Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೆಡಗಿಯರ ಉಡುಗೆಯ ಕಲರವ, ಮೈಡೊಂಕಿನ ವೈಯಾರ!
ಆಸ್ಕರ್ ಅಂಗಳದ ಕಲರವ ವಿಶ್ವವಿಖ್ಯಾತಗೊಳ್ಳುತ್ತಿದೆ. ಎಲ್ಲಾ ಸಿನಿ ವಿಭಾಗದ ಚಿತ್ರಗಳೂ ಚಿನ್ನದ ಮನುಷ್ಯ (ಆಸ್ಕರ್) ನನ್ನು ತಮ್ಮದಾಗಿಸಿಕೊಳ್ಳುವ ಕಾತುರದಲ್ಲಿದ್ದು ವಿಶ್ವದಲ್ಲೇ ಚಿತ್ರಗಳು ಮಾನ್ಯಗೊಳ್ಳುವ ಸುವರ್ಣವಕಾಶವನ್ನು ಆಸ್ಕರ್ ನೀಡುತ್ತದೆ. ಆಸ್ಕರ್ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ಈ ಬಾರಿ ಪ್ರಿಯಾಂಕಾ ಚೋಪ್ರಾ ಅವರಿಗೆ ಒಲಿದಿದ್ದು ಮಹಾನ್ ತಾರೆಗಳ ಜೊತೆಗೆ ಪಿಗ್ಗಿ ಕೂಡ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಈ ವೈಭವೋಪೇತ ಸಮಾರಂಭವನ್ನು ಇಡಿಯ ವಿಶ್ವವೇ ಕಣ್ತುಂಬಿಕೊಳ್ಳುತ್ತದೆ ಹಾಗಿದ್ದಲ್ಲಿ ಸಮಾರಂಭಕ್ಕೆ ಆಗಮಿಸುವ ಅತಿಥಿಗಳೂ ಕೂಡ ತಮ್ಮ ದಿರಿಸುಗಳ ಪ್ರದರ್ಶನದ ಮೂಲಕ ಇನ್ನಷ್ಟು ವರ್ಣರಂಜಿತವಾಗಿಸಲಿದ್ದಾರೆ. ಬನ್ನಿ ನಿಮ್ಮ ಕಣ್ಣಿಗೆ ತಂಪು ನೀಡುವ ಅತಿಥಿಗಳ ದಿರಿಸು ಪ್ರದರ್ಶನಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ನೀವೂ ಇದನ್ನು ಆನಂದಿಸಿ...

ಜೂಲಿಯನ್ ಮೋರ್ ಕಪ್ಪು ದಿರಿಸಿನಲ್ಲಿ
ಕಪ್ಪು ಬಣ್ಣದ ಸಂಜೆಯ ಗೌನ್‌ನಲ್ಲಿ ಜೂಲಿಯನ್ ಮೋರ್ ಸುರಸುಂದರಿಯಾಗಿ ಕಂಗೊಳಿಸಿದ್ದಾರೆ.

ಕ್ರಿಸ್ಸಿ ಮತ್ತು ಜಾನ್ ಅದ್ಭುತ ಕ್ಷಣಗಳು
ಕೆಂಪು ಬಣ್ಣದ ಫ್ಲೋರಲ್ ಗೌನ್‌ನಲ್ಲಿ ಕ್ರಿಸ್ಸಿ ತಮ್ಮ ಸಂಗಾತಿ ಜಾನ್‌ನೊಂದಿಗೆ ಕಂಡುಬಂದಿರುವುದು. ಜಾನ್ ಟ್ಯೂಕ್ಸ್‌ನಲ್ಲಿ ಸೊಗಸುಗಾರ ಎಂದೆನಿಸಿದ್ದರು.

ಕಿತ್ತಳೆ ಬಣ್ಣದ ಕಾಲಮ್ನ್ ದಿರಿಸಿನಲ್ಲಿ ಒಲಿವಿಯಾ ಮನ್
ಒನ್ ಶೋಲ್ಡರ್ ಕಾಲಮ್ನ್ ದಿರಿಸಿನಲ್ಲಿ ಒಲಿವಿಯಾ ಇನ್ನಷ್ಟು ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ.

ರೀಗಲ್ ಗ್ರೇ ದಿರಿಸಿನಲ್ಲಿ ಚಾರ್ಲೊಟ್
ಸ್ಟೀಲ್ ಗ್ರೇ ಬಣ್ಣದಲ್ಲಿ ಚಾರ್ಲೊಟ್ ನಿಜಕ್ಕೂ ಮನಸೆಳೆಯುವಂತೆ ಕಾಣುತ್ತಿದ್ದಾರೆ.

ನಾಮಿ ವಾಟ್ಸ್
ಅರ್ಮಾನಿ ಪ್ರೈವ್ ಬ್ಲ್ಯೂನಲ್ಲಿ ವಜ್ರದ ನೆಕ್ಲೇಸ್ ಧರಿಸಿ ಕಂಗೊಳಿಸಿದ ನಾಮಿ ವಾಟ್ಸ್

ಅಲಿಕಾ ವಿಕಂದರ್
ಲೂಯಿಸ್ ವ್ಯೂಟನ್ ದಿರಿಸಿನಲ್ಲಿ ಮನಕದ್ದ ಅಲಿಕಾ ವಿಕಂದರ್

ಹಸಿರು ಹೊಳೆಯುವ ದಿರಿಸು
ಸ್ಲಿಪ್ ಮಾದರಿಯಲ್ಲಿರುವ ಹಸಿರು ಹೊಳೆಯುವ ದಿರಿಸು ನಿಜಕ್ಕೂ ಕಣ್ಮನ ಸೆಳೆಯುವಂತಿದೆ.

ಕಪ್ಪು ದಿರಿಸಿನಲ್ಲಿ ಎಡ್ಡಿ ಮತ್ತು ಹನ್ನಾ
ಆಸ್ಕರ್ ನಾಮಿನಿ ಎಡ್ಡಿ ಮತ್ತು ಆತನ ಪತ್ನಿ ಹನ್ನಾ ಕಪ್ಪು ದಿರಿಸಿನಲ್ಲಿ ಸೊಗಸು ಮಾಡುವಂತಿದ್ದಾರೆ.

ಒಲಿವಿಯಾ ವಿಲ್ಡ್ ಮತ್ತು ಜೇಸನ್ ಸುದಿಕೀಸ್
ಬಿಳಿ ಗೌನ್ ಮತ್ತು ಬಿಳಿ ಪರ್ಸ್‌ನಲ್ಲಿ ಒಲಿವಿಯಾ ಅತ್ಯದ್ಭುತವಾಗಿ ಕಾಣುತ್ತಿದ್ದು ಸಂಗಾತಿ ಜೇಸನ್ ಇನ್ನಷ್ಟು ಅಂದಗಾರರಾಗಿ ಮೆರೆಯುತ್ತಿದ್ದಾರೆ.

ಲ್ಯಾವೆಂಡರ್ ದಿರಿಸಿನಲ್ಲಿ ಹೈಡಿ
ಆಸ್ಕರ್‌ನಲ್ಲಿ ಇನ್ನೊಂದು ಬೇಸಿಗೆ ಸಂಗ್ರಹಣಾ ದಿರಿಸು ಅನಾವರಣಗೊಂಡಿದೆ. ದಿರಿಸಿನ ಬಣ್ಣ, ಉದ್ದನೆಯ ವಿನ್ಯಾಸ, ಒಂದೇ ಭುಜಾಕೃತಿ, ಕಟ್ ಔಟ್, ದಿರಿಸಿಗೆ ಸುಂದರತೆಯನ್ನು ತಂದುಕೊಟ್ಟಿದೆ.

ಜೆನ್ನಿಫರ್ ಜೇಸನ್ ಪಿಂಕ್ ಬಣ್ಣದ ದಿರಿಸಿನಲ್ಲಿ
ಆಸ್ಕರ್‌ಗಾಗಿ ಜೆನ್ನಿಫರ್ ಆಯ್ಕೆಮಾಡಿರುವ ಬಣ್ಣ ನಿಜಕ್ಕೂ ಸೊಗಸಾಗಿದ್ದು ಫ್ಲೋರಲ್ ಎಂಬ್ಲಿಶ್‌ಮೆಂಟ್‌ಗಳನ್ನು ಇದು ಪಡೆದುಕೊಂಡಿದೆ.



Click it and Unblock the Notifications
