Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ರೆಟಿನಲ್ ಕ್ಯಾನ್ಸರ್‌ನಿಂದ ಕಣ್ಣು ಕಳೆದುಕೊಂಡ 1 ವರ್ಷದ ಮಗು..! ಇದೆಷ್ಟು ಅಪಾಯಕಾರಿ ಗೊತ್ತಾ?
ಕ್ಯಾನ್ಸರ್‌ನಲ್ಲಿ ಎಷ್ಟೊಂದು ವಿಧವಾದ ಕ್ಯಾನ್ಸರ್‌ಗಳು ಈಗ ಕಾಡುತ್ತಿದೆ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ಅಪರೂಪದ ಕ್ಯಾನ್ಸರ್‌ಗಳು, ಅಪಾಯಕಾರಿ ಕ್ಯಾನ್ಸರ್‌ಗಳು ಕೂಡ ಇಂದು ನಮ್ಮ ನಡುವೆ ಇವೆ. ಕೆಲವೊಂದು ರೋಗ ಲಕ್ಷಣವನ್ನೇ ತೋರಿಸದಂತೆ ಇಡೀ ದೇಹಕ್ಕೆ ಹರಡುವುದು, ಹೊಸ ಬಗೆಯ ಕ್ಯಾನ್ಸರ್ ಸಹ ಈಗ ಹೆಚ್ಚಾಗಿದೆ.
ಈ ಹೊಸ ರೀತಿಯ ಕ್ಯಾನ್ಸರ್‌ಗಳು ಎಲ್ಲರಿಗೂ ದೊಡ್ಡ ತಲೆನೋವು ಹಾಗೆ ವೈದ್ಯಕೀಯ ಕ್ಷೇತ್ರಕ್ಕೂ ಇವು ಸವಾಲಾಗಿದೆ. ಇತ್ತಿಚಿಗೆ ಮಕ್ಕಳಲ್ಲೂ ಕೂಡ ಕ್ಯಾನ್ಸರ್ ಕೋಶಗಳು ಅಭಿವೃದ್ಧಿ ಹೊಂದುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗುತ್ತಿದೆ. ಹುಟ್ಟಿದಾಗಲೇ ಮಗು ಅನುವಂಶೀಯವಾಗಿ ಕ್ಯಾನ್ಸರ್ ಕೋಶಗಳ ಅಭಿವೃದ್ಧಿ ಪಡಿಸಿರುವ ಹಲವು ಪ್ರಕರಣಗಳು ಕೂಡ ಇವೆ.

ಈಗ ಇಲ್ಲೊಂದು ಮಗು ಕ್ಯಾನ್ಸರ್‌ನಿಂದ ತನ್ನ ಕಣ್ಣನ್ನೇ ಕಳೆದುಕೊಂಡಿರುವ ಪ್ರಕರಣವೊಂದು ವರದಿಯಾಗಿದೆ. 1 ವರ್ಷದ ಮಗುವಿಗೆ ಕ್ಯಾನ್ಸರ್ ಉಂಟಾದ ಪರಿಣಾಮ ತನ್ನ ಒಂದು ಕಣ್ಣು ಕಳೆದುಕೊಂಡಿದೆ. ಅಮೆರಿಕದ ಅರ್ಕಾನ್‌ಸಾಸ್ ನಗರದಲ್ಲಿ ವಾಸವಿದ್ದ ಲಿಲ್ಲಿ ಎಂಬ ಪುಟ್ಟ ಮಗು ಈಗ ತನ್ನ ಒಂದು ಕಣ್ಣು ಕಳೆದುಕೊಳ್ಳಲು ರೆಟಿನಲ್ ಕ್ಯಾನ್ಸರ್ ಕಾರಣವಾಗಿದೆ.
ಆದ್ರೆ ಕ್ಯಾನ್ಸರ್ ಪ್ರಕಾರಗಳಲ್ಲಿಯೇ ಈ ರೆಟಿನಲ್ ಕ್ಯಾನ್ಸರ್ ಅತ್ಯಂತ ಅಪರೂಪದ ಕ್ಯಾನ್ಸರ್ ಆಗಿದೆ. ಹಾಗೆ ಇದರ ಲಕ್ಷಣಗಳು ಕೂಡ ಗೋಚರಿಸಿದ ಕಾರಣ ಯಾರಿಗೂ ಇದೊಂದು ಕ್ಯಾನ್ಸರ್ ಎಂಬ ಭಾವನೆಯೇ ಮೂಡುವುದಿಲ್ಲ. ವೈದ್ಯಕೀಯ ಪರೀಕ್ಷೆಯ ಹೊರತಾಗಿ ಕ್ಯಾನ್ಸರ್ ತಗುಲಿರುವುದು ಖುದ್ದು ರೋಗಿಗೂ ತಿಳಿಯುವುದಿಲ್ಲ.
ಈ ಕ್ಯಾನ್ಸರ್ ಕೂಡ ಜೀವಕ್ಕೆ ಅಪಾಯ ತಂದೊಡ್ಡಲಿದೆ. ಹಾಗೆ ಬೇರೆ ಕ್ಯಾನ್ಸರ್‌ಗಳಂತೆಯೇ ದೇಹಕ್ಕೆ ಹರಡುತ್ತದೆ. ಆರಂಭದಲ್ಲಿ ಲಿಲ್ಲಿ ತಂದೆ ಮಗನ ಕಣ್ಣಿನ ಸುತ್ತ ಊದಿಕೊಂಡಿರುವುದನ್ನು ಗಮನಿಸಿದ್ದರು. ಆದ್ರೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗೆ ಕೆಲವು ದಿನಗಳಲ್ಲಿ ಈ ಊತ ಹೆಚ್ಛಾಗಿತ್ತು. ಈ ವೇಳೆ ಅವರು ವೈದ್ಯಕೀಯ ಪರೀಕ್ಷೆಗೆ ಮುಂದಾದರು.
ಸಿಟಿ ಸ್ಕ್ಯಾನ್ ಮಾಡಲು ಮುಂದಾದಾಗ ಕಣ್ಣಿನಲ್ಲಿ ಗಡ್ಡೆ ರೀತಿಯ ರಚನೆ ಕಂಡುಬಂದಿತ್ತು. ಮೊದಲಿಗೆ ಅದನ್ನು ಗಡ್ಡೆ ಅಂತಲೇ ಭಾವಿಸಲಾಗಿತ್ತು. ಆದ್ರೆ ಇದೊಂದು ರೆಟಿನಲ್ ಕ್ಯಾನ್ಸರ್ ಎಂಬುದು ಬಳಿಕ ಪತ್ತೆಯಾಗಿತ್ತು, ಇದು ಒಂದು ಕಣ್ಣಿನಿಂದ ಇನ್ನೊಂದು ಕಣ್ಣಿಗೂ ಹರಡುವ ಅಪಾಯವಿತ್ತು. ಹೀಗಾಗಿ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ಒಂದು ಕಣ್ಣನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.
ಹಾಗಾದ್ರೆ ಈ ಅಪರೂಪದ ಕ್ಯಾನ್ಸರ್ ಬರುವುದೇಕೆ? ಇದರ ರೋಗಲಕ್ಷಣವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
- ಕಣ್ಣಗಳ ಸುತ್ತ ಊದಿಕೊಂಡಿರುವ ಚರ್ಮ
- ಕಣ್ಣು ಮಿಟುಕಿಸುವಾಗ ನೋವು ಕಾಣಿಸುವುದು
- ಉರಿಯೂತ
- ಕಣ್ಣಿನ ಮೂಲೆಯಲ್ಲಿ ರಕ್ತ ಬರುವುದು
- ಕಣ್ಣುಗಳು ದೊಡ್ಡದಾಗುವುದು
- ಕಣ್ಣು ವಿಪರೀತ ಕೆಂಪಾಗಿರುವುದು
ರೆಟಿನೋಬ್ಲಾಸ್ಟೊಮಾ ಕ್ಯಾನ್ಸರ್ ಎಂದರೇನು?
ರೆಟಿನೋಬ್ಲಾಸ್ಟೊಮಾ ಒಂದು ಅಥವಾ ಎರಡೂ ಕಣ್ಣುಗಳಿಗೂ ಸಂಭವಿಸಬಹುದು. ಸಂಪೂರ್ಣವಾಗಿ ಬೆಳವಣಿಗೆ ಆಗದೇ ಇರುವ ರೆಟಿನಾಲ್‌ಗಳಲ್ಲಿ ಈ ಕೋಶಗಳು ಅಭಿವೃದ್ಧಿ ಹೊಂದುವ ಸಾಧ್ಯತೆ ಹೆಚ್ಚು ಎಂದು ತಿಳಿದುಬರುತ್ತದೆ. ಈ ರೆಟಿನಾಲ್ ಕ್ಯಾನ್ಸರ್‌ನ 5 ಪ್ರಕರಣ ಪೈಕಿ 4 ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ ಎಂದು ವರದಿಯಾಗಿದೆ.
ಆದ್ರೆ ಚಿಕ್ಕಮಕ್ಕಳಲ್ಲಿ ಕಂಡುಬರುವ ಈ ಸಮಸ್ಯೆ ಕೆಲವು ಪ್ರಕರಣದಲ್ಲಿ ದೊಡ್ಡವರಲ್ಲಿ ಕಾಣಿಸಬಹುದು. ಇದಕ್ಕೆ ನಿಖರ ಕಾರಣಗಳ ಪತ್ತೆ ಮಾಡಲಾಗಿಲ್ಲ. ಆದ್ರೆ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿಯಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications