Latest Updates
-
ಅರ್ನಬ್ ಚಂಡಮಾರುತದ ಆರ್ಭಟ: ನಿಮ್ಮ ಕುಟುಂಬದ ಸುರಕ್ಷತೆಗಾಗಿ 30 ನಿಮಿಷದ ತುರ್ತು ಪ್ಲಾನ್ ಇಲ್ಲಿದೆ -
ದೀಪಾವಳಿ ಸಿಹಿ ತಿನ್ನುವ ಮುನ್ನ ಎಚ್ಚರ! ದೆಹಲಿಯಲ್ಲಿ 4,000 ಕೆಜಿ ಕಳಪೆ ಆಹಾರ ಜಪ್ತಿ, ನಿಮ್ಮ ಆರೋಗ್ಯಕ್ಕೆ ಅಪಾಯವೇ? -
ಹ್ಯಾಲೋವಿನ್ ಪಾರ್ಟಿ ಹವಾ: ₹500ರೊಳಗೆ ಬೆಸ್ಟ್ ಲುಕ್, ವೈರಲ್ ರೀಲ್ಸ್ ಟ್ರಿಕ್ಸ್ ಮತ್ತು ಸೇಫ್ಟಿ ಗೈಡ್! -
ದೆಹಲಿ-ಎನ್ಸಿಆರ್ನಲ್ಲಿ ಮಳೆಯ ನಂತರ ಶುದ್ಧ ಗಾಳಿ: 20 ನಿಮಿಷಗಳ ಸುರಕ್ಷಿತ ವಾಕಿಂಗ್ಗೆ ಇಲ್ಲಿದೆ ಪ್ಲಾನ್! -
ದೀಪಾವಳಿ ಬಜೆಟ್ ಚಿಂತೆಯೇ? ದಂಪತಿಗಳೇ, ಈ 'ಮನಿ ಡೇಟ್' ಮೂಲಕ ಹಣಕಾಸಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಿ! -
ವಿಶ್ವ ವೀಗನ್ ದಿನ: ಜೇಬಿಗೆ ಹೊರೆಯಾಗದಂತೆ ಪ್ರೋಟೀನ್ ಪಡೆಯೋದು ಹೇಗೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್! -
ಅಹೋಯಿ ಅಷ್ಟಮಿ 2026: ಮಕ್ಕಳ ಆಯುಷ್ಯಕ್ಕಾಗಿ ತಾಯಂದಿರ ವ್ರತ; ನಿಮ್ಮ ನಗರದ ಪೂಜಾ ಮುಹೂರ್ತ ಮತ್ತು ಸರಳ ಟಿಪ್ಸ್ ಇಲ್ಲಿದೆ -
ದೆಹಲಿ ಹಾಫ್ ಮ್ಯಾರಥಾನ್: ಕಲುಷಿತ ಗಾಳಿಯಲ್ಲಿ ಓಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಮದುವೆ vs ಲೈವ್-ಇನ್: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಿಮ್ಮ ಸಂಬಂಧದ ಭದ್ರತೆ ಹೇಗೆ? -
ಹೈದರಾಬಾದ್ನಲ್ಲಿ ಸ್ವೀಟ್ ಶಾಪ್ಗಳ ಮೇಲೆ ದಾಳಿ: ನಿಮ್ಮ ನೆಚ್ಚಿನ ಅಂಗಡಿ ಬಂದ್ ಆಗಿದೆಯೇ? ಪಟ್ಟಿ ಇಲ್ಲಿದೆ!
ಇನ್ಮುಂದೆ ರಕ್ತ ಪರೀಕ್ಷೆಯಿಂದಲೇ ತಿಳಿಯುತ್ತೆ 18 ಮಾದರಿಯ ಕ್ಯಾನ್ಸರ್..! ಹೇಗೆ ನೋಡಿ..!
ಕೋವಿಡ್ಗಿಂತಲೂ ವಿಶ್ವವನ್ನು ಮಹಾಮಾರಿಯಾಗಿ ಕಾಡುತ್ತಿರುವುದು ಕ್ಯಾನ್ಸರ್. ಹೌದು ಈ ಕ್ಯಾನ್ಸರ್ನಿಂದ ವಿಶ್ವದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಮಂದಿ ಮೃತಪಡುತ್ತಾರೆ. ಇನ್ನೊಂದಿಷ್ಟು ಲಕ್ಷ ಜನ ಕ್ಯಾನ್ಸರ್ಗೆ ಒಳಗಾಗುತ್ತಾರೆ. ಅದರಲ್ಲೂ ಭಾರತದಲ್ಲಿ ಈ ಸಂಖ್ಯೆ ಹೆಚ್ಚಾಗಿಯೇ ಇದ್ದು, ಭಾರತ ಕ್ಯಾನ್ಸರ್ ರೋಗಿಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಅದ್ರಲ್ಲೂ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿಯಂತಹ ಬೃಹತ್ ನಗರಳಲ್ಲಿ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿದೆ. ಪ್ರತಿ ಲಕ್ಷ ಜನಸಂಖ್ಯೆಯಲ್ಲಿ 250ಕ್ಕೂ ಹೆಚ್ಚು ಮಂದಿಗೆ ಕ್ಯಾನ್ಸರ್ ರೋಗವಿರುತ್ತದೆ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ. ಈ ಕ್ಯಾನ್ಸರ್ನಲ್ಲಿ ಹತ್ತಾರು ರೂಪಗಳಿವೆ ದೇಹದ ಯಾವ ಭಾಗಕ್ಕೆ ಕ್ಯಾನ್ಸರ್ ಅಂಟಿಕೊಂಡಿದೆ ಎಂಬುದು ಸಾವಿನ ಸನಿಹಕ್ಕೆ ಬರುವವರೆಗೂ ಕೆಲವೊಮ್ಮೆ ತಿಳಿಯುವುದೇ ಇಲ್ಲ.

ಈ ಕ್ಯಾನ್ಸರ್ ಕಾಯಿಲೆಗೆ ಆರಂಭದಲ್ಲೇ ಚಿಕಿತ್ಸೆ ಪಡೆಯೋದು ಮಾತ್ರವೇ ಚಿಕಿತ್ಸಾ ವಿಧಾನವಾಗಿದೆ. ಅದಲ್ಲದೆ ಕ್ಯಾನ್ಸರ್ ಕೆಲವು ಹಂತ ತಲುಪಿದ ಬಳಿಕ ಯಾವ ಚಿಕಿತ್ಸೆಯೂ ಸಹಾಯಕ್ಕೆ ಬರುವುದಿಲ್ಲ. ಅದರಲ್ಲೂ ಪ್ಯಾನ್ಕ್ರಿಯೇಟಿಕ್ ಕ್ಯಾನ್ಸರ್ (ಮೇದೋಜೀರಕ ಗ್ರಂಥಿ ಕ್ಯಾನ್ಸರ್) ಅತ್ಯಂತ ನೋವು ನೀಡುವ ಕ್ಯಾನ್ಸರ್ ಆಗಿರುತ್ತದೆ. ಆದರೆ ಆರಂಭದಲ್ಲಿ ಇದರ ಲಕ್ಷಣಗಳು ಗೋಚರಿಸದೇ ಇರಬಹುದು.
ಇದೀಗ ವೈದ್ಯಕೀಯ ಕ್ಷೇತ್ರ ಮುಂದುವರೆದಿದ್ದು, ಈ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡಬಹುದು. ಅಚ್ಚರಿಯ ವಿಷಯ ಏನೆಂದರೆ ನಿಮ್ಮ ರಕ್ತ ಪರೀಕ್ಷೆಯ ಮೂಲಕವೇ 18 ರೀತಿಯ ಕ್ಯಾನ್ಸರ್ ಅನ್ನು ಶೇ.93ರಷ್ಟು ಗುರುತಿಸಲು ಸಾಧ್ಯವಾಗಲಿದೆಯಂತೆ. ಹೌದು ಹೊಸ ರೀತಿಯ ರಕ್ತಾ ಪರೀಕ್ಷೆಯ ಉಪಕರಣವು ಆರಂಭಿಕ ಹಂತದ ಕ್ಯಾನ್ಸರ್ ಪತ್ತೆಗೆ ನೆರವಾಗಲಿದೆಯಂತೆ.
ಬಯೋಟೆಕ್ ಸಂಸ್ಥೆ ನೊವೆಲ್ನಾ ಸಂಶೋಧಕರು ಇದು ಪ್ರಸ್ತುತ NHS (ನ್ಯಾಷನಲ್ ಹೆಲ್ತ್ ಸರ್ವೀಸ್) ನಲ್ಲಿ ಪ್ರಯೋಗಿಸಲಾಗುತ್ತಿರುವ ಗ್ಯಾಲರಿ ಪರೀಕ್ಷೆಗಿಂತ 'ಹೆಚ್ಚಿನ ಸೂಕ್ಷ್ಮತೆಯನ್ನು' ಹೊಂದಿದೆ ಎಂದು ಹೇಳಿದರು."ಹೊಸ ಪೀಳಿಗೆಯ" ತಂತ್ರಜ್ಞಾನವು ಪುರುಷರಲ್ಲಿ 93 ಪ್ರತಿಶತ ಮೊದಲ ಹಂತದ ಪ್ರಕರಣಗಳನ್ನು ಮತ್ತು 84 ಪ್ರತಿಶತ ಮಹಿಳೆಯರಲ್ಲಿ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿದೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಡಾ ಬೊಗ್ಡಾನ್ ಬುಡ್ನಿಕ್ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ;ನಮ್ಮ ಪ್ರೋಟೀನ್ ಆಧಾರಿತ ಪ್ಲಾಸ್ಮಾ ಪರೀಕ್ಷೆಯು ಜನಸಂಖ್ಯೆಯ-ವ್ಯಾಪಕ ಸ್ಕ್ರೀನಿಂಗ್ ಸಾಧನವಾಗಿ ಬಳಸಲು ಪ್ರಬಲ ಸಾಧನವಾಗಿದೆ. ಇದು ಲಕ್ಷಣರಹಿತ ರೋಗಿಗಳಲ್ಲಿ ವಿವಿಧ ಆರಂಭಿಕ ಹಂತದ ಗೆಡ್ಡೆಗಳನ್ನು ಪತ್ತೆಹಚ್ಚುವಲ್ಲಿ ಹೆಚ್ಚಿನ ಸೂಕ್ಷ್ಮತೆಯನ್ನು ತೋರಿಸಿದೆ. ಅಲ್ಲದೆ ಈ ಪರೀಕ್ಷೆ ಯಶಸ್ವಿಯೂ ಆಗಿದೆ ಎಂದಿದ್ದಾರೆ.
ಸುಮಾರು 3 ಮಿಲಿಯನ್ ಇಂಗ್ಲೆಂಡ್ನ ಪ್ರಜೆಗಳು ಪ್ರಸ್ತುತ ಕ್ಯಾನ್ಸರ್ ಪೀಡಿತರಾಗಿದ್ದಾರೆ. 2040ರ ವೇಳೆಗೆ ಈ ಸಂಖ್ಯೆಯು 5.3 ಮಿಲಿಯನ್ಗಿಂತ ಹೆಚ್ಚಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ರೋಗವು ಅದರ ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ನೀಡಲು ತುಂಬಾ ಸುಲಭವಾಗಿದೆ, ಆದರೆ ಹೆಚ್ಚಿನ ಪರೀಕ್ಷೆಗಳು ರೋಗಿಯು ಹೊಂದಿರುವ ಗೆಡ್ಡೆಯ ಪ್ರಕಾರಕ್ಕೆ ನಿರ್ದಿಷ್ಟವಾಗಿರುತ್ತವೆ, ಇದು ರೋಗನಿರ್ಣಯವನ್ನು ನಿಧಾನಗೊಳಿಸುತ್ತದೆ.
ಹೊಸ ನೊವೆಲ್ನಾ ಪರೀಕ್ಷೆಯು "ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಮೀರಿಸುತ್ತದೆ, ಆರಂಭಿಕ ಕ್ಯಾನ್ಸರ್ ಪತ್ತೆಗೆ ಹೆಚ್ಚು ಪರಿಣಾಮಕಾರಿ ವಿಧಾನವನ್ನು ಒದಗಿಸುತ್ತದೆ" ಎಂದು ಸಂಶೋಧಕರು ಹೇಳಿದ್ದಾರೆ. ಇದು ರಕ್ತದ ಪ್ಲಾಸ್ಮಾದಲ್ಲಿನ ಪ್ರೋಟೀನ್ಗಳನ್ನು ನೋಡುವ ಮೂಲಕ ಕಾರ್ಯನಿರ್ವಹಿಸುತ್ತದೆ, ಇದು ಕ್ಯಾನ್ಸರ್ ಮಾದರಿಗಳನ್ನು ಸಾಮಾನ್ಯವಾದವುಗಳಿಂದ ಪ್ರತ್ಯೇಕಿಸುತ್ತದೆ. ಈ ಪರೀಕ್ಷೆಯು ನಿಮ್ಮ ಲಿಂಗವನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತದೆ, ಕೆಲವು ಕ್ಯಾನ್ಸರ್ಗಳು ನೀವು ಪುರುಷ ಅಥವಾ ಮಹಿಳೆಯೇ ಎಂಬುದನ್ನು ಅವಲಂಬಿಸಿ ವಿವಿಧ ವಯಸ್ಸಿನಲ್ಲಿ ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ಈ ಪರೀಕ್ಷೆಗಳಿಂದಾಗುವ ಲಾಭವೇನು
ಈ ರಕ್ತದ ಮಾದರಿ ಪರೀಕ್ಷೆಯಿಂದಾಗಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಗುರುತಿಸಬಹುದು. ಕ್ಯಾನ್ಸರ್ನಿಂದ ಇಷ್ಟು ಮಟ್ಟದ ಸಾವಾಗಲು ತಡವಾಗಿ ಚಿಕಿತ್ಸೆ ಆರಂಭವಾಗುತ್ತಿರುವುದು ಸಹ ಒಂದು ಕಾರಣವಾಗಿದೆ. ರೋಗಿಗಳಿಗೆ ತಮಗೆ ಕ್ಯಾನ್ಸರ್ ಇದೆ ಎಂಬುದೇ ತಿಳಿಯದಿದ್ದರೆ ಅಥವಾ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಅವರು ಪರೀಕ್ಷೆಗೊಳಪಡುವುದಿಲ್ಲ. ಜೊತೆಗೆ ನಿರ್ದಿಷ್ಟ ಕ್ಯಾನ್ಸರ್ ಪತ್ತೆ ಪರೀಕ್ಷೆಗೆ ಒಳಪಡುವ ಅಗತ್ಯವೂ ಅವರಲ್ಲಿ ಇರುವುದಿಲ್ಲ. ಆದರೆ ಈ ವಿಭಿನ್ನ ರಕ್ತ ಪರೀಕ್ಷೆಯಲ್ಲಿ ಅವರ ಕ್ಯಾನ್ಸರ್ ಮೂಲವೂ ಪತ್ತೆಯಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

