Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಸ್ಕರ್ ಸಮಾರಂಭದಲ್ಲಿ ಕಣ್ಮನ ಸೆಳೆದ ಜೆನ್ನಿಫರ್ ಲಾರೆನ್ಸ್
88ನೇ ಅಕಾಡೆಮಿ ಅವಾರ್ಡ್ ಆಸ್ಕರ್‌ಗೆ ವಿಶ್ವವೇ ಸಜ್ಜಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಏಂಡ್ ಸೈನ್ಸಸ್ ಈ ಅತ್ಯುನ್ನತ ಪ್ರಶಸ್ತಿಯನ್ನು ಆಯೋಜಿಸಿದ್ದು ಸಿನಿಮಾ ಕ್ಷೇತ್ರದಲ್ಲಿ ಅವಿಚ್ಛಿನ್ನ ಸಾಧನೆ ಮಾಡಿದ ಚಿತ್ರಗಳಿಗೆ ಮತ್ತು ಅದಕ್ಕೆ ತಕ್ಕುದಾದ ವರ್ಗಗಳನ್ನು ಅನುಸರಿಸಿ ನೀಡಲಾಗುತ್ತದೆ. ಆಸ್ಕರ್‌ನಲ್ಲಿ ತಮ್ಮ ಚಿತ್ರಗಳೂ ಸ್ಥಾನ ಪಡೆದುಕೊಳ್ಳಬೇಕು ಎಂಬುದು ಪ್ರತಿಯೋರ್ವ ಚಿತ್ರ ನಿರ್ದೇಶಕನ ಕನಸಾಗಿರುತ್ತದೆ.ಅಂತಹ ಸಾಧನೆ ಎಂದೇ ಆಸ್ಕರ್ ಗೌರವವನ್ನು ಕಾಣಲಾಗುತ್ತದೆ.

ಆಸ್ಕರ್‌ನಲ್ಲಿ ಹಾಲಿವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್, ಸ್ಯಾಂಡಲ್‌ವುಡ್‌ನ ಎಲ್ಲಾ ಪ್ರತಿಭೆಗಳೂ ಅನಾರವಣಗೊಳ್ಳುತ್ತವೆ. ಆದ್ದರಿಂದ ಚಿತ್ರ ನಟ ನಟಿಯರ ಆಕರ್ಷಕ ನೋಟಗಳನ್ನು ನಮಗೆ ಕಣ್ತುಂಬಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಜೆನ್ನಿಫರ್ ಲಾರೆನ್ಸ್‌ರ ದಿರಿಸು ಮತ್ತು ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಆಕೆ ಮಿಂಚಿದ್ದು ಹೇಗೆ ಎಂಬುದನ್ನು ನೋಡೋಣ.
ಕಳೆದ ವರ್ಷದ ಓಸ್ಕರ್ ಅನ್ನು ಜೆನ್ನಿಫರ್ ಲಾರೆನ್ಸ್ ತಪ್ಪಿಸಿಕೊಂಡಿದ್ದರೂ, ಈ ವರ್ಷ ಆಕೆ ಕಪ್ಪು ದಿರಿಸಿನೊಂದಿಗೆ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜಾಯ್ ಚಿತ್ರದ ಉತ್ತಮ ನಟಿ ವರ್ಗದಲ್ಲಿ ಜೆನ್ನಿಫರ್ ಹೆಸರು ಪಡೆದುಕೊಂಡಿದ್ದು ಹೊಳೆಯುವ ಕಪ್ಪು ದಿರಿಸಿನಲ್ಲಿ ಆಕೆ ಮನಸೆಳೆಯುವಂತಿದ್ದಾರೆ. ಇಳಿಬಿತ್ತ ಕುತ್ತಿಗೆ ವಿನ್ಯಾಸವನ್ನು ದಿರಿಸು ಪಡೆದುಕೊಂಡಿದ್ದು, ದಿರಿಸಿನ ಕೆಳಭಾಗದಲ್ಲಿ ಗರಿಗಳ ಚಿತ್ತಾರವನ್ನು ಇದು ಪಡೆದುಕೊಂಡಿರುವುದರ ಜೊತೆಗೆ, ನಿಜಕ್ಕೂ ಆಕೆಯ ದಿರಿಸು ಆಕೆಗೆ ಸುಂದರ ನೋಟವನ್ನು ನೀಡಿತ್ತು.
ಮೂರು ಎಳೆಗಳ ವಜ್ರದ ನೆಕ್ಲೇಸ್ ಅನ್ನು ಜೆನ್ನಿಫರ್ ಈ ಸಂದರ್ಭದಲ್ಲಿ ಧರಿಸಿಕೊಂಡಿದ್ದು ಆಕೆಯ ನೋಟ ನಿಜಕ್ಕೂ ಮನವನ್ನು ಆಕರ್ಷಿಸುವಂತಿತ್ತು. ನೀಟಾಗಿ ಸ್ಟ್ರೇಟ್ ಮಾಡಿಕೊಂಡ ಕೂದಲು ಅಸದಳ ನೋಟವನ್ನು ಆಕೆಗೆ ನೀಡಿತ್ತು. ತಮ್ಮ ಸೊಗಸುಗಾರಿಕೆಯನ್ನು ಸೇರಿಸಿ ಜೆನ್ನಿಫರ್ ಆಸ್ಕರ್ ಕಾರ್ಯಕ್ರಮಕ್ಕೆ ಹೊಸ ಕಳೆಯನ್ನು ತಂದುಕೊಟ್ಟಿದ್ದಾರೆ. ಆಕೆಯ ಕಪ್ಪು ದಿರಿಸು ನಿಜಕ್ಕೂ ನೆರೆದವರ ಮನವನ್ನು ಕದ್ದಿದ್ದು ಪುಳಕವನ್ನುಂಟು ಮಾಡಿದೆ.



Click it and Unblock the Notifications


