Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಐಟಿ ಬಿಟಿ ಕ್ಷೇತ್ರದಲ್ಲಿ 14 ಗಂಟೆ ಕೆಲಸಕ್ಕೆ ಕಂಪನಿಗಳ ಒತ್ತಡ: ತುಂಬಾ ಹೊತ್ತು ಕೂತು ಕೆಲಸ ಮಾಡಿದರೆ ಆಗುವ ಸಮಸ್ಯೆಗಳಿವು
ಐಟಿ ಬಿಟಿ ಕ್ಷೇತ್ರದಲ್ಲಿ ಕೆಲಸದ ಅವಧಿಯನ್ನು 9 ಗಂಟೆಯಿಂದ 14 ಗಂಟೆಗೆ ಹೆಚ್ಚಿಸಬೇಕೆಂಬ ಒತ್ತಡವನ್ನು ಐಟಿ ಕಂಪನಿಗಳು ಸರ್ಕಾರದ ಮೇಲೆ ಹಾಕುತ್ತಿದೆ, ಇದಕ್ಕೆ ಉದ್ಯೋಗಿಗಳಿಂದ ಭಾರಿ ವಿರೋಧ ಕೂಡ ವ್ಯಕ್ತವಾಗುತ್ತಿದೆ,
ಕೆಲಸದ ಅವಧಿ ಹೆಚ್ಚಾದರೆ ಇದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಿದ್ದಾರೆ. ಹೆಲ್ತ್‌ಲೈನ್‌ನಲ್ಲಿ ಹೆಚ್ಚು ಹೊತ್ತು ಕೂತು ಕೆಲಸ ಮಾಡುವುದರಿಂದ ಅನೇಕ ಆರೋಗ್ಯಕರ ಸಮಸ್ಯೆ ಉಂಟಾಗುವುದು ಎಂದು ಹೇಳಿದೆ.

ತುಂಬಾ ಹೊತ್ತು ಕೂತಲ್ಲಿಯೇ ಕೂತು ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಈ ರೀತಿ ಪರಿಣಾಮ ಬೀರುವುದು:
ಕೆಟ್ಟ ಚಟಗಳು ಹೆಚ್ಚಾಗುವುದು
ಕೂತಲ್ಲಿಯೇ ಕೂತು ತುಂಬಾ ಹೊತ್ತು ಕೆಲಸ ಮಾಡುವುದರಿಂದ ಅವರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವುದು. ಇದರಿಂದ ಕೆಟ್ಟ ಚಟದ ಅಭ್ಯಾಸ ಉಂಟಾಗುವುದು ಎಂದು ಹೇಳಲಾಗುವುದು. ಹೆಚ್ಚು ಹೊತ್ತು ಕೂತು ಕೆಲಸ ಮಾಡುವವರು ಮದ್ಯದ ಚಟ ಬೆಳೆಸಿಕೊಳ್ಳುತ್ತಾರಂತೆ. ಏಕೆಂದರೆ ವಿಶ್ರಾಂತಿಗೆ ಮದ್ಯದ ದಾರಿ ಕಂಡುಕೊಳ್ಳುತ್ತಾರೆ.
ಅಲ್ಲದೆ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಲ್ಲ
ಹೆಚ್ಚು ಹೊತ್ತು ಕೆಲಸ ಮಾಡಿಸಿದರೆ ಹೆಚ್ಚು ಕೆಲಸವಾಗುತ್ತೆ ಎಂಬ ಲೆಕ್ಕಚಾರ ಆದರೆ ಒಬ್ಬ ವ್ಯಕ್ತಿ ದಿನಾ 14 ಗಂಟೆ ಕೆಲಸ ಮಾಡಬೇಕೆಂದರೆ ದಿನದ 24 ಗಂಟೆಯಲ್ಲಿ ಅವನಿಗೆ ಉಳಿಯುವುದು 10 ಗಂಟೆ , ಅದರಲ್ಲಿ ಈ ಬೆಂಗಳೂರಿನಂಥ ನಗರದಲ್ಲಿ 2-3 ಗಂಟೆ ಟ್ರಾವೆಲ್‌ಗೆ, 2-3 ಗಂಟೆ ವೈಯಕ್ತಿಕ ಕೆಲಸಗಲಿಗೆ ಹೋದರೆ ಮತ್ತೆ ನಿದ್ದೆಗೆ ಸಿಗುವ ಸಮಯವಾದರು ಎಷ್ಟು? ಸರಿಯಾಗಿ ನಿದ್ದೆ ಮಾಡದಿದ್ದರೆ ಹಗಲಿನಲ್ಲಿ ನಿದ್ದೆ ತೂಗುವುದು, ಕೆಲಸದ ಕಡೆಗೆ ಗಮನಹರಿಸುವುದು ಕಷ್ಟವಾಗುವುದು.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು
ಒಬ್ಬ ವ್ಯಕ್ತಿ 14 ಗಂಟೆ ಕೆಲಸ ಮಾಡಿದರೆ ಅವನಲ್ಲಿ ಖುಷಿ ಕಡಿಮೆಯಾಗುವುದು, ಇದು ಅವನ ಮಾನಸಿಕ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇಗನೆ ಖಿನ್ನತೆಗೆ ಜಾರುತ್ತಾರೆ.
ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು
ಒಂದೇ ಕಡೆ ಕೂತಲ್ಲಿಯೇ ಕೂತು ಕೆಲಸ ಮಾಡುವುದರಿಂದ ಅದು ದೇಹದ ಮೇಲೂ ಪರಿಣಾಮ, ಒಬೆಸಿಟಿ, ಕೊಲೆಸ್ಟ್ರಾಲ್, ಮಧುಮೇಹದ ಸಮಸ್ಯೆ ಹೀಗೆ ಅನೇಕ ಅರೋಗ್ಯ ಸಮಸ್ಯೆ ಉಂಟಾಗುವುದು, ದುಡಿದ ಹಣವನ್ನೆಲ್ಲಾ ಅಸ್ಪತ್ರೆಗೆ ಕೊಡಬೇಕಾಗುತ್ತದೆ, 14 ಗಂಟೆ ದುಡಿದ ಹಣವೆಲ್ಲಾ ಆಸ್ಪತ್ರೆಗೆ ಕೊಟ್ಟು ಬರುವುದು.
ಸಂಬಂಧಗಳು ದುರ್ಬಲವಾಗುವುದು
ಹೆಚ್ಚು ಹೊತ್ತು ಕೆಲಸದಲ್ಲಿ ಸಮಯ ಕಳೆದರೆ ಕುಟುಂಬದ ಕಡೆಗೆ ಗಮನ ನೀಡಲು ಸಾಧ್ಯವಾಗಲ್ಲ, ಮಕ್ಕಳ ಜೊತೆಗೆ ಸಮಯ ಕೊಡಲು ಸಾಧ್ಯವಾಗಲ್ಲ, ಗಂಡ-ಹೆಂಡತಿ ಸಂಬಂಧ ದುರ್ಬಲವಾಗುವುದು ಈ ರೀತಿಯ ಸಮಸ್ಯೆಗಳು ಉಂಟಾಗುವುದು.
ಕುತ್ತಿಗೆ , ಬೆನ್ನು ನೋವಿನ ಸಮಸ್ಯೆ ಉಂಟಾಗುವುದು
ಯಾರು ಲ್ಯಾಪ್ ಟಾಪ್ ಮುಂದೆ ತುಂಬಾ ಸಮಯ ಕಳೆಯುತ್ತೀರೋ ಅವರಲ್ಲಿ ಬೆನ್ನು ಹಾಗು ಕುತ್ತಿಗೆ ನೋವಿನ ಸಮಸ್ಯೆ ಸಾಮಾನ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications