸಾವು ಸಂಭವಿಸಲು ಪ್ರಮುಖ ಕಾರಣ ಅಂದ್ರೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಹೃದಯಾಘಾತ ಹಾಗೂ ಹೃದಯ ಸ್ತಂಭನದ ನಡುವೆ ಸಣ್ಣದಾದ ವ್ಯತ್ಯಾಸ ಇದೆ. ಲಾಂಗ್ ಕ್ಯೂ ಟಿ ಸಿಂಡ್ರೋಮ್, ಬ್ರುಗಾಡಾ ಸಿಂಡ್ರೋಮ್ ಮತ್ತು ಹೈಪಟ್ರೋರ್ಫಿಕ್ ಕಾರ್ಡಿಯೊಮಿಯೋಪತಿಯಂತಹ ಅನುವಂಶಿಕ ಕಾರಣಗಳು ಕಾರ್ಡಿಯಾಕ್ ಅರೆಸ್ಟ್‌ಗೆ ಕಾರಣವಾಗುತ್ತದೆ.
ಈ ರೀತಿಯ ಹೃದಯಾಘಾತವನ್ನು ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುವ ಮುನ್ನ ಯಾವ ರೀತಿಯ ಲಕ್ಷಣಗಳನ್ನು ನಾವು ನೋಡಬಹುದು.
- ಎದೆ ನೋವು ಕೆಲವು ನಿಮಿಷಗಳವರೆಗೆ ಇರುತ್ತದೆ.
- ಉಸಿರಾಟದ ತೊಂದರೆ
- ಹಗುರವಾದ ಭಾವನೆ
- ಎದೆಯುರಿ
- ಕಣ್ಣು ಮಂಜಾಗುವುದು
- ಬೆವರುವಿಕೆ
- ವಾಕರಿಕೆ
- ವಾಂತಿ ಬರುವಂತಹ ಅನುಭವ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications