Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಳೆಗಾಲದಲ್ಲಿ ಕ್ಲಾಸಿ ಲುಕ್ ಪಡೆಯಲು ಇಲ್ಲಿವೆ ಫ್ಯಾಷನ್ ಐಡಿಯಾಗಳು
ಮಳೆಗಾಲ ಶುರುವಾಗಿದೆ. ಕೆಲವರು ಮಳೆಯನ್ನ ಇಷ್ಟಪಟ್ಟರೆ, ಮತ್ತೆ ಕೆಲವರು ದ್ವೇಷಿಸುತ್ತಾರೆ. ಆದರೆ ಮಳೆಯನ್ನ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಕಾಲಕಾಲಕ್ಕೆ ತಕ್ಕಂತೆ ಬದಲಾಗುವ ಋತುಮಾನಕ್ಕೆ ಹೊಂದಿಕೊಂಡು ಬದುಕುವುದು ಅನಿವಾರ್ಯ. ಇದರಲ್ಲಿ ಒಂದು ಮಳೆಗಾಲದಲ್ಲಿ ಧರಿಸುವ ಉಡುಗೆ-ತೊಡುಗೆ.
ಮಳೆಗಾಲದಲ್ಲಿ ವಾತಾವರಣದಲ್ಲಿ ಕತ್ತಲು ಆವರಿಸಿರುವದುರಿಂದ ನಾವು ಎಂತಹ ಬಟ್ಟೆ ಧರಿಸಬೇಕು, ಹೇಗೆ ರೆಡಿಯಾಗಬೇಕು ಎಂಬ ಗೊಂದಲದಲ್ಲಿ ಇರುತ್ತೇವೆ. ಅದಕ್ಕಾಗಿ ನಾವಿಂದು ಮಳೆಗಾಲದಲ್ಲಿ ಬಲಸಬಹುದಾದ ಟ್ರೆಂಡಿಂಗ್ ಡ್ರೆಸ್ ಗಳ ಬಗ್ಗೆ ವಿವರ ನೀಡಲಿದ್ದೇವೆ.
ಮಳೆಗಾಲಕ್ಕೆ ಸರಿಹೊಂದುವಂತಹ ಫ್ಯಾಷನ್ ಐಡಿಯಾಗಳನ್ನು ಈ ಕೆಳಗೆ ನೀಡಲಾಗಿದೆ:

1. ಕುಲೋಟ್ಸ್:
ಅದೇ ಹಳಯೆ ಜೀನ್ಸ್ ಪ್ಯಾಂಟ್ ಹಾಕಿ ಬೇಸತ್ತಿದ್ದರೆ, ಮಳೆಗಾಲಕ್ಕೆ ಈ ಕುಲೋಟ್ಸ್ ಗಳು ಉತ್ತಮ ಆಯ್ಕೆಯಾಗಿವೆ. ಮಳೆಗಾಲಕ್ಕೆ ಈ ಪ್ಯಾಂಟ್ ಹೇಳಿ ಮಾಡಿಸಿದ್ದು. ನೀವು ಅದನ್ನು ಟೀ ಶರ್ಟ್, ಕುರ್ತಿ ಅಥವಾ ಕ್ರಾಪ್ ಟಾಪ್ ನೊಂದಿಗೆ ಮ್ಯಾಚ್ ಮಾಡಬಹುದು. ಇದು ನಿಮಗೆ ಒಳ್ಳೆಯ ಲುಕ್ ನೀಡುವುದು.

2. ಪ್ಲೇಸೂಟ್ ಗಳು:
ಮಳೆಗಾಲ ಎಂದರೆ ಹೆಚ್ಚು ಕಾಲ ಒಳಗೇ ಇರುವ ಸಮಯ. ಆದ್ದರಿಂದ ಈ ಪ್ಲೇಸೂಟ್‌ಗಳು ಧರಿಸಲು ಅತ್ಯಂತ ಆರಾಮದಾಯಕ ಮತ್ತು ನೋಡಲು ಚೆನ್ನಾಗಿ ಕಾಣುತ್ತದೆ. ಈ ಕತ್ತಲೆಯಾದ ಹವಾಮಾನದಲ್ಲೂ ಎದ್ದು ಕಾಣಲು ಡಾರ್ಕ್ ಬಣ್ಣಗಳನ್ನು ಆರಿಸಿಕೊಳ್ಳಿ. ನೈಲಾನ್ ಮತ್ತು ಹತ್ತಿ ಬಟ್ಟೆಗಳನ್ನು ಸಹ ಆಯ್ಕೆ ಮಾಡಬಹುದು. ಇದು ಬೇಗನೇ ಒಣಗುತ್ತವೆ.

3.ಪ್ರಿಂಟೆಡ್ ಡ್ರೆಸ್:
ಮಳೆಗಾಲದ ಸಪ್ಪೆತನಕ್ಕೆ ಈ ಡ್ರಸ್ ಚೆನ್ನಾಗಿ ಹೊಂದಿಕೆಯಾಗುವುದು ಜೊತೆಗೆ ಫ್ಯಾಷನ್ ಆಗಿ ಕಾಣುವಂತೆ ಮಾಡುವುದು. ಮಳೆಗಾಲದಲ್ಲಿ ತೆಳುವಾದ ಬಟ್ಟೆಗಳನ್ನು ಧರಿಸಬೇಡಿ ಹಾಗೆಯೇ ಲೇಯರಿಂಗ್ ಇರುವ ಬಟ್ಟೆಯನ್ನೂ ತಪ್ಪಿಸಿ. ಸರಳ ಉಡುಪನ್ನು ಧರಿಸಿ.

4. ಸ್ಕರ್ಟ್ ಗಳು:
ಹಳೆಯ ಸ್ಕರ್ಟ್ ಮತ್ತು ಟಾಪ್ ಈ ಋತುವಿಗೆ ಕ್ಲಾಸಿಕ್ ಕಾಂಬೊ ಆಗಿದೆ. ಪ್ರಿಂಟೆಡ್ ಸ್ಕರ್ಟ್ ಗಳನ್ನೂ ಸಹ ಪ್ರಯೋಗ ಮಾಡಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಫ್ಯಾಶನ್ ಆಗಿ ಕಾಣಲು ನೀವು ಫಾರ್ಮಲ್ ಸ್ಕರ್ಟ್‌ಗಳನ್ನು ಧರಿಸಿ, ಅವುಗಳನ್ನು ಶರ್ಟ್ ಗಳೊಂದಿಗೆ ಮ್ಯಾಚ್ ಮಾಡಿ. ಆರಾಮವಾಗಿ ಪ್ರಯಾಣಿಸಲು ಪೆನ್ಸಿಲ್ ಸ್ಕರ್ಟ್‌ಗಳಿಗಿಂತ ಎ-ಲೈನ್ ಅಥವಾ ಮಿಡಿ ಸ್ಕರ್ಟ್ಗಳನ್ನು ಆರಿಸಿಕೊಳ್ಳಿ.

5. ಬಾಯ್‌ಫ್ರೆಂಡ್ ಜೀನ್ಸ್:
ನೀವು ಜೀನ್ಸ್ ಧರಿಸುವ ವ್ಯಕ್ತಿಯಾಗಿದ್ದರೆ, ಸಾಮಾನ್ಯ ಸ್ಲಿಮ್ ಫಿಟ್ ಗಿಂತ ಹೆಚ್ಚಾಗಿ ಬಾಯ್‌ಫ್ರೆಂಡ್ ಜೀನ್ಸ್ ಆಯ್ಕೆಮಾಡಿ. ಇದು ನಿಮಗೆ ಸೊಗಸಾದ ನೋಟವನ್ನು ನೀಡುವುದು. ಹೆಚ್ಚು ಮಳೆಯಾದಾಗಲೂ ಧರಿಸಲು ಅನುಕೂಲಕರವಾಗಿರುತ್ತದೆ. ಕೊಚ್ಚೆ ಗುಂಡಿಗಳ ಮೇಲೆ ನೆಗೆಯುವ ಅಥವಾ ಇನ್ನಾವುದೇ ಬಾಲ್ಯದ ದಿನಗಳನ್ನು ಪುನರುಜ್ಜೀವನಗೊಳಿಸಲು ಆ ಕಾಲುಗಳ ಬಳಿ ಮಡಚಿ.

6. ಶಾರ್ಟ್ಸ್:
ಮಳೆಗಾಲಕ್ಕೆ ಪ್ರಿಂಟೆಡ್ ಅಥವಾ ಸಿಂಪಲ್ ಶಾರ್ಟ್ಸ್ ಗಳು ಉತ್ತಮವಾದ ಆಯ್ಕೆಯಾಗಿದೆ. ಹತ್ತಿಯಂತಹ ಹಗುರವಾದ ಬಟ್ಟೆಗಳನ್ನು ಆರಾಮವಾಗಿ ಬಳಸಬಹುದು. ಇವುಗಳು ಮಳೆಯ ಸಮಯದಲ್ಲೂ ವೇಗವಾಗಿ ಒಣಗುತ್ತವೆ. ಟ್ರೆಂಡಿಯಾಗಿ ಕಾಣಲು ಟಾಪ್ಸ್ ಮತ್ತು ಶರ್ಟ್‌ಗಳೊಂದಿಗೆ ಅವುಗಳನ್ನು ಸ್ಟೈಲ್ ಆಗಿ ಮ್ಯಾಚ್ ಮಾಡಿ. ಪರಿಪೂರ್ಣ ನೋಟಕ್ಕಾಗಿ ನಿಮ್ಮ ಕೂದಲಿಗೆ ಬನ್ ಹಾಕಿ.

7. ಸಿಗರೇಟ್ ಪ್ಯಾಂಟ್:
ಈ ಪ್ಯಾಂಟ್ ಹಗುರವಾಗಿರುತ್ತದೆ ಮತ್ತು ಅವು ಒದ್ದೆಯಾದಾಗ ನಿಮ್ಮ ದೇಹಕ್ಕೆ ಅಂಟಿಕೊಳ್ಳುವುದಿಲ್ಲ. ಇದು ಫಾರ್ಮಲ್ ಮತ್ತು ಯಾವುದಾದರೂ ಸಮಾರಂಭಕ್ಕೆ ಸೂಕ್ತವಾಗಿರುತ್ತದೆ. ಸಿಗರೆಟ್ ಪ್ಯಾಂಟ್ ನಿಮ್ಮ ದೇಹಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಜೊತೆಗೆ ಟ್ರೆಂಡಿ ಲುಕ್ ನೀಡುವುದು.



Click it and Unblock the Notifications
