Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಸ್ವೀಕರಿಸುವಾಗಲೂ ಪಂಚೆ ಧರಿಸಿದ್ದ ರಿಷಬ್ ಶೆಟ್ಟಿ; ಕಾರಣ ಏನು ಗೊತ್ತಾ?
ಬಾಲಿವುಡ್ ಮಂದಿ ಸಂಪೂರ್ಣವಾಗಿ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ವೆಸ್ಟರ್ನ್ ಸಂಸ್ಕೃಯತ್ತ ಮಾರು ಹೋಗಿದ್ದಾರೆ. ವಿಶೇಷ ಅಂದ್ರೆ ಕೆಲವೇ ಕೆಲವು ದಕ್ಷಿಣದ ನಟ-ನಟಿಯರು ಇಂದಿಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅಂತವರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರು.

ಇತ್ತೀಚಿಗೆ ಮುಂಬೈನಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆದಿತ್ತು. ಈ ವೇಳೆ ದೇಶದ ಅನೇಕ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇಂತಹ ಬಹುದೊಡ್ಡ ಕಾರ್ಯಕ್ರಮದಲ್ಲೂ ರಿಷಬ್ ದಕ್ಷಿಣ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಕೊಡಲಿಲ್ಲ.
ರಿಷಬ್ ಶೆಟ್ಟಿಗೆ ಅತಿ ಹೆಚ್ಚು ಭರವಸೆಯ ನಟ ಪ್ರಶಸ್ತಿ ಪ್ರಧಾನ
ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮ ಫೆಬ್ರವರಿ 20 ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್‌ನಲ್ಲಿ ನಡೆದಿದ್ದು, ಈ ವೇಳೆ ಬಾಲಿವುಡ್ ಚಿತ್ರರಂಗದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ನಿನ್ನೆ ಕೇವಲ ಹಿಂದಿ ಚಿತ್ರರಂಗದ ಚಿತ್ರಗಳು ಹಾಗೂ ಕಲಾವಿದರಿಗೆ ಪ್ರಶಸ್ತಿ ವಿತರಿಸಲಾಯಿತು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡಿಗ ರಿಷಭ್ ಶೆಟ್ಟಿಯವರು ಕಾಂತಾರಾ ಸಿನಿಮಾಗಾಗಿ ಅತಿಹೆಚ್ಚು ಭರವಸೆಯ ನಟ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂಚೆಯಲ್ಲಿಯೇ ಪ್ರಶಸ್ತಿ ಸ್ವೀಕರಿಸಿ ರಿಷಬ್
ಕಾಂತಾರಾ ಸಿನಿಮಾದಲ್ಲೂ ರಿಷಬ್ ಅವರು ಸಿನಿಮಾದ ಕತೆಗೆ ತಕ್ಕಂತೆ ಇಡೀ ಸಿನಿಮಾದಲ್ಲಿ ಪಂಚೆಯಲ್ಲೇ ಮಿಂಚಿದ್ರು. ಇದಾದ ಬಳಿಕ ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ಒಂದು ಬಾರಿಯೂ ವೆಸ್ಟರ್ನ್ ಉಡುಗೆಯನ್ನು ರಿಷಭ್ ಧರಿಸಿದ್ದೇ ಇಲ್ಲ. ಎಲ್ಲೇ ಹೋದ್ರು ಪಂಚೆ ಮತ್ತು ಶರ್ಟ್ ಧರಿಸಿ ಹೋಗುತ್ತಿದ್ದರು.
ಇನ್ನೂ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಯೋದು ಅಂದರೆ ಅದು ಬಹು ದೊಡ್ಡ ಗೌರವವೇ ಸರಿ. ಈ ವೇಳೆ ರಿಷಭ್ ಯಾವ ರೀತಿ ಉಡುಗೆಯನ್ನು ತೊಡಬಹುದು ಎಂಬ ಕುತೂಹಲವಂತೂ ಎಲ್ಲರಲ್ಲೂ ಇದ್ದೇ ಇತ್ತು. ಆದ್ರೆ ರಿಷಭ್ ಇಲ್ಲೂ ಕೂಡ ಯಾವುದೇ ರೀತಿ ಆಡಂಬರ ಇಲ್ಲದೇ ಬರೀ ಪಂಚೆ-ಶರ್ಟ್‌ನಲ್ಲೇ ಹೋಗಿ ಪ್ರಶಸ್ತಿ ಸ್ವೀಕರಿಸಿದ್ರು. ಹೌದು, ಶೆಟ್ರ ಸಿಂಪ್ಲಿಸಿಟಿಗೆ ಮಂದಿ ಸೋತು ಹೋಗಿದ್ದಾರೆ.
ಯಶಸ್ಸನ್ನು ತಲೆಗೆ ಹತ್ತಿಸಿಕೊಳ್ಳದ ರಿಷಬ್
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ್ರು ಅಂತಾರಲ್ಲ ಹಾಗೇ ಜಂಬಾ ತೋರಿಸೋರ ಮಧ್ಯೆ ರಿಷಬ್ ಶೆಟ್ಟಿ ವ್ಯಕ್ತಿತ್ವ ತುಂಬಾನೇ ಸ್ಪೆಷಲ್. ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿದ್ದರೂ ಕೂಡ ರಿಷಬ್ ಮಾತ್ರ ತಾವು ಬೆಳೆದು ಬಂದ ಹಾದಿಯನ್ನ ಮರೆತಿಲ್ಲ. ಎಲ್ಲೇ ಹೋದ್ರು ಅವರು ನಮ್ಮ ನಾಡು, ನಮ್ಮ ಭಾಷೆ, ನಮ್ಮ ಸಂಸ್ಕೃತಿಯನ್ನು ಮರೆದಿಲ್ಲ. ರಿಷಬ್‌ರ ಇದೇ ಸರಳ ವ್ಯಕ್ತಿತ್ವ ಜನರಿಗೆ ತುಂಬಾನೇ ಇಷ್ಟವಾಗೋದು.
ಪುನೀತ್‌ಗೆ ಪ್ರಶಸ್ತಿ ಸಲ್ಲಿಸಿದ ಶೆಟ್ರು
ಇನ್ನೂ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಪಡೆದ ಖುಷಿಯನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತನಗೆ ಬೆಂಬಲ ನೀಡಿದ ಹೊಂಬಾಳೆ ಫಿಲ್ಮ್ಸ್ ಹಾಗೂ ಕುಟುಂಬದವರಿಗೆ ಧನ್ಯವಾದ ತಿಳಿಸಿದ್ದು, ಈ ಪ್ರಶಸ್ತಿಯನ್ನು ದೈವ ನರ್ತಕರು, ನಟ ಪುನೀತ್ ರಾಜ್‌ಕುಮಾರ್ ಹಾಗೂ ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಅವರಿಗೆ ಅರ್ಪಿಸಿದರು.
ನಮ್ಮವರು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದಾರೆ ಅನ್ನುವಾಗ ಖುಷಿ ಆಗುತ್ತದೆ. ಅದರಲ್ಲೂ ಅಂತಹ ದೊಡ್ಡ ವೇದಿಕೆಯಲ್ಲಿ ಕನ್ನಡಿಗರೊಬ್ಬರು ಪ್ರಶಸ್ತಿಯನ್ನು ಪಡೆದುಕೊಂಡಿರೋದು ಹೆಮ್ಮೆಯೇ ಸರಿ.



Click it and Unblock the Notifications


