Latest Updates
-
ಮಳೆಗಾಲದ ಸಂಜೆ: ನಿಮ್ಮ ಅಪಾರ್ಟ್ಮೆಂಟ್ ಸೋರಿಕೆಯಾಗದಂತೆ ತಡೆಯಲು ಈ ತ್ವರಿತ ಟಿಪ್ಸ್ ಫಾಲೋ ಮಾಡಿ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: 30 ನಿಮಿಷದಲ್ಲಿ ಸುಂದರ ಪೂಕಳಂ ಬಿಡಿಸುವುದು ಹೇಗೆ? -
ಶ್ರಾವಣ ಸೋಮವಾರದ ವ್ರತ: ಆಫೀಸ್ ಕೆಲಸದ ನಡುವೆ ಮಧುಮೇಹಿಗಳು ಆರೋಗ್ಯವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್ -
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ?
ಸಾಂತಾಲಿ ಸೀರೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿ: ತುಂಬಾ ಟ್ರೆಂಡ್‌ನಲ್ಲಿರುವ ಈ ಸೀರೆಯ ವಿಶೇಷತೆಯೇನು ಗೊತ್ತೇ?
ಸಾಂತಾಲಿ ಸೀರೆ ಬಗ್ಗೆ ಕೇಳಿದ್ದೀರಾ? ನಿಮ್ಮಲ್ಲಿ ಕೆಲವರಲ್ಲಿ ಈ ಬಗೆಯ ಸೀರೆ ಇದ್ದರಬಹುದು, ಆದರೆ ಈ ಸೀರೆ ಈಗ ಈಗ ಸಕತ್ ಟ್ರೆಂಡ್‌ನಲ್ಲಿದೆ. ಅದಕ್ಕೆ ಕಾರಣ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮ ಆ ಸೀರೆ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು. ಶ್ವೇತವರ್ಣದ ಭಾರತದ ತಿರಂಗ ಧ್ವಜದ ಬಣ್ಣದ ಬಾರ್ಡರ್‌ನ ಸೀರೆ ಈಗ ತುಂಬಾನೇ ಫೇಮಸ್ ಆಗಿದೆ.
ರಾಷ್ಟ್ರಪತಿ ಹಲವಾರು ವಿಷಯಗಳನ್ನು ಇತಿಹಾಸವನ್ನು ಸೃಷ್ಟಿಸಿದ್ದಾರೆ. ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಇವರದ್ದು, ಅಲ್ಲದೆ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ. ಸಾಧಾರಣ ಕುಟುಂಬದಲ್ಲಿ ಹುಟ್ಟಿ ಬೆಳೆದು ಹಂತ-ಹಂತವಾಗಿ ರಜಕೀಯದಲ್ಲಿ ಬೆಳೆದಿರುವ ದ್ರೌಪದಿ ಮುರ್ಮು, ರಾಷ್ಟಪತಿಯಂಥ ಹುದ್ದೆಯನ್ನು ಅಲಂಕರಿಸಿದರೂ ಸರಳತೆ ಮೂಲಕ ಗಮನ ಸೆಳೆದಿದ್ದಾರೆ.
ಹೌದು ರಾಷ್ಟ್ರಪತಿ ತುಂಬಾ ಸಿಂಪಲ್ ಸೀರೆಗಳ ಮೂಲಕ ಮಾತ್ರವಲ್ಲಿ ಅದನ್ನುಉಡುವ ರೀತಿಯಿಂದಲೂ ಗಮನ ಸೆಳೆಯುತ್ತಿದ್ದಾರೆ. ಪ್ರಮಾಣ ವಚನ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧರಿಸಿದ ಸಾಂತಾಲಿ ಸೀರೆಯ ವಿಶೇಷತೆ ಏನು ಎಂದು ನೋಡೋಣ ಬನ್ನಿ:

ಸಾಂತಾಲಿ ಸೀರೆಯ ವಿಶೇಷತೆ ಏನು?
ಕುಟುಂಬ ಸದಸ್ಯರೊಬ್ಬರು ನೀಡಿದ ಸಾಂತಾಲಿ ಸೀರೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಸಂದರ್ಭದಲ್ಲಿ ಧರಿಸಿದ್ದರು. ಈ ಸೀರೆ ಒಡಿಸ್ಸಾದ ಸಾಂತಾಲಿ ಮಹಿಳೆಯರು ವಿಶೇಷ ಸಂದರ್ಭದಲ್ಲಿ ಬಳಸುವ ಸೀರೆಯಾಗಿದೆ. ಈ ಸೀರೆ ಅಸ್ಸಾಂ, ಛತ್ತೀಸ್‌ಘಡ್, ಜಾರ್ಖಂಡ್ , ಮಧ್ಯ ಪ್ರದೇಶ ಈ ಭಾಗದಲ್ಲಿನ ಸಾಂಪ್ರದಾಯಿಕ ಸೀರೆಯಾಗಿದೆ.

ಸಾಂತಾಲಿ ಸೀರೆಯ ವಿಶೇಷತೆ ಏನು?
ಸಾಂಪ್ರದಾಯಿಕವಾದ ಈ ಸೀರೆಯಲ್ಲಿ 3 ಬಿಲ್ಲಿನ ಗುರುತುಗಳು ಇರುತ್ತದೆ, ಇದು ಮಹಿಳೆಯರ ಸ್ವಾತಂತ್ರ್ಯದ ಸಂಕೇತವಾಗಿದೆ. ಕಾಲ ಬದಲಾದಂತೆ ಈ ಸೀರೆಯ ವಿನ್ಯಾಸದಲ್ಲೂ ಸ್ವಲ್ಪ ಬದಲಾವಣೆಯಾಗಿದೆ. ಈಗ ನವಿಲು, ಹೂಗಳು, ಬಾತುಕೋಳಿ ಮುಂತಾದ ಡಿಸೈನ್‌ಗಳನ್ನುಬಳಸುತ್ತಾರೆ. ಯುವ ಪೀಳಿಗೆಯನ್ನು ಆಕರ್ಷಿಸಲು ವಿಭಿನ್ನ ಕಲರ್ ಕಾಂಬಿನೇಷನ್ ಕೂಡ ಬಳಸಲಾಗುತ್ತಿದೆ. ಉತ್ತರ ಭಾರತದಲ್ಲಿ ಸಾಂತಾಲಿ ಸೀರೆಗೆ ತುಂಬಾನೇ ಬೇಡಿಕೆ ಇದೆ.

ಸಾಂತಾಲಿ ಸೀರೆ ಬೆಲೆಯೆಷ್ಟು?
ಸಾಂತಾಲಿ ಸೀರೆ ನಿಮಗೆ 500 ರುಪಾಯಿಯಿಂದ ಪ್ರಾರಂಭವಾಗುವುದು. 2 -3 ಸಾವಿರಕ್ಕೆ ತುಂಬಾನೇ ಗುಣಮಟ್ಟದ ಸೀರೆ ಸಿಗುತ್ತದೆ.

ರಾಷ್ಟ್ರಪತಿಗಳ ಅಚ್ಚುಮೆಚ್ಚಿನ ಕಾಟನ್ ಸೀರೆ
ರಾಷ್ಟ್ರಪತಿಗಳ ಬಹುತೇಕ ಫೋಟೋಗಳನ್ನು ನೋಡಿದಾಗ ಅವರು ಕಾಟನ್ ಸೀರೆಯಲ್ಲೇ ಕಾಣಿಸಿಕೊಂಡಿದ್ದಾರೆ. ತುಂಬಾ ಸರಳ ಕಾಟನ್ ಸೀರೆಯನ್ನು ಧರಿಸುವ ಇವರು, ಸಿರೆಯನ್ನು ತುಂಬಾ ಸೊಗಸಾಗಿ ಉಡುತ್ತಾರೆ ಕೂಡ. ಶಿಕ್ಷಕ ವೃತ್ತಿಯಲ್ಲಿರುವವರ ಸೀರೆ ಉಡುವ ಸ್ಟೈಲೇ ಸ್ವಲ್ಪ ಭಿನ್ನವಾಗಿರುತ್ತೆ, ಅವರು ತುಂಬಾ ಚೆನ್ನಾಗಿ ಸೀರೆ ಉಡುತ್ತಾರೆ, ಇವರು ಕೂಡ ಮೊದಲು ಶಿಕ್ಷಕ ವೃತ್ತಿಯಲ್ಲಿದ್ದರು, ಈ ಕಾರಣ ಅವರು ಸೀರೆಯನ್ನು ಉಡುವ ರಿತಿ ಆಕರ್ಷಕವಾಗಿದೆ.



Click it and Unblock the Notifications