Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಕನ ಮದುವೆ ಹಳದಿ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ತಂಗಿಗೆ ಹೃದಯಾಘಾತ: ವೀಡಿಯೋ ವೈರಲ್
ಈ ವೀಡಿಯೋ ನೋಡುವಾಗ ಅಯ್ಯೋ ಅನಿಸುತ್ತೆ! ಮದುವೆ ಮನೆಯದು, ಅಕ್ಕನ ಮದುವೆಯ ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಳು ಆ ಹುಡುಗಿ, ಆದರೆ ಒಂದೇ ಕ್ಷಣದಲ್ಲಿ ಮದುವೆ ಮನೆ ಸ್ಮಶಾನವಾಯ್ತು... ಕ್ರೂರ ವಿಧಿ ಆ ಮನೆಯ ಸಂತೋಷ ಕಿತ್ತುಕೊಂಡಿತು.

ಇದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಆ ಹುಡುಗಿಗೆ 18 ವರ್ಷ, ತನ್ನ ಅಕ್ಕನ ಮದುವೆ ಅಂತ ತುಂಬಾನೇ ಖುಷಿ ಖುಷಿಯಿಂದ ಇದ್ದಳು. ಹಳದಿ ಶಾಸ್ತ್ರ ನಡೆಯುತ್ತಿತ್ತು, ಇತ್ತ ಕಡೆ ಮಕ್ಕಳು, ಹುಡುಗಿಯರು ಎಲ್ಲಾ ಡ್ಯಾನ್ಸ್ ಮಾಡುತ್ತಿದ್ದರು, ಅವಳಿಗೆ ಡ್ಯಾನ್ಸ್ ಮಾಡುವಾಗ ಎದೆಯಲ್ಲಿ ಏನೋ ನೋವು ಕಾಣಿಸಿಕೊಳ್ಳುತ್ತೆ, ಎದೆ ಮೇಲೆ ಕೈ ಇಟ್ಟು ನಂತರ ಡ್ಯಾನ್ಸ್ ಹೆಜ್ಜೆ ಇಡುತ್ತಲೇ ಪಕ್ಕದಲ್ಲಿದ್ದ ಪುಟ್ಟ ಬಾಲಕ ಕೈಯನ್ನು ಬ್ಯಾಲೆನ್ಸ್ ಹಿಡಿದುಕೊಳ್ಳುತ್ತಾಳೆ, ಅವಳಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದನಿಸಿರಬಹುದು, ಹಾಗಾಗಿ ಸಪೋರ್ಟ್‌ಗೆ ಆತನ ಕೈ ಹಿಡಿಯುತ್ತಲೇ ಬಿದ್ದು ಹೋಗುತ್ತಾಳೆ, ಬಿದ್ದಲ್ಲಿಯೇ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ.
ಮನೆಯವರು ಈಕೆ ಬಿದ್ದ ತಕ್ಷಣ ಗಾಬರಿಯಿಂದ ಕಿರುಚುತ್ತಿರುವುದು ಕೂಡ ಕೇಳಬಹುದು. ಕೆಲವೇ ನಿಮಿಷಗಳ ಮುಂದೆ ಸಂತೋಷ-ಸಂಭ್ರಮ, ಡಿಜೆ ಸೌಂಡ್‌ನಿಂದ ತುಂಬಿದ್ದ ಆ ಸ್ಥಳದಲ್ಲಿ ಅಳುವಿನ ಶಬ್ದ ಮಾತ್ರ ಕೇಳುವಂತಾಯ್ತು.
ಹಳದಿಗೆ ಡ್ರೆಸ್ ಕೋಡ್ ಮಾಡಿ ಅಲಂಕರಿಸಿ ಎಷ್ಟೊಂದು ಚೆನ್ನಾಗಿ ರೆಡಿಯಾಗಿ ಮುದ್ದು ಮುದ್ದಾಗಿ ಕಾಣುತ್ತಿದ್ದ ಮಗಳು ಇಲ್ಲ ಎಂದಾಗ ಪೋಷಕರಿಗೆ ಹೇಗಾಗಿರಬೇಡ, ತನ್ನ ಮದುವೆ ಶಾಸ್ತ್ರದಲ್ಲಿಯೇ ತಂಗಿ ಇಲ್ಲವಾದಾಗ ಆ ಅಕ್ಕನಿಗೆ ಎಂಥ ಶಾಕ್ ಆಗಿರಬೇಡ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು, ಆವಾಗ ವೈದ್ಯರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
UP : मेरठ में बहन के हल्दी प्रोग्राम में डांस कर रही रिमशा नामक युवती की मौत हुई। डॉक्टर इसे हार्ट अटैक बता रहे हैं। pic.twitter.com/FXa2cIzEh4
— Sachin Gupta (@SachinGuptaUP) April 28, 2024
ಟೀನೇಜ್ ಮಕ್ಕಳಲ್ಲಿ ಹೃದಯಾಘಾತ
ಟೀನೇಜ್ ಮಕ್ಕಳಲ್ಲಿ ಹೃದಯಾಘಾತದ ಲಕ್ಷಣ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಲಕ್ಷಣ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಮಕ್ಕಳು ಆಗಾಗ ಎದೆನೋವು ಎಂದು ಹೇಳುತ್ತಿದ್ದರೆ ಸ್ವಲ್ಪ ಆಟವಾಡಿದಾಗ ಸುಸ್ತಾದರೆ ಮಕ್ಕಳ ತಜ್ಞರನ್ನು ಭೇಟಿಯಾಗುವುದು ಒಳ್ಳೆಯದು.
ಈ ಲಕ್ಷಣ ನಿರ್ಲಕ್ಷ್ಯ ಮಾಡಬೇಡಿ
ಆಗಾಗ ಉಸಿರಾಟದ ಸಮಸ್ಯೆ ಇದ್ದರೆ ಹೃದಯ ಸಂಬಂಧಿ ಸಮಸ್ಯೆಯ ಲಕ್ಷಣವಾಗಿದೆ.
ಚಿಕ್ಕ ಪ್ರಾಯದಲ್ಲಿ ಹಾರ್ಟ್ ಸರ್ಜರಿಯಾಗಿದ್ದರೆ
ಸ್ವಲ್ಪ ಆಟ ಆಡುವಾಗ, ಡ್ಯಾನ್ಸ್ ಮಾಡಿದಾಗ ಮಕ್ಕಳಿಗೆ ಉಸಿರಾಟದ ಸಮಸ್ಯೆವಾಗುತ್ತಿದ್ದರೆ ಮಕ್ಕಳ ತಜ್ಞರನ್ನು ಭೇಟಿ ಮಾಡಿ.
ಚಿಕ್ಕ ಪ್ರಾಯದಲ್ಲಿಯೇ ಉಂಟಾಗುತ್ತಿದೆ ಹೃದಯಾಘಾತ, ಕಾರಣವೇನು?
ಇತ್ತೀಚಿನ ವರ್ಷಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಲ್ಲಿ ಹೃದಯಾಘಾತ ಸಮಸ್ಯೆ ಕಂಡು ಬರುವುದು ಸಾಮಾನ್ಯವಾಗುತ್ತಿದೆ. ಮಕ್ಕಳು ಸ್ವಲ್ಪ ಹೆಚ್ಚು ಕುಣಿದರೆ, ಹೆಚ್ಚಿನ ಉತ್ತಡಕ್ಕೆ ಒಳಗಾದರೆ ಹೃದಯಾಘಾತ ಕಂಡು ಬರುತ್ತಿದೆ, ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವೇನು ಎಂಬುವುದನ್ನು Cardio Metabolic ಎಂಬ ಹೆಲ್ತ್ ವೆಬ್‌ಸೈಟ್‌ನಲ್ಲಿ ಈ ರೀತಿ ಹೇಳಿದೆ
ಹೈಪರ್ ಟೆನ್ಷನ್
ಇತ್ತೀಚಿನ ವರ್ಷಗಳಲ್ಲಿ ದೊಡ್ಡವರಿಗಿಂತ ಚಿಕ್ಕ ಪ್ರಾಯದವರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದೆಯಂತೆ, ಅತ್ಯಧಿಕ ರಕ್ತದೊತ್ತಡ ಸ್ನಾಯುಗಳನ್ನು ರಕ್ತನಾಳಗಳನ್ನು ಕಿರಿದಾಗಿಸುವುದು ಇದರಿಂದ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುವುದು.
ಹೃದಯ ಸಂಬಂಧಿ ಸಮಸ್ಯೆ
ಹೃದಯ ಸಂಬಂಧಿ ಸಮಸ್ಯೆ ಇರುವ ಮಕ್ಕಳಲ್ಲಿ ಕೂಡ ಹೃದಯಾಘಾತದ ಸಮಸ್ಯೆ ಹೆಚ್ಚಾಗುವುದು.ಅವರಿಗೆ ಏನಾದರೂ ಹೃದಯ ಸಮಸ್ಯೆಯಿದ್ದರೆ ಇದರಿಂದ ಉಸಿರಾಟದ ಸಮಸ್ಯೆಯಾಗುವುದು. ಆದ್ದರಿಂದ ಉಸಿರಾಟದ ಸಮಸ್ಯೆಯಾಗುವಾಗ ಜಾಗ್ರತೆವಹಿಸ.
ಮಧುಮೇಹದ ಸಮಸ್ಯೆ
ಮಧುಮೇಹ ಚಿಕ್ಕ ಪ್ರಾಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಈ ಮಧುಮೇಹಿಗಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುವುದು.
ಮದ್ಯ, ಡ್ರಗ್ಸ್, ಧೂಮಪಾನ: ಯೌವನ ಪ್ರಾಯದವರಲ್ಲಿ ಈ ಅಭ್ಯಾಸಗಳಿದ್ದರೂ ಹೃದಯಾಘಾತ ಉಂಟಾಗುವುದು. ಆದ್ದರಿಂದ ಹೃದಯಾಘಾತ ತಡೆಗಟ್ಟಲು ಆರೋಗ್ಯಕರ ಜೀವನ ಸೈಲಿ ಕಡೆಗೆ ಗಮನಹರಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











