Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಗಳ ಅಂದ ಹೆಚ್ಚಿಸಲು ಇಲ್ಲಿವೆ ಸಿಂಪಲ್ ಟಿಪ್ಸ್‌ಗಳು
ಗಣೇಶ ಚತುರ್ಥಿ ಈಗಷ್ಟೇ ಮುಗಿದಿದೆ. ಈ ಹಬ್ಬಗಳ ಸೀಸನ್ ನಲ್ಲಿ ಮುಂದೆ ನವರಾತ್ರಿ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳು ನಮ್ಮ ಮುಂದಿದೆ. ನಮ್ಮ ಹೆಂಗಳೆಯರಿಗೆ ಹಬ್ಬದ ಸಡಗರ-ಸಂಭ್ರಮ ಒಂದೆಡೆಯಾದರೆ, ಹಬ್ಬಕ್ಕೆ ತಯಾರಾಗೋದೇ ಮತ್ತೊಂದು ಸಡಗರ. ವಿಭಿನ್ನ ಸ್ಟೈಲ್‌ನೊಂದಿಗೆ, ನಮ್ಮ ಸಾಂಪ್ರದಾಯಿಕ ಉಡುಗೆಗಳನ್ನೇ ಮತ್ತಷ್ಟು ಆಕರ್ಷಕಗೊಳಿಸಬೇಕು, ಎಲ್ಲರ ನಡುವೆ ಎದ್ದು ಕಾಣಬೇಕು ಎಂಬ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಹಾಗಾಗಿ ನಾವಿಂದು ನಿಮ್ಮ ಹಬ್ಬದ ಉಡುಗೆಯನ್ನು ಹೇಗೆ ಸ್ಟೈಲ್ ಮಾಡಬೇಕು ಎಂಬುದಕ್ಕೆ ಕೆಲವು ಸಲಹೆಗಳನ್ನು ನೀಡುತ್ತೇವೆ.
ಸಾಂಪ್ರದಾಯಿಕ ಉಡುಗೆಗಳೊಂದಿಗೆ ಹೆಚ್ಚು ಅಟ್ರಾಕ್ಟ್ ಆಗಿ ಕಾಣಬೇಕೆಂದರೆ ಏನು ಮಾಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಒಂದು ಸಣ್ಣ ಬೈತಲೆಬೊಟ್ಟು:
ನೀವು ಸರಳವಾದ ಉಡುಪಿಗೆ ಒಂದು ಸಣ್ಣ ಬೈತಲೆ ಬೊಟ್ಟನ್ನು ಧರಿಸುವುದರ ಮೂಲಕ ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಸಿಂಪಲ್ ಸೀರೆಗೆ ಅಥವಾ ಲೆಹಂಗಾಗೆ ಮ್ಯಾಚಿಂಗ್ ಬೈತಲೆ ಬೊಟ್ಟು ಧರಿಸಿದರೆ, ನಿಮ್ಮ ಹಬ್ಬದ ನೋಟ ಸಂಫೂರ್ಣಗೊಳ್ಳಲಿದ್ದು, ಮುಖಕ್ಕೊಂದು ಗ್ರೇಸ್ ಸ್ಪರ್ಶವನ್ನು ನೀಡುತ್ತದೆ.

ಒಂದು ಚಿಕ್ಕ ಬಿಂದಿ:
ಬಿಂದಿ ಭಾರತೀಯ ಪರಂಪರೆಯ ಸಂಕೇತವಾಗಿದ್ದು, ನಿಮ್ಮ ಹಬ್ಬದ ಉಡುಗೆಗೆ ಉತ್ತಮ ಸೇರ್ಪಡೆಯಾಗಲಿದೆ. ಒಂದು ಸಣ್ಣ ಕಪ್ಪು ಬಿಂದಿಯು ಮುಖಕ್ಕೆ ಬಹಳ ಲಕ್ಷಣವಾಗಿ ತೋರುತ್ತದೆ ಮಾತ್ರವಲ್ಲ, ನಿಮ್ಮ ಉಡುಗೆಯನ್ನು ಸಂಪೂರ್ಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಿಂಪಲ್ ಸಲ್ವಾರ್ ಅಥವಾ ಕುರ್ತಿಯೊಂದಿಗೆ ಸಣ್ಣ ಕಪ್ಪು ಬಿಂದಿ ನಿಮ್ಮ ಹಬ್ಬಕ್ಕೆ ಪರ್ಫೆಕ್ಟ್ ಲುಕ್ ಆಗಲಿದೆ.

ದೊಡ್ಡ ಜುಮ್ಕಾ:
ಜುಮ್ಕಾಗಳು ಯಾವತ್ತಿಗೂ ಟ್ರೆಂಡ್‌ನಿಂದ ಹೊರಗುಳಿಯುವುದಿಲ್ಲ, ಅದು ಇತ್ತೀಚಿನ ದಿನಗಳಲ್ಲಿ ವಿಧವಿಧವಾದ ಜುಮ್ಕಾಗಳು ಎಲ್ಲರ ಫೆವರೆಟ್ ಆಗಿವೆ. ಏಕೆಂದರೆ ನೀವು ಇವುಗಳನ್ನು ಲೆಹೆಂಗಾ, ಸಲ್ವಾರ್ ಸೂಟ್ ಮತ್ತು ಇಂಡೋ-ವೆಸ್ಟರ್ನ್ ಉಡುಪಿನೊಂದಿಗೆ ಮ್ಯಾಚ್ ಮಾಡಬಹುದು. ಹಾಗಾದ್ರೆ ಇನ್ನೇಕೆ ತಡ ನಿಮ್ಮ ಡ್ರೆಸ್‌ಗೆ ಸರಿಹೊಂದುವಂತಹ ಜುಮ್ಕಾಗಳನ್ನು ಈಗಲೇ ಹುಡುಕಿ, ಖರೀದಿಸಿ, ಹಬ್ಬಕ್ಕೆ ರೆಡಿಯಾಗಿ.

ಸೊಂಟಕ್ಕೆ ಬೆಲ್ಟ್:
ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್ ಹೆಚ್ಚಾಗುತ್ತಿದೆ. ನಿಮ್ಮ ಸಾಂಪ್ರದಾಯಿಕ ಉಡುಗೆಗೆ ಮಾಡಿಷ್ ಸ್ಪರ್ಶವನ್ನು ನೀಡಲು ಬಯಸಿದರೆ, ಅದಕ್ಕೆ ಬೆಲ್ಟ್ ಹಾಕಿಕೊಳ್ಳಬಹುದು. ಇದೊಂದು ಹೊಸ ಟ್ರೆಂಡ್ ಆಗಿದ್ದು, ಗೌನ್, ಸೀರೆ, ಫ್ರಾಕ್ ಎಲ್ಲದಕ್ಕೂ ಬೆಲ್ಟ್ ಹಾಕಿ ಸ್ಟೈಲ್ ಮಾಡುವುದು. ಹಬ್ಬವಾಗಿರುವುದರಿಂದ, ಗೌನ್ ಬದಲಿಗೆ ಪ್ರಿಂಟೆಡ್ ಸೀರೆ ಹಾಗೂ ಗೋಲ್ಡನ್ ಕಲರ್ ಬೆಲ್ಟ್ ಉತ್ತಮ ಮ್ಯಾಚ್ ಆಗಬಹುದು.

ಚೋಕರ್:
ಇದು ಕೂಡ ಅಷ್ಟೇ ಇತ್ತೀಚಿನ ದಿನಗಳಲ್ಲಿ ಬಹಳ ಬಳಕೆಯಲ್ಲಿರುವ ಸ್ಟೈಲಿಂಗ್. ಯಾವುದೇ ಉಡುಪಿನಲ್ಲಿ ರಿಚ್ ಆಗಿ ಕಾಣಿಸಲು ಸುಲಭವಾದ ಮಾರ್ಗವೆಂದರೆ ಗ್ರಾಂಡ್ ಚೋಕರ್ ಹಾಕಿಕೊಳ್ಳುವುದು. ಲೆಹಾಂಗ, ಸೀರೆಗೆ ಸರಿಹೊಂದುವಂತಹ ಗ್ರಾಂಡ್ ಚೋಕರ್ ಹಾಗೂ ಕಪ್ಪು ಬಿಂದಿ ಇಟ್ಟರೆ ಸಾಕು, ಎಲ್ಲರ ಕಣ್ಣು ನಿಮ್ಮ ಮೇಲೆಯೇ. ಇದಕ್ಕೆ ಯಾವುದೇ ಕಿವಿಯೋಲೆ ಧರಿಸುವ ಅಗತ್ಯವಿಲ್ಲ. ಏಕೆಂದರೆ, ಚೋಕರ್ ತುಂಬಾ ರಿಚ್ ಆಗಿ ಇರುವುದು. ಬೇಕಿದ್ದಲ್ಲಿ ಸಣ್ಣ ಕಿವಿಯೋಲೆ ಆಯ್ಕೆ ಮಾಡಿಕೊಳ್ಳಬಹುದು.
ಇನ್ನೇಕೆ ತಡ, ಇವುಗಳಲ್ಲಿ ನಿಮ್ಮ ಸ್ಟೈಲ್ ಆರಿಸಿಕೊಂಡು, ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ, ಹಬ್ಬಕ್ಕೆ ಸ್ಟೈಲ್ ಮಾಡಿ.



Click it and Unblock the Notifications
