ಸೈಲೆಂಟಾಗಿ ಸದ್ದು ಮಾಡುತ್ತಿದ್ದಾರೆ ಫ್ಯಾಷನ್ ರಾಣಿ 'ಸೋನಂ!

By: jaya subramanya
Subscribe to Boldsky

ಕಪೂರ್‌ಗೆ ಆಧುನಿಕ ದಿರಿಸುಗಳ ಮೇಲೆ ಪ್ರಯೋಗಗಳನ್ನು ನಡೆಸುವುದೆಂದರೆ ಹೆಚ್ಚು ಇಷ್ಟ ಎಂದೆನಿಸುತ್ತದೆ. ಅದು ಯಾವುದೇ ಈವೆಂಟ್ ಇರಲಿ ಅಲ್ಲಿ ಸೋನಂ (ಸೋನಮ್ ಕಪೂರ್) ತಮ್ಮ ಅತ್ಯಾಧುನಿಕ ಉಡುಗೆಗಳ ಮೂಲಕ ತಮ್ಮ ಅಭಿಮಾನಿಗಳನ್ನು ತಮ್ಮತ್ತ ಸೆಳೆಯುತ್ತಾರೆ. ಏನ್ ಚಂದಾನೇ ಸೋನಂ, ನಿನ್ನ ಉಡುಗೆ-ತೊಡುಗೆ!

ಯಾರೂ ಈವರೆಗೆ ಪ್ರಯತ್ನಿಸದೇ ಇರುವ ಆಧುನಿಕ ವಸ್ತ್ರಗಳನ್ನು ಸೋನಂ ಬಾಲಿವುಡ್ ಅಂಗಳಕ್ಕೆ ಪರಿಚಯಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಇದೀಗ ಸೋನಂ ಫಿಲ್ಮ್‌ಫೇರ್ ಪಾರ್ಟಿಯಲ್ಲಿ ಎಲ್ಲರನ್ನೂ ರಂಜಿಸಿದ್ದಾರೆ.  

Sonam Kapoor
 

ಸೋನಂ ತಮ್ಮ ಅತ್ಯಾಧುನಿಕ ಉಡುಗೆಗಾಗಿ ಬಳಸಿರುವುದು ಕಪ್ಪು ವರ್ಣವಾಗಿದೆ. ಹೈ ನೆಕ್ ಸ್ಟೈಲ್ ಅನ್ನು ಇದು ಹೊಂದಿದ್ದು ಸ್ಲೀವ್‌ಲೆಸ್ ಆಗಿದೆ. ದಿರಿಸಿನ ನೆಕ್ ವಿನ್ಯಾಸವು ಇಳಿಬಿದ್ದ ಮಾದರಿಯಲ್ಲಿದ್ದು ನಿಮ್ಮನ್ನು ಆಕರ್ಷಣೆಗೆ ಒಳಪಡಿಸುವುದು ಖಂಡಿತ. ಇದರೊಂದಿಗೆ ಉದ್ದನೆಯ ಸ್ಕರ್ಟ್ ಉತ್ತಮ ಆಯ್ಕೆ ಎಂದೆನಿಸಿದ್ದು ತೈ ಹೈ ಸ್ಲಿಟ್ ಅನ್ನು ಈ ಸ್ಕರ್ಟ್ ಪಡೆದುಕೊಂಡಿದೆ. 

Sonam Kapoor
 

ದಿರಿಸಿನಲ್ಲಿ ಮನಸೆಳೆಯುವುದು ಸ್ಲೀವ್ ಆಗಿದ್ದು ಸೋನಂ ಇದನ್ನು ಹೆಚ್ಚು ಆಕರ್ಷಕವಾಗಿ ಧರಿಸಿಕೊಂಡಿದ್ದಾರೆ. ಪೋನಿಟೇಲ್ ಕೇಶವಿನ್ಯಾಸವನ್ನು ದಿರಿಸಿಗೆ ತಕ್ಕಂತೆ ಸೋನಂ ಆಯ್ದುಕೊಂಡಿದ್ದು ವಜ್ರದ ಕಲ್ಲುಳ್ಳ ಕಪ್ಪು ವರ್ಣದ ಶೂವನ್ನು ಸೋನಂ ಧರಿಸಿದ್ದಾರೆ. ಅಂತೂ ಸೋನಂ ತಮ್ಮ ಹೊಸ ಉಡುಗೆಯಲ್ಲಿ ಮೈ ಚಳಿ ಬಿಟ್ಟು ತಮ್ಮನ್ನು ಪ್ರದರ್ಶಿಸಿಕೊಂಡಿದ್ದಾರೆ.

English summary

Sonam Kapoor Does It Again! This Time With Dice Kayek

Sonam is bold, edgy, offbeat and never conventional. She plays with daring styles, bold colours, eccentric patterns, and brazen couture. She is fearless in her fashion choices. Stepping out of her comfort zone is a piece of cake for her. Unabashed and unashamed of her strong and head-turning closet, Sonam plunges in yet another eye-catching outfit. This time at Filmfare party.
Please Wait while comments are loading...
Subscribe Newsletter