Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ರೆಗ್ಯುಲರ್ ಕುರ್ತಿಯಿಂದ ಟ್ರೆಂಡಿ ಲುಕ್ ಪಡೆಯಲು, ಈ ರೀತಿ ಮ್ಯಾಚ್ ಮಾಡಿ
ಫ್ಯಾಷನ್ ಟ್ರೆಂಡ್ ಕಾಲಕಾಲಕ್ಕೆ ಬದಲಾಗುತ್ತಿದ್ದರೂ, ಎಲ್ಲಾ ಕಾಲಕ್ಕೂ ಹೊಂದುವಂತಹ ಒಂದು ಉಡುಪು ಅಂದ್ರೆ ಅದು ಕುರ್ತಿ ಅಥವಾ ಕುರ್ತಾ. ಹೌದು, ಅದೆಷ್ಟೇ ಟ್ರೆಂಡ್‌ಗಳು ಬಂದರೂ, ಸೀರೆಯಂತೆ ಇದು ಸಹ ಸರ್ವಕಾಲಕ್ಕೂ ಸೂಕ್ತವಾಗಿದೆ. ಆದರೆ, ಕುರ್ತಿ ಧರಿಸಿದಾಗ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಬೇಕು ಎಂಬುದು ಹೆಚ್ಚಿನವರ ಆಸೆ. ನೀವೇನಾದರೂ ಕುರ್ತಿ ಪ್ರಿಯರಾಗಿದ್ದು, ಟ್ರೆಂಡಿಯಾಗಿ ಕಾಣಿಸಲು, ಕುರ್ತಿಯನ್ನು ಹೇಗೆ ಸ್ಟೈಲ್ ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಉತ್ತರ. ಈ ಐಡಿಯಾಗಳಿಂದ ನೀವು ಕುರ್ತಿಯನ್ನು ಇನ್ನಷ್ಟು ಸೊಗಸಾದ ರೀತಿಯಲ್ಲಿ ಧರಿಸಬಹುದು.
ಕುರ್ತಿಯನ್ನು ಧರಿಸಬಹುದಾದ ವಿವಿಧ ಸ್ಟೈಲ್‌ಗಳನ್ನು ಈ ಕೆಳಗೆ ನೀಡಲಾಗಿದೆ:

1. ಕುರ್ತಿ ಜೊತೆ ಶ್ರಗ್ ಧರಿಸಿ:
ನಿಮ್ಮ ಕುರ್ತಿಗೆ ಸಾಂಪ್ರದಾಯಿಕ ನೋಟ ನೀಡಲು ಕುರ್ತಿಯ ಮೇಲೆ ಶ್ರಗ್ಗಳನ್ನು ಧರಿಸಬಹುದು. ಜೊತೆಗೆ ಇದು ನಿಮ್ಮ ಡ್ರೆಸ್‌ಗೆ ಹೆಚ್ಚು ಟ್ರೆಂಡಿ ನೋಟವನ್ನು ನೀಡುತ್ತದೆ. ಸ್ಟೈಲ್ ಸ್ಟೇಟ್‌ಮೆಂಟ್ ರಚಿಸಲು, ಸರಳ ಕುರ್ತಿಯನ್ನು ಪ್ರಿಂಟೆಡ್ ಶ್ರಗ್‌ನೊಂದಿಗೆ ಮ್ಯಾಚ್ ಮಾಡಿ. ಇಂಡೋ-ಫ್ಯೂಷನ್ ಶೈಲಿಗಾಗಿ, ಯಾವುದೇ ಶ್ರಗ್ ನ್ನು ಲಾಂಗ್ ಅಥವಾ ನಾರ್ಮಲ್ ಕುರ್ತಿಗಳೊಂದಿಗೆ ಜೋಡಿಸಬಹುದು. ಇದು ನಿಮಗೆ ಎತ್ನಿಕ್ ಲುಕ್ ನೀಡುವುದಲ್ಲದೇ, ಎಲ್ಲರ ಗಮನ ಸೆಳೆಯುವಂತೆ ಮಾಡುವುದು.

2. ಡೆನಿಮ್ ಜಾಕೆಟ್ ಜೊತೆಗೆ ಕುರ್ತಿ:
ಡೆನಿಮ್ ಕೋಟ್ಗಳು, ಈ ದಿನಗಳಲ್ಲಿ ಬಹಳ ಫ್ಯಾಶನ್ ಆಗಿದ್ದು, ಇದನ್ನು ವಿವಿಧ ರೀತಿಯಲ್ಲಿ ಧರಿಸಬಹುದು. ಇದರಿಂದ ನೀವು ಸಾಕಷ್ಟು ಟ್ರೆಂಡಿಯಾಗಿ ಕಾಣಬಹುದು. ಇದನ್ನು ಕೂಲ್ ಸ್ನೀಕರ್ ಮತ್ತು ಉದ್ದ ಅಥವಾ ಚಿಕ್ಕ ಕುರ್ತಿಯೊಂದಿಗೆ ಧರಿಸಿ. ಇದು ಬಿಳಿ, ಕಪ್ಪು ಅಥವಾ ಸಾಸಿವೆ ಹಳದಿ ಕುರ್ತಿಗೆ ಉತ್ತಮವಾಗಿ ಕಾಣುತ್ತದೆ.

3. ಫ್ಲೇರ್ಡ್ ಸ್ಕರ್ಟ್ ಜೊತೆಗೆ ಕುರ್ತಿ:
ಸದ್ಯ ಕುರ್ತಿಗಳು ವಿವಿಧ ವಿನ್ಯಾಸಗಳು ಮತ್ತು ಮಾದರಿಗಳಲ್ಲಿ ಲಭ್ಯವಿದೆ. ಉದ್ದವಾದ ಫ್ಲೇರ್ಡ್ ಸ್ಕರ್ಟ್‌ನೊಂದಿಗೆ ಉದ್ದವಾದ ಸ್ಟ್ರೈಟ್ ಲೈನ್ ಕುರ್ತಿಯನ್ನು ಮ್ಯಾಚ್ ಮಾಡಿ. ಬಟ್ಟೆಗಳು ಒಂದಕ್ಕೊಂದು ವಿರುದ್ಧ ಬಣ್ಣದ್ದಾಗಿರಬೇಕು. ಬೇಕಿದ್ದಲ್ಲಿ ದುಪಟ್ಟಾವನ್ನು ಸೇರಿಸಿ. ಹೆಚ್ಚುವರಿ ಸ್ಟೈಲ್‌ಗಾಗಿ ಕ್ಯಾಶುಯಲ್ ಅಥವಾ ಕಾಕ್ಟೈಲ್ ಪಾರ್ಟಿಗೆ ಸ್ಕರ್ಟ್ ಲೆಹೆಂಗಾದೊಂದಿಗೆ ಕುರ್ತಾವನ್ನು ಧರಿಸಿ.

4. ಜೀನ್ಸ್ ಜೊತೆ ಕುರ್ತಿ ಧರಿಸಿ:
ಇದು ಎಲ್ಲಾ ಕಾಲಕ್ಕೂ ಹೊಂದುವಂತಹ ಸ್ಟೈಲ್ ಆಗಿದೆ. ಇದರಿಂದ ಕುರ್ತಿ ಉದ್ದವಾಗಿದ್ದರೂ, ನೇರವಾಗಿರಲಿ ಅಥವಾ ಚಿಕ್ಕದಾಗಿದ್ದರೂ ಉತ್ತಮವಾಗಿ ಕಾಣುವುದು. ಸಮಕಾಲೀನ ಶೈಲಿಗಾಗಿ, ಅನೇಕ ಯುವತಿಯರು ಕುರ್ಟಿಸ್ನೊಂದಿಗೆ ಜೀನ್ಸ್ ಧರಿಸಲು ಬಯಸುತ್ತಾರೆ. ನಿಮ್ಮ ಡೆನಿಮ್ ಪ್ಯಾಂಟ್‌ನೊಂದಿಗೆ ಮ್ಯಾಚ್ ಮಾಡಲು, ಯಾವುದೇ ಬಣ್ಣದ ಕುರ್ತಿ ಆರಿಸಿ. ನಿಮ್ಮ ಪಾದದ ಬಳಿ ಪ್ಯಾಂಟ್ ಅನ್ನು ಮಡಚಿದರೆ ನೀ ಒಳ್ಳೆಯದು. ಇದು ಅದರ ಬಗ್ಗೆ ವೆಸ್ಟರ್ನ್ ವೇರ್ ಟಚ್ ನೀಡುವುದು.

5. ಶರರಾ ಪ್ಯಾಂಟ್ ಜೊತೆ ಕುರ್ತಿ:
ಇದು ಇತ್ತೀಚಿನ ಶೈಲಿ ಆಗಿದ್ದು, ಶರರಾ ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಇದು ಮೊಣಕಾಲಿನಿಂದ ಫ್ಲೇರ್ಡ್ ಪ್ಲೆಟ್ನೊಂದಿಗೆ ಪ್ಲಾಜೋದ ನೋಟವನ್ನು ಹೊಂದಿದೆ. ಅದರ ವಿನ್ಯಾಸದಿಂದಾಗಿ ಅನೇಕ ಭಾರತೀಯ ಮಹಿಳೆಯರು ಈ ಸೂಟ್ ಅನ್ನು ಆರಾಧಿಸುತ್ತಾರೆ. ಶರಾರಾ ಮತ್ತು ಕುರ್ತಿ ಸಂಯೋಜನೆಯು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ಎತ್ನಿಕ್ ನೋಟವನ್ನು ಸುಧಾರಿಸುತ್ತದೆ. ಆದ್ದರಿಂದ, ನೀವು ಈಗ ಮಾಡಬೇಕಾಗಿರುವುದು ನಿಮ್ಮ ಮೂಲ ಕುರ್ತಿಯನ್ನು ಕಾಂಟ್ರಾಸ್ಟ್ ಶರಾರಾ ಬಾಟಮ್‌ನೊಂದಿಗೆ ಮ್ಯಾಚ್ ಮಾಡುವುದು.



Click it and Unblock the Notifications
