Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಮೆದುಳು ತಿನ್ನುವ ಅಮೀಬಾಗೆ ಕೇರಳದ ಬಾಲಕ ಬಲಿ: ಕೊಳ, ನದಿಯಲ್ಲಿ ಈಜಾಡುವಾಗ ಜಾಗ್ರತೆ!
ಮೆದುಳು ತಿನ್ನವ ಅಮೀಬಾದ ಬಗ್ಗೆ ನೀವು ಈಗಾಗಲೇ ಕೇಳಿರಬಹುದು, ಇದರಿಂದಾಗಿ ಹಲವು ಮಂದಿ ಸಾವನ್ನಪ್ಪಿದ್ದಾರೆ, ಆದರೆ ಇಂಥ ಪ್ರಕರಣ ಭಾರತದಲ್ಲಿ ಕಡಿಮೆಯಿತ್ತು, ಇದೀಗ ಕೇರಳದ ಹದಿಹರೆಯದ ಬಾಲಕನನ್ನು ಈ ಅಮೀಬಾ ಬಲಿ ತೆಗೆದುಕೊಂಡಿದೆ.
ಕಳೆದ ಮೂರು ತಿಂಗಳಿನಲ್ಲಿ ಇದು ಮೂರನೇ ಪ್ರಕರಣವಾಗಿದೆ. ಈ ಹುಡುಗ ಚಿಕ್ಕ ಕೊಳದಲ್ಲಿ ಈಜಾಡಿದ್ದ ಆವಾಗ ಈ ಅಮೀಬಾ ಮೂಗಿನ ಮುಖಾಂತರ ಆತನ ಶರೀರ ಸೇರಿರಬಹುದು ಎಂದು ಹೇಳಲಾಗುತ್ತಿದೆ.

ಕೇರಳದ ಕೋಝಿಕೋಡ್‌ನ ಬಾಲಕ ಮೆದುಳು ತಿನ್ನುವ ಅಮೀಬಾದಿಂದಾಗಿ ಸಾವನ್ನಪ್ಪಿದ್ದಾನೆ. ಕೇರಳದಲ್ಲಿ ಈ ರೀತಿ ಆಗಿರುವುದು ಇದೇ ಮೊದಲಲ್ಲ, ಈ ಹಿಂದೆ 5 ವರ್ಷದ ಬಾಲಕಿ ಅಪರೂಪದ ಕಾಯಿಲೆಗೆ ತುತ್ತಾಗಿ ಮೃತ ಪಟ್ಟಿದ್ದಾಳೆ.
ನೇಗ್ಲೇರಿಯಾ ಫೌಲೆರಿ ಎಂಬ ಕಾಯಿಲೆಯಿದು
ಕೇರಳದ ಮಲಪುರಂ ಜಿಲ್ಲೆಯ 5 ವರ್ಷದ ಬಾಲಕಿ ಈ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ.
ಏನಿದು ನಾಗ್ಲೇರಿಯಾ ಫೌಲೆರಿ?
ನಾಗ್ಲೇರಿಯಾ ಫೌಲೆರಿ ಎಂಬ ಸೋಂಕು ನೀರಿನ ಮೂಲಕ ದೇಹವನ್ನು ಸೇರುವುದು. ಸರೋವರ, ಕೆರೆ, ನಲ್ಲಿ ನೀರಿನ ಮೂಲಕ ಸೋಂಕು ಹರಡುವುದು.
2020ರಲ್ಲಿ ಟೆಕ್ಸಾಸ್‌ನಲ್ಲಿಯೂ ಈ ಘಟನೆ ನಡೆದಿತ್ತು
2020ರಲ್ಲಿ ಟೆಕ್ಸಾಸ್ ಬಾಲಕ ಈ ರೋಗದ ಕಾರಣದಿಂದಾಗಿ ಸಾವನ್ನಪ್ಪಿದನು. ಇದು ನೀರಿನ ಮೂಲಕ ಮನುಷ್ಯನ ದೇಹವನ್ನು ಸೇರುತ್ತದೆ. ಈ ಅಮೀಬಾ ದೇಹವನ್ನು ಸೇರಿದಾಗ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಈ ಜ್ವರ ಬಂದಾಗ ಎದ್ದು ನಿಲ್ಲಲು ಕೂಡ ಸಾಧ್ಯವಾಗಲ್ಲ, ಮಾತನಾಡಲು ತುಂಬಾನೇ ಕಷ್ಟವಾಗುವುದು. ಈ ಅಮೀಬಾ ಮನುಷ್ಯನ ದೇಹವನ್ನು ಹೊಕ್ಕಿದ ಮೇಲೆ ಚಿಕಿತ್ಸೆ ಫಲಕಾರಿಯಾಗುವುದು ತುಂಬಾನೇ ಕಷ್ಟ. ಹಾಗಾಗಿ ಈ ಕಾಯಿಲೆ ತುಂಬಾನೇ ಅಪಾಯಕಾರಿ.
ಈ ಅಮೀಬಾ ದೇಹಕ್ಕೆ ಹೇಗೆ ಸೇರುತ್ತದೆ?
ಈ ಅಮೀಬಾ ದೇಹದೊಳಗಡೆ ನಿರು ಕುಡಿಯುವುದರಿಂದ ಸೇರುವುದಿಲ್ಲ, ಇದು ನೀರಿನಲ್ಲಿ ಸ್ನಾನ ಮಾಡಿದಾಗ ಅಥವಾ ಈಜಾಡಿದಾಗ ಮೂಗಿನ ಮೂಲಕ ದೇಹವನ್ನು ಸೇರುತ್ತದೆ.
ಈ ಅಮೀಬಾ ದೇಹವನ್ನು ಸೇರಿದಾಗ ಜ್ವರದ ಜೊತೆಗೆ ಈ ಲಕ್ಷಣಗಳು ಕಂಡು ಬರುವುದು:
ಈ ಅಮೀಬಾ ದೇಹವನ್ನು ಸೇರಿದ ಮೇಲೆ ಜ್ವರ ಬರುವುದು, ವಿಪರೀತ ತಲೆನೋವು ಕಂಡು ಬರುವುದು, ಕುತ್ತಿಗೆ ಭಾಗ ಬಿಗಿಯಾಗುವುದು, ವಾಂತಿ, ತಲೆಸುತ್ತು, ಸುಸ್ತು, ರೋಗಿಯಲ್ಲಿ ಒಂದು ರೀತಿಯ ಗೊಂದಲ ಈ ಎಲ್ಲಾ ಲಕ್ಷಣಗಳು ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

